Fake News - Kannada
 

ಕೋಲ್ಕತ್ತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 2014ರ ಸಾರ್ವಜನಿಕ ಸಭೆಯ ಫೋಟೊವನ್ನು ಬಿಹಾರದಲ್ಲಿ ಯೋಗಿ ಸಾರ್ವಜನಿಕ ಸಭೆ ಎಂದು ಹಂಚಿಕೊಳ್ಳಲಾಗಿದೆ

0

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್‌ರವರ ಭಾಷಣಕ್ಕೆ ಬಿಹಾರದಲ್ಲಿ ಕಾದು ಕೂತಿರುವ ಜನಸ್ತೋಮ ಎಂದು ಭಾರೀ ಸಂಖ್ಯೆಯ ಜನ ಸೇರಿರುವ ಫೋಟೊ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಿಹಾರ ಚುನಾವಣೆಯ ಹಿನ್ನೆಲೆಯಲ್ಲಿ ಭಾರೀ ಸಂಖ್ಯೆಯಲ್ಲಿ ಹಂಚಿಕೆಯಾಗುತ್ತಿರುವ ಈ ಫೋಟೊದ ಅಸಲಿಯತ್ತನ್ನು ಪರಿಶೀಲಿಸೋಣ.

ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿ ಇಲ್ಲಿದೆ.

ಪ್ರತಿಪಾದನೆ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರವರ ಭಾಷಣಕ್ಕೆ ಬಿಹಾರದ ಸಾರ್ವಜನಿಕ ಸಭೆಯಲ್ಲಿ ಕಾದು ಕೂತಿರುವ ಜನಸ್ತೋಮ

ನಿಜಾಂಶ: ಹೆಲಿಕಾಪ್ಟರ್‌ ವ್ಯೂನಲ್ಲಿ ತೆಗೆದಿರುವ ಪೋಸ್ಟ್‌ನಲ್ಲಿರುವ ಈ ಫೋಟೊ 2014ರಲ್ಲಿ ಕೋಲ್ಕತ್ತದಲ್ಲಿ ಪ್ರಧಾನಿ ನರೇಂದ್ರ ಮೋದಿಯವ ‘ಜನಚೇತನ ಸಭೆ’ಯದ್ದಾಗಿದೆ. ಇದು 2014ರ ಲೋಕಸಭಾ ಚುನಾವಣೆಗೂ ಮುನ್ನ ತೆಗೆದುದ್ದಾಗಿದೆ. ಈ ಫೋಟೊಗೂ ಬಿಹಾರ ಚುನಾವಣೆ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೂ ಯಾವುದೇ ಸಂಬಂಧವಿಲ್ಲ. ಹಾಗಾಗಿ ಮೇಲಿನ ಪ್ರತಿಪಾದನೆ ತಪ್ಪಾಗಿದೆ.

ಫೋಟೊವನ್ನ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಿದಾಗ ಸಾಮಾಜಿಕ ಜಾಲತಾಣ ಬಳಕೆದಾರರು 2014ರ ಫೆಬ್ರವರಿಯಲ್ಲಿ ಅಪ್‌ಲೋಡ್ ಮಾಡಿದ ಇದೇ ರೀತಿಯ ಹಲವು ಫೋಟೊಗಳು ಕಂಡುಬಂದಿವೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಈ ಪೋಸ್ಟ್‌ಗಳಲ್ಲಿ 2014ರಲ್ಲಿ ಕೋಲ್ಕತ್ತಾದದಲ್ಲಿ ನಡೆದ ನರೇಂದ್ರ ಮೋದಿಯವರ ಜನಚೇತನ ಸಭೆಯ ವೈಮಾನಿಕ ಚಿತ್ರಗಳು ಎಂದು ಬರೆಯಲಾಗಿದೆ.

ಕೀವರ್ಡ್‌ಗಳನ್ನು ಬಳಕಿ ಅಧಿಕೃತ ಮಾಹಿತಿಯನ್ನು ಹುಡುಕಿದಾಗ, 2014ರ ಫೆಬ್ರವರಿ 05 ರಂದು ದೇಶ್ ಗುಜರಾತ್ ಪತ್ರಿಕೆಯ ವೆಬ್‌ಸೈಟ್‌ನ ಲೇಖನದಲ್ಲಿ ಇದೇ ರೀತಿಯ ಫೋಟೊವನ್ನು ಕಾಣಬಹುದು. ಆ ಲೇಖನದಲ್ಲಿ ಕೋಲ್ಕತ್ತಾದಲ್ಲಿ ನಡೆದ ನರೇಂದ್ರ ಮೋದಿಯವರ ಜನಚೇತನ ಸಭೆಯಲ್ಲಿ ನೆರೆದಿರುವ ಜನಸ್ತೋಮ ಎಂದು ಬರೆಯಲಾಗಿದೆ. ಈ ಸಾರ್ವಜನಿಕ ಸಭೆಯು ಫೆಬ್ರವರಿ 05, 2014ರಂದು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನಡೆದಿದೆ.  ಇದಕ್ಕೆ ಸಂಬಂಧಿಸಿದ ಇಂಡಿಯಾ ಟುಡೆಯ ಲೇಖನವನ್ನು ಇಲ್ಲಿ ಓದಬಹುದು.  ಮೇಲಿನ ಎಲ್ಲಾ ಸಾಕ್ಷ್ಯಗಳಿಂದ ಇದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರೊಂದಿಗೆ ಸಂಬಧಿಸಿದ್ದಲ್ಲ ಎಂಬ ತೀರ್ಮಾನಕ್ಕೆ ಬರಬಹುದು.

ಒಟ್ಟಿನಲ್ಲಿ ಕೋಲ್ಕತ್ತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 2014ರ ಸಾರ್ವಜನಿಕ ಸಭೆಯ ಫೋಟೊವನ್ನು ಬಿಹಾರದಲ್ಲಿ 2020ರ ಯೋಗಿಯ ಸಾರ್ವಜನಿಕ ಸಭೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

Share.

About Author

Comments are closed.

scroll