Fake News - Kannada
 

ನೂಪುರ್ ಶರ್ಮರ ಹಳೆಯ ವಿಡಿಯೋವನ್ನು ಇತ್ತೀಚಿನದ್ದು ಎಂದು ಹಂಚಿಕೆ

0

ಪ್ರವಾದಿ ಮುಹಮ್ಮದ್ ವಿರುದ್ಧ ನಿಂದನಾತ್ಮಕ ಹೇಳಿಕೆಗಳನ್ನು ನೀಡಿ ವಿವಾದ ಸೃ‍‍‍ಷ್ಠಿಸದ್ದ ನೂಪುರ್ ಶರ್ಮಾ ಅವರು ಇತ್ತೀಚೆಗೆ ಮತ್ತೆ ವಿವಾದದ ಹೇಳಿಕೆ ನೀಡಿದ್ದಾರೆ ಎನ್ನುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸುಪ್ರೀಂ ಕೋರ್ಟ್ ನಲ್ಲಿ ಭಯೋತ್ಪಾದಕರ ಮಧ್ಯರಾತ್ರಿ ವಿಚಾರಣೆಯ ಬಗ್ಗೆ ನೂಪುರ್ ಶರ್ಮಾ ಪ್ರಶ್ನೆಗಳನ್ನು ಎತ್ತುತ್ತಿರುವುದನ್ನು ಮತ್ತು ತ್ರಿವಳಿ ತಲಾಖ್, ಬುರ್ಖಾ ಮತ್ತು ಇಸ್ಲಾಂನಲ್ಲಿನ ವಿವಾಹ ವ್ಯವಸ್ಥೆಯ ವಿರುದ್ಧ ಹೇಳಿಕೆಗಳನ್ನು ನೀಡುವುದನ್ನು ಈ ವೀಡಿಯೊ ತೋರಿಸುತ್ತದೆ. ಹಾಗಿದ್ದರೆ ಪೋಸ್ಟ್‌ನಲ್ಲಿ  ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ : ಪ್ರವಾದಿ ಮುಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ ನಂತರ ನೂಪುರ್ ಶರ್ಮಾ ಅವರ ಇತ್ತೀಚಿನ ಭಾಷಣ.

ನಿಜಾಂಶ : ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊವು ಮಹಾರಾಷ್ಟ್ರದ ವನವಾಸಿ ಕಲ್ಯಾಣ ಆಶ್ರಮ ಆಯೋಜಿಸಿದ್ದ ‘ವ್ಯಾಖ್ಯಾನ್’ ಕಾರ್ಯಕ್ರಮದಲ್ಲಿ ನೂಪುರ್ ಶರ್ಮಾ ಅವರ ಹಳೆಯ ಭಾಷಣದ ತುಣುಕುಗಳನ್ನು ತೋರಿಸುತ್ತದೆ. ಈ ಘಟನೆಯು 24 ಮೇ 2018 ರಂದು ನಡೆದಿದೆ. ಇದು ಇತ್ತೀಚಿನ ವೀಡಿಯೊ ಅಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವೀಡಿಯೊದಲ್ಲಿನ ಸ್ಕ್ರೀನ್‌ಶಾಟ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ  ಈ ವೀಡಿಯೊಗೆ ಸಂಬಂಧಿಸಿದ ಯಾವುದೇ ವಿಶ್ವಾಸಾರ್ಹ ಮೂಲಗಳು ಲಭ್ಯವಾಗಿಲ್ಲ. ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಗೂಗಲ್‌ನಲ್ಲಿ ವೀಡಿಯೊದ ವಿವರಗಳನ್ನು ಹುಡುಕಿದಾಗ, 25 ಮೇ 2018 ರಂದು ನೂಪುರ್ ಶರ್ಮಾ ಅವರು ಟ್ವೀಟ್ ಮಾಡಿದ ಚಿತ್ರಗಳ ಕೊಲಾಜ್‌ನಲ್ಲಿ ಇದೇ ರೀತಿಯ ದೃಶ್ಯಗಳು ಕಂಡುಬಂದಿವೆ. ನೂಪುರ್ ಶರ್ಮಾ ಅವರ ಟ್ವೀಟ್ ಹೀಗಿದೆ, “ಮಹಾರಾಷ್ಟ್ರದ ನಗರದಲ್ಲಿ ವನವಾಸಿ ಕಲ್ಯಾಣ ಆಶ್ರಮ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ರಾಷ್ಟ್ರೀಯತೆಯಲ್ಲಿ ಮಹಿಳೆಯರು” ವಿಷಯದ ಕುರಿತು ಮಾತನಾಡಿರುವ ನೂಪುರ್‌ ಶರ್ಮ. ಇಂದು ಸಮಾಜಕ್ಕೆ ವಿವಿಧ ರೀತಿಯಲ್ಲಿ ಕೊಡುಗೆ ನೀಡುತ್ತಿರುವ ಕೆಲವು ಉದ್ಯಮಶೀಲ ನಾಗರೀಕ ಮಹಿಳೆಯರೊಂದಿಗೆ ಸಂವಾದ ನಡೆಸುವುದು ಒಂದು ಸೌಭಾಗ್ಯವಾಗಿದೆ” ಎಂದು ಹೇಳಿದ್ದರು.

ಗೂಗಲ್‌ನಲ್ಲಿ ಮತ್ತೊಮ್ಮೆ ಈ ಕೀವರ್ಡ್‌ಗಳನ್ನು ಬಳಸಿಕೊಂಡು ಹೆಚ್ಚಿನ ಮೂಲಗಳನ್ನು ಹುಡುಕಿದಾಗ, ‘ವ್ಯಾಖ್ಯಾನ್’ ಕಾರ್ಯಕ್ರಮದಲ್ಲಿ ನೂಪುರ್ ಶರ್ಮಾ ಅವರ ಭಾಷಣವನ್ನು ತೋರಿಸುವ ವೀಡಿಯೊವನ್ನು ಫೇಸ್‌ಬುಕ್ ಬಳಕೆದಾರರೊಬ್ಬರು 24, 2018 ರಂದು ಪೋಸ್ಟ್ ಮಾಡಿದ್ದಾರೆ ಎಂದು ಕಂಡುಬಂದಿದೆ. ವೀಡಿಯೊದ 3:45 ನಿಮಿಷಗಳವರೆಗೆ, ನಾವು ಪೋಸ್ಟ್‌ನಲ್ಲಿ ತೋರಿಸಿರುವಂತೆ ಅದೇ ಹೇಳಿಕೆಗಳನ್ನು ನೂಪುರ್ ಶರ್ಮಾ ಮಾಡುವುದನ್ನು ನೋಡಬಹುದು. ವನವಾಸಿ ಕಲ್ಯಾಣ್ ಆಶ್ರಮದಲ್ಲಿ ನಡೆದ ‘ವ್ಯಾಖ್ಯಾನ್’ ಕಾರ್ಯಕ್ರಮದಲ್ಲಿ ನೂಪುರ್ ಶರ್ಮಾ ಅವರ ಸಂಪೂರ್ಣ ಭಾಷಣದ ಕೆಲವು ಭಾಗಗಳನ್ನು ಎಡಿಟ್ ಮಾಡುವ ಮೂಲಕ ಪೋಸ್ಟ್‌ನಲ್ಲಿ ಹಂಚಿಕೊಂಡ ವೀಡಿಯೊವನ್ನು ರಚಿಸಲಾಗಿದೆ.

ಪ್ರವಾದಿ ಮುಹಮ್ಮದ್ ಕುರಿತು ನೂಪುರ್ ಶರ್ಮಾ ಅವರ ಹೇಳಿಕೆಗಳ ಕುರಿತು ಮುಸ್ಲಿಮರು ಮತ್ತು ಇಸ್ಲಾಮಿಕ್ ದೇಶಗಳ ಪ್ರತಿಭಟನೆಯ ನಂತರ, 05 ಜೂನ್ 2022 ರಂದು, ಬಿಜೆಪಿಯು ನೂಪುರ್ ಶರ್ಮಾ ಅವರನ್ನು ಪಕ್ಷದಿಂದ ಅಮಾನತುಗೊಳಿಸಿತು, ಅವರ ಅಭಿಪ್ರಾಯಗಳು ವಿವಿಧ ವಿಷಯಗಳಲ್ಲಿ ಪಕ್ಷದ ನಿಲುವಿಗೆ ವಿರುದ್ಧವಾಗಿವೆ ಎಂದು ಹೇಳಿದ್ದಾರೆ. ಪಕ್ಷದಿಂದ ಅಮಾನತುಗೊಂಡ ನಂತರ, ನೂಪುರ್ ಶರ್ಮಾ ಅವರು ಕ್ಷಮೆಯಾಚಿಸಿದರು ಮತ್ತು ಪ್ರವಾದಿ ಮುಹಮ್ಮದ್ ಅವರ ಮೇಲಿನ ಹೇಳಿಕೆಗಳನ್ನು ಬೇಷರತ್ತಾಗಿ ಹಿಂತೆಗೆದುಕೊಂಡಿದ್ದರು, ಇದು ಯಾರ ಧಾರ್ಮಿಕ ಭಾವನೆಗಳನ್ನು ನೋಯಿಸುವುದು ನನ್ನ ಉದ್ದೇಶವಲ್ಲ ಎಂದು ಹೇಳಿದ್ದರು. ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್ ಕುರಿತಾದ ಕಾಮೆಂಟ್‌ಗಳಿಗಾಗಿ 07 ಜೂನ್ 2022 ರಂದು ಆಕೆಗೆ ಕೊಲೆ ಮತ್ತು ಅತ್ಯಾಚಾರ ಬೆದರಿಕೆಗಳೂ ಬಂದಿದ್ದವು, ದೆಹಲಿ ಪೊಲೀಸರು ಅವರಿಗೆ ಪೊಲೀಸ್ ಭದ್ರತೆಯನ್ನು ನೀಡಿದರು. ಇತ್ತೀಚೆಗೆ, ಅವರು ಯಾವುದೇ ಸಾರ್ವಜನಿಕ ಕಾರ್ಯಕ್ರಮಕ್ಕೆ ಹಾಜರಾಗಿ ಸುಪ್ರೀಂ ಕೋರ್ಟ್ ವಿಚಾರಣೆಗಳ ಬಗ್ಗೆ ಅಥವಾ ಇಸ್ಲಾಂ ಮತ್ತು ಹಿಂದೂ ಧರ್ಮಕ್ಕೆ ಸಂಬಂಧಿಸಿದ ಅವರ ಅಭಿಪ್ರಾಯಗಳ ಬಗ್ಗೆ ಯಾವುದೇ ವರದಿಗಳಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಮಹಾರಾಷ್ಟ್ರದ ವನವಾಸಿ ಕಲ್ಯಾಣ ಆಶ್ರಮದಲ್ಲಿ ನೂಪುರ್ ಶರ್ಮಾ ಅವರು ಮಾಡಿದ ಹಳೆಯ ಭಾಷಣವನ್ನು ಇತ್ತೀಚಿನದು ಎಂದು ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

Share.

Comments are closed.

scroll