ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಪೋಸ್ಟ್ (ಇಲ್ಲಿ) ರತನ್ ಟಾಟಾ ಅವರ ಮಹತ್ವಾಕಾಂಕ್ಷೆಯ ಯೋಜನೆಯಾದ ಟಾಟಾ ನ್ಯಾನೋವನ್ನು ನೋಯೆಲ್ ಟಾಟಾ ಅವರ ನಾಯಕತ್ವದಲ್ಲಿ ಮರುಪ್ರಾರಂಭಿಸಲಾಗುವುದು ಎಂದು ಹೇಳುತ್ತದೆ. ಹೊಸ ಮಾದರಿಯು ಆಧುನಿಕ ವಿನ್ಯಾಸ, 624 ಸಿಸಿ ಪೆಟ್ರೋಲ್ ಎಂಜಿನ್ ಮತ್ತು ನಗರ ಚಾಲನೆಗಾಗಿ ವಿನ್ಯಾಸಗೊಳಿಸಲಾದ 30 ಕಿ.ಮೀ. ಪ್ರಭಾವಶಾಲಿ ಮೈಲೇಜ್ ಅನ್ನು ಹೊಂದಿದೆ ಎಂದು ಇಲ್ಲಿ ತಿಳಿಸಲಾಗಿದೆ. ಈ ಲೇಖನದ ಮೂಲಕ ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.
![](https://factly.in/wp-content/uploads//2024/12/Screenshot-2024-12-17-at-5.26.35 PM-892x1024.png)
ಕ್ಲೇಮ್: ನೋಯೆಲ್ ಟಾಟಾ ಅವರ ನಾಯಕತ್ವದಲ್ಲಿ ಟಾಟಾ ಮೋಟಾರ್ಸ್ ಮಾಡ್ರನ್ ಡಿಸೈನ್ ಹೊಂದಿರುವ 624 ಸಿಸಿ ಎಂಜಿನ್ ಮತ್ತು ನಗರ ಬಳಕೆಗಾಗಿ 30 ಕಿಮೀ ಮೈಲೇಜ್ ಹೊಂದಿರುವ ಹೊಸ ನ್ಯಾನೋ ಕಾರನ್ನು ಬಿಡುಗಡೆ ಮಾಡಲಿದೆ.
ಫ್ಯಾಕ್ಟ್: ವೈರಲ್ ಪೋಸ್ಟ್ ನಲ್ಲಿ ತೋರಿಸಿರುವ ಹೊಸ ನ್ಯಾನೋ ಕಾರನ್ನು ಟೊಯೋಟಾ ಆಯ್ಗೊ ಎಕ್ಸ್‌ನೊಂದಿಗೆ ಎಡಿಟ್ ಮಾಡಲಾಗಿದೆ . ಲೋಗೋದಲ್ಲಿನ ವ್ಯತ್ಯಾಸಗಳು ಟಾಟಾ ಲೋಗೋ ಮತ್ತು ನ್ಯಾನೋ ನೇಮ್ ಪ್ಲೇಟ್ ಸೇರಿಸಲು ಟೊಯೋಟಾ ಆಯ್ಗೊ X ಚಿತ್ರವನ್ನು ಬದಲಾಯಿಸಲಾಗಿದೆ ಎಂದು ತಿಳಿಸಿದೆ. ಇನ್ನು ಹೆಚ್ಚಾಗಿ ಹೇಳುವುದಾದದರೆ ಹೊಸ ನ್ಯಾನೋ ಬಿಡುಗಡೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದು ಟಾಟಾ ಮೋಟಾರ್ಸ್ ದೃಢಪಡಿಸಿದೆ. ಸೂಕ್ತ ಸಮಯದಲ್ಲಿ ಅಫೀಷಿಯಲ್ ಕಮ್ಯುನಿಕೇಷನ್ ಮೂಲಕ ಹೊಸ ಉತ್ಪನ್ನಗಳ ಬಗ್ಗೆ ಗ್ರಾಹಕರಿಗೆ ತಿಳಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ಆದ್ದರಿಂದ, ಈ ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಸುಳ್ಳು.
ಈ ಹೇಳಿಕೆಯನ್ನು ಪರಿಶೀಲಿಸಲು ನಾವು ಗೂಗಲ್ ನಲ್ಲಿ ಹುಡುಕಾಟ ನಡೆಸಿದ್ದೇವೆ ಆದರೆ ಅಂತಹ ಯಾವುದೇ ಪ್ರಕಟಣೆ ಕಂಡುಬಂದಿಲ್ಲ. TATA ಮೋಟಾರ್ಸ್ ಅಂತಹ ಹೇಳಿಕೆಯನ್ನು ನೀಡಿದ್ದರೆ ಈ ರಿಪೋರ್ಟ್ ವೈರಲ್ ಆಗುತಿತ್ತು. ಆದರೆ, TATA ಮೋಟಾರ್ಸ್‌ನ ಸಾಮಾಜಿಕ ಮಾಧ್ಯಮದಲ್ಲಿ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಅಥವಾ ಇದರ ಬಗ್ಗೆ ಇರುವ ಯಾವುದೇ ವಿಶ್ವಾಸಾರ್ಹ ವರದಿಗಳು ಎಲ್ಲಿಯೂ ಪಾಂಡುಬಂದಿಲ್ಲ.
ವೈರಲ್ ಪೋಸ್ಟ್‌ನ ಸ್ಕ್ರೀನ್‌ಶಾಟ್‌ನ ಗೂಗಲ್ ಲೆನ್ಸ್ ಹುಡುಕಾಟವು ಯೂಟ್ಯೂಬ್ ಚಾನೆಲ್ ಹಗ್ ಬೋಗನ್ ಮೋಟಾರ್ಸ್‌ನಲ್ಲಿ ಆಗಸ್ಟ್ 15, 2023 ರಂದು ಪೋಸ್ಟ್ ಮಾಡಲಾದ ವೀಡಿಯೊ (ಆರ್ಕೈವ್) ಗೆ ನಮ್ಮನ್ನು ಕರೆದೊಯ್ಯಿತು. ಈ ವೀಡಿಯೊವು ವೈರಲ್ ಚಿತ್ರದಲ್ಲಿರುವುದನ್ನು ಹೋಲುವ ಕಾರನ್ನು ಒಳಗೊಂಡಿದ್ದು, ಇದನ್ನು, ಟೊಯೋಟಾ ಆಯ್ಗೊ ಎಕ್ಸ್ ಪಲ್ಸ್ ಎಂದು ಗುರುತಿಸಲಾಗಿದೆ.
ಇನ್ನು ಹೆಚ್ಚಿನ ತನಿಖೆಯಲ್ಲಿ ವೈರಲ್ ಪೋಸ್ಟ್‌ನಲ್ಲಿರುವ ಕಾರನ್ನು ಟೊಯೋಟಾದ ಅಧಿಕೃತ ವೆಬ್‌ಸೈಟ್‌ನಲ್ಲಿ (ಆರ್ಕೈವ್) ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.
![](https://factly.in/wp-content/uploads//2024/12/TATA-Motors-announced-the-launch-of-a-new-model-of-Nano-Car-Image-2-1024x573.jpg)
ವೈರಲ್ ಪೋಸ್ಟ್‌ನಲ್ಲಿ ಕಾರಿನ ಲೋಗೋದಲ್ಲಿ ವ್ಯತ್ಯಾಸಗಳನ್ನು ನಾವು ಗಮನಿಸಿದ್ದೇವೆ. ಇವೆರಡನ್ನೂ ಹೋಲಿಸಿ ನೋಡಿದಾಗ, ಟೊಯೋಟಾ ಐಗೊ ಎಕ್ಸ್ ಕಾರಿನ ಚಿತ್ರವನ್ನು ಟಾಟಾ ಲೋಗೋ ಮತ್ತು ನ್ಯಾನೋ ನೇಮ್ ಪ್ಲೇಟ್ ಜೊತೆ ಎಡಿಟ್ ಮಾಡಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ.
![](https://factly.in/wp-content/uploads//2024/12/TATA-Motors-announced-the-launch-of-a-new-model-of-Nano-Car-Image-3-1024x480.jpg)
ಈ ಕೆಳಗಿನ ಹೋಲಿಕೆಯು TATA ಮೋಟಾರ್ಸ್ ಮತ್ತು ಟೊಯೋಟಾ ಮೋಟಾರ್ಸ್ ಕಾರುಗಳ ಲೋಗೋಗಳ ನಡುವಿನ ವ್ಯತ್ಯಾಸಗಳನ್ನು ತೋರಿಸುತ್ತದೆ.
![](https://factly.in/wp-content/uploads//2024/12/TATA-Motors-announced-the-launch-of-a-new-model-of-Nano-Car-Image-4-1024x470.jpg)
ನಾವು TATA ಮೋಟಾರ್ಸ್ ಅನ್ನು ಇಮೇಲ್ ಮೂಲಕ ಸಂಪರ್ಕಿಸಿದ್ದು, ಯಾವುದೇ ಹೊಸ TATA ನ್ಯಾನೋ ಬಿಡುಗಡೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದು ಅವರು ದೃಢಪಡಿಸಿದ್ದಾರೆ. ಸೂಕ್ತ ಸಮಯದಲ್ಲಿ ಅಫೀಷಿಯಲ್ ಆಗಿ ಗ್ರಾಹಕರಿಗೆ ಹೊಸ ಉತ್ಪನ್ನಗಳ ಬಗ್ಗೆ ತಿಳಿಸಲಾಗುವುದು ಎಂದು ತಿಳಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, TATA ಮೋಟಾರ್ಸ್ ಆಧುನಿಕ ವೈಶಿಷ್ಟ್ಯಗಳೊಂದಿಗೆ ಹೊಸ ನ್ಯಾನೋ ಕಾರನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿಲ್ಲ, ಈ ವೊರಲ್ ಪೋಸ್ಟ್ ಎಡಿಟೆಡ್ ಆಗಿದೆ.