Fake News - Kannada
 

ಕೇರಳದ ಮುಸ್ಲಿಂ ಯುವತಿಯರು ಬುರ್ಖಾ ಧರಿಸದೆ ಹಿಂದೂ ಮಹಿಳೆಯನ್ನು ಬಸ್‌ಗೆ ಪ್ರವೇಶಿಸಲು ಬಿಡಲಿಲ್ಲ ಎಂಬ ಫೇಕ್ ವೀಡಿಯೊ

0

ಕೇರಳದಲ್ಲಿ ಬುರ್ಖಾ ಧರಿಸದ ಮಹಿಳೆಯರಿಗೆ ಬಸ್‌ನಲ್ಲಿ ಪ್ರವೇಶವಿಲ್ಲ ಎಂದು ಮುಸ್ಲಿಂ ಮಹಿಳಾ ಪ್ರಯಾಣಿಕರು ಹಿಂದೂ ಮಹಿಳೆಯೊಂದಿಗೆ ಜಗಳವಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಎಷ್ಟರಮಟ್ಟಿಗೆ ನಿಜ ಎಂದು ಈಗ ನೋಡೋಣ.

ಕ್ಲೇಮ್: ಕೆಲವು ಮುಸ್ಲಿಂ ಯುವತಿಯರು ಬುರ್ಖಾ ಧರಿಸದವರನ್ನು ಬಸ್‌ ಹತ್ತಲು ಬಿಡಲಿಲ್ಲ ಎಂಬ  ಕಾರಣಕೋಸ್ಕರ  ಕೇರಳದಲ್ಲಿ ಹಿಂದೂ ಮಹಿಳೆಯೊಂದಿಗೆ ಜಗಳವಾಡುತ್ತಿರುವ ವಿಡಿಯೋ.

ಫ್ಯಾಕ್ಟ್: ಈ ಘಟನೆಗೆ ಯಾವುದೇ ಧಾರ್ಮಿಕ ಆಯಾಮವಿಲ್ಲ. ಈ ಘಟನೆಯು 2023 ಅಕ್ಟೋಬರ್ 20 ರಂದು ಕೇರಳದ ಕಾಸರಗೋಡು ಪ್ರದೇಶದ ಕಾನ್ಸ ಮಹಿಳಾ ಕಾಲೇಜಿನ ಬಳಿ ನಡೆದಿದೆ. ಕೆಲ ವಿದ್ಯಾರ್ಥಿಗಳು ಬಂದು ತಮ್ಮ ಕಾಲೇಜಿನ ಮುಂದೆ ಬಸ್ ನಿಲ್ಲಿಸದ ಕಾರಣಕ್ಕೆ ಪ್ರತಿಭಟನೆ ನಡೆಸಿದರು. ಇದರಲ್ಲಿ ಯಾವುದೇ ಧಾರ್ಮಿಕ ಆಯಾಮವಿಲ್ಲ ಎಂದು ಕಾಲೇಜು ಪ್ರಾಂಶುಪಾಲರಾದ ಆಶಾ, ಸ್ಥಳೀಯ ಪೊಲೀಸರು ಹಾಗೂ ಬಸ್ ಕಂಡಕ್ಟರ್ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿರುವ ಕ್ಲೇಮ್  ತಪ್ಪಾಗಿದೆ.

ಮೊದಲಿಗೆ, ಈ ಘಟನೆಯ ಬಗ್ಗೆ ಅಂತರ್ಜಾಲದಲ್ಲಿ ಹುಡುಕಿದಾಗ, ಕೇರಳದ ಮಾಧ್ಯಮ ಸಂಸ್ಥೆಗಳು ಪ್ರಕಟಿಸಿದ ಹಲವಾರು ಸುದ್ದಿ ಲೇಖನಗಳು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಮತ್ತು ವೀಡಿಯೊಗಳು (ಇಲ್ಲಿ, ಇಲ್ಲಿ) ಕಂಡುಬಂದವು.

ಅವರ ಪ್ರಕಾರ, ಈ ಘಟನೆಯು 20 ಅಕ್ಟೋಬರ್ 2023 ರಂದು ಕೇರಳದ ಕಾಸರಗೋಡು ಪ್ರದೇಶದ ಕಾನ್ಸ ಮಹಿಳಾ ಕಾಲೇಜಿನ ಬಳಿ ನಡೆದಿದೆ. ಕಾಲೇಜಿನಲ್ಲಿ ಬಸ್‌ ತಂಗುದಾಣ ನಿರ್ಮಿಸಬೇಕು ಎಂದು ವಿದ್ಯಾರ್ಥಿಗಳು ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದಾರೆ. ಇದೇ ಅನುಕ್ರಮದಲ್ಲಿ ಅಂದು ಖಾಸಗಿ ಸಿಟಿ ಬಸ್‌ಗಳು ನಿಲ್ಲದ ಕಾರಣ ವಿದ್ಯಾರ್ಥಿಗಳು ಬಸ್‌ ಎದುರು ನಿಂತು ಪ್ರತಿಭಟನೆ ನಡೆಸಿದರು. ಇದೇ ವೇಳೆ ಬಸ್ಸಿನಲ್ಲಿದ್ದ ಆಶಾ ಎಂಬ ಮಹಿಳೆಯೊಂದಿಗೆ ಕಾಲೇಜು ವಿದ್ಯಾರ್ಥಿಗಳು ವಾಗ್ವಾದ ನಡೆಸಿದ್ದಾರೆ.

ಇಂಡಿಯಾ ಟುಡೇಗೆ ನೀಡಿದ ಸಂದರ್ಶನದ ಪ್ರಕಾರ, ಬಸ್ ಹತ್ತುವಾಗ ವಿದ್ಯಾರ್ಥಿಗಳು ತನ್ನ ಕಾಲು ತುಳಿದಿದ್ದರಿಂದ ಕೋಪಗೊಂಡಿದ್ದೇನೆ ಮತ್ತು ಅದೇ ಸಮಯದಲ್ಲಿ ಬಸ್ ನಿಲ್ಲಿಸದ್ದಕ್ಕಾಗಿ ಅವರೊಂದಿಗೆ ಜಗಳವಾಡಿದ್ದೇನೆ ಎಂದು ಆಶಾ ಹೇಳಿದ್ದಾರೆ. ವಿದ್ಯಾರ್ಥಿಗಳು ತಮ್ಮ ವಿರುದ್ಧ ಯಾವುದೇ ಧಾರ್ಮಿಕ ಪದಗಳನ್ನು ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವೈರಲ್ ವೀಡಿಯೊದಲ್ಲಿ ವಿದ್ಯಾರ್ಥಿಯು ಮಹಿಳೆಗೆ ಹೇಳಿದ ಮಾತಿನ ಕನ್ನಡ  ಅನುವಾದವು ಕೆಳಗಿದೆ: “ನೀವು ನಮ್ಮನ್ನು ಬೆಂಬಲಿಸುತ್ತಿಲ್ಲ; ನಮ್ಮ ಕಷ್ಟವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದ ಕಾರಣ ನೀವು ನಮ್ಮನ್ನು ವಿರೋಧಿಸುತ್ತಿದ್ದೀರಿ. ನಿಮ್ಮ ಮಕ್ಕಳು ಇದೇ ರೀತಿಯ ಸಮಸ್ಯೆಯನ್ನು ಎದುರಿಸಿದರೆ, ನೀವು ಸಹ ನಮ್ಮ ಬೆಂಬಲಕ್ಕೆ ನಿಲ್ಲುತ್ತೀರಿ. ಎಂದು ಹೇಳಿದ್ದಾರೆ.

ಆದರೆ, ವಿಡಿಯೋ ವೈರಲ್ ಆಗುತ್ತಿದ್ದಂತೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಸ್ಥಳೀಯ ಕುಂಬಳ ಪೊಲೀಸ್ ಅಧಿಕಾರಿಗಳು ಇದರಲ್ಲಿ ಯಾವುದೇ ಧಾರ್ಮಿಕ ಅಂಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ವಿಡಿಯೋವನ್ನು ತಪ್ಪಾಗಿ ಶೇರ್ ಮಾಡುತ್ತಿರುವವರ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪೊಲೀಸರು ದಾಖಲಿಸಿರುವ ಪ್ರಕರಣದ ಎಫ್‌ಐಆರ್ ಪ್ರತಿಯನ್ನು ಇಲ್ಲಿ ಕಾಣಬಹುದು.

ಕೊನೆಗೂ ಈ ವಿಡಿಯೋ ಹರಿದಾಡುತ್ತಿರುವ ಕೇರಳದ ಮುಸ್ಲಿಂ ಯುವತಿಯರು ಹಿಂದೂ ಯುವತಿಯನ್ನು ಬುರ್ಖಾ ಧರಿಸದೆ ಬಸ್‌ ಹತ್ತಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂಬುದರಲ್ಲಿ ಯಾವುದೇ ಸತ್ಯಾಂಶವಿಲ್ಲ.

Share.

Comments are closed.

scroll