Fake News - Kannada
 

ಕರ್ನಾಟಕ-ಗೋವಾ ಹೆದ್ದಾರಿಯಲ್ಲಿ ಭೂಕುಸಿತ ಎಂದು ಸಂಬಂಧವಿಲ್ಲದ ಫೊಟೋ ಹಂಚಿಕೆ

0

ಬೆಳಗಾವಿ-ಗೋವಾ ರಸ್ತೆಯಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತದ ದೃಶ್ಯಗಳು ಎಂಬ ಹೇಳಿಕೆಯೊಂದಿಗೆ ಕೆಲ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಲೇಖನದ ಮೂಲಕ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ : ಬೆಳಗಾವಿ-ಗೋವಾ ಭೂಕುಸಿತಕ್ಕೆ ಸಂಬಂಧಿಸಿದ ದೃಶ್ಯಗಳು.

ನಿಜಾಂಶ : ಈ ದೃಶ್ಯಗಳು ಕರ್ನಾಟಕ-ಗೋವಾ ಹೆದ್ದಾರಿಯಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತಗಳಿಗೆ ಸಂಬಂಧಿಸಿಲ್ಲ. ಈ ದೃಶ್ಯಗಳು ಈಶಾನ್ಯ ರಾಜ್ಯಗಳದ್ದಾಗಿರಬಹುದು. ಕೆಲವು ಸುದ್ದಿ ಸಂಸ್ಥೆಗಳು ಇವುಗಳನ್ನು ಜೂನ್ 2022 ರಲ್ಲಿ ಮಿಜೋರಾಂನಿಂದ ದೃಶ್ಯಗಳು ಎಂದು ವರದಿ ಮಾಡಿದೆ, ಆದರೆ ಕೆಲವು ಸ್ಥಳೀಯ ವರದಿಗಳು ಈ ದೃಶ್ಯಗಳು ಜೂನ್ 2022 ರಲ್ಲಿ ಅಸ್ಸಾಂನಲ್ಲಿ ಸಂಭವಿಸಿದ ಭೂಕುಸಿತಗಳು ಎಂದಿವೆ. ವೀಡಿಯೊದ ನಿಖರವಾದ ಸ್ಥಳ ತಿಳಿದಿಲ್ಲವಾದರೂ, ಅಂತರ್ಜಾಲದಲ್ಲಿ ಈ ದೃಶ್ಯಗಳ ಲಭ್ಯತೆ ಕರ್ನಾಟಕ-ಗೋವಾ ಹೆದ್ದಾರಿಯಲ್ಲಿ ಸಂಭವಿಸಿದ ಇತ್ತೀಚಿನ ಭೂಕುಸಿತಗಳಿಗೂ ಈ ದೃಶ್ಯಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಲಾಗಿದೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪುದಾರಿಗೆಳೆಯುತ್ತಿದೆ.

ಕಳೆದ ತಿಂಗಳ ಆರಂಭದಲ್ಲಿ, ಅನ್ಮೋದ್ ಘಾಟ್‌ನಲ್ಲಿ ಭೂಕುಸಿತದ ಒಂದೆರಡು ಘಟನೆಗಳು ವರದಿಯಾದವು, ಇದು ಕರ್ನಾಟಕ-ಗೋವಾ ಸಂಪರ್ಕವನ್ನು ಮುಚ್ಚಲು ಕಾರಣವಾಯಿತು. ಮಾಧ್ಯಮ ಸಂಸ್ಥೆಗಳು ಈ ಘಟನೆಗಳನ್ನು ವರದಿ ಮಾಡಿದ್ದು, ಭೂಕುಸಿತಕ್ಕೆ ಸಂಬಂಧಿಸಿದ ದೃಶ್ಯಗಳನ್ನು ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.

ಆದರೆ, ವೈರಲ್ ದೃಶ್ಯಗಳಿಗೂ ಕರ್ನಾಟಕ-ಗೋವಾ ರಸ್ತೆ ಮಾರ್ಗದಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತಕ್ಕೂ ಯಾವುದೇ ಸಂಬಂಧವಿಲ್ಲ. ಈ ದೃಶ್ಯಗಳು ಈಶಾನ್ಯದಿಂದ ಬಂದಿರಬಹುದು ಮತ್ತು ಜೂನ್ 2022 ರಲ್ಲಿ ಸಂಭವಿಸಿದ ಭೂಕುಸಿತಗಳಿಗೆ ಸಂಬಂಧಿಸಿರಬಹುದು.

ವೈರಲ್ ದೃಶ್ಯಗಳನ್ನು ಗೂಗಲ್ ರಿವರ್ಸ್ ಸರ್ಚ್ ಮೂಲಕ ಹುಡುಕಿದಾಗ ಕೆಲವು ಸುದ್ದಿ ವರದಿಗಳು ಕಂಡುಬಂದಿವೆ. ಈ ದೃಶ್ಯಗಳು ಮಿಜೋರಾಂ (ಇಲ್ಲಿ ಮತ್ತು ಇಲ್ಲಿ) ಎಂದು ಕೆಲವು ವರದಿಗಳು ಹೇಳಿಕೊಂಡರೆ, ಇತರ ಸ್ಥಳೀಯ ವರದಿಗಳು ದೃಶ್ಯಗಳು ಅಸ್ಸಾಂ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಎಂದು ಹೇಳುತ್ತವೆ.

ಕಳೆದ ಒಂದು ತಿಂಗಳಿನಿಂದ ಈಶಾನ್ಯ ರಾಜ್ಯಗಳು ಭಾರೀ ಮಳೆಗೆ ತತ್ತರಿಸಿರುವುದು ನಿಜ. ವಿವಿಧ ರಾಜ್ಯಗಳಲ್ಲಿ ಭೂಕುಸಿತದ ಹಲವಾರು ಘಟನೆಗಳು ವರದಿಯಾಗಿವೆ. ಈ ಭೂಕುಸಿತಗಳಿಗೆ ಸಂಬಂಧಿಸಿದ ಮಾಧ್ಯಮ ವರದಿಗಳನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು. ವೈರಲ್ ದೃಶ್ಯಗಳ ಸ್ಥಳವನ್ನು ಸ್ವತಂತ್ರವಾಗಿ ಪರಿಶೀಲಿಸಲು ನಮಗೆ ಸಾಧ್ಯವಾಗದಿದ್ದರೂ, ಜೂನ್ 2022 ರಿಂದ ಇಂಟರ್ನೆಟ್‌ನಲ್ಲಿ ಈ ದೃಶ್ಯಗಳ ಲಭ್ಯತೆಯು ಕರ್ನಾಟಕ-ಗೋವಾ ರಸ್ತೆಯ ಉದ್ದಕ್ಕೂ ಸಂಭವಿಸಿದ ಇತ್ತೀಚಿನ ಭೂಕುಸಿತಗಳಿಗೆ ಸಂಬಂಧಿಸಿಲ್ಲ ಎಂದು ಸೂಚಿಸುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕರ್ನಾಟಕ-ಗೋವಾ ಹೆದ್ದಾರಿಯಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತಗಳಿಗೆ ಸಂಬಂಧವಿಲ್ಲದ ಈಶಾನ್ಯದ ಹಳೆಯ ದೃಶ್ಯಗಳ ಪೋಟೋವನ್ನು ಹಂಚಿಕೊಳ್ಳಲಾಗಿದೆ.

Share.

Comments are closed.

scroll