Fake News - Kannada
 

ದೆಹಲಿ ಪೊಲೀಸರ ಹಳೆಯ ವಿಡಿಯೋವನ್ನು ‘ವಿಕಾಸ್ ದುಬೆ ಎನ್ಕೌಂಟರ್ ನಂತರ ಯುಪಿ ಪೊಲೀಸರ ಕುಣಿತ’ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

0

ಗ್ಯಾಂಗ್ಸ್ಟರ್ ವಿಕಾಸ್ ದುಬೆ ಎನ್ಕೌಂಟರ್ ನಂತರ ಉತ್ತರ ಪ್ರದೇಶ ಪೊಲೀಸರು ನೃತ್ಯ ಮಾಡುತ್ತಿದ್ದರು ಎಂದು ಹೇಳುವ ಪೊಲೀಸರು ಗೆಲುವಿನ ಖುಷಿಯಿಂದ ನರ್ತಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಜುಲೈ 10, 2020 ರಂದು ಉತ್ತರಪ್ರದೇಶ ಪೊಲೀಸರು ವಿಕಾಸ್ ದುಬೆಯನ್ನು ಮಧ್ಯಪ್ರದೇಶದಿಂದ ಕಾನ್ಪುರಕ್ಕೆ ಕರೆತರುವಾಗ, ಆತ ಪೋಲೀಸರಿಂದ ಶಸ್ತ್ರಾಸ್ತ್ರ ಕಸಿದುಕೊಂಡು ಪಲಾಯನ ಮಾಡಲು ಯತ್ನಿಸಿದಾಗ (ಆರೋಪ) ಅವನ ಮೇಲೆ ಗುಂಡು ಹಾರಿಸಿದರು. ಗುಂಡಿನ ಗಾಯದಿಂದಾಗಿ ದುಬೆ ಮೃತಪಟ್ಟಿದ್ದಾನೆ. ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ‘10 ಜುಲೈ 2020’ರಂದು ಗ್ಯಾಂಗ್ಸ್ಟರ್ ವಿಕಾಸ್ ದುಬೆ ಎನ್ಕೌಂಟರ್ ನಂತರ ಉತ್ತರಪ್ರದೇಶ ಪೊಲೀಸರು ಖುಷಿಯಿಂದ ನೃತ್ಯ ಮಾಡುವ ವಿಡಿಯೋ.

ನಿಜಾಂಶ: ವೀಡಿಯೊ ಇತ್ತೀಚಿನ ಯಾವುದೇ ಘಟನೆಯಲ್ಲ ಮತ್ತು ಕನಿಷ್ಠ ‘ಫೆಬ್ರವರಿ 2019’ ರಿಂದಲೂ ಅಂತರ್ಜಾಲದಲ್ಲಿ ಅಸ್ತಿತ್ವದಲ್ಲಿದೆ. ಅಲ್ಲದೆ, ವಿಡಿಯೋದಲ್ಲಿ ನೃತ್ಯ ಮಾಡುತ್ತಿರುವ ಪೊಲೀಸರು ದೆಹಲಿ ಪೊಲೀಸರು. ಆದ್ದರಿಂದ ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ರಿವರ್ಸ್ ಇಮೇಜ್ ಹುಡುಕಾಟದ ತಂತ್ರವನ್ನು ಬಳಸಿ ನಾವು ವಿಡಿಯೊದ ಸ್ಕ್ರೀನ್‌ಶಾಟ್‌ಗಳ ಮೂಲಕ  ಹುಡುಕಿದಾಗ, ಅದೇ ವಿಡಿಯೊ ಯೂಟ್ಯೂಬ್‌ನಲ್ಲಿ ಕಂಡುಬಂದಿದೆ. ವೀಡಿಯೊಗೆ ‘ಪೊಲೀಸ್ ನೃತ್ಯ // ಮೆ ನಿಕ್ಲಾ ಗಡ್ಡಿ ಲೆಕರ್ // ಎಸ್‌ಎಚ್‌ಒ ನೃತ್ಯ // ಪೊಲೀಸ್ ಕಾರ್ಯಕ್ರಮ’ ಎಂಬ ತಲೆಬರಹ ಇದ್ದು, ಅದನ್ನು ‘4 ಫೆಬ್ರವರಿ 2019’ ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ನಾವು ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಪೊಲೀಸ್ ಅಧಿಕಾರಿಯೊಬ್ಬರ ಸಮವಸ್ತ್ರದಲ್ಲಿ, ಅವರು ‘ದೆಹಲಿ ಪೊಲೀಸ್’ಗೆ ಸೇರಿದವರು ಎಂದು ಸೂಚಿಸುವ ‘ಡಿ.ಪಿ.’ ಹೆಸರನ್ನು ಕಾಣಬಹುದು.

ಹುಡುಕಾಟ ನಡೆಸುವಾಗ, ಅದೇ ಘಟನೆಯ ಮತ್ತೊಂದು ವಿಡಿಯೊ ಕಂಡುಬಂದಿದೆ. ಆ ವಿಡಿಯೊದಲ್ಲಿಯೂ, ಇನ್ನೊಬ್ಬ ಪೊಲೀಸ್ ಅಧಿಕಾರಿಯ ಸಮವಸ್ತ್ರದ ಮೇಲೆ, ‘ಡಿ.ಪಿ.’ ಹೆಸರನ್ನು ನೋಡಬಹುದು. ಆದ್ದರಿಂದ, ವೀಡಿಯೊದಲ್ಲಿ ನೃತ್ಯ ಮಾಡುವ ಪೊಲೀಸರು ದೆಹಲಿ ಪೊಲೀಸರು. ಪೋಸ್ಟ್ ನಲ್ಲಿ ಹೇಳಿದಂತೆ ಉತ್ತರ ಪ್ರದೇಶದ ಪೊಲೀಸರು ಅಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ದೆಹಲಿ ಪೊಲೀಸ್ ನೃತ್ಯದ ಹಳೆಯ ವೀಡಿಯೊವನ್ನು ‘ವಿಕಾಸ್ ದುಬೆ ಎನ್ಕೌಂಟರ್ ನಂತರ ಉತ್ತರ ಪ್ರದೇಶ ಪೊಲೀಸರ ನೃತ್ಯ’ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

Share.

About Author

Comments are closed.

scroll