2021 ರ ಡಿಸೆಂಬರ್‌ನಲ್ಲಿ ನಡೆದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ 18 ವರ್ಷದ ಮಗಳ ನಿಶ್ಚಿತಾರ್ಥ ಸಮಾರಂಭದಲ್ಲಿ ತೆಗೆದ ಚಿತ್ರ ಎಂದು ಹೇಳುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಸ್ಮೃತಿ ಇರಾನಿ ಅವರ ಪುತ್ರಿ ಜೊಯಿಶ್ ಇರಾನಿ ಗೋವಾದಲ್ಲಿ ಅಕ್ರಮ ಬಾರ್ ನಡೆಸುತ್ತಿರುವ ಬಗ್ಗೆ ಕಾಂಗ್ರೆಸ್ ಪಕ್ಷದ ಮಾಡಿದ ಆರೋಪಗಳ ಆರೋಪಗಳ ನಂತರ , ಸ್ಮೃತಿ ಇರಾನಿ ಪತ್ರಿಕಾಗೋಷ್ಠಿ ನಡೆಸಿ, ತನ್ನ 18 ವರ್ಷದ ಮಗಳು ಪ್ರಥಮ ವರ್ಷದ ಕಾಲೇಜು ವಿದ್ಯಾರ್ಥಿನಿಯಾಗಿದ್ದು, ಯಾವುದೇ ಬಾರ್ ನಡೆಸುತ್ತಿಲ್ಲ ಎಂದು ಪ್ರತಿಪಾದಿಸಿದರು. ಸ್ಮೃತಿ ಇರಾನಿ ತನ್ನ 18 ವರ್ಷದ ಮಗಳಿಗೆ ಬಾಲ್ಯವಿವಾಹ ಮಾಡುತ್ತಿರುವುದು ಅಪರಾಧ ಅಲ್ಲವೆ ಎಂದು ಪೋಸ್ಟ್‌ನಲ್ಲಿ ಆರೋಪಿಸಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಪ್ರತಿಪಾದನೆ : ಸ್ಮೃತಿ ಇರಾನಿಯವರ 18 ವರ್ಷದ ಮಗಳು ಜೋಯಿಶ್ ಇರಾನಿಯ ನಿಶ್ಚಿತಾರ್ಥದ ಫೋಟೋ.
ನಿಜಾಂಶ : ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ಫೋಟೋ ಸ್ಮೃತಿ ಇರಾನಿ ಅವರ ಮಲ ಮಗಳು ಶಾನೆಲ್ಲೆ ಇರಾನಿಯ ನಿಶ್ಚಿತಾರ್ಥದ ಚಿತ್ರವನ್ನು ತೋರಿಸುತ್ತದೆ. ಸ್ಮೃತಿ ಇರಾನಿ ಅವರು ಪತ್ರಿಕಾಗೋಷ್ಠಿಯಲ್ಲಿ ತಮ್ಮ 18 ವರ್ಷದ ಮಗಳು ಎಂದು ಉಲ್ಲೇಖಿಸಿದ ಜೋಯಿಶ್ ಇರಾನಿಯವರಲ್ಲ. ಈ ಫೋಟೋಕ್ಕೂ ಸ್ಮೃತಿ ಇರಾನಿ ಅವರ ಮಗಳು ಜೋಯಿಶ್ ಇರಾನಿ ಅವರ ಇತ್ತೀಚಿನ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಮಲ್ಲಿ ಸರ್ಚ್ ಮಾಡಿದಾಗ 25 ಡಿಸೆಂಬರ್ 2021 ರಂದು ಸ್ಮೃತಿ ಇರಾನಿ ಅವರ ಅಧಿಕೃತ Instagram ಹ್ಯಾಂಡಲ್‌ನಲ್ಲಿ ಅದೇ ಫೋಟೋವನ್ನು ಹಂಚಿಕೊಂಡಿರುವುದನ್ನು ಕಾಣಬಹುದು. ಸ್ಮೃತಿ ಇರಾನಿ ಈ ಫೋಟೋವನ್ನು ಪ್ರಕಟಿಸಿ ಅರ್ಜುನ್ ಭಲ್ಲಾ ಅವರೊಂದಿಗೆ ತಮ್ಮ ಮೊದಲ ಮಗಳು ಶಾನೆಲ್ಲೆ ಇರಾನಿ ಅವರ ನಿಶ್ಚಿತಾರ್ಥವನ್ನು ನೆರೆವೇರಿಸಿದ ಪೋಸ್ಟ್ ಹಂಚಿಕೊಂಡಿದ್ದಾರೆ.
ವರದಿಗಳ ಪ್ರಕಾರ, ಶನೆಲ್ಲೆ ಇರಾನಿ ಸ್ಮೃತಿ ಇರಾನಿ ಅವರ ಪತಿ ಜುಬಿನ್ ಇರಾನಿ ಮತ್ತು ಅವರ ಮೊದಲ ಪತ್ನಿ ಮೋನಾ ಇರಾನಿ ಅವರ ಮಗಳು. ಶಾನೆಲ್ ಹೊರತುಪಡಿಸಿ, ಜುಬಿನ್ ಅವರಿಗೆ ಸ್ಮೃತಿ ಇರಾನಿ ಮಗ ಜೋರ್ ಇರಾನಿ ಮತ್ತು ಮಗಳು ಜೊಯಿಶ್ ಇರಾನಿ ಅವರೊಂದಿಗೆ ಇನ್ನೂ ಇಬ್ಬರು ಮಕ್ಕಳಿದ್ದಾರೆ. ಶಾನೆಲ್ಲೆ ಇರಾನಿ ಅವರು ನನ್ನ ಬಾಲ್ಯದ ಸ್ನೇಹಿತ ಜುಬಿನ್ ಇರಾನಿ ಅವರ ಮಗಳು ಎಂದು ಶಾರುಖ್ ಖಾನ್ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬಹಿರಂಗಪಡಿಸಿದ್ದಾರೆ.
ಸ್ಮೃತಿ ಇರಾನಿ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ತಮ್ಮ ಕುಟುಂಬದ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು. ವರದಿಗಳ ಪ್ರಕಾರ, ಶಾನೆಲ್ಲೆ ಇರಾನಿ ಮುಂಬೈನ ನಾರ್ಸಿ ಮೊಂಜಿ ಕಾಲೇಜ್ ಆಫ್ ಕಾಮರ್ಸ್ ಮತ್ತು ಎಕನಾಮಿಕ್ಸ್‌ನಿಂದ ಪದವಿ ಪಡೆದಿದ್ದಾರೆ. ಅವರು ಮುಂಬೈನ ಸರ್ಕಾರಿ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದಿದ್ದರು, ನಂತರ ಜಾರ್ಜ್‌ಟೌನ್ ವಿಶ್ವವಿದ್ಯಾಲಯ ಕಾನೂನು ಕೇಂದ್ರ, ವಾಷಿಂಗ್ಟನ್ DC ಯಿಂದ LLM ಪದವಿ ಪಡೆದಿದ್ದಾರೆ.
ಏಪ್ರಿಲ್ 2022 ರಲ್ಲಿ, ಸ್ಮೃತಿ ಇರಾನಿ ಅವರು ಮಗಳು ಜೋಯಿಶ್ ಇರಾನಿ ನಡೆಸುತ್ತಿದ್ದಾರೆ ಎಂದು ಹೇಳಲಾದ ಸಿಲ್ಲಿ ಸೋಲ್ಸ್ ರೆಸ್ಟೋರೆಂಟ್‌ಗಾಗಿ ಫುಡ್ ರೈಟರ್ ಕುನಾಲ್ ವಿಜಯ್ಕರ್ ಅವರ ಸಕಾರಾತ್ಮಕ ವಿಮರ್ಶೆಯನ್ನು ಸ್ಮೃತಿ ಇರಾನಿ ತಮ್ಮ Instagramನಲ್ಲಿ ಹಂಚಿಕೊಂಡಿದ್ದಾರೆ. ವಿಮರ್ಶೆಯನ್ನು ಹಂಚಿಕೊಂಡ ಸ್ಮೃತಿ ಇರಾನಿ, “ಮಗಳ ಬಗ್ಗೆ ತುಂಬಾ ಹೆಮ್ಮೆ @zoishirani @sillysoulsgoa” ಎಂದು ಹೇಳಿದ್ದಾರೆ. ಕುನಾಲ್ ವಿಜಯ್ಕರ್ ಅವರು ಜೋಯಿಶ್ ಇರಾನಿ ಅವರೊಂದಿಗೆ ಊಟ ಮಾಡುವಾಗ ಸಿಲ್ಲಿ ಸೋಲ್ಸ್ ಗೋವಾ ರೆಸ್ಟೋರೆಂಟ್ ಅನ್ನು ಪರಿಶೀಲಿಸುತ್ತಿರುವುದನ್ನು ತೋರಿಸುವ ಪೂರ್ಣ ವೀಡಿಯೊವನ್ನು ಇಲ್ಲಿ ನೋಡಬಹುದು. ಹಾಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಫೋಟೋ ಜೋಯಿಶ್ ಇರಾನಿಯನ್ನು ತೋರಿಸುವುದಿಲ್ಲ, ಸ್ಮೃತಿ ಇರಾನಿ ಅವರು ತಮ್ಮ 18 ವರ್ಷದ ಮಗಳು ಜೋಯಿಶಾ ಕಾಲೇಜಿನಲ್ಲಿ ಪದವಿ ಮೊದಲ ವರ್ಷ ಓದುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಫೋಟೋ ಸ್ಮೃತಿ ಇರಾನಿ ಅವರ ಮಲ ಮಗಳು ಶಾನೆಲ್ಲೆ ಇರಾನಿಯ ನಿಶ್ಚಿತಾರ್ಥವನ್ನು ತೋರಿಸುತ್ತದೆ, ಅಕ್ರಮ ಬಾರ್ ನಡೆಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದ ಜೋಯಿಶ್ ಇರಾನಿಯವರಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.