ನಾಮಪತ್ರ ಸಲ್ಲಿಸಲು ಬಂದ ವ್ಯಕ್ತಿಯನ್ನು ಪೋಲೀಸರು ಬಂಧಿಸಿ ಕರೆದೊಯ್ಯುತ್ತಿರುವ ಫೋಟೋದೊಂದಿಗೆ ‘ಕಾಂಗ್ರೆಸ್ ಪಕ್ಷದ ಪರವಾಗಿ ಬಿಹಾರದಲ್ಲಿ ನಾಮಪತ್ರ ಸಲ್ಲಿಸುತ್ತಿದ್ದ ಪಾಕಿಸ್ತಾನದ ಉಗ್ರವಾದಿಯನ್ನು ನಾಮಪತ್ರ ಸಲ್ಲಿಸುವ ಕಚೇರಿಯಲ್ಲಿಯೇ ಬಂಧಿಸಿದ NIA’ ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವ್ಯಕ್ತಿಯು 2014ರಲ್ಲಿ ನರೇಂದ್ರ ಮೋದಿಯವರು ಪಾಲ್ಗೊಂಡ ಬಹಿರಂಗ ಸಭೆಯೊಂದರಲ್ಲಿ ಬಾಂಬ್ ದಾಳಿ ಮಾಡಿದ ಭಯೊತ್ಪಾದಕರಲ್ಲಿ ಒಬ್ಬನಾಗಿದ್ದು, ಆ ಪ್ರಕರಣದಲ್ಲಿ ಜಾಮೀನು ಸಿಕ್ಕಕೂಡಲೇ ಪಾಕಿಸ್ತಾನಕ್ಕೆ ಓಡಿ ಹೋಗಿದ್ದಾನೆಂದು ಪೋಸ್ಟ್ ನಲ್ಲಿ ಪ್ರತಿಪಾದಿಸಲಾಗಿದೆ. ಇದು ನಿಜವೆ ಪರಿಶೀಲಿಸೋಣ.
ಪ್ರತಿಪಾದನೆ: 2013ರಲ್ಲಿ ಪಾಟ್ನಾದಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಪಾಲ್ಗೊಂಡ ಉಗ್ರವಾದಿ ಕಾಂಗ್ರೆಸ್ ಪಕ್ಷದ ಪರವಾಗಿ ಬಿಹಾರದಲ್ಲಿ ನಾಮಪತ್ರ ಸಲ್ಲಿಸುತ್ತಿರುವಾಗ ಬಂಧಿಸಿದ ಪೋಲೀಸರು.
ನಿಜಾಂಶ: ಪೋಟೋದಲ್ಲಿ ಕಾಣಿಸುತ್ತಿರುವ ವ್ಯಕ್ತಿ ಬಿಹಾರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಲ್ಲ. ಅವರು ಮಹಾಘಟಬಂಧನ್ ಮೈತ್ರಿಕೂಟದ ಸಿಪಿಐ-ಎಂಎಲ್ ಪಕ್ಷದ ಅಭ್ಯರ್ಥಿ ಆಫ್ತಾಬ್ ಆಲಂ ಆಗಿದ್ದಾರೆ. ಸರ್ಕಾರಿ ಕೆಲಸದಲ್ಲಿ ಮಧ್ಯಪ್ರವೇಶ ಮಾಡಿದ ಆರೋಪದ ಮೇಲೆ ಮುಝಾಪುರ್ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಅಪ್ತಾಬ್ ಆಲಂರನ್ನು ಪೋಲೀಸರು ಬಂಧಿಸಿದರು. 2013ರಲ್ಲಿ ಪಾಟ್ನಾ ನಗರದಲ್ಲಿ ನಡೆದ ಬಾಂಬ್ ದಾಳಿಗೂ, ಆಫ್ತಾಬ್ ಆಲಂಗೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿನ ಪ್ರತಿಪಾದನೆ ತಪ್ಪಾಗಿದೆ.
ಪೋಸ್ಟ್ ನಲ್ಲಿ ಹಂಚಿಕೊಂಡ ಪೋಟೋಗಳನ್ನು ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಿದಾಗ, ಇದೆ ಫೋಟೊ ‘Nav Bharat Times’ ನ್ಯೂಸ್ ವೆಬ್ ಸೈಟ್ 16 ಅಕ್ಟೋಬರ್ 2020 ರಂದು ಪ್ರಕಟಿಸಿದ ಲೇಖನ ಕಂಡುಬಂದಿದೆ. ಆ ಲೇಖನದ ಪ್ರಕಾರ, ಆ ವ್ಯಕ್ತಿಯು CPI-ML ಪಕ್ಷಕ್ಕೆ ಸೇರಿದ ಆಫ್ತಾಬ್ ಆಲಂ ಆಗಿದ್ದು, ಬಿಹಾರದ ಔರಾಯ್ ವಿಧಾನಸಭಾ ಕ್ಷೇತ್ರ ಸ್ಥಾನಕ್ಕಾಗಿ ನಾಮಪತ್ರ ಸಲ್ಲಿಸಲು ಬಂದಾಗ ಅವರನ್ನು ಪೋಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ಸರ್ಕಾರಿ ಕಾರ್ಯಕಲಾಪದಲ್ಲಿ ಮಧ್ಯಪ್ರವೆಶಿಸಿದ ಕಾರಣದಿಂದ ಜಿಲ್ಲಾಧಿಕಾರಿ ಆಧೇಶದ ಮೇರೆಗೆ ಆಪ್ತಭ್ ಆಲಂರನ್ನು ಬಂಧಿಸಿದ್ದೇವೆಂದು ಪೋಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆಗಸ್ಟ್ 2020ರಲ್ಲಿ ಜರುಗಿದ ದೀಪಕ್ ರಾಯ್ ಹತ್ಯೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ನಾನು ಮಾಡಿದ ಶಾಂತಿಯುತ ಹೋರಾಟಗಳನ್ನು ಕೆಲವರು ರಾಜಕೀಯಗೊಳಿಸುತ್ತಿದ್ದಾರೆಮದು ಆಫ್ತಾಬ್ ಆಲಂ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದೇ ವಿಷಯವನ್ನು ಒಳಗೊಂಡಿರುವ ‘Hindustan Times’ ಸುದ್ದಿ ಸಂಸ್ಥೆ ಪ್ರಕಟಿಸಿದ ಲೇಖನವನ್ನು ಇಲ್ಲಿ ನೋಡಬಹುದು. ಈ ವಿವರಗಳ ಆಧಾರದ ಮೇಲೆ ಪೋಟೋದಲ್ಲಿನ ವ್ಯಕ್ತಿ ಕಾಂಗ್ರೆಸ್ ನಾಯಕನಲ್ಲ ಎಂದು ಖಚಿತವಾಗಿ ಹೇಳಬಹುದು. ಇನ್ನು, ಆತ ವಿಧಾನಸಭಾ ಚುನಾವಣೆಗಾಗಿ ನಾಮಪತ್ರ ಸಲ್ಲಿಸಿದ ವಿವರಗಳಲ್ಲಿಯೂ ಸಹ ಅವರ ಹೆಸರು ಮತ್ತು ಫೋಟೋವನ್ನು ಸ್ಪಷ್ಟವಾಗಿ ನೋಡಬಹುದು.
2013ರಲ್ಲಿ ಪಾಟ್ನಾ ನಗರದಲ್ಲಿ ನಡೆದ ಸರಣಿ ಬಾಂಬ್ ದಾಳಿಗಳಿಗೂ ಸಂಬಂಧಿಸಿದ ಸುದ್ದಿ ಲೇಖನಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಈ ದಾಳಿಗಳಿಗೆ ಸಂಬಂಧಿಸಿದಂತೆ NIA ದಾಖಲಿಸಿದ ಚಾರ್ಜ್‍ಶೀಟ್‍ನ ವರದಿ ಇಲ್ಲಿ ನೋಡಬಹುದು. ಈ ಘಟನೆಗೆ ಸಂಬಂಧಿಸಿದ ಮುಖ್ಯ ಅಪರಾಧಿಗಳ ಹೆಸರಗಳನ್ನು ತಿಳಿಸುತ್ತಾ NIA ಕೊಟ್ಟ ಪತ್ರಿಕಾ ಹೇಳಿಕೆಯಲ್ಲಿ ಆಫ್ತಬ್ ಆಲಂ ಹೆಸರು ಎಲ್ಲಿಯೂ ಪ್ರಸ್ತಾಪಿಸಿಲ್ಲ. ಇತ್ತೀಚೆಗೆ ಬಂಧನಕ್ಕೊಳಗಾದ ಆಫ್ತಬ್ ಆಲಂಗೂ ಸರಣಿ ಬಾಂಬ್ ದಾಳಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಈ ವಿವರಗಳ ಆಧಾರದ ಮೇಲೆ ಹೇಳಬಹುದು.
ಒಟ್ಟಿನಲ್ಲಿ ಬಿಹಾರದಲ್ಲಿ ನಾಮಪತ್ರ ಸಲ್ಲಿಸುವ ಕಚೇರಿಯಲ್ಲಿ ಬಂಧಿತನಾದ ಆಫ್ತಾಬ್ ಆಲಂಗೂ 2013ರಲ್ಲಿ ಪಾಟ್ನಾದಲ್ಲಿ ನಡೆದ ಸರಣಿ ಬಾಂಬ್ ದಾಳಿಗೂ ಸಂಬಂಧವಿಲ್ಲ.