Fake News - Kannada
 

ತಾಲಿಬಾನ್‌ಗಳು ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ಗೆ ಮನುಷ್ಯನನ್ನು ನೇಣು ಹಾಕಿದ್ದಾರೆ ಎಂಬುದು ಸುಳ್ಳು

0

ತಾಲಿಬಾನ್‌ಗಳು ಅಮೆರಿಕದ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ಗೆ ಒಬ್ಬ ವ್ಯಕ್ತಿಯನ್ನು ನೇಣಿಗೇರಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹೆಲಿಕಾಪ್ಟರ್‌ನಿಂದ ಓರ್ವ ವ್ಯಕ್ತಿ ತೂಗಾಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ವ್ಯಕ್ತಿಯನ್ನು ನೇಟುಹಾಕಿ ಹೆಲಿಕಾಪ್ಟರ್‌ಅನ್ನು ಕಂದಹಾರ್‌ನಾದ್ಯಂತ ತಾಲಿಬಾನ್‌ಗಳು ಸುತ್ತಾಡಿದ್ದಾರೆ ಎಂದು ಪೋಸ್ಟ್ ಹೇಳುತ್ತದೆ. ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯ ಸತ್ಯ ಪರಿಶೀಲಿಸೋಣ.

ಪ್ರತಿಪಾದನೆ: ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ಗೆ ತಾಲಿಬಾನ್‌ಗಳು ಒಬ್ಬ ವ್ಯಕ್ತಿಯನ್ನು ನೇಣು ಹಾಕಿದ ವಿಡಿಯೋ.

ಸತ್ಯ: ವಿಡಿಯೋದಲ್ಲಿರುವ ವ್ಯಕ್ತಿ ತಾಲಿಬಾನ್‌ಗೆ ಸೇರಿದವರನೇ ಆಗಿದ್ದಾನೆ. ಕಂದಹಾರ್ ನಲ್ಲಿರುವ ರಾಜ್ಯಪಾಲರ ಕಟ್ಟಡದ ಬಳಿ ತಾಲಿಬಾನ್ ಧ್ವಜವನ್ನು ಹಾರಿಸಲು ಆತ ಪ್ರಯತ್ನಿಸುತ್ತಿದ್ದ. ಅಫ್ಘಾನ್ ಪೈಲಟ್ ಹಾರಿಸುತ್ತಿರುವ ಆ ಹೆಲಿಕಾಪ್ಟರ್ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಆಗಿದೆಯೇ ಎಂಬುದನ್ನು ಯುಎಸ್ ರಕ್ಷಣಾ ಇಲಾಖೆ ಇನ್ನೂ ದೃಢಪಡಿಸಿಲ್ಲ. 31 ಆಗಸ್ಟ್ 2021 ರಂದು, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ತನ್ನ ಸೈನ್ಯವನ್ನು ಅಫ್ಘಾನಿಸ್ತಾನದಿಂದ ಹಿಂತೆಗೆದುಕೊಳ್ಳುವುದನ್ನು ಪೂರ್ಣಗೊಳಿಸಿತು. ವರದಿಗಳ ಪ್ರಕಾರ, ಯುನೈಟೆಡ್ ಸ್ಟೇಟ್ಸ್ ಮಿಲಿಟರಿ 73 ವಿಮಾನಗಳು, 27 ಹಮ್ವೀಗಳು, ಶಸ್ತ್ರಾಸ್ತ್ರ ವ್ಯವಸ್ಥೆಗಳು ಮತ್ತು ಇತರ ಹೈಟೆಕ್ ರಕ್ಷಣಾ ಸಾಧನಗಳನ್ನು ಕಾಬೂಲ್‌ನಿಂದ ನಿಷ್ಕ್ರಿಯಗೊಳಿಸಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ನಡೆಸಿದ ದೌರ್ಜನ್ಯಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯು ಪ್ರಪಂಚದಾದ್ಯಂತ ಚಿರಪರಿಚಿತವಾಗಿದೆ. ಆದರೆ, ಅಂತಹ ಘಟನೆಗಳಿಗೆ ಸಂಬಂಧವಿಲ್ಲದ ವೀಡಿಯೊ ಇದಾಗಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಬಳಸಿ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಒಂದು ಟ್ವೀಟ್ ಕಂಡುಬಂದಿದೆ. ಈ ಟ್ವೀಟ್ಅನ್ನು ಅಫ್ಘಾನಿಸ್ತಾನ ಪತ್ರಕರ್ತ ಬಿಲಾಲ್ ಸರ್ವಾರಿ ಮಾಡಿದ್ದಾರೆ. ಅವರು ತಾಲಿಬಾನ್ ಅಮೆರಿಕನ್ ಬ್ಲ್ಯಾಕ್ ಹಾಕ್‌ ಹೆಲಿಕಾಪ್ಟರ್‌ಗೆ ನೇಣು ಹಾಕುತ್ತಿದ್ದಾರೆ ಎಂಬ ಹೇಳಿಕೆಯನ್ನು ವಿರೋಧಿಸಿದ್ದಾರೆ. ಅಫ್ಘಾನ್ ಪೈಲಟ್ ತಮಗೆ ಗೊತ್ತಿದ್ದು, ಆತ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಹಾರಿಸಿದ್ದನ್ನು ಆತ ದೃಢಪಡಿಸಿದ್ದಾನೆ. ಹೆಲಿಕಾಪ್ಟರ್‌ನಲ್ಲಿ ತೂಗಾಡುತ್ತಿದ್ದ ತಾಲಿಬಾನ್ ವ್ಯಕ್ತಿ ‘ತಾಲಿಬಾನ್ ಧ್ವಜವನ್ನು ಹಾರಿಸಲು ಪ್ರಯತ್ನಿಸುತ್ತಿದ್ದನು. ಆದರೆ ಅದು ಸಾಧ್ಯವಾಗಲಿಲ್ಲ’ ಎಂದು ಪತ್ರಕರ್ತ ಹೇಳುತ್ತಾರೆ.

ಅಫ್ಘಾನ್ ನ್ಯೂಸ್ ಏಜೆನ್ಸಿ ಅಶ್ವಕ ಟ್ವೀಟ್ ಮಾಡಿರುವ 2 ನಿಮಿಷದ ವೀಡಿಯೋದಲ್ಲಿ ಹೆಲಿಕಾಪ್ಟರ್‌ನಿಂದ ತೂಗಾಡುತ್ತಿರುವ ವ್ಯಕ್ತಿಯ ದೃಶ್ಯಗಳನ್ನು ತೋರಿಸಲಾಗಿದೆ. ಕಂದಹಾರ್‌ನಲ್ಲಿರುವ ರಾಜ್ಯಪಾಲರ ಕಚೇರಿಯ ಮೇಲೆ ಹಾರುತ್ತಿದ್ದ ಹೆಲಿಕಾಪ್ಟರ್ ಬ್ಲಾಕ್‌ಹಾಕ್‌ ಎಂದು ಟ್ವೀಟ್ ಹೇಳಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹೆಲಿಕಾಪ್ಟರ್ ಮತ್ತು ಅದರಿಂದ ನೇತಾಡುತ್ತಿರುವ ವ್ಯಕ್ತಿಯ ಹಲವಾರು ವೀಡಿಯೊಗಳು ಕಂಡುಬಂದಿವೆ. ದೃಶ್ಯಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಈ ಯಾವುದೇ ದೃಶ್ಯಗಳು ಹೆಲಿಕಾಪ್ಟರ್‌ನಿಂದ ನೇತಾಡುತ್ತಿರುವ ವ್ಯಕ್ತಿಯ ಬಗ್ಗೆ ಚರ್ಚಿಸುವುದಿಲ್ಲ. ಒಂದು ಸ್ಪಷ್ಟವಾದ 52 ಸೆಕೆಂಡುಗಳ ವೀಡಿಯೋ ಹೆಲಿಕಾಪ್ಟರ್‌ನಿಂದ ತೂಗಾಡುತ್ತಿರುವಾಗ ಆತ ತನ್ನ ಕೈಗಳನ್ನು ಬೀಸುತ್ತಿರುವ ವ್ಯಕ್ತಿಯನ್ನು ತೋರಿಸುತ್ತದೆ.

ವಾಷಿಂಗ್ಟನ್ ಪೋಸ್ಟ್‌ನ ಫ್ಯಾಕ್ಟ್ ಚೆಕರ್ ಗ್ಲೆನ್ ಕೆಸ್ಲರ್ ಈ ವೈರಲ್ ಪೋಟ್‌ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅದರಲ್ಲಿ, ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ನಿಂದ ತಾಲಿಬಾನ್ ಒಬ್ಬ ವ್ಯಕ್ತಿಯನ್ನು ನೇಣು ಹಾಕಿದ್ದಾರೆ ಎಂದು ಹೇಳಲಾಗಿದೆ. ಆದರೆ, ಇದು ‘ಸ್ಪಷ್ಟವಾಗಿ ತಾಲಿಬಾನ್ ಧ್ವಜವಿರುವ ಹಗ್ಗಕ್ಕೆ ನೇತಾಡುತ್ತಿರುವ ವ್ಯಕ್ತಿ ತಾಲಿಬಾನ್ ಉಗ್ರಗಾಮಿ’ ಎಂದು ಅವರು ಹೇಳಿದ್ದಾರೆ.

ಬಿಬಿಸಿ ನ್ಯೂಸ್ ಆಫ್ಘಾನಿಸ್ತಾನ್ ಲೈವ್ ಪೇಜ್ ನಲ್ಲಿ ಇದೇ ವಿಡಿಯೋ ಕುರಿತು ಲೇಖನವನ್ನು ಪ್ರಕಟಿಸಿದ್ದು,. ಕಟ್ಟಡದ ಮೇಲೆ ಧ್ವಜವನ್ನು ಹಾರಿಸಲು ವಿಫಲ ಪ್ರಯತ್ನ ಎಂದು ಹೇಳಿದೆ. ‘ಬಿಬಿಸಿ ಪ್ರಕಟಿಸಿದ ಹೆಚ್ಚಿನ ದೃಶ್ಯಗಳು ಮತ್ತು ಸ್ತಬ್ಧಚಿತ್ರಗಳು ಕಂದಹಾರ್ ನಗರದ ಮೇಲೆ ಹಾರುವ ವ್ಯಕ್ತಿ ಜೀವಂತವಾಗಿದ್ದಾನೆ ಎಂದು ತೋರಿಸುತ್ತದೆ. ಈ ಚಿತ್ರಗಳು ಅವರು ಬ್ಲ್ಯಾಕ್‌ಹಾಕ್ ಹೆಲಿಕಾಪ್ಟರ್‌ಗಳ ಡೈವರ್‌ನ ವಿಂಚ್ ಧರಿಸಿರುವುದು ಮತ್ತು ತಾಲಿಬಾನ್ ಧ್ವಜವನ್ನು ಬೀಸುತ್ತಿರುವುದನ್ನು ತೋರಿಸುತ್ತದೆ. ’ಹಿಂದೂಸ್ತಾನ್ ಟೈಮ್ಸ್ ಲೇಖನದ ಪ್ರಕಾರ, ಹೆಲಿಕಾಪ್ಟರ್‌ನಿಂದ ತೂಗಾಡುತ್ತಿರುವ ವ್ಯಕ್ತಿಯು ಧ್ವಜವನ್ನು ಸರಿಪಡಿಸುತ್ತಿದ್ದಾನೆ.

ಅದೇ ಪ್ರತಿಪಾದನೆ ಕುರಿತು ಸ್ನೋಪ್ಸ್ ಬರೆದ ಸತ್ಯ-ಪರಿಶೀಲನಾ ಲೇಖನವು ಹೇಳುವಂತೆ, ಈ ವೀಡಿಯೋ ‘ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಅನ್ನು ಈ ಹಿಂದೆ ಅಫ್ಘಾನ್ ವಾಯುಪಡೆಯಿಂದ ಬಳಸುತ್ತಿದ್ದಂತೆ ತೋರಿಸುತ್ತದೆ. ಆದರೆ ಯುನೈಟೆಡ್ ಸ್ಟೇಟ್ಸ್‌ನ ರಕ್ಷಣಾ ಇಲಾಖೆಯು ಈ ವಿಡಿಯೋ ಬಗ್ಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ ಎಂದು ಅದು ಹೇಳುತ್ತದೆ.

31 ಆಗಸ್ಟ್ 2021 ರಂದು, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ತನ್ನ ಸೈನ್ಯವನ್ನು ಅಫ್ಘಾನಿಸ್ತಾನದಿಂದ ಹಿಂತೆಗೆದುಕೊಳ್ಳುವುದನ್ನು ಪೂರ್ಣಗೊಳಿಸಿತು. ನಂತರ, ತಾಲಿಬಾನ್ ವಿಜಯ ಮತ್ತು ಸ್ವಾತಂತ್ರ್ಯವನ್ನು ಘೋಷಿಸಿತು ಮತ್ತು ಕಾಬೂಲ್ ವಿಮಾನ ನಿಲ್ದಾಣದ ಮೇಲೆ ಹಿಡಿತ ಸಾಧಿಸಿತು. ವರದಿಗಳ ಪ್ರಕಾರ, ಯುನೈಟೆಡ್ ಸ್ಟೇಟ್ಸ್ ಮಿಲಿಟರಿ 73 ವಿಮಾನಗಳು, 27 ಹಮ್ವೀಗಳು, ಶಸ್ತ್ರಾಸ್ತ್ರ ವ್ಯವಸ್ಥೆಗಳು ಮತ್ತು ಇತರ ಹೈಟೆಕ್ ರಕ್ಷಣಾ ಸಾಧನಗಳನ್ನು ಕಾಬೂಲ್‌ನಿಂದ ಅಂತಿಮ ವಿಮಾನ ಹೊರಡುವ ಮೊದಲೇ ನಿಷ್ಕ್ರಿಯಗೊಳಿಸಿದೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ದೌರ್ಜನ್ಯಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯು ಪ್ರಪಂಚದಾದ್ಯಂತ ಸುದ್ದಿಯಾಗಿದೆ. ಇತ್ತೀಚಿನ ವರದಿಗಳು (ಇಲ್ಲಿ ಮತ್ತು ಇಲ್ಲಿ) ಸಹ ಅವರ ಕ್ರೂರತೆಯನ್ನು ಸ್ಪಷ್ಟವಾಗಿ ತೋರಿಸುತ್ತವೆ. ಆದಾಗ್ಯೂ, ಲಭ್ಯವಿರುವ ಪುರಾವೆಗಳ ಪ್ರಕಾರ, ಈ ವೀಡಿಯೊ ಇತ್ತೀಚೆಗೆ ಅವರ ಕ್ರೌರ್ಯಕ್ಕೆ ಸಂಬಂಧಿಸಿದ್ದಲ್ಲ.

ಅದನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ, ತಾಲಿಬಾನ್ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ನಿಂದ ಮನುಷ್ಯನನ್ನು ನೇಣು ಹಾಕುತ್ತಿರುವುದನ್ನು ಈ ವೀಡಿಯೊ ತೋರಿಸುವುದಿಲ್ಲ.

Share.

About Author

Comments are closed.

scroll