ಲಕ್ನೋದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಬೆಂಗಾವಲು ವಾಹನದ ಮೇಲೆ ಪ್ರತಿಭಟನಾಕಾರರು ದಾಳಿ ಮಾಡಿದ ಇತ್ತೀಚಿನ ವಿಡಿಯೊ ಎಂದು ಪ್ರತಿಭಟನಕಾರರು ಬೆಂಗಾವಲು ಪಡೆಯ ಮುಂದೆ ಕಪ್ಪು ಬಾವುಟಗಳನ್ನು ಬೀಸುತ್ತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಪ್ರತಿಪಾದನೆ: ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ಬೆಂಗಾವಲು ವಾಹನವನ್ನು ಪ್ರತಿಭಟನಾಕಾರರು ನಿಲ್ಲಿಸಿದ ಇತ್ತೀಚಿನ ವೀಡಿಯೊ.
ಸತ್ಯಾಂಶ: ಲಕ್ನೋ ವಿಶ್ವವಿದ್ಯಾಲಯದ ಬಳಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಬೆಂಗಾವಲು ಪಡೆಯನ್ನು ಸಮಾಜವಾದಿ ಪಕ್ಷದ ಬೆಂಬಲಿಗರು ’05 ಜೂನ್ 2017′ ರಂದು ತಡೆದು ನಿಲ್ಲಿಸುವುದನ್ನು ಪೋಸ್ಟ್ನಲ್ಲಿರುವ ವೀಡಿಯೊ ತೋರಿಸುತ್ತದೆ. ಅದೊಂದು ಹಳೆಯ ವಿಡಿಯೋ. ಆದ್ದರಿಂದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪುದಾರಿಗೆಳೆಯುವಂತಿದೆ.
ಎಚ್ಚರಿಕೆಯಿಂದ ಗಮನಿಸಿದಾಗ, ವೀಡಿಯೊದ 1.19 ಸೆಕೆಂಡುಗಳಲ್ಲಿ ಮಹಿಳೆಯೊಬ್ಬರು ‘ಯೋಗಿ ಸರ್ಕಾರ್ ಮುರ್ದಾಬಾದ್’ ಎಂದು ಕೂಗುವುದನ್ನು ನಾವು ಕೇಳಿದ್ದೇವೆ. ‘ಯೋಗಿ ಬೆಂಗಾವಲು ಪಡೆ ಪ್ರತಿಭಟನಾಕಾರರಿಂದ ನಿಲ್ಲಿಸಲ್ಪಟ್ಟಿದೆ’ ಎಂಬ ಕೀವರ್ಡ್ಗಳೊಂದಿಗೆ ಗೂಗಲ್ನಲ್ಲಿ ಹುಡುಕಿದಾಗ, ’12 ಜೂನ್ 2017′ ರಂದು ಯೂಟ್ಯೂಬ್ನಲ್ಲಿ ‘ಲೆಹ್ರೆನ್ ನ್ಯೂಸ್’ ಚಾನೆಲ್ ಪ್ರಕಟಿಸಿದ ವೀಡಿಯೊದಲ್ಲಿ ಇದೇ ರೀತಿಯ ದೃಶ್ಯಗಳು ಕಂಡುಬಂದಿವೆ. ‘ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬೆಂಗಾವಲು ವಾಹನದ ಮೇಲೆ ದಾಳಿ’ ಎಂಬ ಶೀರ್ಷಿಕೆಯೊಂದಿಗೆ ಈ ವೀಡಿಯೊವನ್ನು ಯೂಟ್ಯೂಬ್ನಲ್ಲಿ ಪೋಸ್ಟ್ ಮಾಡಲಾಗಿದೆ. ಇತರ ಮೂಲಗಳನ್ನು ಹುಡುಕಿದಾಗ, ‘ಎಬಿಪಿ ನ್ಯೂಸ್’ ಚಾನೆಲ್ಗ್ರೌಂಡ್ ರಿಪೋರ್ಟ್ ಯೂಟ್ಯೂಬ್ನಲ್ಲಿ ಕಂಡುಬಂದಿದೆ. ‘05 ಜೂನ್ 2017’ ರಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಲಕ್ನೋ ವಿಶ್ವವಿದ್ಯಾನಿಲಯದಲ್ಲಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ಸಮಾಜವಾದಿ ಪಕ್ಷದ ಯುವ ಘಟಕದ ಬೆಂಬಲಿಗರು ಯೋಗಿ ಆದಿತ್ಯನಾಥ ಅವರ ಬೆಂಗಾವಲು ಪಡೆ ಮೇಲೆ ದಾಳಿ ಮಾಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸಿಎಂ ಯೋಗಿ ಆದಿತ್ಯನಾಥ್ ಅವರ ಬೆಂಗಾವಲು ವಾಹನದ ಮುಂದೆ ಕಪ್ಪು ಬಾವುಟ ಹಿಡಿದು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳಿಗೆ ಲಕ್ನೋದ ಸ್ಥಳೀಯ ನ್ಯಾಯಾಲಯ ಜಾಮೀನು ನಿರಾಕರಿಸಿದೆ ಎಂದು ಎನ್ಡಿಟಿವಿ ಸುದ್ದಿ ವಾಹಿನಿ 10 ಜೂನ್ 2017ರಂದು ವರದಿ ಮಾಡಿದೆ. ಮುಖ್ಯಮಂತ್ರಿಯವರ ಭದ್ರತಾ ಶಿಷ್ಟಾಚಾರ ಉಲ್ಲಂಘನೆ ಆರೋಪದ ಮೇಲೆ ಇಬ್ಬರು ಯುವತಿಯರು ಸೇರಿದಂತೆ 11 ವಿದ್ಯಾರ್ಥಿಗಳಿಗೆ ನ್ಯಾಯಾಲಯವು ಜಾಮೀನು ನಿರಾಕರಿಸಿದೆ. ಈ ಘಟನೆಯ ಬಗ್ಗೆ ಪ್ರಕಟವಾದ ಲೇಖನಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ಬೆಂಗಾವಲು ಪಡೆಯನ್ನು ಪ್ರತಿಭಟನಾಕಾರರು ನಿಲ್ಲಿಸಿದ ಇತ್ತೀಚಿನ ವೀಡಿಯೊವೆಂದು ಮೂರು ವರ್ಷಗಳ ಹಳೆಯ ವೀಡಿಯೊವನ್ನು ಈಗ ಹಂಚಿಕೊಳ್ಳಲಾಗುತ್ತಿದೆ.