Fake News - Kannada
 

ಕ್ಯಾನ್ಸರ್‌ನಿಂದ ಸಾವನಪ್ಪಿದ ಬಾಲಕಿ ಡೇವಿಡ್ ಮಿಲ್ಲರ್ ಅವರ ಅಭಿಮಾನಿ ಹೊರತು ಮಗಳಲ್ಲ

0

ಡೇವಿಡ್ ಮಿಲ್ಲರ್ ಪುಟ್ಟ ಬಾಲಕಿಯೊಂದಿಗೆ ಇರುವ ಪೋಟೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಹಲವು ವರ್ಷಗಳಿಂದ ಮಿಲ್ಲರ್ ಪುತ್ರಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಇದೀಗ ಡೇವಿಡ್ ಮಿಲ್ಲರ್ ಭಾರತದಲ್ಲಿ ಏಕದಿನ ಕ್ರಿಕೆಟ್ ಸರಣಿ  ಆಡುತ್ತಿರುವಾಗಲೇ ದಕ್ಷಿಣ ಆಫ್ರಿಕಾದಲ್ಲಿ ಮಗಳು ಮೃತಪಟ್ಟಿರುವ ಸುದ್ದಿ ಆಫಾತ ತರಿಸಿದೆ ಎಂದು ಹಲವು ಸುದ್ದಿ ಮಾಧ್ಯಮಗಳು ವರದಿಯನ್ನು ಪ್ರಸಾರ ಮಾಡಿವೆ. ಈ ಸುದ್ದಿ ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಪ್ರತಿಪಾದನೆ: ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಡೇವಿಡ್ ಮಿಲ್ಲರ್ ಅವರ ಪುತ್ರಿ ಕ್ಯಾನ್ಸರ್ ನಿಂದ ಸಾವನಪ್ಪಿದ್ದಾಳೆ.

ನಿಜಾಂಶ: ಸುದ್ದಿ ವರದಿಗಳ ಪ್ರಕಾರ, ಡೇವಿಡ್ ಮಿಲ್ಲರ್ ಅವರ  ಅಭಿಮಾನಿಯಾಗಿದ್ದ ಆ್ಯನೆ ಕ್ಯಾನ್ಸರ್ ನಿಂದ ಸಾವನಪ್ಪಿದ ಪುಟ್ಟ ಹುಡುಗಿ. ಡೇವಿಡ್ ಮಿಲ್ಲರ್ ತನ್ನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಅವಳ ಸಾವಿನ ಬಗ್ಗೆ ವೀಡಿಯೊ ಮತ್ತು ಭಾವನೆಗಳನ್ನು ಬರೆದು ಪೋಸ್ಟ್ ಮಾಡಿದ್ದಾರೆ. ಆ‍ಯಾನೆ ಡೇಮಿಡ್ ಮಿಲ್ಲರ್ ಅವರ ಮಗಳಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಮೇಜ್‌ ಸರ್ಚ್ ಮಾಡಿದಾಗ, ಸುದ್ದಿ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ಸುದ್ದಿ ಲಭ್ಯವಾಗಿವೆ. ಮೃತಪಟ್ಟ ಮಗು ಡೇವಿಡ್ ಮಿಲ್ಲರ್ ಪುತ್ರಿಯಲ್ಲ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಹಾಗೂ ಡೇವಿಡ್ ಮಿಲ್ಲರ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋ ಲಭ್ಯವಾಗಿದೆ. ಅದರಲ್ಲಿ ಒಂದು ಮಗುವಿನೊಂದಿಗೆ ಮಿಲ್ಲರ್ ಫೋಟೊ ತೆಗೆಸಿಕೊಂಡಿದ್ದಾರೆ. ಈ ಘಟನೆಯ ಕುರಿತು ಕೆಲವು ಇತರ ಸುದ್ದಿ ವರದಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಓದಬಹುದು.

ಹಾಗೂ ಡೇವಿಡ್ ಮಿಲ್ಲರ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋ ಲಭ್ಯವಾಗಿದೆ. ಅದರಲ್ಲಿ ಒಂದು ಮಗುವಿನೊಂದಿಗೆ ಮಿಲ್ಲರ್ ಫೋಟೊ ತೆಗೆಸಿಕೊಂಡಿದ್ದಾರೆ.

ಕ್ಯಾನ್ಸರ್ ನಿಂದ ಕೊನೆಯುಸಿರೆಳೆದ ಬಾಲಕಿ ತನ್ನ ಮಗಳಲ್ಲ, ಆಕೆ ನನ್ನ ಅಭಿಮಾನಿ ಎಂದು ಕ್ರೀಡಾ ಬರಹಗಾರ ಅಭಿಷೇಕ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ‘ಅವಳು ಅವನ ಮಗಳಲ್ಲ ಹುಡುಗರೇ. ಡೇವಿಡ್ ಮಿಲ್ಲರ್ ತನ್ನ ಮಗಳನ್ನು ಕಳೆದುಕೊಂಡಿದ್ದಾನೆ ಎಂದು ಜನರು ಈ ಸುದ್ದಿಯನ್ನು ಹರಡುತ್ತಿದ್ದಾರೆ. ಅವಳು ಅವನ ಅಭಿಮಾನಿಯಾಗಿದ್ದಳು, ಹಿತೈಷಿಯಾಗಿದ್ದಳು, ಮಿಲ್ಲರ್ ತುಂಬಾ ಪ್ರೀತಿಸುತ್ತಿದ್ದಳು. ಮತ್ತು ಅವಳು ಕ್ಯಾನ್ಸರ್‌ನಿಂದ ತನ್ನ ಯುದ್ಧವನ್ನು ಕಳೆದುಕೊಂಡಳು, ”ಅವರು ತಮ್ಮ ಟ್ವಿಟರ್‌ನಲ್ಲಿ ಬರೆದಿದ್ದಾರೆ. ಕ್ರಿಕ್‌ಟ್ರಾಕರ್ ಎಂಬ ಕ್ರೀಡಾ ಸುದ್ದಿ ವೆಬ್‌ಸೈಟ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ ದಕ್ಷಿಣ ಆಫ್ರಿಕಾದ ಕ್ರಿಕೆಟರ್ ಡೇವಿಡ್ ಮಿಲ್ಲರ್ ಅವರ ಅಭಿಮಾನಿ ಪುಟ್ಟ ಬಾಲಕಿ ಆ್ಯನೆ ಕ್ಯಾನ್ಸರ್‌ನಿಂದ ಸಾವನಪ್ಪಿದ್ದು, ಇದನ್ನು ಡೇವಿಡ್ ಮಿಲ್ಲರ್ ಅವರ ಪುತ್ರಿ ಎಂದು ಹಲವು ಮಾಧ್ಯಮಗಳು ಸುದ್ದಿಯನ್ನು ತಪ್ಪಾಗಿ ವರದಿ ಮಾಡಿವೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

Share.

Comments are closed.

scroll