Fake News - Kannada
 

ಡಿಜಿಟಲ್​ಕಲೆಯ ವಿಡಿಯೊ ಊದು ಪಾವೈ ಸಸ್ಯದ ಹೆಸರಲ್ಲಿ ಹರಿದಾಡಿದ್ದು, ಈ ಔಷಧೀಯ ಸಸ್ಯ ಪರಾಗಸ್ಪರ್ಶ ಮಾಡುವಾಗ ಶಬ್ದ ಮಾಡುತ್ತದೆ ಎಂದು ಸುಳ್ಳು ಹಬ್ಬಿಸಲಾಗಿದೆ

0

ಈ ವಿಡಿಯೊದಲ್ಲಿರುವ ಸಸಿಯು ಪ್ರಕೃತಿಯ ವಿಸ್ಮಯವಾಗಿದ್ದು, ಕಾರ್ಕ್​ಪಾಪಿಂಗ್​​ಗೆ ಹೋಲಿಕೆಯಾಗುವ ಶಬ್ದದೊಂದಿಗೆ ಹೊಗೆಯನ್ನು ಹೊರಗೆ ಸೂಸಿಸುತ್ತಿದೆ. ಇದು ಊದು ಪಾವೈ ಎಂಬ ಔಷಧೀಯ ಸಸಿಯಾಗಿದ್ದು, ದಟ್ಟವಾದ ಮಳೆ ಕಾಡುಗಳಲ್ಲಿ ಬೆಳೆಯುತ್ತದೆ, ಶಬ್ದವನ್ನು ಮಾಡುತ್ತಾ ಪರಾಗವನ್ನು ಹೊರಸೂಸುತ್ತದೆ ಎಂಬ ಪ್ರತಿಪಾದನೆಯೊಂದಿಗೆ ಒಂದು ಪೋಸ್ಟ್​ ವೈರಲ್​ಆಗಿದೆ. ಈ ಪೋಸ್ಟ್​ನಲ್ಲಿನ ಪ್ರತಿಪಾದನೆ ನಿಜವೇ ಎಂಬುದನ್ನು ಪರಿಶೀಲಿಸೋಣ. 

ಪ್ರತಿಪಾದನೆ: ಇದು ಊದು ಪಾವೈ ವಿಡಿಯೋ, ಇದು ಔಷಧೀಯ ಸಸಿಯಾಗಿದ್ದು, ಶಬ್ದದೊಂದಿಗೆ ಪರಾಗವನ್ನು ಹೊರ ಹಾಕುತ್ತದೆ.

ಸತ್ಯಾಂಶ: ಈ ವಿಡಿಯೋವು 3ಡಿ ಕಲಾವಿದ ಲ್ಯೂಕ್​ಪೆನ್ರಿ ಎಂಬವರು ಸೃಷ್ಟಿಸಿದ್ದು, ವಾಸ್ತವವಾಗಿ ಇದು ಡಿಜಿಟಲ್​ಶಬ್ದದ ಕಲೆಯಾಗಿದೆ. Foundation.appನಲ್ಲಿ ಲ್ಯೂಕ್​ಅವರು ಈ ಕಲೆಯನ್ನು ಹರಾಜಿಗೂ ಇರಿಸಿದ್ದರು. ಆದುದರಿಂದ ಪೋಸ್ಟ್​ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ. 

ನಾವು ಸೂಕ್ಷ್ಮವಾಗಿ ನೋಡಿದರೆ ಈ ವಿಡಿಯೋದಲ್ಲಿ ‘LUKE PENRY EXR’ ಎಂದು ವಾಟರ್​ ಮಾರ್ಕ್​ಇರುವುದು ಕಂಡು ಬರುತ್ತದೆ. ಈ ಸಾಕ್ಷಿಯ ಆಧಾರದಲ್ಲಿ ಗೂಗಲ್​ನಲ್ಲಿ ಇದಕ್ಕೆ ಸಂಬಂಧಿಸಿದಂತೆ ಸರ್ಚ್ ಮಾಡಿದಾಗ ಲ್ಯೂಕ್​ಪೆನ್ರಿ ಎಂಬವರ ಟ್ವಿಟ್ಟರ್​ಖಾತೆ ಕಂಡುಬಂದಿದೆ. ಈಗ ಹರಿದಾಡಿರುವ ವಿಡಿಯೋ ರೀತಿಯಲ್ಲೇ ಇರುವ ವಿಡಿಯೋ 2021ರ ಸೆಪ್ಟೆಂಬರ್​17ರಂದು ‘ನ್ಯೂ ಸೌಂಡ್​ಆನ್​’ ಶೀರ್ಷಿಕೆಯೊಂದಿದೆ ಅವರ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಲ್ಯೂಕ್​​ ಹೆನ್ರಿಯವರ ಟ್ವಿಟ್ಟರ್​ಖಾತೆಯ ವಿವರಣೆಯಲ್ಲಿ ಇವರು 3ಡಿ ಕಲಾವಿದ ಎಂದಿದೆ. ಸಾಕಷ್ಟು ಡಿಜಿಟಲ್ ಶಬ್ದಕಲೆಯ ವಿಡಿಯೋಗಳನ್ನು ಇವರ ಟೈಮ್​ಲೈನ್​​ನಲ್ಲಿ ನೋಡಬಹುದು. 

ಡಿಜಿಟಲ್​ಕಲೆಗಳ ನೇರ ಹರಾಜು ವೇದಿಕೆಯೊಂದಾದ Foundation.appನಲ್ಲಿ ಇದನ್ನು ಲ್ಯೂಕ್​ ಹರಾಜಿಗೂ ಇರಿಸಿದ್ದರು. ಕಲಾಕೃತಿಯ ಮಾಹಿತಿ ವಿಭಾಗವು ಅದನ್ನು ಲೂಪಿಂಗ್ ಅನಿಮೇಷನ್ ಎಂದು ಗುರುತಿಸುತ್ತದೆ. ಮತ್ತು ಜಂಗಲ್ ಪೈಪ್ಸ್ ಎಂಬ ಶೀರ್ಷಿಕೆ ಇದೆ. ಇದಲ್ಲದೆ, ಮಾಹಿತಿ ವಿಭಾಗದಲ್ಲಿ ಕಲಾವಿದರು, “ವಿಡಿಯೋವು ಭಾರತದಲ್ಲಿ ಹೆಚ್ಚು ಗೊಂದಲಕ್ಕೆ ಕಾರಣವಾಯಿತು. ಶಬ್ದದೊಂದಿಗೆ ಹೊಗೆಯನ್ನು ಹೊರಗೆ ಸೂಸುವ ಊದು ಪಾವೈ ಎಂಬ ಔಷಧೀಯ ಸಸಿ ಇದಾಗಿದ್ದು, ದಟ್ಟವಾದ ಮಳೆ ಕಾಡುಗಳಲ್ಲಿ ಬೆಳೆಯುತ್ತದೆ. ಶಬ್ದವನ್ನು ಮಾಡುತ್ತಾ ಪರಾಗವನ್ನು ಹೊರ ಬಿಡುತ್ತದೆ ಎಂದು ಹಲವು ಚಾನೆಲ್​ಗಳು ವರದಿ ಮಾಡಿವೆ” ಎಂದಿದ್ದಾರೆ.

ಐಎಫ್​ಎಸ್ (ಭಾರತೀಯ ಅರಣ್ಯ ಸೇವೆ) ಅಧಿಕಾರಿಯು ಅದೇ ವೀಡಿಯೊವನ್ನು ತಮ್ಮ ಟ್ವಿಟರ್​ಖಾತೆಯಲ್ಲಿ ಹಂಚಿಕೊಂಡಿದ್ದಾರೆ, ಹೀಗಾಗಿ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಯಿತು ಎಂದು ಕಲಾವಿದ ತಮ್ಮ ಮಾಹಿತಿಯನ್ನು ಸೇರಿಸಿದ್ದಾರೆ. ಹೆಚ್ಚಿನ ಹುಡುಕಾಟ ನಡೆಸಿದಾಗ ವೈರಲ್​ಪ್ರತಿಪಾದನೆಯೊಂದಿಗೆಯೇ ಐಎಫ್​ಐ ಅಧಿಕಾರಿಯ ಟ್ವೀಟ್​ ಕಂಡು ಬಂದಿದೆ. ಅವರು ಕೂಡ ಇದೇ ಪ್ರತಿಪಾದನೆಯೊಂದಿಗೆ ವಿಡಿಯೋವನ್ನು ಶೇರ್​ಮಾಡಿದ್ದು, “ಶಬ್ದದೊಂದಿಗೆ ಹೊಗೆಯನ್ನು ಹೊರಗೆ ಸೂಸುವ ಊದು ಪಾವೈ ಎಂಬ ಔಷಧೀಯ ಸಸಿ ಇದಾಗಿದ್ದು, ದಟ್ಟವಾದ ಮಳೆ ಕಾಡುಗಳಲ್ಲಿ ಬೆಳೆಯುತ್ತದೆ. ಶಬ್ದವನ್ನು ಮಾಡುತ್ತಾ ಪರಾಗವನ್ನು ಹೊರ ಬಿಡುತ್ತದೆ” ಎಂದಿದ್ದಾರೆ. ಆದರೆ ಈ ಟ್ವೀಟ್ ಅನ್ನು ನಂತರದಲ್ಲಿ ಡಿಲೀಟ್​ಮಾಡಿದ್ದಾರೆ.

ಆದಾಗ್ಯೂ, ವೀಡಿಯೊ ಡಿಜಿಟಲ್ ಕಲೆ ಮತ್ತು ಶಬ್ದಗಳನ್ನು ಉತ್ಪಾದಿಸುವ ನಿಜವಾದ ಸಸ್ಯವಲ್ಲ. ತನ್ನ ಟ್ವಿಟ್ಟರ್ ಟೈಮ್​ಲೈನ್​ನಲ್ಲಿ ಲ್ಯೂಕ್ ಪೆನ್ರಿ ಅವರು ತಮಿಳು ವ್ಯಕ್ತಿಯೊಬ್ಬ ವಿವರಣೆ ನೀಡಿರುವ ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿದ್ದು, ಏಕೆಂದರೆ ಈ ವಿಡಿಯೋ ಅಳಿವಿನ ಅಂಚಿನಲ್ಲಿರುವ ಪುರಾತನ ಗಿಡಮೂಲಿಕೆಗಳನ್ನು ತೋರಿಸುತ್ತದೆ ಎಂಬ ಪ್ರತಿಪಾದನೆಯೊಂದಿಗೆ ವೈರಲ್ ಆಗಿತ್ತು.

ಮುಂದುವರಿದು ಹೇಳುವುದಾದರೆ ಇಲ್ಲಿ ಪ್ರತಿಪಾದಿಸಿರುವಂತೆ ಊದು ಪಾವೈ ಎಂಬ ಔಷಧೀಯ ಸಸಿಯ ಕುರಿತು ನಮಗೆ ಮಾಹಿತಿ ಲಭ್ಯವಾಗಿಲ್ಲ. ಈ ವಿಡಿಯೋದಲ್ಲಿರುವುದು ಡಿಜಿಟಲ್ ಶಬ್ದ ಕಲೆ ಎಂಬುದು ಖಚಿತವಾಗಿದೆ, ಇದು ನಿಜವಾದ ಸಸಿಯಲ್ಲ ಎಂದು ತಿಳಿಯುತ್ತದೆ. 

ಒಟ್ಟಾರೆಯಾಗಿ ಹೇಳುವುದಾದರೆ, “ಇದು ಔಷಧೀಯ ಸಸಿಯಾಗಿದ್ದು ಪರಾಗವನ್ನು ಶಬ್ದದೊಂದಿದೆ ಸೂಸುತ್ತದೆ ಎಂದು ಡಿಜಿಟಲ್​ಕಲೆಯನ್ನು ಹಂಚಿಕೊಳ್ಳಲಾಗಿದೆ”.

Share.

About Author

Comments are closed.

scroll