ಗುಜರಾತ್‌ನಲ್ಲಿ ಬುಲೆಟ್ ಟ್ರೈನ್‌ಗಳ ನಿಲ್ದಾಣ ಹೇಗಿದೆ ನೋಡಿ ಎಂಬ ಹೇಳಿಕೆಯೊಂದಿಗೆ ಬುಲೆಟ್ ರೈಲುಗಳು ಸಾಲಾಗಿ ನಿಂತಿರುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಗುಜರಾತಿನಲ್ಲಿ ನಿಜವಾಗಿಯೂ ಬುಲೆಟ್ ಟ್ರೈನ್ ಇದೆಯೇ ? ಈ ಫೋಟೊ ನಿಜವಾಗಿಯೂ ಗುಜರಾತಿನದ್ದೇ ? ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಪ್ರತಿಪಾದನೆ: ಗುಜರಾತ್‌ನಲ್ಲಿರುವ ಬುಲೆಟ್ ರೈಲು ನಿಲ್ದಾಣದ ಚಿತ್ರ.
ನಿಜಾಂಶ: ಚೀನಾದ ವುಹಾನ್‌ನಲ್ಲಿ ಬುಲೆಟ್ ರೈಲುಗಳನ್ನು ನಿಲ್ಲಿಸಿರುವುದನ್ನು ಚಿತ್ರವಾಗಿದೆ. ನ್ಯೂ ಚೀನಾ ಟಿವಿ ಪ್ರಕಾರ, ವುಹಾನ್ ಬುಲೆಟ್ ರೈಲು ನಿರ್ವಹಣಾ ಕೇಂದ್ರವು ಮಧ್ಯ ಚೀನಾದಲ್ಲಿ ಈ ರೀತಿಯ ದೊಡ್ಡದಾಗಿದೆ. ಇದು 1.4 ಮಿಲಿಯನ್ ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ. ಇಲ್ಲಿ ಏಕಕಾಲಕ್ಕೆ 100ಕ್ಕೂ ಹೆಚ್ಚು ಬುಲೆಟ್ ರೈಲುಗಳನ್ನು ನಿಲುಗಡೆ ಮಾಡಬಹುದು. ಇದಲ್ಲದೆ, ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಭಾರತದ ಬುಲೆಟ್ ಟ್ರೈನ್ ಯೋಜನೆಯ ಮೊದಲ ಹಂತವು 2026 ರ ವೇಳೆಗೆ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಬುಲೆಟ್ ಟ್ರೈನ್ ಫೋಟೋವನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, “ಕಾರ್ಲ್ ಝಾ” ಎಂಬ ಸಾಮಾಜಿಕ ಮಾಧ್ಯಮದ ಬಳಕೆದಾರರು ಅದೇ ಚಿತ್ರವನ್ನು, 28 ಆಗಸ್ಟ್ 2018 ರಂದು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಟ್ವೀಟ್ ಲಭ್ಯವಾಗಿದೆ. ಈ ಫೋಟೊದಲ್ಲಿರುವ “ಬುಲೆಟ್ ರೈಲುಗಳು, ಚೀನಾದ ವುಹಾನ್, ನಿಲ್ದಾಣದ್ದು ಎಂದು ಸ್ಪಷ್ಟವಾಗಿದೆ.
ಇದರಿಂದ ಕೀವರ್ಡ್‌ಗಳನ್ನು ತೆಗೆದುಕೊಂಡು, ವುಹಾನ್‌ನಲ್ಲಿ ಈ ಸೌಲಭ್ಯದ ಕುರಿತು ಸರ್ಚ್ ಮಾಡಿದಾಗ “ಚೀನಾದ ವುಹಾನ್‌ನಲ್ಲಿರುವ ಬುಲೆಟ್ ರೈಲು ನಿರ್ವಹಣಾ ಕೇಂದ್ರದ ಅದ್ಭುತ ವೈಮಾನಿಕ ನೋಟ” ಎಂಬ ಶೀರ್ಷಿಕೆಯೊಂದಿಗೆ ಯೂಟ್ಯೂಬ್ ವೀಡಿಯೊವನ್ನು ಕಂಡುಕೊಂಡಿದ್ದೇವೆ. ಈ ವೀಡಿಯೊವನ್ನು 20 ಜನವರಿ 2019 ರಂದು ‘ನ್ಯೂ ಚೀನಾ ಟಿವಿ’ YouTube ಚಾನಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ನಿರ್ವಹಣಾ ಕೇಂದ್ರದ ಇತರ ವೀಡಿಯೊಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ನ್ಯೂ ಚೀನಾ ಟಿವಿ ಪ್ರಕಾರ, ವುಹಾನ್ ಬುಲೆಟ್ ರೈಲು ನಿರ್ವಹಣಾ ಕೇಂದ್ರವು ಮಧ್ಯ ಚೀನಾದಲ್ಲಿದ್ದು. ಇದು 1.4 ಮಿಲಿಯನ್ ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ. ಇಲ್ಲಿ ಏಕಕಾಲಕ್ಕೆ 100ಕ್ಕೂ ಹೆಚ್ಚು ಬುಲೆಟ್ ರೈಲುಗಳನ್ನು ನಿಲುಗಡೆ ಮಾಡಬಹುದು. ಈ ನಿರ್ವಹಣಾ ಕೇಂದ್ರದ ಸ್ಟಾಕ್ ಚಿತ್ರಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಮುಂಬೈ ಮತ್ತು ಅಹಮದಾಬಾದ್ ನಡುವಿನ ಭಾರತದ ಮೊದಲ ಬುಲೆಟ್ ರೈಲು ಯೋಜನೆಯ ಸ್ಥಿತಿಯನ್ನು ರೈಲ್ವೇ ಸಚಿವಾಲಯವು 16 ಆಗಸ್ಟ್ 2022 ರಂದು ಹಂಚಿಕೊಂಡಿದೆ. ಬಿಸಿನೆಸ್ ಸ್ಟ್ಯಾಂಡರ್ಡ್ ಪ್ರಕಾರ, ಈ ಯೋಜನೆಯ ಮೊದಲ ಹಂತವು 2026 ರ ವೇಳೆಗೆ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಚೀನಾದ ಬುಲೆಟ್ ರೈಲುಗಳ ನಿರ್ವಹಣಾ ಕೇಂದ್ರದ ದೃಶ್ಯಗಳನ್ನು, ಭಾರತದ ಗುಜರಾತ್‌ನಲ್ಲಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.