Fake News - Kannada
 

ಇವು ತವಾಂಗ್ ಸೆಕ್ಟರ್‌ನಲ್ಲಿ ಭಾರತ-ಚೀನಾ ನಡುವಿನ ಸಂಘರ್ಷದ ಇತ್ತೀಚಿನ ವಿಡಿಯೊಗಳಲ್ಲ

0

ಡಿಸೆಂಬರ್ 9, 2022 ರಂದು, ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವಿನ ಘರ್ಷಣೆಯಲ್ಲಿ, ಎರಡೂ ದೇಶಗಳ ಸೈನಿಕರು ಗಾಯಗೊಂಡಿದ್ದಾರೆ. ಈ ಘಟನೆಯ ಸುದ್ದಿ ಬಂದ ನಂತರ, ಸೈನಿಕರ ಘರ್ಷಣೆಯ ವಿಡಿಯೊ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದು ತವಾಂಗ್ ಸೆಕ್ಟರ್‌ನಲ್ಲಿ ಇತ್ತೀಚೆಗೆ ನಡೆದ ಘರ್ಷಣೆಯ ವಿಡಿಯೋ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ

ಪ್ರತಿಪಾದನೆ: 09 ಡಿಸೆಂಬರ್ 2022 ರಂದು ತವಾಂಗ್ ಸೆಕ್ಟರ್‌ನಲ್ಲಿ ಭಾರತ-ಚೀನಾ ಸಂಘರ್ಷದ ಸಂಬಂಧಿಸಿದ ವೀಡಿಯೊಗಳು.

ನಿಜಾಂಶ: ಈ ವೀಡಿಯೊಗಳು ಹಳೆಯವು. 09 ಡಿಸೆಂಬರ್ 2022 ರಂದು ತವಾಂಗ್ ಸೆಕ್ಟರ್‌ನಲ್ಲಿ ನಡೆದ ಭಾರತ ಮತ್ತು ಚೀನಾದ ಸೇನೆಯ ನಡುವಿನ ಘರ್ಷಣೆಗೆ ಸಂಬಂಧಿಸಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ವೀಡಿಯೊ 1:

ಭಾರತ ಮತ್ತು ಚೀನಾ ಸೇನೆಗಳ ನಡುವೆ ಲಡಾಖ್‌ನಲ್ಲಿ ನಡೆದ ಗಾಲ್ವಾನ್ ಕಣಿವೆ ಘರ್ಷಣೆಯಲ್ಲಿ ಉಭಯ ದೇಶಗಳ ಸೈನಿಕರು ಹತರಾಗಿದ್ದರು. ಕೆಲವು ತಿಂಗಳ ನಂತರ ಈ ವೀಡಿಯೊವನ್ನು ಚೀನಾ ಸರ್ಕಾರದ ಅಂಗಸಂಸ್ಥೆ ಚಾನೆಲ್ ಚೈನಾ ಗ್ಲೋಬಲ್ ಟೆಲಿವಿಷನ್ ನೆಟ್‌ವರ್ಕ್ (ಸಿಜಿಟಿಎನ್) 2021 ರಲ್ಲಿ ಈ ವೀಡಿಯೊವನ್ನು ಗಾಲ್ವಾನ್‌ನಿಂದ ಎಂದು ಹೇಳಿಕೊಂಡು ಪ್ರಕಟಿಸಿದೆ. ಈ ಘರ್ಷಣೆಯು 45 ವರ್ಷಗಳಲ್ಲಿ ಅತ್ಯಂತ ಭೀಕರ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವಿವರಣೆಯ ಪ್ರಕಾರ, ಜೂನ್ 2020 ರಲ್ಲಿ ಭಾರತ ಮತ್ತು ಚೀನೀ ಸೈನಿಕರ ನಡುವಿನ ಗಾಲ್ವಾನ್ ಘರ್ಷಣೆಯಲ್ಲಿ ಗಾಯಗೊಂಡ ಚೀನೀ ಸೈನಿಕನನ್ನು ವೀಡಿಯೊ ತೋರಿಸುತ್ತದೆ. ಈ ಘಟನೆಗೆ ಸಂಬಂಧಿಸಿದ ಮಾಧ್ಯಮ ವರದಿಗಳನ್ನು ಇಲ್ಲಿ ನೋಡಬಹುದು.

ವೀಡಿಯೊ 2:

ಈ ವೀಡಿಯೊ 09 ಡಿಸೆಂಬರ್ 2022 ರಂದು ನಡೆದ ಇತ್ತೀಚಿನ ಭಾರತ-ಚೀನಾ ಘರ್ಷಣೆಗೆ ಸಂಬಂಧಿಸಿಲ್ಲ. ಅದೇ ವೀಡಿಯೊ ಕನಿಷ್ಠ ಮೇ 2020 ರಿಂದ ಇಂಟರ್ನೆಟ್‌ನಲ್ಲಿ ಲಭ್ಯವಿದೆ. ವೀಡಿಯೊದ ಸಂದರ್ಭ ಮತ್ತು ಸ್ಥಳದ ಬಗ್ಗೆ ನಿಖರವಾದ ಮಾಹಿತಿಯಿಲ್ಲದಿದ್ದರೂ, ಇದು ತವಾಂಗ್‌ನಲ್ಲಿ ಇತ್ತೀಚೆಗೆ ನಡೆದ ಭಾರತ-ಚೀನಾ ನಡುವಿನ ಘರ್ಷಣೆಗೆ ಸಂಬಂಧಿಸಿಲ್ಲ ಎಂಬುದು ಸ್ಪಷ್ಟವಾಗಿದೆ.

ಅದೇ ಸಂದರ್ಭದೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಮತ್ತೊಂದು ವೀಡಿಯೊವನ್ನು FACTLY ಮತ್ತೊಂದು ಫ್ಯಾಕ್ಟ್‌ಚೆಕ್ ಸ್ಟೋರಿಯ ಮೂಲಕ ಪತ್ತೆಹಚ್ಚಿದೆ, ಅದನ್ನು ಇಲ್ಲಿ ಓದಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ತವಾಂಗ್ ಸೆಕ್ಟರ್‌ನಲ್ಲಿ ಭಾರತ ಮತ್ತು ಚೀನಾದ ಸೇನೆಗಳ ನಡುವೆ ಇತ್ತೀಚೆಗೆ ನಡೆದ ಘರ್ಷಣೆಯ ವಿಡಿಯೊ ಎಂದು ಹಳೆಯ ವಿಡಿಯೊವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

Share.

Comments are closed.

scroll