Fake News - Kannada
 

ವೈ.ಎಸ್. ಜಗನ್ ಅವರ ಆಡಳಿತಾವಧಿಯಲ್ಲಿ ಟಿಟಿಡಿ PRO ಆಗಿ ಕೆಲಸ ಮಾಡುತ್ತಿದ್ದ ಮುಬಿನಾ ನಿಷ್ಕಾ ಬೇಗಂ ಅವರಿಂದ ಆದಾಯ ತೆರಿಗೆ ಅಧಿಕಾರಿಗಳು ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳುವ ವೈರಲ್ ವಿಡಿಯೋ ಫೇಕ್

0

ಆಂಧ್ರಪ್ರದೇಶದಲ್ಲಿ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಪಬ್ಲಿಕ್ ರಿಲೇಶನ್ ಆಫೀಸರ್ (ಸಾರ್ವಜನಿಕ ಸಂಪರ್ಕ ಅಧಿಕಾರಿ) (ಪಿಆರ್‌ಒ) ಆಗಿ ಸೇವೆ ಸಲ್ಲಿಸಿದ್ದ ಮುಬಿನಾ ನಿಷ್ಕಾ ಬೇಗಂ ಅವರಿಂದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗಣನೀಯ ಪ್ರಮಾಣದ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ (ಇಲ್ಲಿ) ವಿಡಿಯೋವೊಂದು ವೈರಲ್ ಆಗಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ಆಂಧ್ರಪ್ರದೇಶದ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಸಾರ್ವಜನಿಕ ಸಂಪರ್ಕ ಅಧಿಕಾರಿ (ಪಿಆರ್‌ಒ) ಆಗಿ ಸೇವೆ ಸಲ್ಲಿಸಿದ್ದ ಮುಬಿನಾ ನಿಷ್ಕಾ ಬೇಗಂ ಅವರಿಂದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗಣನೀಯ ಪ್ರಮಾಣದ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿರುವುದನ್ನು ವೀಡಿಯೊ ತೋರಿಸುತ್ತದೆ.

ಫ್ಯಾಕ್ಟ್: ವೈರಲ್ ವೀಡಿಯೊ ತಿರುಮಲ ತಿರುಪತಿ ದೇವಸ್ಥಾನಕ್ಕೆ ಸಂಬಂಧಿಸಿಲ್ಲ. ಡಿಸೆಂಬರ್ 2021 ರಲ್ಲಿ ಜೋಸ್ ಅಲುಕ್ಕಾಸ್ ಶೋರೂಮ್‌ನಿಂದ ಕದ್ದ ಚಿನ್ನವನ್ನು ವಶಪಡಿಸಿಕೊಂಡ ನಂತರ ವೆಲ್ಲೂರು ಪೊಲೀಸರು ರಿಕವರಿ ಮಾಡಿದ ನಂತರ ಅದನ್ನು ಮಾಧ್ಯಮಗಳಿಗೆ ತೋರಿಸಿದ ದೃಶ್ಯವಾಗಿದೆ. ಇನ್ನು ಹೆಚ್ಚಾಗಿ ಹೇಳುವುದಾದರೆ, ಟಿಟಿಡಿ ಜನವರಿ 05, 2025 ರಂದು ತಮ್ಮ ಅಫೀಷಿಯಲ್  ‘X’ ಎಕ್ಸ್ ಹ್ಯಾಂಡಲ್‌ನಲ್ಲಿ ಸ್ಪಷ್ಟೀಕರಣವನ್ನು ನೀಡಿದ್ದಾರೆ. ವೀಡಿಯೊದಲ್ಲಿ ಕಾಣಿಸಿಕೊಂಡಿರುವ ಚಿನ್ನಾಭರಣವು ಅವರ ಸಾರ್ವಜನಿಕ ಸಂಪರ್ಕ ಅಧಿಕಾರಿಗೆ ಸಂಬಂಧಿಸಿಲ್ಲ ಮತ್ತು ಯಾವುದೇ ಮುಸ್ಲಿಂ ವ್ಯಕ್ತಿ ಟಿಟಿಡಿಯಲ್ಲಿ ಪಿಆರ್‌ಒ ಹುದ್ದೆಯನ್ನು ಹೊಂದಿರಲಿಲ್ಲ ಎಂದು ಹೇಳಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ತಪ್ಪಾಗಿದೆ. 

ವೈರಲ್ ಹೇಳಿಕೆಯನ್ನು ಪರಿಶೀಲಿಸಲು ನಾವು ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಇಂಟರ್ನೆಟ್ ಹುಡುಕಾಟ ನಡೆಸಿದ್ದೇವೆ. ಆದರೆ,  ಟಿಟಿಡಿಯ ಪಿಆರ್‌ಒ ಆಗಿ ಸೇವೆ ಸಲ್ಲಿಸಿದ ಮುಬಿನಾ ನಿಷ್ಕಾ ಬೇಗಂ ಎಂಬ ಹೆಸರಿನ ಯಾರಿಂದಲೂ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲು ಯಾವುದೇ ವಿಶ್ವಾಸಾರ್ಹ ರಿಪೋರ್ಟ್ಗಳಿಲ್ಲ.ಒಂದು ವೇಳೆ ಈ ಹೇಳಿಕೆ ನಿಜವಾಗಿದ್ದರೆ ಅದು ಖಂಡಿತವಾಗಿಯೂ ನ್ಯೂಸ್ ಆಗುತ್ತಿತ್ತು. ಆದರೆ ಅಂತಹ ಯಾವುದೇ ವರದಿಗಳು ನಮಗೆ ಕಂಡುಬಂದಿಲ್ಲ.  

ಡಿಬಂಕ್ ಮಾಡುವ ಪ್ರಕ್ರಿಯೆಯಲ್ಲಿ, ವೈರಲ್ ಪೋಸ್ಟ್‌ನಲ್ಲಿ ಹೇಳಿಕೊಂಡಿರುವಂತೆ ವೀಡಿಯೊದಲ್ಲಿರುವ ಚಿನ್ನದ ಆಭರಣಗಳು ಟಿಟಿಡಿ ಪಿಆರ್‌ಒಗೆ ಸಂಬಂಧಿಸಿಲ್ಲ ಎಂದು ಹೇಳುವ ಟಿಟಿಡಿಯ ಅಧಿಕೃತ ಹ್ಯಾಂಡಲ್‌ನಿಂದ 05 ಜನವರಿ 2025 ರಂದು x ಪೋಸ್ಟ್ (ಆರ್ಕೈವ್ ) ನಮಗೆ ಕಂಡುಬಂದಿದೆ. ತಿರುಮಲ ತಿರುಪತಿ ದೇವಸ್ತಾನದಲ್ಲಿ ಯಾವುದೇ ಮುಸ್ಲಿಂ ವ್ಯಕ್ತಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಸೇವೆ ಸಲ್ಲಿಸಿಲ್ಲ ಎಂದು ಪೋಸ್ಟ್ ಸ್ಪಷ್ಟಪಡಿಸಿದೆ.

ವೈರಲ್ ವೀಡಿಯೊದ ಕುರಿತು ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು, ನಾವು ವೈರಲ್ ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಡಿಸೆಂಬರ್ 22, 2021 ರಂದು ಜಯಾ ಪ್ಲಸ್ ಯೂಟ್ಯೂಬ್ ಚಾನೆಲ್‌ನಲ್ಲಿ ತಮಿಳು ಮಾಧ್ಯಮ ಸಂಸ್ಥೆ ‘ಜಯಾ’ ದಿಂದ ಬಂದ ವೀಡಿಯೊವನ್ನು (ಆರ್ಕೈವ್ ಮಾಡಲಾಗಿದೆ) ನಮಗೆ ತೋರಿಸಿದೆ. ಈ ವೀಡಿಯೊದಲ್ಲಿ ಅದೇ ದೃಶ್ಯಗಳನ್ನು ಕಾಣಬಹುದು. ಅದರ ವಿವರಣೆಯ ಪ್ರಕಾರ, ಡಿಸೆಂಬರ್ 2021 ರಲ್ಲಿ ತಮಿಳುನಾಡಿನ ವೆಲ್ಲೂರಿನ ಜೋಸ್ ಅಲುಕ್ಕಾಸ್ ಶೋರೂಮ್‌ನಿಂದ ಕಳ್ಳತನ ಮಾಡಿದ ಚಿನ್ನವನ್ನು ವಶಪಡಿಸಿಕೊಂಡ ನಂತರ ವೆಲ್ಲೂರು ಪೊಲೀಸರು ನಡೆಸಿದ ಮಾಧ್ಯಮ ಪ್ರಕ್ರಿಯೆಯಲ್ಲಿ ತಿಳಿಸಿದ ವಿಡಿಯೋವಾಗಿದೆ. ಹಲವಾರು ಇತರ ಸುದ್ದಿ ವಾಹಿನಿಗಳು ತಮ್ಮ ಯೂಟ್ಯೂಬ್ ಚಾನೆಲ್‌ಗಳಲ್ಲಿ (ಇಲ್ಲಿ ಮತ್ತು ಇಲ್ಲಿ) ಇದೇ ರೀತಿಯ ವಿವರಣೆಗಳೊಂದಿಗೆ ಅದೇ ದೃಶ್ಯಗಳನ್ನು ತೋರಿಸುವ ವೀಡಿಯೊಗಳನ್ನು ಅಪ್‌ಲೋಡ್ ಮಾಡಿರುವುದನ್ನು ಸಹ ನಾವು ಕಂಡುಕೊಂಡಿದ್ದೇವೆ.

ನಾವು ಸಂಬಂಧಿತ ತಮಿಳು ಕೀವರ್ಡ್‌ಗಳನ್ನು ಬಳಸಿಕೊಂಡು ರಿವೆರ್ಸೆ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಈ ಮೂಲಕ ಡಿಸೆಂಬರ್ 2021 ರಲ್ಲಿ ಪ್ರಕಟವಾದ ಹಲವಾರು ತಮಿಳು ಸುದ್ದಿ ವರದಿಗಳನ್ನು ಕಂಡುಕೊಂಡಿದ್ದೇವೆ (ಇಲ್ಲಿ, ಇಲ್ಲಿ, ಮತ್ತು, ಇಲ್ಲಿ). ಈ ವರದಿಗಳ ಪ್ರಕಾರ, ಡಿಸೆಂಬರ್ 14, 2021 ರ ರಾತ್ರಿ, ಕೆಲವು ದುಷ್ಕರ್ಮಿಗಳು ವೆಲ್ಲೂರಿನ ಜೋಸ್ ಅಲುಕ್ಕಾಸ್ ಶೋರೂಮ್‌ನಿಂದ 15 ಕೆಜಿ ಚಿನ್ನ ಮತ್ತು ಸುಮಾರು 500 ಗ್ರಾಂ ವಜ್ರಗಳನ್ನು ದೋಚಿದ್ದಾರೆ. ತನಿಖೆಯ ನಂತರ, ಪೊಲೀಸರು ವೆಲ್ಲೂರಿನ ಸ್ಮಶಾನದಿಂದ ಕದ್ದ ಎಲ್ಲಾ ಆಭರಣಗಳನ್ನು ವಶಪಡಿಸಿಕೊಂಡರು. ಘಟನೆಯ ಪ್ರಮುಖ ಆರೋಪಿ ದೀಕಾರಮನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಆದಾಯ ತೆರಿಗೆ ಇಲಾಖೆಯು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಮಂಡಳಿಯ ಸದಸ್ಯರ ಮೇಲೆ ದಾಳಿ ನಡೆಸಿ ಆಭರಣಗಳನ್ನು ವಶಪಡಿಸಿಕೊಂಡಿದೆ ಎಂದು ಹೇಳಿಕೊಂಡು ವೈರಲ್ ಆದ ಡೆಬ್ಯುನ್ಕ್ಡ್ ವೀಡಿಯೊವನ್ನು ಫ್ಯಾಕ್ಟ್ಲಿ ಈ ಹಿಂದೆ ಸುಳ್ಳು ಎಂದು ಸ್ಪಷ್ಟಪಡಿಸಿತ್ತು. 

ಒಟ್ಟಾರೆಯಾಗಿ ಹೇಳುವುದಾದರೆ, ಕದ್ದ ಚಿನ್ನದ ಬಗ್ಗೆ ಡಿಸೆಂಬರ್ 2021 ರಲ್ಲಿ ತಮಿಳುನಾಡು ಪೊಲೀಸ್ ಪತ್ರಿಕಾಗೋಷ್ಠಿಯ ವೀಡಿಯೊವನ್ನು ಟಿಟಿಡಿ ಮಾಜಿ ಪಿಆರ್ ಒ  ಮುಬಿನಾ ನಿಷ್ಕಾ ಬೇಗಂ ಅವರಿಂದ ಐಟಿ ಇಲಾಖೆ ಅಧಿಕಾರಿಗಳು ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

Share.

Comments are closed.

scroll