ಐಎಂಎಫ್ ನೀಡಿರುವ ವಿವಿಧ ಆರ್ಥಿಕತೆಗಳು ಬೆಳೆಯುತ್ತಿರುವ ದರ ಪಟ್ಟಿ ಎಂದು ಹೇಳಲಾಗಿರುವ ಪಟದ ಜೊತೆಗೆ ಕೋವಿಡ್-19ರ ಸಂದರ್ಭದಲ್ಲಿಯೂ 2020ರ ಭಾರತದ ಜಿಡಿಪಿಯು ವಿಶ್ವ ಆರ್ಥಿಕತೆಗಳ ಪೈಕಿ ಅತಿ ಹೆಚ್ಚು ಪ್ರಗತಿ ಸಾಧಿಸಿದೆ ಎಂಬುದಾಗಿ ಉಲ್ಲೇಖಸಿರುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದು ನಿಜವೇ ಎಂಬುದನ್ನು ಪರಿಶೀಲಿಸೋಣ.
ಪ್ರತಿಪಾದನೆ: 2020 ರಲ್ಲಿ ಭಾರತದಲ್ಲಿ 1.9% ಜಿಡಿಪಿ ಬೆಳವಣಿಗೆಯನ್ನು ಐಎಂಎಫ್ ಅಂದಾಜಿಸಿದ್ದು, ಇದು ವಿಶ್ವ ಆರ್ಥಿಕತೆಗಳ ಪೈಕಿ ಅತಿ ಹೆಚ್ಚಿನದಾಗಿದೆ.
ನಿಜಾಂಶ: 2020 ರ ಏಪ್ರಿಲ್‌ನಲ್ಲಿ ಭಾರತದಲ್ಲಿ1.9% ಜಿಡಿಪಿ ಬೆಳವಣಿಗೆಯನ್ನು ಐಎಂಎಫ್ ಅಂದಾಜಿಸಿತ್ತು. ಆದರೆ ತದನಂತರ 2020ರ ಜೂನ್‌ನಲ್ಲಿನ ಐಎಂಎಫ್ ಪರಿಷ್ಕೃತ ವರದಿಯಲ್ಲಿ ಭಾರತವು -4.2% ನಕಾರಾತ್ಮಕ ಬೆಳವಣಿಗೆಗೆ ಸಾಕ್ಷಿಯಾಗಲಿದೆ ಎಂದು ಅಂದಾಜಿಸಿದೆ. ಹಾಗಾಗಿ ಪೋಸ್ಟ್‌ನಲ್ಲಿನ ಪ್ರತಿಪಾದನೆ ದಿಕ್ಕು ತಪ್ಪಿಸುವಂತಿದೆ.
ಪೋಸ್ಟ್ ನಲ್ಲಿನ ಚಿತ್ರದಲ್ಲಿ ಮಾಹಿತಿ ಮೂಲ ಐಎಂಎಫ್ ಎಂದು ನಮೂದಿಸಿದೆ. ಅದರ ಆಧಾರದಲ್ಲಿ ಐಎಂಎಫ್ ನ ಈ ಅಂಕಿಅಂಶಗಳಿಗಾಗಿ ನಾವು ಹುಡುಕಿದಾಗ 2020ರ ಏಪ್ರಿಲ್‌ನಲ್ಲಿ ಬಿಡುಗಡೆಯಾಗಿರುವ ವರ್ಲ್ಡ್ ಎಕಾನಾಮಿಕ್ ಔಟ್‌ಲುಕ್ ವರದಿ ಕಾಣುತ್ತದೆ. ಅದರಲ್ಲಿ ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ವಿಶ್ವದ ಹಲವು ಆರ್ಥಿಕತೆಗಳ ಬೆಳವಣಿಗೆ ದರವನ್ನುಅಂದಾಜಿಸಲಾಗಿದೆ.
ಆದರೆ 2020ರ ಜೂನ್ ತಿಂಗಳಿನಲ್ಲಿ ಐಎಂಎಫ್ ಮತ್ತೊಂದು ವರದಿಯನ್ನು ಬಿಡುಗಡೆಗೊಳಿಸಿದೆ. ಆ ವರದಿಯಲ್ಲಿ 2020ರ ಭಾರತದ ಜಿಡಿಪಿ ಬೆಳವಣಿಗೆಯು -4.5%ಕ್ಕೆ ಕುಸಿದಿದ್ದು, ಚೀನಾ ಮಾತ್ರವೇ ಸಕರಾತ್ಮಕ (1.0%) ಬೆಳವಣಿಗೆ ಹೊಂದಲಿರುವ ದೇಶ ಎಂದು ಅಂದಾಜಿಸಲಾಗಿದೆ. ಹಾಗಾಗಿ ಪೋಸ್ಟ್ ನಲ್ಲಿನ ಪ್ರತಿಪಾದನೆ ಹಿಂದಿನದೇ ಹೊರತು ಇತ್ತೀಚಿನದಲ್ಲ ಎಂದು ಹೇಳಬಹುದಾಗಿದೆ.
ವಿಶ್ವಬ್ಯಾಂಕ್, ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಮತ್ತು ವರ್ಲ್ಡ್ ಎಕಾನಾಮಿಕ್ ಫೋರಂ ಸೇರಿದಂತೆ ಹಲವು ಸಂಸ್ಥೆಗಳು ಸಹ ಜಿಡಿಪಿ ಬೆಳವಣಿಗೆಯ್ನು ಅಂದಾಜಿಸಿವೆ. ಅದರಲ್ಲಿ 2020ರ ಜೂನ್‌ನಲ್ಲಿ ವಿಶ್ವಬ್ಯಾಂಕ್ ‘ವರ್ಲ್ಡ್ ಎಕಾನಾಮಿಕ್ ಪ್ರಾಸ್ಪೆಕ್ಟ್ಸ್’ ಎಂಬ ವರದಿಯನ್ನು ಬಿಡುಗಡೆ ಮಾಡಿದ್ದು, ಅದು ಭಾರತವು 2020ರ ವರ್ಷದಲ್ಲಿ-3.2% ಬೆಳವಣಿಗೆಯನ್ನು ಅಂದಾಜಿಸಿದೆ.
ಅದೇ ರೀತಿ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಭಾರತವು 2020ರ ವರ್ಷದಲ್ಲಿ -4.0% ಬೆಳವಣಿಗೆ ಹೊಂದಲಿದೆ ಎಂದು ಅಂದಾಜಿಸಿದೆ.
ಒಟ್ಟಿನಲ್ಲಿ2020ರ ಭಾರತದ ಜಿಡಿಪಿಯು ವಿಶ್ವ ಆರ್ಥಿಕತೆಗಳ ಪೈಕಿ ಅತಿ ಹೆಚ್ಚು ಪ್ರಗತಿ ಸಾಧಿಸಿದೆ ಎಂದುಹಳೆಯ ಜಿಡಿಪಿ ಬೆಳವಣಿಗೆಯ ಅಂದಾಜನ್ನು ಹಂಚಿಕೊಳ್ಳಲಾಗಿದೆ.