ನಿರ್ಗಮಿತ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರಿಗೆ ಬೀಳ್ಕೊಡುಗೆ ಸಮಾರಂಭದ ವೇಳೆ ಎಲ್ಲರಿಗೂ ವಂದನೆ ಸಮರ್ಪಿಸುವ ಸಂದರ್ಭದಲ್ಲಿ ಮೋದಿಯವರಿಗೆ ಕೈಮುಗಿದು ಸ್ವಾಗತಿಸುವಾಗ ಪ್ರಧಾನಿ ಮೋದಿ ಕೋವಿಂದ್‌ಅವರನ್ನು ಕಡೆಗಣಿಸುತ್ತಿರುವುದನ್ನು ತೋರಿಸುವ ವೀಡಿಯೊ ಪೋಸ್ಟ್ ವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಮೋದಿ ಅವರು ಮಾಜಿ ರಾಷ್ಟ್ರಪತಿಗಳಿಗೆ ಅಗೌರವ ತೋರುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಅಲ್ಲದೆ, ಈ ದೃಶ್ಯಗಳು ಮೋದಿಯವರ ಫೋಟೋಗಳ ಮೇಲಿನ ವ್ಯಾಮೋಹವನ್ನು ತೋರಿಸುತ್ತವೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾದರೆ ಮೋದಿ ಮಾಜಿ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರನ್ನು ಕಡೆಗಣಿಸಿದ್ದಾರಾ? ಎಂದು ಪೋಸ್ಟ್ ನ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.
ಪ್ರತಿಪಾದನೆ: ಪ್ರಧಾನಿ ಮೋದಿಯವರು ರಾಮ್ ನಾಥ್ ಕೋವಿಂದ್ ಅವರಿಗೆ ಶುಭಾಶಯ ಕೋರುತ್ತಿರುವಾಗ ಅವರನ್ನು ನಿರ್ಲಕ್ಷಿಸುತ್ತಿರುವ ದೃಶ್ಯಗಳು.
ನಿಜಾಂಶ: ದೃಶ್ಯಗಳು ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಬೀಳ್ಕೊಡುಗೆ ಕಾರ್ಯಕ್ರಮದಿಂದ ಬಂದವು. ಆದರೆ, ಕಾರ್ಯಕ್ರಮದ ವೇಳೆ ಪ್ರಧಾನಿ ಮೋದಿ ಅವರು ಕೋವಿಂದ್ ಅವರನ್ನು ಕಡೆಗಣಿಸುವ ಮೂಲಕ ಅಗೌರವ ತೋರಲಿಲ್ಲ. ವಾಸ್ತವವಾಗಿ, ಮೋದಿ ಮತ್ತು ಕೋವಿಂದ್ ಪರಸ್ಪರ ಶುಭಾಶಯ ಕೋರಿದರು. ಇಬ್ಬರೂ ಪರಸ್ಪರ ಶುಭಾಶಯಗಳನ್ನು ತೋರಿಸುವ ಈ ಭಾಗವನ್ನು ಕತ್ತರಿಸಲಾಗಿದೆ ಮತ್ತು ಮೋದಿ ಫೋಟೋಗ್ರಾಫರ್‌ಗಳನ್ನು ನೋಡುವ ಭಾಗವನ್ನು ಮಾತ್ರ ಹಂಚಿಕೊಳ್ಳಲಾಗುತ್ತಿದೆ. ಆದ್ದರಿಂದ ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
23 ಜುಲೈ 2022 ರಂದು ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಆಯೋಜಿಸಲಾದ ಮಾಜಿ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರ ಬೀಳ್ಕೊಡುಗೆ ಕಾರ್ಯಕ್ರಮದ ವೈರಲ್ ದೃಶ್ಯಗಳು. ಆದರೆ, ಪ್ರಧಾನಿ ಮೋದಿ ಅವರು ರಮಾನಾಥ್ ಕೋವಿಂದ್ ಅವರನ್ನು ಕಡೆಗಣಿಸಿದ್ದಾರೆ ಎಂಬುದು ಸುಳ್ಳು. ಮೂಲ ವೀಡಿಯೋದಲ್ಲಿ ಪ್ರಧಾನಮಂತ್ರಿಯವರು ರಾಷ್ಟ್ರಪತಿಗಳ ನಮನಕ್ಕೆ ಪ್ರತಿಯಾಗಿ ನಮಿಸಿದ ಬಳಿಕ ಕ್ಯಾಮೆರಾದತ್ತ ನೋಡುತ್ತಿರುವುದು ದಾಖಲಾಗಿದೆ.
ವೈರಲ್ ವೀಡಿಯೊವು Sansad TV ಯ ಲೋಗೋವನ್ನು ಹೊಂದಿರುವುದರಿಂದ, ಸಂಬಂಧಿತ ಕೀವರ್ಡ್‌ಗಳೊಂದಿಗೆ Google ಸರ್ಚ್ ಮಾಡಿದಾಗ Sansad TV YouTube ಚಾನೆಲ್‌ನಲ್ಲಿ ವೈರಲ್ ದೃಶ್ಯಗಳ ಮೂಲ ತುಣುಕು ಲಭ್ಯವಾಗಿದೆ.
ಈ ಪೂರ್ಣ-ಪ್ರಮಾಣದ ವೀಡಿಯೊದಲ್ಲಿ ರಮಾನಾಥ್ ಕೋವಿಂದ್ ಅವರು ವೇದಿಕೆಯ ಕೆಳಗೆ ನಡೆದು ಅತಿಥಿಗಳಿಗೆ ಕೈ ಜೋಡಿಸಿ ಸ್ವಾಗತಿಸುತ್ತಿದ್ದಾರೆ. ಈ ವೀಡಿಯೊದ 59 ನೇ ಸೆಕೆಂಡ್‌ನಲ್ಲಿ, ಕೋವಿಂದ್ ಅವರು ಪ್ರಧಾನಿ ಮೋದಿಯನ್ನು ನಮಸ್ಕರಿಸಿದ್ದು, ನಂತರ ಮೋದಿ ಸಹ ಪ್ರತಿಯಾಗಿ ನಮಸ್ಕರಿಸಿರುವುದು ಸ್ಪಷ್ಟವಾಗಿದೆ.
ಮೋದಿಗೆ ನಮಸ್ಕಾರ ಮಾಡಿದ ನಂತರ ರಮಾನಾಥ್ ಕೋವಿಂದ್ ಮುಂದೆ ಸಾಗಿ ಮೋದಿಯ ಹಿಂದೆ ನಿಂತಿರುವ ಮಹಿಳೆಯೊಂದಿಗೆ ಮಾತನಾಡಿದರು. ಈ ಕ್ಷಣದಲ್ಲಿ ಮೋದಿ ಛಾಯಾಗ್ರಾಹಕರತ್ತ ನೋಡುತ್ತಿರುವಂತೆ ಕಾಣಿಸುತ್ತಿದೆ. ಮೋದಿ ಮತ್ತು ಕೋವಿಂದ್ ಪರಸ್ಪರ ಶುಭಾಶಯ ಕೋರಿದ ಭಾಗವನ್ನು ಕ್ರಾಪ್ ಮಾಡಿ ವೈರಲ್ ವೀಡಿಯೊವನ್ನು ರಚಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ.
ರಾಷ್ಟ್ರಪತಿ ಭವನದ ಅಧಿಕೃತ ಟ್ವಿಟರ್ ಹ್ಯಾಂಡಲ್ ಕೂಡ ಕಾರ್ಯಕ್ರಮದ ಕೆಲವು ಚಿತ್ರಗಳನ್ನು ಹಂಚಿಕೊಂಡಿದೆ. ಈ ಚಿತ್ರಗಳಲ್ಲಿ ಒಂದರಲ್ಲಿ ಮೋದಿ ಮತ್ತು ಕೋವಿಂದ್ ಪರಸ್ಪರ ಶುಭಾಶಯ ಕೋರುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ಮಾಜಿ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರ ಬೀಳ್ಕೊಡುಗೆ ಕಾರ್ಯಕ್ರಮದ ವೇಳೆ ಪ್ರಧಾನಿ ಮೋದಿ ಅವರು ಕೋವಿಂದ್ ಅವರನ್ನು ಕಡೆಗಣಿಸುವ ಮೂಲಕ ಅಗೌರವ ತೋರಿಸಿಲ್ಲ. ವಾಸ್ತವವಾಗಿ, ಮೋದಿ ಮತ್ತು ಕೋವಿಂದ್ ಪರಸ್ಪರ ಶುಭಾಶಯ ಕೋರಿದರು. ಇಬ್ಬರೂ ಪರಸ್ಪರ ಶುಭಾಶಯಗಳನ್ನು ತೋರಿಸುವ ಈ ಭಾಗವನ್ನು ಕ್ಲಿಪ್ ಮಾಡಲಾಗಿದೆ ಮತ್ತು ಮೋದಿ ಹೆಚ್ಚು ಸಮಯ ಫೋಟೋಗ್ರಾಫರ್‌ಗಳನ್ನು ನೋಡುವ ಭಾಗವನ್ನು ಮಾತ್ರ ಹಂಚಿಕೊಳ್ಳಲಾಗುತ್ತಿದೆ. ಆದ್ದರಿಂದ ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.