Fake News - Kannada
 

ಶ್ರೀರಂಗಪಟ್ಟಣದಲ್ಲಿ ಮತ್ಸ್ಯಕನ್ಯೆಯರು ಕಾಣಿಸಿಕೊಂಡಿದ್ದು ನಿಜವಲ್ಲ

0

ಇತಿಹಾಸ ಪ್ರಸಿದ್ದ ಶ್ರೀರಂಗಪಟ್ಟಣದ ಹಳೇ ಸೇತುವೆಯ ಬಳಿ ಮತ್ಸ್ಯಕನ್ಯೆಯರು ಕಲ್ಲುಗಳ ಮೇಲೆ ಕುಳಿತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅರ್ಧ-ಮನುಷ್ಯ ಮತ್ತು ಅರ್ಧ-ಮೀನಿನ ಆಕಾರ ಇರುವ ಬಲು ಅಪರೂಪದ ದೃಶ್ಯಗಳು ಎಂದು ವಿಡಿಯೊವನ್ನು ವೈರಲ್ ಮಾಡಲಾಗಿದೆ. ಹಾಗಿದ್ದರೆ ನಿಜವಾಗಿಯೂ ಈ ದೃಶ್ಯಗಳು ಐತಿಹಾಸಿಕ ಶ್ರೀರಂಗಪಟ್ಟಣದಲ್ಲಿ ಸೆರೆಯಾಗಿವೆಯೇ ಎಂದು ವಿಡಿಯೋದ ನೈಜತೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ : ನದಿಯ ದಡದಲ್ಲಿ ಮತ್ಸ್ಯಕನ್ಯೆಯರು ವಿಶ್ರಾಂತಿ ಪಡೆಯುತ್ತಿರುವ ದೃಶ್ಯಗಳು.

ನಿಜಾಂಶ : ಈ ವಿಡಿಯೋದಲ್ಲಿ ಕಾಣುತ್ತಿರುವುದು ನಿಜವಾದ ಮತ್ಸ್ಯಕನ್ಯೆ ಅಲ್ಲ. ಯೂಟ್ಯೂಬ್ ಚಾನೆಲ್ ‘ಜೆಜೆಪಿಡಿ ಪ್ರೊಡಕ್ಷನ್ಸ್’ ವಿವರಣೆಯಲ್ಲಿ ಕಂಪ್ಯೂಟರ್ ಗ್ರಾಫಿಕ್ಸ್ (ಸಿಜಿಐ) ತಂತ್ರಜ್ಞಾನವನ್ನು ಬಳಸಿ ವೀಡಿಯೊವನ್ನು ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದೆ. ಈ CGI ವೀಡಿಯೊವನ್ನು 3D ಆನಿಮೇಟರ್ ಜಿಮ್ಮಿ ಪೆರೆಜ್ ರಚಿಸಿದ್ದಾರೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಪಾದನೆ ತಪ್ಪಾಗಿದೆ.

ವೀಡಿಯೊದಲ್ಲಿನ ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಇದೇ ರೀತಿಯ ದೃಶ್ಯಗಳೊಂದಿಗೆ ವೀಡಿಯೊವನ್ನು ‘ಜೆಜೆಪಿಡಿ ಪ್ರೊಡಕ್ಷನ್’ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟಿಸಿರುವುದು ಕಂಡುಬಂದಿದೆ. ವೀಡಿಯೊದ ವಿವರಣೆಯಲ್ಲಿ,  ಈ ವೀಡಿಯೊವನ್ನು 3D ಆನಿಮೇಟರ್ ಜಿಮ್ಮಿ ಪೆರೆಜ್ ಮಾಡಿದ್ದಾರೆ ಎಂದು ವರದಿಯಾಗಿದೆ. ಜಿಮ್ಮಿ ಪೆರೆಜ್ ಮಾಡಿದ ಹೆಚ್ಚಿನ CGI ವೀಡಿಯೊಗಳನ್ನು ಅವರ Facebook ಮತ್ತು Instagram ಪುಟಗಳಲ್ಲಿ ಕಾಣಬಹುದು. ಈ ವಿವರಗಳನ್ನು ಆಧರಿಸಿ, ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಕಂಪ್ಯೂಟರ್ ಗ್ರಾಫಿಕ್ಸ್‌ನಿಂದ ರಚಿಸಲ್ಪಟ್ಟಿದೆ ಮತ್ತು ಈ ವೀಡಿಯೊದಲ್ಲಿ ಕಂಡುಬರುವ ನಿಜವಾದ ಮತ್ಸ್ಯಕನ್ಯೆ ಅಲ್ಲ ಎಂದು ಹೇಳಬಹುದು.

ಈ ಹಿಂದೆಯೂ ಸಹ, ‘ಜೆಜೆಪಿಡಿ ಪ್ರೊಡಕ್ಷನ್ಸ್’ ಪ್ರಕಟಿಸಿದ ಮತ್ಸ್ಯಕನ್ಯೆಯರ ಕೆಲವು ಸಿಜಿಐ ವೀಡಿಯೊಗಳನ್ನು ನೈಜ ಮತ್ಸ್ಯಕನ್ಯೆಯ ದೃಶ್ಯಗಳು ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗ, ಆ ವೀಡಿಯೊಗಳ ಕುರಿತು ಫ್ಯಾಕ್ಟ್ಲಿ ಫ್ಯಾಕ್ಟ್‍ಚೆಕ್ ಲೇಖನವನ್ನು ಪ್ರಕಟಿಸಿತು.

ಒಟ್ಟಾರೆಯಾಗಿ ಹೇಳುವುದಾದರೆ, ಕಂಪ್ಯೂಟರ್ ಗ್ರಾಫಿಕ್ಸ್ ಬಳಸಿ ರಚಿಸಲಾದ ವೀಡಿಯೊವನ್ನು ನದಿಯ ದಡದಲ್ಲಿ ಮತ್ಸ್ಯಕನ್ಯೆಯರು ಈಜುತ್ತಿರುವ ದೃಶ್ಯಗಳು ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‍ನಲ್ಲಿ ಮಾಡಲಾಸದ ಪ್ರತಿಪಾದನೆ ತಪ್ಪಾಗಿದೆ.

Share.

Comments are closed.

scroll