Fake News - Kannada
 

ನವಜಾತ ಶಿಶು ಮತ್ತು ತಾಯಿಯ ದೃಶ್ಯಗಳನ್ನು ತಪ್ಪಾದ, ಹಳೆಯ ಕಥೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ

0

ನವಜಾತ ಶಿಶುವೊಂದು ತನ್ನ ತಾಯಿಯ ಮುಖದ ಮೇಲೆ ಅಳುತ್ತಿರುವ ದೃಶ್ಯಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ, 11 ವರ್ಷಗಳ ನಂತರ ಮಗುವಿಗೆ ಜನ್ಮ ನೀಡಿದ ಮಹಿಳೆ ಮಗುವಿಗೆ ಜನ್ಮ ನೀಡಿದ ತಕ್ಷಣ ಸಾವನ್ನಪ್ಪಿದ್ದಾರೆ ಎಂದು ಪೋಸ್ಟ್‍ನಲ್ಲಿ ಪ್ರತಿಪಾದಿಸಲಾಗಿದೆ. ಈ ಲೇಖನದ ಮೂಲಕ, ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಅನ್ನು ಪರಿಶೀಲಿಸೋಣ.

ಪ್ರತಿಪಾದನೆ: 11 ವರ್ಷಗಳ ನಂತರ ಮಗುವಿಗೆ ಜನ್ಮ ನೀಡಿದ ಮಹಿಳೆ ಮಗುವಿಗೆ ಜನ್ಮ ನೀಡಿದ ನಂತರ ಸಾವನ್ನಪ್ಪಿದ ದೃಶ್ಯಗಳು.

ನಿಜಾಂಶ: ಬ್ರೆಜಿಲ್‌ನಲ್ಲಿ ಜನಿಸಿದ ನಂತರ ನವಜಾತ ಶಿಶುವು ತನ್ನ ತಾಯಿಯ ಮುಖದ ಮೇಲೆ ಅಂಟಿಕೊಂಡು ಅಳುತ್ತಿರುವಂತೆ ವೀಡಿಯೊ ದೃಶ್ಯಗಳಲ್ಲಿ ತೋರಿಸಲಾಗಿದೆ. ವೀಡಿಯೋವನ್ನು ವರದಿ ಮಾಡಿದ ಸುದ್ದಿ ಲೇಖನದಲ್ಲಿ ತಾಯಿ ಹೆರಿಗೆಯ ನಂತರ ಸತ್ತಳು ಅಥವಾ ಅವಳು 11 ವರ್ಷಗಳ ಕಾಲ ಬಂಜೆಯಾಗಿದ್ದಳು ಎಂದು ಉಲ್ಲೇಖಿಸಿಲ್ಲ. ಪೋಸ್ಟ್‌ನಲ್ಲಿ ಹೇಳಿರುವಂತೆ ಯಾವುದೇ ಸಂದರ್ಭವಿಲ್ಲದೆ ಇತರ ವೀಡಿಯೊ ಇಂಟರ್ನೆಟ್‌ನಲ್ಲಿ ಲಭ್ಯವಿದೆ. ಸರ್ಜಿಕಲ್ ಏಪ್ರನ್‌ನಲ್ಲಿರುವ ಮತ್ತು ಅಳುತ್ತಿರುವ ವ್ಯಕ್ತಿಯ ಚಿತ್ರವನ್ನು ಆರಂಭದಲ್ಲಿ ‘ozgemetinphotography’ Instagram ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಚಿತ್ರದ ಕೆಳಗಿನ ಒಂದು ಕಾಮೆಂಟ್‌ನಲ್ಲಿ ಬಳಕೆದಾರರು ತಾವು ಚಿತ್ರವನ್ನು ಕ್ಲಿಕ್ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ ಮತ್ತು ಅವರು ವೈರಲ್ ಕಥೆಯನ್ನು ನಕಲಿ ಎಂದು ತಿಳಿಸಿದ್ದಾರೆ. ಪೋಸ್ಟ್‌ನಲ್ಲಿನ ದೃಶ್ಯಗಳಿಗೆ ಕಾರಣವಾದ ಕಥೆಯನ್ನು ಹಲವು ವರ್ಷಗಳಿಂದ ಅಂತರ್ಜಾಲದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದಾಗ್ಯೂ, ಕಥೆಯ ಸತ್ಯಾಸತ್ಯತೆ ತಿಳಿದಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವಿಡಿಯೊ 1:

ವೈರಲ್ ವೀಡಿಯೊವನ್ನು ಪ್ರಥಮ ಬಾರಿಗೆ 2017 ರಲ್ಲಿ ವರದಿ ಮಾಡಲಾಗಿದೆ. ‘ನವಜಾತ ಶಿಶು ಬ್ರೆಜಿಲ್‌ನಲ್ಲಿ ಜನಿಸಿದ ಕೆಲವೇ ಸೆಕೆಂಡುಗಳ ನಂತರ ತನ್ನ ಅಮ್ಮನ ಮುಖಕ್ಕೆ ಅಂಟಿಕೊಂಡಿರುವುದನ್ನು ಚಿತ್ರೀಕರಿಸಲಾಗಿದೆ’. ಆದರೂ ಲೇಖನದಲ್ಲಿ ಎಲ್ಲಿಯೂ, ಮಹಿಳೆ 11 ವರ್ಷಗಳ ಕಾಲ ಬಂಜೆಯಾಗಿದ್ದಳು ಅಥವಾ ಮಗುವಿಗೆ ಜನ್ಮ ನೀಡಿದ ತಕ್ಷಣ ಅವಳು ಸತ್ತಳು ಎಂದು ಉಲ್ಲೇಖಿಸಲಾಗಿಲ್ಲ. ಘಟನೆಗೂ ರಾಜಸ್ಥಾನದ ಕೋಟಾಕ್ಕೂ ಯಾವುದೇ ಸಂಬಂಧವಿಲ್ಲ.

ಫೋಟೋ:

ಏಪ್ರನ್‌ನಲ್ಲಿ ಅಳುತ್ತಿರುವ ವ್ಯಕ್ತಿಯ ಈ ಫೋಟೊ ಇದೇ ಕಥೆಯೊಂದಿಗೆ (ಇಲ್ಲಿ) ಸಂಯೋಜಿಸಿ ಹಲವು ವರ್ಷಗಳಿಂದ ಅಂತರ್ಜಾಲದಲ್ಲಿ ವೈರಲ್ ಮಾಡಲಾಗುತ್ತಿದೆ. ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, Instagram ಪೋಸ್ಟ್‌ವೊಂದು ಲಭ್ಯವಾಗಿದೆ. ಫೋಟೋವನ್ನು ಮೊದಲಬಾರಿ 2017 ರಲ್ಲಿ ಬೇಬಿ ಫೋಟೋಗ್ರಾಫರ್ ‘ozgemetinphotography’ ಇನ್‌ಸ್ಟಾಗ್ರಾಮ್ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಅಳುತ್ತಿರುವ ವ್ಯಕ್ತಿಯ ಚಿತ್ರವನ್ನು ಕ್ಲಿಕ್ ಮಾಡಿರುವುದಾಗಿ ಪೋಸ್ಟ್‍ನಲ್ಲಿ ಖಾತೆಯ ಬಳಕೆದಾರರು ಹೇಳಿಕೊಂಡಿದ್ದಾರೆ ಮತ್ತು ಬಳಕೆದಾರರು ವೈರಲ್ ಕಥೆಯನ್ನು ತಳ್ಳಿಹಾಕಿದ್ದಾರೆ.

ತನ್ನ ಮಗು ಆರೋಗ್ಯವಂತ ಮಗುವಾಗಿ ಜನಿಸಿದ್ದರಿಂದ ಆ ವ್ಯಕ್ತಿ ಅಳುತ್ತಿದ್ದನೇ ಹೊರತು ಅವನ ಹೆಂಡತಿ ಸತ್ತದ್ದಕ್ಕಾಗಿ ಅಲ್ಲ ಎಂದು ಅವರು ಹೇಳುತ್ತಾರೆ. 2017 ರಲ್ಲಿ ಮತ್ತೆ ವೈರಲ್ ಆದಾಗ ಸ್ನೋಪ್ಸ್ ಅದೇ ಚಿತ್ರವನ್ನು ಹೊರಹಾಕಿತು.

ನವಜಾತ ಶಿಶು ತನ್ನ ತಾಯಿಯ ಮುಖಕ್ಕೆ ಅಂಟಿಕೊಂಡಿರುವಂತೆ ಕಾಣುವ ಕೊಲಾಜ್‌ನಲ್ಲಿನ ಇತರ ಚಿತ್ರವನ್ನು ಆರಂಭದಲ್ಲಿ 2015 ರಲ್ಲಿ ಹಂಚಿಕೊಳ್ಳಲಾಗಿದೆ. ಮಗುವಿನ ಛಾಯಾಗ್ರಹಣ ಮತ್ತು ಮದುವೆಯ ಚಿತ್ರಗಳ ಚಿತ್ರಗಳನ್ನು ಹಂಚಿಕೊಳ್ಳುವ ಫೇಸ್‌ಬುಕ್ ಖಾತೆಯು ಈ ಚಿತ್ರವನ್ನು ಡಿಸೆಂಬರ್ 2015 ರಲ್ಲಿ ಹಂಚಿಕೊಂಡಿದೆ. ಆದಾಗ್ಯೂ, ಪೋಸ್ಟ್‌ನಲ್ಲಿ ಮಗುವಿಗೆ ಜನ್ಮ ನೀಡುವ ಮೂಲಕ ತಾಯಿ ನಿಧನರಾದರು ಎಂದು ಉಲ್ಲೇಖಿಸಲಾಗಿಲ್ಲ.

ವೀಡಿಯೊ 2:

ಕೆಲವು ತಿಂಗಳುಗಳ ಹಿಂದೆ ಅಂತರ್ಜಾಲದಲ್ಲಿಯೂ ಈ ವೀಡಿಯೋ ಲಭ್ಯವಿತ್ತು. ವೀಡಿಯೊದ ಸ್ಕ್ರೀನ್‌ಶಾಟ್‌ಗಳ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಮಕ್ಕಳ ಬಳಕೆ ಉತ್ಪನ್ನಗಳ ಏಜೆನ್ಸಿಯ ಫೇಸ್‌ಬುಕ್ ಪೇಜ್ ಲಭ್ಯವಾಗಿದೆ. ವೀಡಿಯೊವನ್ನು ಆರಂಭದಲ್ಲಿ ಸೆಪ್ಟೆಂಬರ್ 2021 ರಲ್ಲಿ ಈ ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಆದರೂ ಜನನದ ನಂತರ ತಾಯಿಯ ಸಾವಿನ ಬಗ್ಗೆ ಅಥವಾ ತಾಯಿ 11 ವರ್ಷಗಳ ಕಾಲ ಬಂಜೆಯಾಗಿದ್ದ ಬಗ್ಗೆ ಯಾವುದೇ ಉಲ್ಲೇಖಗಳು ಲಭ್ಯವಾಗಿಲ್ಲ.

ಈ ದೃಶ್ಯಗಳ ಸತ್ಯಾಸತ್ಯತೆಯನ್ನು ನಾವು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗದಿದ್ದರೂ, ಲಭ್ಯವಿರುವ ಪುರಾವೆಗಳು ಈ ದೃಶ್ಯಗಳೊಂದಿಗೆ ಸಂಬಂಧಿಸಿದ ವೈರಲ್ ಸಂದರ್ಭವು ನಿಜವಲ್ಲ ಮತ್ತು ದೃಶ್ಯಗಳು ರಾಜಸ್ಥಾನದ ಕೋಟಾ ಅಥವಾ ಗುಜರಾತ್‍ನಿಂದ ಬಂದದ್ದಲ್ಲ ಎಂದು ಸೂಚಿಸುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ನವಜಾತ ಶಿಶು ಮತ್ತು ಆಕೆಯ ತಾಯಿಯ ದೃಶ್ಯಗಳನ್ನು ಸುಳ್ಳು ಮತ್ತು ಹಳೆಯ ಕಥೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

Share.

Comments are closed.

scroll