Fake News - Kannada
 

ಕೇವಲ ’ಪ್ರಧಾನಮಂತ್ರಿ ಸ್ವನಿಧಿ’ ಯೋಜನೆಗೆ ಸಂಬಂಧಿಸಿದ ಮಹಿಳೆಯೊಬ್ಬರ ಹೇಳಿಕೆಗಳನ್ನು ಎಡಿಟ್ ಮಾಡಿ ತಪ್ಪುದಾರಿಗೆಳೆಯುತ್ತಿದ್ದಾರೆ

0

ಪ್ರಧಾನಿ ನರೇಂದ್ರ ಮೋದಿ ಇತ್ತೀಚಿಗೆ ಸರ್ಕಾರದ ಯೋಜನೆಗಳ ಪಲಾನುಭವಿಗಳೊಂದಿಗೆ ಮಾಡಿದ ಟೆಲಿ ಕಾನ್ಪರೆನ್ಸ್‌ ನಲ್ಲಿ ಒಬ್ಬ ಮಹಿಳೆ ತನಗೆ ಪ್ರಧಾನಮಂತ್ರಿ ಯೋಜನೆಗಳಾವುವು ಸಿಗುತ್ತಿಲ್ಲ ಎಂದು ನರೇಂದ್ರ ಮೋದಿಯವರಿಗೆ ಹೇಳಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಹಂಚಿಕೆಯಾಗುತ್ತಿದೆ. ಈ ಮೇಲಿನ ಪ್ರತಿಪಾದನೆಯೊಂದಿಗೆ ವಿಡಿಯೋವನ್ನು ಆಮ್ ಆದ್ಮಿ ಮತ್ತು ಕಾಂಗ್ರೆಸ್ ಪಕ್ಷದ ನಾಯಕರು ತಮ್ಮ ಟ್ವಿಟ್ಟರ್‍ ಅಕೌಂಟ್‌ಗಳಲ್ಲಿ ಷೇರ್‍ ಮಾಡುತ್ತಿದ್ದಾರೆ. ಆ ವಿಡಿಯೋಗಳನ್ನು ಇಲ್ಲಿ, ಇಲ್ಲಿ ನೋಡಬಹುದು. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ ಬನ್ನಿ.

ಪ್ರತಿಪಾದನೆ : ಪ್ರಧಾನಿ ನರೇಂದ್ರ ಮೋದಿ ಇತ್ತೀಚಿಗೆ ನಿರ್ವಹಿಸಿದ ಟೆಲಿ ಕಾನ್ಪರೆನ್ಸ್‌ನಲ್ಲಿ ಮಹಿಳೆಯೊಬ್ಬರು ತನಗೆ ಪ್ರಧಾನಮಂತ್ರಿ ಯೋಜನೆಗಳೇನು ದೊರಕುತ್ತಿಲ್ಲ ಎಂದು ಉತ್ತರಿಸಿರುವ ದೃಶ್ಯಗಳು.

ನಿಜಾಂಶ: ’Aazadi@75’ ಕಾರ್ಯಕ್ರಮದಲ್ಲಿ ನರೆಂದ್ರಮೋದಿ ’ಪ್ರಧಾನ ಮಂತ್ರಿ ಆವಾಸ್ ಯೋಜನೆ ’ ಯೋಜನೆಗಳ ಪಲಾನುಭವಿಗಳೊಂದಿಗೆ ಸಂಭಾಷಣೆ ನಡೆಸುತ್ತಿರುವ ದೃಶ್ಯಗಳನ್ನು ಈ ವಿಡಿಯೋ ತೋರಿಸುತ್ತದೆ. ಉತ್ತರ ಪ್ರದೇಶ ಲಲಿತ್‌ಪುರ ನಗರಕ್ಕೆ ಸೆರಿದ ಬಬಿತಾ, ’ಪ್ರಧಾನಮಂತ್ರಿ ಆವಾಸ್ ಯೋಜನೆ, ಯೋಜನೆ ಮೂಲಕ ನೇರವಾಗಿ ತಮ್ಮ ಖಾತೆಯಲ್ಲಿ ಎರಡುವರೆ ಲಕ್ಷ (2.5lacks) ರೂಪಾಯಿಗಳು ಜಮೆ ಆಗಿರುವ ಹಾಗೆ ಟೆಲಿ ಕಾನ್ಫರೆನ್ಸ್‌ನಲ್ಲಿ ಪ್ರಧಾನಿಗೆ ತಿಳಿಸಿದ್ದಾರೆ. ಕೇವಲ, ’ಪ್ರಧಾನಮಂತ್ರಿ ಸ್ವನಿಧಿ ಯೋಜನೆ’ ಯೋಜನೆಗೆ ಸಂಬಂಧಿಸಿದಂತೆ ಬಬಿತಾ ಹೇಳಿದ ಹೇಳಿಕೆಗಳನ್ನು ಮಾತ್ರವೇ ಎಡಿಟ್ ಮಾಡಿ ವಿಡಿಯೋ ಹಂಚಿಕೊಳ್ಳಲಾಗಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡುತ್ತಿರುವ ಪ್ರತಿಪಾದನೆ ದಾರಿ ತಪ್ಪಿಸುವಂತಿದೆ.

ಪೋಸ್ಟ್‌ನಲ್ಲಿ ಷೇರ್‍ ಮಾಡಿದ ವಿಡಿಯೋ ಬಗ್ಗೆ ಕೀ ವರ್ಡ್‌ಗಳನ್ನು ಬಳಸಿ ಗುಗೂಲ್‌ನಲ್ಲಿ ಹುಡುಕಿದಾಗ, ಇದೇ ದೃಶ್ಯಗಳನ್ನು ಒಳಗೊಂಡ ವಿಡಿಯೋವನ್ನು ’India Today’ ನ್ಯೂಸ್ ಸಂಸ್ಥೆ 05 ಅಕ್ಟೋಬರ್‍ 2021 ರಂದು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಂಡಿದೆ. ಉತ್ತರಪ್ರದೇಶದ ಲಕ್ನೊ ನಗರದಲ್ಲಿ ನಿರ್ವಹಿಸಿದ ’Aazadi@75’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಯೋಜನೆಗಳ ಫಲಾನುಭಾವಿಗಳೊಂದಿಗೆ ಸಂವಾದ ನಡೆಸಿದ್ದಾರೆ ಎಂದು ಈ ವಿಡಿಯೋ ವಿವರಣೆಯಲ್ಲಿ ತಿಳಿಸಲಾಗಿದೆ. ’Aazadi@75’ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಯೋಜನೆಗಳ ಫಲಾನುಭವಿಗಳೊಂದಿಗೆ ಟೆಲಿ ಕಾನ್ಪರೆನ್ಸ್ ಮೂಲಕ ಸಂಭಾಷಣೆ ನಡೆಸಿದ್ದಾರೆ. ಈ ಕಾರ್ಯ ಕ್ರಮದಲ್ಲಿ ಪ್ರದಾನಮಂತ್ರಿ ಆವಾಸ್ ಯೋಜನೆ ಪಥಕದ ಮೂಲಕ ತಮ್ಮ ಖಾತೆಗೆ ನೇರವಾಗಿ ಎರಡುವರೆ ಲಕ್ಷ ರೂಪಾಯಿಗಳು (2.5Lacks) ಜಮೆ ಆಗಿದೆ ಎಂದು ಬಬಿತಾ ಎಂಬ ಮಹಿಳೆ ತಿಳಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಸಂಬಂದಿಸಿದಂತೆ ಸಂಪೂರ್ಣ ವಿಡಿಯೋವನ್ನು ’ India Today’ ಸುದ್ದಿ ಸಂಸ್ಥೆ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಷೇರ್‍ ಮಾಡಿದೆ.

ಆದರೆ, ನರೇಂದ್ರ ಮೋದಿ, “ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ’ ಯೋಜನೆಯ ಮೂಲಕ ಹಣ ತಲುಪುತ್ತಿಯಾ?, ಎಂದು ಬಬಿತಾರನ್ನು ಪ್ರಶ್ನಿಸಿದಾಗ , ಅವರು  ತಲುಪುತ್ತಿಲ್ಲ ಎಂದು ಹೇಳಿದ್ದರೆ. ಇದರಿಂದ , ನರೇಂದ್ರ ಮೋದಿ ಆಕೆಗೆ ’ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ’ ಯೋಜನೆಗೆ ಸೇರುವ ವಿಧಾನ , ಆ ಯೋಜನೆಯ ಮೂಲಕ ಸಿಗುವ ಲಾಭಗಳನ್ನು ವಿವರಿಸಿದರು. ಬಬಿತಾರೊಂದಿಗೆ ಸಂಭಾಷಣೆ ನಡೆಸಿದ ವಿಡಿಯೋವನ್ನು ನರೇಂದ್ರ ಮೋದಿ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಳ್ಳಲಾಗಿದೆ.

ಜೊತೆಗೆ, ’ಪ್ರಧಾನ ಮಂತ್ರಿ ಉಜ್ವಲ ಯೋಜನೆ’ ಯೋಜನೆಯ ಮೂಲಕ ತಮ್ಮ ಕುಟುಂಬಕ್ಕೆ ಅನುಕೂಲ ದೊರಕಿರುವುದಾಗಿ ಬಬಿತಾ ಈ ಟೆಲಿ ಕಾನ್ಪರೆನ್ಸ್‌ನಲ್ಲಿ ಹೇಳಿದ್ದಾರೆ. ಕೇವಲ ’ಪ್ರಧಾನ ಮಂತ್ರಿ ಸ್ವನಿಧಿ’ ಯೋಜನೆಗೆ ಸಂಬಂಧಿಸಿದಂತೆ ಬಬಿತಾರವರ ಹೇಳಿಕೆಗನ್ನು ಎಡಿಟ್ ಮಾಡುತ್ತಾ ಪೋಸ್ಟ್‌ನಲ್ಲಿನ ವಿಡಿಯೋವನ್ನು ರೂಪಿಸಿದ್ದಾರೆ ಎಂದು ಈ ವಿವರಗಳ ಆಧಾರದ ಮೇಲೆ ಖಚಿತವಾಗಿ ಹೇಳಬಹುದು.

ಒಟ್ಟಿನಲ್ಲಿ ಎಡಿಟ್ ಮಾಡಿದ ವಿಡಿಯೋವನ್ನು ಲೈವ್ ಟೆಲಿ ಕಾನ್ಪರೆನ್ಸ್‌ನಲ್ಲಿ ಒಬ್ಬ ಮಹಿಳೆ ತನಗೆ ಸರ್ಕಾರದ ಯೋಜನೆಗಳ್ಯಾವವು ದೊರಕುತ್ತಿಲ್ಲವೆಂದು ನರೆಂದ್ರ ಮೋದಿಗೆ ತಿಳಿಸುತ್ತಿರುವ ದೃಶ್ಯಗಳೆಂದು ಹಂಚಿಕೊಳ್ಳಳಾಗುತ್ತಿದೆ.

Share.

About Author

Comments are closed.

scroll