Fake News - Kannada
 

‘ಕೆಂಪು ಮರ್ಕ್ಯುರಿ’ ಎಂಬುವುದುಮಿಥ್ಯೆ. ಇದು ಹಳೆಯ ಟಿವಿಗಳು ಮತ್ತು ರೇಡಿಯೋಗಳಲ್ಲಿ ಸಿಕ್ಕುವುದಿಲ್ಲ

0

ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸಲು ಬಳಸುವ ‘ರೆಡ್ ಮರ್ಕ್ಯುರಿ’ ಎಂಬ ರಾಸಾಯನಿಕವನ್ನು ಹಳೆಯ ಟಿವಿ ಸೆಟ್ ಗಳು ಮತ್ತು  ರೇಡಿಯೊಗಳಲ್ಲಿ ಕಾಣಬಹುದು ಎಂಬ ಹೇಳಿಕೆಯ ಸಂದೇಶವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದು ನಿಜವೇ ಪರಿಶೀಲಿಸೋಣ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಹಳೆಯ ರೇಡಿಯೊಗಳು ಮತ್ತು ಟಿವಿ ಸೆಟ್ ಗಳಲ್ಲಿ ‘ರೆಡ್ ಮರ್ಕ್ಯುರಿ’ (ಕೆಂಪು ಪಾದರಸ) ಅನ್ನು ಕಾಣಬಹುದು.

ನಿಜಾಂಶ: ‘ಕೆಂಪು ಮರ್ಕ್ಯುರಿ’ ಒಂದು ಮಿಥ್ಯೆಯಾಗಿದೆ. 2002 ರಲ್ಲಿಯೇ ಅಮೆರಿಕದ ಅಧಿಕಾರಿಯೊಬ್ಬರು ‘ರೆಡ್ ಮರ್ಕ್ಯುರಿ’ಯಂತಹ ಯಾವುದೇ ವಸ್ತುಇಲ್ಲ. ಕೆಲವು ಭಯೋತ್ಪಾದಕ ಗುಂಪುಗಳು ಕಟ್ಟುಕತೆಯ ‘ರೆಡ್ ಮರ್ಕ್ಯುರಿ’ಯನ್ನು ಪಡೆಯಲು ಪ್ರಯತ್ನಿಸಿ ಹಗರಣಗಳಿಗೆ ಬಲಿಯಾಗಿದ್ದಾರೆ ಎಂದು ಹೇಳಿದ್ದಾರೆ. ಆದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಕೆಂಪು ಮರ್ಕ್ಯುರಿ ಪ್ರತಿಪಾದನೆಗಳು ತಪ್ಪಾಗಿದೆ.

ಅಂತರ್ಜಾಲದಲ್ಲಿ ‘ರೆಡ್ ಮರ್ಕ್ಯುರಿ’ಕುರಿತು ಹುಡುಕಿದಾಗ, ‘ಯು.ಎಸ್. ರಾಜ್ಯ ಇಲಾಖೆ’ಯ ವೆಬ್‌ ಸೈಟ್ ಕಂಡು ಬರುತ್ತದೆ. ಈ ವೆಬ್‌ ಸೈಟ್‌ ನಲ್ಲಿ, 2002 ರಲ್ಲಿ ಲಂಡನ್‌ ನ ‘ಇಂಟರ್ನ್ಯಾಷನಲ್ ಅಪ್ರೋಚಸ್ ಟು ನ್ಯೂಕ್ಲಿಯರ್ ಅಂಡ್  ರೇಡಿಯೊಲಾಜಿಕಲ್ ಸೆಕ್ಯುರಿಟಿ ಕಾನ್ಫರೆನ್ಸ್’ ನಲ್ಲಿ ಆಗ ಶಸ್ತ್ರಾಸ್ತ್ರ ನಿಯಂತ್ರಣ ಮತ್ತು ಅಂತರರಾಷ್ಟ್ರೀಯ ಭದ್ರತೆಯ ಉಪ ಕಾರ್ಯದರ್ಶಿ ಜಾನ್ ಆರ್. ಬೋಲ್ಟನ್ ನೀಡಿದ ಭಾಷಣದ ಪ್ರತಿಲೇಖನ ಕಂಡುಬಂದಿದೆ. ಬೋಲ್ಟನ್ ತಮ್ಮ ಭಾಷಣದಲ್ಲಿ, ‘ರೆಡ್ ಮರ್ಕ್ಯುರಿ’ನಂತಹ ಯಾವುದೇ ವಸ್ತು ಇಲ್ಲ ಎಂದು ಹೇಳಿದ್ದಾರೆ. ಕೆಲವು ಭಯೋತ್ಪಾದಕ ಗುಂಪುಗಳು ‘ರೆಡ್ ಮರ್ಕ್ಯುರಿ’ ಯನ್ನು ಪಡೆಯಲು ಪ್ರಯತ್ನಿಸಿ ಹಗರಣಗಳಿಗೆ ಬಲಿಯಾಗಿವೆ ಎಂದು ಅವರು ಹೇಳಿದ್ದಾರೆ.

‘ಬಿಬಿಸಿ’ ಮತ್ತು ‘ದಿ ನ್ಯೂಯಾರ್ಕ್ ಟೈಮ್ಸ್’ ಸಹ ‘ರೆಡ್ ಮರ್ಕ್ಯುರಿ’ ಒಂದು ಕಟ್ಟುಕತೆ ಎಂದು ಲೇಖನಗಳನ್ನು ಪ್ರಕಟಿಸಿವೆ. ಆ ಲೇಖನಗಳನ್ನುಇಲ್ಲಿ ಮತ್ತು ಇಲ್ಲಿ ಓದಬಹುದು. ‘ಬಿಬಿಸಿ’ ತನ್ನ ಲೇಖನದಲ್ಲಿ ‘ರೆಡ್ ಮರ್ಕ್ಯುರಿ’ಯಂತಹ ಯಾವುದೇ ರಾಸಾಯನಿಕವಿಲ್ಲ ಎಂದು ಬರೆದಿದೆ. ಆದರೆ ‘ಮರ್ಕ್ಯುರಿ ಸಲ್ಫೈಡ್’ ಎಂಬ ಅದಿರನ್ನು ಒಳಗೊಂಡಿರುವ ಕೆಂಪು ಬಣ್ಣದ ಪಾದರಸವಿದೆ. ಇದು ಹಾನಿಕಾರಕವಾಗಿರುವುದು ‘ಅದು ಸ್ಫೋಟಗೊಳ್ಳುವ ಗುಣ ಹೊಂದಿದೆ ಎಂಬುದಕ್ಕಲ್ಲ ಬದಲಾಗಿ ಸಾಮಾನ್ಯವಾದ ಪಾದರಸ ಮಾನವನ ಆರೋಗ್ಯಕ್ಕೆ ಹಾನಿಕಾರಕವಾದ ರಸಾಯನಿಕ’ ಎಂದುಲೇಖನದಲ್ಲಿಹೇಳಲಾಗಿದೆ.

ಹಳೆಯ ಟಿವಿ ಸೆಟ್ ಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್‌ ಉಪಕರಣಗಳಲ್ಲಿ, ಪಾದರಸ ಮತ್ತುಇತರ ಹಾನಿಕಾರಕ ರಾಸಾಯನಿಕಗಳ ಕೆಲವು ವಸ್ತುಗಳಿವೆ ಆದರೆ ‘ರೆಡ್ ಮರ್ಕ್ಯುರಿ’ಯ ಯಾವುದೇ ಕುರುಹು ಇಲ್ಲ (ಕನಿಷ್ಠ ಇಂದಿನವರೆಗೂ ಯಾರೂ ಅದನ್ನು ಕಂಡುಹಿಡಿಯಲಿಲ್ಲ). ಅಲ್ಲದೆ,  ಅಸ್ತಿತ್ವದಲ್ಲೇ ಇಲ್ಲದ ‘ರೆಡ್ ಮರ್ಕ್ಯುರಿ’ಯನ್ನು ಮಾರಾಟ ಮಾಡುವ ಮೂಲಕ ಜನರನ್ನು ಮೋಸಗೊಳಿಸಲು ಯತ್ನಿಸಿದ ಹಗರಣದಲ್ಲಿ ಹಲವು ವಂಚಕರನ್ನು  ಪೊಲೀಸರು ಬಂಧಿಸಿದ ಹಲವು ಪ್ರಕರಣಗಳಿವೆ. ಆ ಘಟನೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನುಇಲ್ಲಿ, ಇಲ್ಲಿ ಮತ್ತುಇಲ್ಲಿ ಕಾಣಬಹುದು. ಸೌದಿ ಅರೇಬಿಯಾದಲ್ಲಿ ಹಳೆಯ ಹೊಲಿಗೆಯಂತ್ರಗಳಲ್ಲಿ ‘ರೆಡ್ ಮರ್ಕ್ಯುರಿ’ ಕಂಡುಬರುತ್ತದೆ ಎಂದು ಇದೇ ರೀತಿಯ ವಂಚನೆ 2009 ರಲ್ಲಿ ವೈರಲ್ ಆಗಿತ್ತು,

ಒಟ್ಟಾರೆಯಾಗಿ ಹೇಳುವುದಾದರೆ, ‘ಕೆಂಪು ಮರ್ಕ್ಯುರಿ’ ಎಂಬುವುದು ಒಂದು ಕಟ್ಟುಕಥೆ. ಹಳೆಯ ಟಿವಿ ಸೆಟ್ ಗಳು ರೇಡಿಯೋಗಳಲ್ಲಿಇದನ್ನು ಕಾಣಲು ಸಾಧ್ಯವಿಲ್ಲ.

Share.

About Author

Comments are closed.

scroll