ಕರ್ನಾಟಕದಲ್ಲಿ ಹಿಜಾಬ್ ವಿವಾದದ ಕೇಂದ್ರಬಿಂದುವಾಗಿದ್ದ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ಮಾಡಿದ ಟ್ವೀಟ್‌ನ ಸ್ಕ್ರೀನ್‌ಶಾಟ್ ಎಂದು ಸಾಮಾಜಿಕ ಮಾಧ್ಯಮದಲ್ಲಿ ಫೋಟೊವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳುಲಾಗುತ್ತಿದೆ. ಇತ್ತೀಚೆಗೆ ಇನಾಮುಲ್ಲಾ ಸಾಮಂಗಾನಿ ಅವರು ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ವಿಚಾರವಾಗಿ ಟ್ವೀಟ್ ಮಾಡುವ ಮೂಲಕ ಬೆಂಬಲವನ್ನು ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ಎಂಬಂತೆ, ಮುಸ್ಕನ್ ಖಾನ್ ಕೂಡ ಟ್ವೀಟ್‌ನಲ್ಲಿ ತನ್ನನ್ನು ಬೆಂಬಲಿಸಿದ್ದಕ್ಕಾಗಿ ಅಫ್ಘಾನ್‍ನ ತಾಲಿಬಾನ್ ವಕ್ತಾರ ಇನಾಮುಲ್ಲಾ ಸಮಾಂಗನಿಗೆ ಧನ್ಯವಾದ ಹೇಳಿದ್ದಾರೆ ಪ್ರತಿಪಾದಿಸಲಾಗಿದೆ. ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಪ್ರತಿಪಾದನೆ: ಮುಸ್ಕಾನ್ ಖಾನ್ ತನ್ನನ್ನು ಬೆಂಬಲಿಸಿದ್ದಕ್ಕಾಗಿ ಅಫ್ಘಾನ್ ತಾಲಿಬಾನ್ ವಕ್ತಾರರಿಗೆ ಧನ್ಯವಾದ ಅರ್ಪಿಸಿದ ಟ್ವೀಟ್‌ನ ಸ್ಕ್ರೀನ್‌ಶಾಟ್ ವೈರಲ್.
ನಿಜಾಂಶ: ಟ್ವೀಟ್ ಮಾಡಿದ್ದು ಮುಸ್ಕಾನ್ ಖಾನ್ ಅಲ್ಲ. ಇದು ನಕಲಿ ಟ್ವಿಟರ್ ಹ್ಯಾಂಡಲ್‌ನಿಂದ ಮಾಡಿರುವ ಟ್ವೀಟ್ ಆಗಿದ್ದು(‘@muskanind3467’) ಈಗ ಅದೂ ಕೂಡ ಅಸ್ತಿತ್ವದಲ್ಲಿಲ್ಲ. ವಾಸ್ತವವಾಗಿ ಮುಸ್ಕಾನ್ ಖಾನ್ ಟ್ವಿಟರ್, ಫೇಸ್ ಬುಕ್ ಬಳಸುವುದಿಲ್ಲ, ಅವರ ಹೆಸರಿನಲ್ಲಿ ನಕಲಿ ಖಾತೆ ತೆರೆದು ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಮುಸ್ಕಾನ್ ಖಾನ್ ಕನ್ನಡ ದಿನಪತ್ರಿಕೆ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಮುಸ್ಕಾನ್ ಖಾನ್ ಇಂತಹ ಟ್ವೀಟ್ ಮಾಡಿದ್ದಾರೆಯೇ ಎಂದು ಸರ್ಚ್ ಮಾಡಿದಾಗ ಪತ್ರಕರ್ತ ಮಹ್ಮೋದುಲ್ ಹಸನ್ ಮಾಡಿದ ಟ್ವೀಟ್ ಪತ್ತೆಯಾಗಿದೆ. “ಮುಸ್ಕಾನ್ ಖಾನ್ ಅವರ ತಂದೆ ಹುಸೇನ್ ಖಾನ್ ಅವರು ಮುಸ್ಕಾನ್ ಯಾವುದೇ ಟ್ವಿಟರ್ ಖಾತೆಗಳನ್ನು ಹೊಂದಿಲ್ಲ ಎಂದು ಖಚಿತಪಡಿಸಿದ್ದಾರೆ. ಹಲವು ನಕಲಿ ಟ್ವಿಟ್ಟರ್ ಖಾತೆಗಳು ಮುಸ್ಕಾನ್ ಅವರನ್ನು ಅನುಕರಿಸುವ ಮೂಲಕ ನಿಂದನೀಯ ಮತ್ತು ದುರುದ್ದೇಶಪೂರಿತ ಹೇಳಿಕೆಗಳನ್ನು ನೀಡಿವೆ. ಅವರು ಮುಸ್ಕಾನ್ ಹೆಸರಿನಲ್ಲಿ ವಿವಿಧ ನಕಲಿ ಟ್ವಿಟರ್ ಹ್ಯಾಂಡಲ್‌ಗಳನ್ನು ಸಹ ಪಟ್ಟಿ ಮಾಡಿದ್ದಾರೆ. ನಾನು ಟ್ವಿಟರ್, ಫೇಸ್‌ಬುಕ್ ಬಳಸುವುದಿಲ್ಲ, ಕೆಲವರು ನನ್ನ ಹೆಸರಿನಲ್ಲಿ ನಕಲಿ ಖಾತೆ ತೆರೆದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ‘ಪ್ರಜಾವಾಣಿ’ ಜತೆ ಮಾತನಾಡಿದ ಮುಸ್ಕಾನ್ ಖಾನ್ ತಿಳಿಸಿದ್ದಾರೆ.
ಪೋಸ್ಟ್ ಮಾಡಿದ ಸ್ಕ್ರೀನ್‌ಶಾಟ್‌ನಲ್ಲಿರುವ ಟ್ವೀಟ್ ಅನ್ನು ಮುಸ್ಕಾನ್ ಖಾನ್ ಮಾಡಿಲ್ಲ. ಇದು (‘@muskanind3467′) ಈ ಅಕೌಂಟ್ ಸದ್ಯ ಅಸ್ಥಿತ್ವದಲ್ಲಿಲ್ಲ.
ಆ ಹ್ಯಾಂಡಲ್‌ನ ಆರ್ಕೈವ್ ಮಾಡಿದ ಟ್ವೀಟ್‌ಗಳನ್ನು ನೋಡಿದಾಗ, ಕೆಲವೊಮ್ಮೆ, ‘@AmanTweets60’ ಗೆ ಪ್ರತ್ಯುತ್ತರಗಳನ್ನು ಮಾಡಲಾಗಿದೆ ಎಂದು ಗಮನಿಸಬಹುದು, ಅದು ಈಗ ಅಸ್ತಿತ್ವದಲ್ಲಿಲ್ಲ.
‘@AmanTweets60′ ಮತ್ತು ‘@muskanind3467′ ನ Twitter ID ಗಳನ್ನು ಹೋಲಿಸಿದಾಗ, ಎರಡೂ ಒಂದೇ Twitter ID (‘1481195182267977738’) [ಟ್ವಿಟ್ಟರ್ ಬಳಕೆದಾರಹೆಸರುಗಳನ್ನು ಬದಲಾಯಿಸಬಹುದು ಆದರೆ Twitter ID ಖಾತೆಗೆ ವಿಶಿಷ್ಟವಾಗಿದೆ] ಎಂದು ತಿಳಿದು ಬಂದಿದೆ. ಅಕೌಂಟ್ ಹೆಸರನ್ನು ‘@muskanind3467’ ಎಂದು ಬದಲಾಯಿಸುವ ಮೊದಲು, ಅದು ‘@AmanTweets60’ ಹೆಸರಿನಲ್ಲಿತ್ತು ಎಂದು ಗೊತ್ತಾಗುತ್ತದೆ. ಆದ್ದರಿಂದ, ‘@muskanind3467’ ನಕಲಿ ಅಕೌಂಟ್.
ಒಟ್ಟಾರೆಯಾಗಿ ಹೇಳುವುದಾದರೆ, ತಾಲಿಬಾನ್ ವಕ್ತಾರರಿಗೆ ಮುಸ್ಕಾನ್ ಖಾನ್ ಧನ್ಯವಾದ ಹೇಳುತ್ತಿರುವಂತೆ ನಕಲಿ ಅಕೌಂಟ್‍ನಿಂದ ಟ್ವೀಟ್ ಮಾಡಿ ಹಂಚಿಕೊಳ್ಳವ ಮೂಲಕ ತಪ್ಪಾಗಿ ಪ್ರತಿಪಾದಿಸಲಾಗಿದೆ.