ಕಾಂಗ್ರೆಸ್ ಪಕ್ಷ ತನಗೆ ಹಣ ನೀಡಿದ್ದಕ್ಕೆ ಲಖಿಂಪುರದಲ್ಲಿ ರೈತರ ಮೇಲೆ ಕಾರು ಹರಿಸಿದೆ ಎಂದು ವ್ಯಕ್ತಿಯೊಬ್ಬ ಒಪ್ಪಿಕೊಂಡಿದ್ದಾನೆ ಎಂದು ಹೇಳುವ ವಿಡಿಯೊ ಇರುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚೆಚ್ಚು ಹಂಚಿಕೊಳ್ಳಲಾಗಿದೆ. ಕಾಂಗ್ರೆಸ್ ನಾಯಕರು ಕೂಡ ಬಿಜೆಪಿ ಬೆಂಗಾವಲಿಗೆ ದೂರದಲ್ಲಿ ಕಾರು ಚಾಲನೆ ಮಾಡುತ್ತಿದ್ದರು ಎಂದು ವಿಡಿಯೊ ಮೂಲಕ ವ್ಯಕ್ತಿಯೊಬ್ಬ ತಪ್ಪೊಪ್ಪಿಕೊಂಡ ಎಂದು ಹೇಳಲಾಗುವ ಪೋಸ್ಟ್ ಅನ್ನು ಹಂಚಿಕೊಳ್ಳಲಾಗುತ್ತಿದ್ದು, ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.
ಪ್ರತಿಪಾದನೆ: ಕಾಂಗ್ರೆಸ್ ಪಕ್ಷವು ಲಖಿಂಪುರದಲ್ಲಿ ರೈತರ ಮೇಲೆ ಕಾರು ಹರಿಸಲು ಹಣ ನೀಡಿದೆ.
ನಿಜಾಂಶ: ಎಲ್ಲಿಯೂ ಕಾಂಗ್ರೆಸ್ ಪಕ್ಷ ಹಣ ನೀಡಿದೆ ಅಥವಾ ಆತ ಸ್ವತಃ ಲಖಿಂಪುರದಲ್ಲಿ ರೈತರ ಮೇಲೆ ಕಾರು ಹರಿಸಿದ್ದೇನೆ ಎಂದು ವಿಡಿಯೋದಲ್ಲಿ ಮಾತನಾಡುವ ವ್ಯಕ್ತಿ ಹೇಳಿಲ್ಲ. ಲಖಿಂಪುರ ಹಿಂಸಾಚಾರದಲ್ಲಿ ಮೂರು ವಾಹನಗಳನ್ನು ಬಳಸಲಾಗಿದೆ. ಮೊದಲನೆಯದು ಥಾರ್, ಎರಡನೆಯದು ಫಾರ್ಚೂನರ್ ಮತ್ತು ಮೂರನೆಯದು ಸ್ಕಾರ್ಪಿಯೋ. ವಿಡಿಯೋ ಮತ್ತು ಕೆಲವು ಲೇಖನಗಳ ಪ್ರಕಾರ, ಅಂಕಿತ್ ದಾಸ್ ಎಂಬ ವ್ಯಕ್ತಿ ಫಾರ್ಚೂನ್ ಕಾರಿನಲ್ಲಿ ಕುಳಿತಿದ್ದಾನೆ ಎಂದು ಹೇಳಲಾಗಿದೆ. ಅಂಕಿತ್ ದಾಸ್ ಮಾಜಿ ಕಾಂಗ್ರೆಸ್ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ಅಖಿಲೇಶ್ ದಾಸ್ ಅವರ ಸೋದರಳಿಯ. ಆದರೆ, ಅವರು ಕಾಂಗ್ರೆಸ್ ಪಕ್ಷದೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಅಂಕಿತ್ ದಾಸ್ ಅವರ ಫೇಸ್ ಬುಕ್ ಪ್ರೊಫೈಲ್ ಪ್ರಕಾರ, ಲಖಿಂಪುರ್ ಪ್ರಕರಣದ ಆರೋಪಿ ಆಶಿಶ್ ಮಿಶ್ರಾ ಮತ್ತು ಆತನ ತಂದೆ ಕೇಂದ್ರ ಸಚಿವ ಅಜಯ್ ಮಿಶ್ರಾ ಇಬ್ಬರೂ ಅಂಕಿತ್ ದಾಸ್ ಗೆ ಆಪ್ತರಾಗಿದ್ದಾರೆ. ಆದ್ದರಿಂದ, ಪೋಸ್ಟ್ ಮೂಲಕ ಹೇಳಿರುವುದು ತಪ್ಪಾಗಿದೆ.
ವಿಡಿಯೋದಲ್ಲಿ ಎಲ್ಲಿಯೂ ಕಾಂಗ್ರೆಸ್ ಪಕ್ಷ ಹಣ ನೀಡಿದೆ ಅಥವಾ ಲಖಿಂಪುರದಲ್ಲಿ ರೈತರ ಮೇಲೆ ತಾನು ಕಾರು ಹರಿಸಿದೆ ಎಂದು ವಿಡಿಯೋದಲ್ಲಿ ಮಾತನಾಡುವ ವ್ಯಕ್ತಿ ಹೇಳಿಲ್ಲ.
ವೈರಲ್ ವಿಡಿಯೊದಲ್ಲಿ, ಒಬ್ಬ ಪೊಲೀಸ್ ಅಧಿಕಾರಿಯು ಗಾಯಗೊಂಡ ವ್ಯಕ್ತಿಯನ್ನು ಪ್ರಶ್ನಿಸುತ್ತಿರುವಂತೆ ತೋರುತ್ತದೆ. ಆತ ಲಕ್ನೋದ ಚಾರ್ ಬಾಗ್ ಪ್ರದೇಶದವನಾಗುದ್ದು, ಅಂಕಿತ್ ದಾಸ್ ಎಂಬ ವ್ಯಕ್ತಿಯೊಂದಿಗೆ ಫಾರ್ಚೂನ್ ಕಾರಿನ ಹಿಂಭಾಗದಲ್ಲಿದ್ದನು ಎನ್ನಲಾಗಿದೆ. ಪೊಲೀಸ್ ಅಧಿಕಾರಿ ಕಾರಿನ ವಿವರಗಳನ್ನು ಕೇಳಿದಾಗ, ಆ ವ್ಯಕ್ತಿಗೆ ವಿವರಗಳನ್ನು ಹೇಳುತ್ತಿದ್ದರು. ಫಾರ್ಚೂನರ್ ಮುಂದೆ ಹೋದ ಮಹೀಂದ್ರ ಥಾರ್ ಬಗ್ಗೆ ಪೊಲೀಸರು ಆ ವ್ಯಕ್ತಿಯನ್ನು ಕೇಳಿದಾಗ, ಅವರು ‘ಭಯ್ಯಾ’ ಜೊತೆಗಿದ್ದರು ಎಂದು ಉತ್ತರಿಸಿದ್ದಾರೆ. ಹೊಸ ವಿಡಿಯೊದ ಸತ್ಯಾಸತ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ಲೇಖನವೊಂದು ತಿಳಿಸಿದೆ.
ಅಂಕಿತ್ ದಾಸ್ ಯಾರು?
ಆಜ್ ತಕ್ ಪ್ರಕಾರ, ಲಖಿಂಪುರದಲ್ಲಿ ಹಿಂಸಾಚಾರದಲ್ಲಿ ಮೂರು ವಾಹನಗಳು ಭಾಗಿಯಾಗಿವೆ. ಮೊದಲನೆಯದು ಥಾರ್, ಎರಡನೆಯದು ಫಾರ್ಚೂನ್, ಮತ್ತು ಮೂರನೆಯದು ಸ್ಕಾರ್ಪಿಯೋ. ಅವರ ಮೂಲಗಳ ಪ್ರಕಾರ, ಅಂಕಿತ್ ದಾಸ್ ಅವರ ಫಾರ್ಚೂನ್ ಕಾರಿನಲ್ಲಿ ಕುಳಿತಿದ್ದರು. ಅಂಕಿತ್ ದಾಸ್ ಮಾಜಿ ಕಾಂಗ್ರೆಸ್ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ಅಖಿಲೇಶ್ ದಾಸ್ ಅವರ ಸೋದರಳಿಯ. ಅಖಿಲೇಶ್ ದಾಸ್ 2017 ರಲ್ಲಿ ನಿಧನರಾದರು.
ಆದರೆ, ಅವರು ಕಾಂಗ್ರೆಸ್ ಪಕ್ಷದೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಅಷ್ಟೇ ಅಲ್ಲ, ಅಂಕಿತ್ ದಾಸ್ ತನ್ನ ಸಾಮಾಜಿಕ ಮಾಧ್ಯಮ (ಫೇಸ್ಬುಕ್) ಪ್ರೊಫೈಲ್ ಮೂಲಕ ಬಿಜೆಪಿಯ ಬೆಂಬಲಿಗ ಎಂದು ತಿಳಿದುಬಂದಿದೆ. ವಾಸ್ತವವಾಗಿ, ಆಜ್ ತಕ್ ವರದಿ ಮಾಡಿದಂತೆ, ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರ ಆಗಮನಕ್ಕಾಗಿ ಆಶಿಶ್ ಮಿಶ್ರಾ ಮತ್ತು ಅಂಕಿತ್ ದಾಸ್ ಅವರ ಫೋಟೋಗಳ ಪೋಸ್ಟರ್‌ಗಳನ್ನು 03 ಅಕ್ಟೋಬರ್ 2021 ರಂದು ಲಖಿಂಪುರದ ವಿವಿಧ ಸ್ಥಳಗಳಲ್ಲಿ ಅಳವಡಿಸಲಾಗಿತ್ತು.
ಈ ಫೋಟೋಗಳ ಮೂಲಕ ಅಂಕಿತ್ ದಾಸ್, ಆಶಿಶ್ ಮತ್ತು ಅವರ ತಂದೆ ಬಿಜೆಪಿ ನಾಯಕ ಅಜಯ್ ಮಿಶ್ರಾ ಇಬ್ಬರಿಗೂ ಆಪ್ತರಾಗಿದ್ದಾರೆ ಎಂಬುದನ್ನು ತಿಳಿಯಬಹುದು. ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಹುಟ್ಟುಹಬ್ಬದಂದು ಅವರು ಈ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅವರು ತಮ್ಮ “ಮಾರ್ಗದರ್ಶಿ” ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಆಶಿಶ್ ಮಿಶ್ರಾ ಅವರ ಟ್ವಿಟರ್ ಖಾತೆಯಲ್ಲಿ ಮತ್ತು ಅಂಕಿತ್ ದಾಸ್ ಮತ್ತು ಬಿಜೆಪಿ ಲಖಿಂಪುರ್ ಟ್ವಿಟರ್ ಖಾತೆಯಲ್ಲಿ ಅವರ ಫೋಟೋಗಳನ್ನು ನೋಡಬಹುದು.
ಅಕ್ಟೋಬರ್ 3, 2021 ರಂದು, ಉತ್ತರ ಪ್ರದೇಶದ ಖೇರಿಯ ಲಖಿಂಪುರದಲ್ಲಿ ಪ್ರತಿಭಟನಾ ನಿರತ ರೈತರ ಗುಂಪಿನ ಮೇಲೆ ಕಾರು ಹರಿದಿದೆ. ಘಟನೆಯಲ್ಲಿ ನಾಲ್ಕು ರೈತರು ಸಾವನ್ನಪ್ಪಿದ್ದರು. ನಂತರದ ಹಿಂಸಾಚಾರದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾದ ಘಟನೆಯಲ್ಲಿ ಕೇಂದ್ರ ಗೃಹ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಭಾಗಿಯಾಗಿರುವ ಆರೋಪದಲ್ಲಿ ಅವರನ್ನು ಅಕ್ಟೋಬರ್ 09, 2021 ರಂದು ಪೊಲೀಸರು ಬಂಧಿಸಿದ್ದರು.
ಒಟ್ಟಾರೆಯಾಗಿ, ಕಾಂಗ್ರೆಸ್ ಪಕ್ಷವು ಹಣ ನಿಡಿದ್ದಕ್ಕಾಗಿ ಲಖಿಂಪುರದಲ್ಲಿ ರೈತರ ಮೇಲೆ ಕಾರು ಹತ್ತಿಸಿದೆನೆಂದು ವಿಡಿಯೋದಲ್ಲಿರುವ ವ್ಯಕ್ತಿ ಎಲ್ಲಿಯೂ ಹೇಳಿಲ್ಲ.