Fake News - Kannada
 

ಉದಯಪುರದಲ್ಲಿ ನಡೆದ ವಿವಾಹಿತ ಪ್ರೇಮಕಥೆಗೆ ಘಟನೆ ಯಾವುದೇ ಲವ್ ಜಿಹಾದ್ ಗೆ ಸಂಬಂಧಿಸಿದ್ದಲ್ಲ

0

ಅವಿವಾಹಿತ ಹುಡುಗಿಯರನ್ನು ಗುರಿಯಾಗಿಸಿಕೊಂಡಿರುವ ‘ಲವ್ ಜಿಹಾದ್’ ಈಗ ವಿವಾಹಿತ ಮತ್ತು ಮಕ್ಕಳನ್ನು ಸಹ ಗುರಿಯಾಗಿಸಿಕೊಂಡಿದೆ ಎನ್ನುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಬ್ಬಿತ್ತ. ವೀಡಿಯೊದಲ್ಲಿ ವಿವಾಹಿತ ಹಿಂದೂ ಮಹಿಳೆಯೊಬ್ಬಳು ಮುಸ್ಲಿಂ ಪುರುಷನೊಂದಿಗೆ ಹೊರಟು ಹೋಗುತ್ತಿರುವ ಮತ್ತು ಆಕೆಯ ಇಬ್ಬರು ಹೆಣ್ಣುಮಕ್ಕಳು ಅವಳನ್ನು ತಡೆದು ಅಳುತಿರುವಂತಹ ದೃಶ್ಯಗಳು ವಿಡಿಯೋದಲ್ಲಿ ಕಂಡುಬಂದಿತ್ತು.  ಆದರೆ ಇದು ಎಷ್ಟರ ಮಟ್ಟಿಗೆ ನಿಜ ಎಂಬುದನ್ನು ತಿಳಿಯೋಣ.

ಕ್ಲೇಮ್ : ವಿವಾಹಿತ ಹಿಂದೂ ಮಹಿಳೆಯೊಬ್ಬಳು ಮುಸ್ಲಿಂ ಯುವಕನೊಂದಿಗೆ ನಡೆದುಕೊಂಡು ಹೋಗುತ್ತಿರುವ ವಿಡಿಯೋ. 

ಫ್ಯಾಕ್ಟ್ : ಪೊಲೀಸರ ಪ್ರಕಾರ, ಈ ಘಟನೆಯಲ್ಲಿ ಯಾವುದೇ ಲವ್ ಜಿಹಾದ್ ಅಲ್ಲ. ನಡೆದ ಘಟನೆಯಲ್ಲಿ ಮಹಿಳೆ ಮತ್ತು ಅವಳು ಪ್ರೀತಿಸಿದ ಪುರುಷ ಇಬ್ಬರೂ ಹಿಂದೂಗಳು. ಇದನ್ನು ಪೊಲೀಸರು ದೃಢಪಡಿಸಿದ್ದಾರೆ. ಪೊಲೀಸರ ಪ್ರಕಾರ, ಮಹಿಳೆ ಪ್ರಸ್ತುತ ತನ್ನ ಪತಿ ಮತ್ತು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಆದ್ದರಿಂದ ಪೋಸ್ಟ್ ಮೂಲಕ ಹೇಳುವುದು ತಪ್ಪು.

ಈ ವೀಡಿಯೊದ ಕುರಿತು ಹುಡುಕಾಡಿದಾಗ  ಅದೇ ವೀಡಿಯೊದ ಹಲವಾರು ಸುದ್ದಿಗಳು ನಮಗೆ ಬೇರೆ ಕಡೆಯಲ್ಲೂ ದೊರಕಿದ್ದವು. ವರದಿಗಳ ಪ್ರಕಾರ, ವೀಡಿಯೊದಲ್ಲಿ ತೋರಿಸಲಾದ ಘಟನೆಯು ರಾಜಸ್ಥಾನದ ಉದಯಪುರ ಜಿಲ್ಲೆಯ ಸಾಲುಂಬಾರ್ ಪ್ರದೇಶದಲ್ಲಿ ನಡೆದಿದೆ.

ಕಥೆಗಳ ಪ್ರಕಾರ, ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿರುವ ಮಹಿಳೆ ಇನ್ನೊಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ.  (ನ್ಯಾಯಾಲಯದ ಮದುವೆ). ನಂತರ ತನ್ನ ಮಾಜಿ ಪತಿಯಿಂದ ತನ್ನ ಜೀವಕ್ಕೆ ಪ್ರಾಣಹಾನಿ  (ಜೀವ ಬೆದರಿಕೆ) ಇದೆ ಎಂದು ಅವಳು ಜಿಲ್ಲಾ ಎಸ್ಪಿಗೆ ದೂರು ನೀಡಿದ್ದಾಳೆ. ತನ್ನ ಇಬ್ಬರು ಮಕ್ಕಳೊಂದಿಗೆ ಆತ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ.

ಈ ಸಂದರ್ಭದಲ್ಲಿಯೇ ಇಬ್ಬರು ಹೆಣ್ಣುಮಕ್ಕಳು ತಮ್ಮ ತಾಯಿಯ ಬಳಿ ಬಿಟ್ಟು ಹೋಗಬೇಡಿ ಎಂದು ಕೇಳಿ ಅಳುತ್ತಿರುವ ದೃಶ್ಯಗಳನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದುದಾಗಿದೆ. ಏನೇ ಆದರೂ ಈ ಘಟನೆ ಯಾವುದೇ ರೀತಿಯಲ್ಲಿ ನೋಡಿದರು ಲವ್ ಜಿಹಾದ್ ಗೆ ಸಂಬಂಧಿಸಿದಂತೆ ಕಂಡು ಬಂದಿಲ್ಲ. ಈ ಘಟನೆಯ ಕುರಿತಾದ ಹಲವಾರು ಸುದ್ದಿಗಳನ್ನು ನಾವು ಸೋಶಿಯಲ್ ಮೀಡಿಯಾದಲ್ಲೂ ಕಾಣಬಹುದಾಗಿದೆ.

ಆದಾಗ್ಯೂ, ಘಟನೆಗೆ ಸಂಬಂಧಿಸಿದ ವಿವರಗಳಿಗಾಗಿ ಸಲುಂಬರ್ ಸಿಒ ಸುಧಾ ಪಲಾವತ್ ಅವರನ್ನು ಸಂಪರ್ಕಿಸಿದಾಗ, ಘಟನೆಯಲ್ಲಿ ಯಾವುದೇ ಲವ್ ಜಿಹಾದ್ ಇಲ್ಲಮತ್ತು ಇಬ್ಬರೂ ಒಂದೇ ಧರ್ಮಕ್ಕೆ ಸೇರಿದವರು ಎಂದು ಸ್ಪಷ್ಟಪಡಿಸಿದ್ದಾರೆ.

Aaj Tak ಮಾಧ್ಯಮದವರು ಪೊಲೀಸರನ್ನು ಸಂಪರ್ಕಿಸಿದ ವಿವರಗಳ ಪ್ರಕಾರ, ಮಹಿಳೆಯ ಹೆಸರು ದೀಪಿಕಾ ಚೌಬೀಸಾ ಮತ್ತು ಅವಳು ಪ್ರೀತಿಸಿದ ವ್ಯಕ್ತಿಯ ಹೆಸರು ಲಕ್ಕಿ ಚೌಧರಿ, ಇಬ್ಬರೂ ಹಿಂದೂಗಳು. ಈಗ ಮಹಿಳೆ ತನ್ನ ಪತಿ ಮತ್ತು ಮಕ್ಕಳೊಂದಿಗೆ ವಾಸಿಸುತ್ತಾಳೆ ಎಂಬುದು ಸ್ಪಷ್ಟವಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೋಸ್ಟ್ನಲ್ಲಿ ಹೇಳುತ್ತಿರುವುದು ಸಂಪೂರ್ಣವಾಗಿ ಸುಳ್ಳು ಎಂದು ತಿಳಿದುಬಂದಿದೆ.

ಕೊನೆಯದಾಗಿ, ಉದಯಪುರದಲ್ಲಿ ನಡೆದ ವಿವಾಹಿತ ಪ್ರೇಮಕಥೆಗೆ ಸಂಬಂಧಿಸಿದ ಈ ಘಟನೆಯಲ್ಲಿ ಯಾವುದೇ ಲವ್ ಜಿಹಾದ್ ಅಲ್ಲ.

Share.

Comments are closed.

scroll