Fake News - Kannada
 

ರಾಷ್ಟ್ರಧ್ವಜವನ್ನು ಹೋಲುವ ಧ್ವಜದ ಮೇಲೆ ಮಸೀದಿಯ ಚಿಹ್ನೆಯ ಈ ಫೋಟೋ ಹಳೆಯದು, ಕನಿಷ್ಠ 2018 ರಿಂದ ಇಂಟರ್ನೆಟ್‌ನಲ್ಲಿದೆ ಎಂದು ತಿಳಿದುಬಂದಿದೆ

0

ಭಾರತದ ರಾಷ್ಟ್ರಧ್ವಜವನ್ನು ಹೋಲುವ ತ್ರಿವರ್ಣ ಧ್ವಜದಲ್ಲಿ ಅಶೋಕ ಚಕ್ರದ ಬದಲಿಗೆ ಮಸೀದಿ/ಸಮಾಧಿಯ ಚಿಹ್ನೆಯನ್ನುಹೊಂದಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.  ಪೋಸ್ಟ್‌ನ ವಿವರಣೆಯಲ್ಲಿ, ಈ ಘಟನೆ ಕರ್ನಾಟಕದ ಸಿರುಗುಪ್ಪದಲ್ಲಿ ನಡೆದಿದೆ ಎಂದು ಹೇಳಲಾಗಿದೆ ಮತ್ತು ಇದು ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದ ನಂತರ ನಡೆದಿದೆ ಎಂದು ತಿಳಿಸಿದ್ದಾರೆ ಹಾಗಾದರೆ ಇದರ ಹಿಂದಿನ ಸತ್ಯಂಶವನ್ನು ತಿಳಿಯೋಣ.

ಕ್ಲೇಮ್: ಇತ್ತೀಚಿನ (2023) ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಜಯಗಳಿಸಿದ ನಂತರ, ಕರ್ನಾಟಕದ ಸಿರುಗುಪ್ಪದಲ್ಲಿ ಅಶೋಕ ಚಕ್ರದ ಬದಲಿಗೆ ಮಸೀದಿಯ ಚಿಹ್ನೆಯಿರುವ ರಾಷ್ಟ್ರಧ್ವಜವನ್ನು ಹಾರಿಸಲಾಯಿತು.

ಫ್ಯಾಕ್ಟ್ : ಘಟನೆ ನಡೆದಿರುವುದು ಕರ್ನಾಟಕದ ಸಿರುಗುಪ್ಪದಲ್ಲಿಯಾದರೂ ಈ ಫೋಟೋ ಇತ್ತೀಚಿನದ್ದಲ್ಲ. ಇದು ಕನಿಷ್ಠ ನವೆಂಬರ್ 2018 ನದ್ದು, ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ಘಟನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಕಂಡುಹಿಡಿಯಲು ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಅಂತರ್ಜಾಲದಲ್ಲಿ ಹುಡುಕಿದಾಗ, ಪೋಸ್ಟ್‌ನಲ್ಲಿ ಮಾಡಿದ ಅದೇ ಕ್ಲೇಮ್ ಹೊಂದಿರುವ ಹಲವಾರು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಕಂಡುಬಂದಿವೆ, ಅದರಲ್ಲಿ ಹಳೆಯದು ನವೆಂಬರ್ 2018 ರ ದಿನಾಂಕವಾಗಿದೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ)

ಈ ಪೋಸ್ಟ್‌ಗಳು ವಿವಿಧ ಧ್ವಜಗಳನ್ನು ಹೊತ್ತಿರುವ ಜನರ ಹಲವಾರು ಚಿತ್ರಗಳನ್ನು ಒಳಗೊಂಡಿವೆ, ಅದರಲ್ಲಿ ಒಂದು ಭಾರತೀಯ ರಾಷ್ಟ್ರಧ್ವಜವನ್ನು ಹೋಲುತ್ತದೆ, ಅಶೋಕ ಚಕ್ರದ ಬದಲಿಗೆ ಮಸೀದಿ ಚಿಹ್ನೆಯನ್ನು ಹೊಂದಿದೆ. ಈ ಫೋಟೋಗಳಲ್ಲಿ ಒಂದರಲ್ಲಿ, ಧ್ವಜವನ್ನು ಹಿಡಿದಿರುವ ವ್ಯಕ್ತಿಯ ಹಿಂದೆ “ಭವಾನಿ ಸೂಪರ್ಮಾರ್ಕೆಟ್” ಎಂದು ಬರೆಯುವ ಸೈನ್ಬೋರ್ಡ್ ಅನ್ನು ನಾವು ನೋಡುತ್ತೇವೆ.

ಇದನ್ನೇ ಸುಳಿವಾಗಿ ತೆಗೆದುಕೊಂಡ ನಾವು, ಕರ್ನಾಟಕದ ಸಿರುಗುಪ್ಪದಲ್ಲಿ ಅದೇ ಸೈನ್‌ಬೋರ್ಡ್ ಹೊಂದಿರುವ ಅಂಗಡಿ ಇದೆಯಾ ಎಂದು ನಾವು ಗೂಗಲ್ ಮ್ಯಾಪ್‌ಗಳ ಮೂಲಕ ಖಚಿತಪಡಿಸಿದ್ದೇವೆ. ಇದು ಸಿರುಗುಪ್ಪದ ಜೇವರ್ಗಿ ಚಾಮರಾಜನಗರ ರಸ್ತೆಯಲ್ಲಿದೆ. ಇದರಿಂದ ಈ ಘಟನೆ ನಡೆದ ಸ್ಥಳ ನಿಜಕ್ಕೂ ಸಿರುಗುಪ್ಪ ಎಂಬುದು ಸ್ಪಷ್ಟವಾಗಿದೆ.

ಈ ಬಗ್ಗೆ ಯಾವುದೇ ಮಾಧ್ಯಮಗಳು ವರದಿ ಮಾಡಿವೆಯೇ ಎಂದು ಹುಡುಕಾಟ ನಡೆಸಲಾಯಿತು, ಆದರೆ ಅಂತಹ ಯಾವುದೇ ವರದಿಗಳು ಕಂಡುಬಂದಿಲ್ಲ. ಅಲ್ಲದೆ, ಇತ್ತೀಚೆಗಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿದ ನಂತರ ಕರ್ನಾಟಕದಲ್ಲಿ ಇಂತಹ ಯಾವುದೇ ಘಟನೆ ನಡೆದಿರುವ ಬಗ್ಗೆ ಖಚಿತ ಮಾಹಿತಿ ಇಲ್ಲ.

ಅಂತಿಮವಾಗಿ, ರಾಷ್ಟ್ರಧ್ವಜವನ್ನು ಹೋಲುವ ಧ್ವಜದ ಮೇಲೆ ಮಸೀದಿಯ ಚಿಹ್ನೆಯ ಈ ಫೋಟೋ ಹಳೆಯದು, ಕನಿಷ್ಠ 2018 ರಿಂದ ಇಂಟರ್ನೆಟ್‌ನಲ್ಲಿದೆ ಎಂದು ತಿಳಿದುಬಂದಿದೆ.

Share.

Comments are closed.

scroll