Fake News - Kannada
 

ಅಕ್ಟೋಬರ್ 2021 ರಲ್ಲಿ ತೆಗೆದ ಫೋಟೋವನ್ನು ಮನಮೋಹನ್ ಸಿಂಗ್ ಅವರ ಕೊನೆಯ ಕ್ಷಣದ ಫೋಟೋ ಎಂದು ಹಂಚಿಕೊಳ್ಳಲಾಗುತ್ತಿದೆ

0

ಭಾರತದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ 26 ಡಿಸೆಂಬರ್ 2024 ರಂದು ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ನಲ್ಲಿ ಪ್ರಾಯ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿರುವಾಗ ನಿಧನರಾದರು. ಈ ಹಿನ್ನಲೆಯಲ್ಲಿ ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ವ್ಯಕ್ತಿಯೊಬ್ಬರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ (ಇಲ್ಲಿ) ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ಅದು ಮನಮೋಹನ್ ಸಿಂಗ್ ಅವರ ಕೊನೆಯ ಫೋಟೋ ಎಂದು ಹೇಳಲಾಗುತ್ತಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ಭಾರತದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಕೊನೆಯ ಕ್ಷಣಗಳಲ್ಲಿ ತೆಗೆದ ಫೋಟೋ.

ಫ್ಯಾಕ್ಟ್: ಈ ಫೋಟೋ ಡಾ.ಮನಮೋಹನ್ ಸಿಂಗ್ ಅವರು ತಮ್ಮ ಕೊನೆಯ ಕ್ಷಣಗಳಲ್ಲಿ ತೆಗೆದದ್ದಲ್ಲ. ಬದಲಾಗಿ ಅದು 14 ಅಕ್ಟೋಬರ್ 2021 ರಂದು ಮನಮೋಹನ್ ಸಿಂಗ್ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ, ಆಗಿನ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರನ್ನು ಭೇಟಿ ಮಾಡಿ ಅವರ ಆರೋಗ್ಯವನ್ನು ವಿಚಾರಿಸಿದಾಗ ತೆಗೆದ ಫೋಟೋ. ಹಾಗಾಗಿ ಪೋಸ್ಟ್‌ನಲ್ಲಿ ಹೇಳಿರುವುದು ತಪ್ಪು.

ವೈರಲ್ ಫೋಟೋದ ರಿವರ್ಸ್ ಇಮೇಜ್ ಸೀರಿಚಿಂಗ್ ಮೂಲಕ ಇದು ನಮಗೆ ಅಕ್ಟೋಬರ್ 2021 ರ ಇಂಡಿಯಾ ಟಿವಿ ಲೇಖನವನ್ನು (ಆರ್ಕೈವ್ ಲಿಂಕ್) ತೋರಿಸಿತು. ಈ ಲೇಖನದಲ್ಲಿ, ಆಗಿನ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಡಾಕ್ಟರ್ ನೊಂದಿಗೆ  ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ಇದು 14 ಅಕ್ಟೋಬರ್ 2021 ರಂದು ಮಾಂಡವಿಯಾ, ಡಾ. ಮನಮೋಹನ್ ಸಿಂಗ್  ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅವರನ್ನು ಭೇಟಿ ಮಾಡಿದಾಗ ತೆಗೆದ ಫೋಟೋವಾಗಿದೆ.

ಈ ಘಟನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸೂಕ್ತವಾದ ಕೀವರ್ಡ್‌ಗಳನ್ನು ಬಳಸಿಕೊಂಡು ಹುಡುಕಾಡಿದಾಗ, ಅಕ್ಟೋಬರ್ 2021 ರಲ್ಲಿ ಪ್ರಕಟವಾದ ಹಲವಾರು ಸುದ್ದಿ ಲೇಖನಗಳನ್ನು ನಾವು ಕಂಡುಕೊಂಡಿದ್ದೇವೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ). ಈ ವರದಿಗಳ ಪ್ರಕಾರ, ಮಾಂಡವಿಯಾ  14 ಅಕ್ಟೋಬರ್ 2021 ರಂದು ಮನಮೋಹನ್ ಸಿಂಗ್  ಜ್ವರದಿಂದ ಬಳಲುತ್ತಿರುವ AIIMS ಗೆ ದಾಖಲಾಗಿದ್ದರು ಮತ್ತು ಅವರ ಆರೋಗ್ಯ ಪರಿಶೀಲಿಸಲು ಹೋದಾಗ ಅವರನ್ನು ಭೇಟಿ ಮಾಡಿದ್ದರು.  

ಅಕ್ಟೋಬರ್ 2021 ರ ನಂತರ, ಡಾ. ಮನಮೋಹನ್ ಸಿಂಗ್ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಫೋಟೋಗಳು ಮತ್ತು ವೀಡಿಯೊಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಕೊನೆಯದಾಗಿ ಹೇಳುವುದಾದರೆ,  ಅಕ್ಟೋಬರ್ 2021 ರ ಫೋಟೋವನ್ನು ಮನಮೋಹನ್ ಸಿಂಗ್ ಅವರ ಕೊನೆಯ ಕ್ಷಣದ ಫೋಟೋ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. 

Share.

Comments are closed.

scroll