Fake News - Kannada
 

ನೆಟ್‌ಫ್ಲಿಕ್ಸ್ ನಲ್ಲಿ ಇತ್ತೀಚೆಗೆ ಬಿಡುಗಡೆಯಾದ ವೆಬ್ ಸರಣಿ ‘IC 814: ದಿ ಕಂದಹಾರ್ ಹೈಜಾಕ್’ ನಲ್ಲಿ ಅಪಹರಣಕಾರರಿಗೆ ಭೋಲಾ ಮತ್ತು ಶಂಕರ್ ಎಂದು ಬಳಸಿದ ಹೆಸರುಗಳು ಅವರ ಅಲಿಯಾಸ್‌ಗಳಾಗಿವೆ

0

ಭಯೋತ್ಪಾದನೆಯನ್ನು ವೈಟ್‌ವಾಶ್ ಮಾಡಲು ಹಿಂದೂಗಳನ್ನು ಗುರಿಯಾಗಿಸುವ ಮಾರೊನೆಟ್‌ಫ್ಲಿಕ್ಸ್ ಸೀರೀಸ್  ‘IC814 ದಿ ಕಂದಹಾರ್ ಹೈಜಾಕ್’, ಆದರೆ ಈ ಸೀರೀಸ್ ನಲ್ಲಿ ಹೈಜಾಕರ್‌ಗಳು ಹಿಂದೂಗಳು ಎಂದು ತೋರಿಸಲಾಗಿದೆ. ಅಪಹರಣಕಾರರ ನಿಜವಾದ ಹೆಸರುಗಳು ಇಬ್ರಾಹಿಂ ಅಖ್ತರ್ (ಬಹವಾಲ್‌ಪುರ್), ಶಾಹಿದ್ ಅಖ್ತರ್ ಸಯೀದ್, ಸನ್ನಿ ಅಹ್ಮದ್ ಖಾಜಿ, ಜಹೂರ್ ಮಿಸ್ತ್ರಿ (ಮೂವರೂ ಕರಾಚಿಯಿಂದ) ಮತ್ತು ಶಾಕಿರ್ (ಸುಕ್ಕೂರ್‌ನಿಂದ). ಇವರೆಲ್ಲರೂ ಪಾಕಿಸ್ತಾನದಿಂದ ಬಂದವರು. ಆದರೆ ಸೀರೀಸ್ ನಲ್ಲಿ ತೋರಿಸಿರುವ ಹಿಂದೂ ಹೆಸರುಗಳಾದ; ಭೋಲಾ, ಶಂಕರ್, ಬರ್ಗರ್, ಕಥೆಯನ್ನು ಸಂಪೂರ್ಣವಾಗಿ ತಿರುಚಿದ್ದಾರೆ” ಎನ್ನುವ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅದು ಎಷ್ಟರಮಟ್ಟಿಗೆ ಸತ್ಯ ಎಂಬುದನ್ನು ಕಂಡುಹಿಡಿಯೋಣ. 

ಕ್ಲೇಮ್: ಇತ್ತೀಚಿನ 29 ಆಗಸ್ಟ್ 2024 ರಂದು ಬಿಡುಗಡೆಯಾದ ‘IC 814: ದಿ ಕಂದಹಾರ್ ಹೈಜಾಕ್’, ನೆಟ್‌ಫ್ಲಿಕ್ಸ್ ವೆಬ್ ಸಿರೀಸ್ ನಲ್ಲಿ ಹೈಜಾಕರ್‌ಗಳ ಮುಸ್ಲಿಂ ಗುರುತನ್ನು ಮರೆಮಾಡಲು ವೆಬ್ ಸಿರೀಸ್ ನಲ್ಲಿ ಹೈಜಾಕರ್‌ಗಳಿಗೆ ಹಿಂದೂ ಹೆಸರುಗಳಾದ ಭೋಲಾ, ಶಂಕರ್, ಬರ್ಜಾರ್ ಅನ್ನು ಬಳಸಲಾಗಿದೆ.

ಫ್ಯಾಕ್ಟ್: ಇತ್ತೀಚೆಗೆ ನೆಟ್‌ಫ್ಲಿಕ್ಸ್ ಬಿಡುಗಡೆಯಾದ ವೆಬ್ ಸೀರೀಸ್  ‘IC 814: ದಿ ಕಂದಹಾರ್ ಹೈಜಾಕ್’ ನಲ್ಲಿರುವ ಹೈಜಾಕರ್‌ಗಳ ಹೆಸರುಗಳು  ಅಪಹರಣದ ಸಮಯದಲ್ಲಿ ಬಳಸಿರುವ ಅಲಿಯಾಸ್‌ಗಳಾಗಿವೆ. 06 ಜನವರಿ 2000 ರಂದು, ಫ್ಲೈಟ್ IC-814 ರ ಅಪಹರಣದ ಕುರಿತು ಆಗಿನ ಕೇಂದ್ರ ಗೃಹ ಸಚಿವರ ಹೇಳಿಕೆ, ಇತರ ವರದಿಗಳ ಪ್ರಕಾರ, ಫ್ಲೈಟ್ IC-814 ರ ಅಪಹರಣದಲ್ಲಿ ಭಾಗಿಯಾಗಿರುವ ಐವರು ಭಯೋತ್ಪಾದಕರ ಹೆಸರುಗಳು ಇಬ್ರಾಹಿಂ ಅಥರ್, ಶಾಹಿದ್ ಅಖ್ತರ್ ಸೈಯದ್, ಸುನ್ನಿ ಅಹ್ಮದ್ ಖಾಜಿ, ಮಿಸ್ತ್ರಿ ಜಹೂರ್ ಇಬ್ರಾಹಿಂ ಮತ್ತು ಶಾಕಿರ್. ಆದರೆ, ಅಪಹರಣಕಾರರು ಅಪಹರಣದ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಮಾತನಾಡಲು ಚೀಫ್, ಡಾಕ್ಟರ್, ಬರ್ಗರ್, ಭೋಲಾ ಮತ್ತು ಶಂಕರ್ ಎಂಬ ಹೆಸರುಗಳನ್ನು ಬಳಸಿದ್ದರು ಎಂದು ತಿಳಿದು ಬಂದಿದೆ. ಹಾಗಾಗಿ ಪೋಸ್ಟ್ ನಲ್ಲಿ ಹೇಳಿರುವುದು ತಪ್ಪಾಗಿದೆ.

24 ಡಿಸೆಂಬರ್ 1999 ರಂದು, ಐವರು ಭಯೋತ್ಪಾದಕರು ಇಂಡಿಯನ್ ಏರ್‌ಲೈನ್ಸ್ ವಿಮಾನ IC-814 ಅನ್ನು ನೇಪಾಳದ ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಪಹರಿಸಿದ್ದರು. ಅಪಹರಣಕಾರರು ವಿಮಾನವನ್ನು ಅಮೃತಸರ, ಲಾಹೋರ್, ದುಬೈ ಮೂಲಕ ತಾಲಿಬಾನ್ ನಿಯಂತ್ರಿತ ಅಫ್ಘಾನಿಸ್ತಾನದ ಕಂದಹಾರ್‌ಗೆ ಕೊಂಡೊಯ್ದರು. ಮೋಸ್ಟ್ ವಾಂಟೆಡ್ ಭಯೋತ್ಪಾದಕನಾಗಿರುವ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್‌ನನ್ನು ಬಿಡುಗಡೆ ಮಾಡುವಂತೆ ಅಪಹರಣಕಾರರು ಭಾರತ ಸರ್ಕಾರವನ್ನು ಒತ್ತಾಯಿಸಿದ್ದಾರೆ ಮತ್ತು ಅವರ 36 ಸಹಚರರೊಂದಿಗೆ 200 ಮಿಲಿಯನ್ ಡಾಲರ್ (ರೂ. 1400 ಕೋಟಿ)  ನೀಡಬೇಕೆಂದು ಡಿಮ್ಯಾಂಡ್ ಮಾಡಿದ್ದರು.  ಅವರ ಬೇಡಿಕೆಗಳನ್ನು ಒಪ್ಪಿಕೊಂಡ ಭಾರತ ಸರ್ಕಾರವು ಮಸೂದ್ ಅಜರ್, ಮುಷ್ತಾಕ್ ಅಹ್ಮದ್ ಜರ್ಗರ್, ಅಹ್ಮದ್ ಉಮರ್ ಸಯೀದ್ ಶೇಖ್ ಮತ್ತು ಇತರ ಭಯೋತ್ಪಾದಕರನ್ನು ಬಿಡುಗಡೆ ಮಾಡಿತು

ಈ ವೈರಲ್ ಕ್ಲೈಮ್‌ನ ಹೆಚ್ಚಿನ ಮಾಹಿತಿಗಾಗಿ ಸೂಕ್ತ ಕೀವರ್ಡ್‌ಗಳನ್ನು ಬಳಸಿಕೊಂಡು ಇಂಟರ್ನೆಟ್ ನಲ್ಲಿ  ಹುಡುಕಾಡಿದಾಗ,  06 ಜನವರಿ 2000 ರಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವೆಬ್‌ಸೈಟ್‌ನಲ್ಲಿ IC-814 ಅನ್ನು ಹೈಜಾಕ್ ಮಾಡುವುದರ ಕುರಿತು ಆಗಿನ ಕೇಂದ್ರ ಗೃಹ ಸಚಿವರ ಹೇಳಿಕೆಯ ಕುರಿತು ಪತ್ರಿಕಾ ಪ್ರಕಟಣೆಯನ್ನು ನೀಡಿತು. ಈ ಪ್ರಕಟಣೆಯು IC-814 ಅಪಹರಣದ ವಿವರಗಳನ್ನು ನೀಡುತ್ತದೆ. ಈ ಪತ್ರಿಕಾ ಪ್ರಕಟಣೆಯ ಪ್ರಕಾರ, ಮುಂಬೈ ಪೊಲೀಸರು ಕೇಂದ್ರ ಗುಪ್ತಚರ ಸಂಸ್ಥೆಗಳ ಸಹಾಯದಿಂದ ಮುಂಬೈನಲ್ಲಿ ಹರ್ಕತ್-ಉಲ್-ಅನ್ಸಾರ್ (HuA) ಕಾರ್ಯಕರ್ತರನ್ನು ಬಂಧಿಸಿದ್ದಾರೆ, ಅವರನ್ನು ಮೊಹಮ್ಮದ್ ರೆಹಾನ್, ಮೊಹಮ್ಮದ್ ಇಕ್ಬಾಲ್, ಯಾಸುಫ್ ನೇಪಾಲಿ, ಅಬ್ದುಲ್ ಲತೀಫ್ ಮತ್ತು ಈ ನಾಲ್ವರು ಹರ್ಕತ್-ಉಲ್-ಅನ್ಸಾರ್ (HuA) ಕಾರ್ಯಕರ್ತರು ಅಪಹರಣಕಾರರ ಬೆಂಬಲಕ್ಕಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.  

ಹಾಗೆಯೇ ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಬಹಿರಂಗ ಪಡಿಸಿದ ಪ್ರಕಾರ, ಈ ನಾಲ್ವರು ಹರ್ಕತ್-ಉಲ್-ಅನ್ಸಾರ್ (HuA) ಕಾರ್ಯಕರ್ತರು ಐಸಿ-814 ಫ್ಲೈಟ್ ಹೈಜಾಕ್‌ನಲ್ಲಿ ಸಂಬಂದಿಸಿದ ಐವರು ಉಗ್ರಗಾಮಿಗಳ ಹೆಸರನ್ನು  ಇಬ್ರಾಹಿಂ ಅಥರ್, ಶಾಹಿದ್ ಅಖ್ತರ್ ಸೈಯದ್, ಸುನ್ನಿ ಅಹ್ಮದ್ ಖಾಜಿ, ಮಿಸ್ತ್ರಿ ಜಹೂರ್ ಇಬ್ರಾಹಿಂ ಮತ್ತು ಶಾಕಿರ್ ಅಕಾ ರಾಜೇಶ್ ಗೋಪಾಲ್ ವರ್ಮಾ ಎಂದು ಹೆಸರಿಸಿದ್ದಾರೆ.

ಅಲ್ಲದೆ, ಅಪಹರಣದ ಸಂದರ್ಭದಲ್ಲಿ ಇಬ್ರಾಹಿಂ ಅಥರ್ ನನ್ನ ಚೀಫ್ (chief), ಶಾಹಿದ್ ಅಖ್ತರ್ ಸೈಯದ್ ಅವರನ್ನು ಡಾಕ್ಟರ್ (Doctor), ಸುನ್ನಿ ಅಹ್ಮದ್ ಖಾಜಿ ಅವರನ್ನು ಬರ್ಗರ್ (Burger, ಮಿಸ್ತ್ರಿ ಜಹೂರ್ ಇಬ್ರಾಹಿಂ ಅವರನ್ನು ಭೋಲಾ (Bhola) ಮತ್ತು ಶಾಕಿರ್ ಅಕಾ ರಾಜೇಶ್ ಗೋಪಾಲ್ ವರ್ಮಾ ಶಂಕರ್ (Shankar) ಎಂದು ಅಪಹರಣಕಾರರು ಮಾತನಾಡಿಕೊಂಡಿದ್ದಾರೆ. 

ಈ ‘IC 814: ದಿ ಕಂದಹಾರ್ ಹೈಜಾಕ್’ ಸರಣಿಯು ಹೈಜಾಕ್ ಸಮಯದಲ್ಲಿ ಫ್ಲೈಟ್ ಕ್ಯಾಪ್ಟನ್ ಆಗಿದ್ದ ದೇವಿ ಸರನ್ ಅವರ “Flight into fear : the captain’s story” ಪುಸ್ತಕವನ್ನು ಆಧರಿಸಿದೆ ಎಂದು ತಿಳಿದಿದೆ. ನಾವು ಈ ಪುಸ್ತಕವನ್ನು ಪರಿಶೀಲಿಸಿದಾಗ, ಅಪಹರಣಕಾರರು ಒಬ್ಬರಿಗೊಬ್ಬರು ಮಾತನಾಡುವಾಗ ಚೀಫ್, ಡಾಕ್ಟರ್, ಬರ್ಗರ್, ಭೋಲಾ ಮತ್ತು ಶಂಕರ್ ಎಂಬ ಹೆಸರುಗಳನ್ನು ಬಳಸಿದ್ದಾರೆ ಎಂದು ಹೇಳಲಾಗಿದೆ, ಆದರೆ ಅವರ ನಿಜವಾದ ಹೆಸರುಗಳು ಇಬ್ರಾಹಿಂ ಅಥರ್, ಶಾಹಿದ್ ಅಖ್ತರ್ ಸೈಯದ್, ಸುನ್ನಿ ಅಹ್ಮದ್ ಖಾಜಿ, ಮಿಸ್ತ್ರಿ ಜಹೂರ್ ಇಬ್ರಾಹಿಂ ಮತ್ತು ಶಾಕಿರ್.

IC 814 ಅಪಹರಣದ ಸಮಯದಲ್ಲಿ ಫ್ಲೈಟ್ ಚೀಫ್ ಇಂಜಿನಿಯರ್ ಆಗಿದ್ದ ಅನಿಲ್ ಕೆ ಜಗ್ಗಿಯಾ ಅವರು 2021 ರಲ್ಲಿ “IC 814 ಹೈಜಾಕ್ಡ್: ದಿ ಇನ್ಸೈಡ್ ಸ್ಟೋರಿ” ಎಂಬ ಪುಸ್ತಕವನ್ನು ಬರೆದಿದ್ದು, ಸಂಪೂರ್ಣ ಹೈಜಾಕ್ ಸಿರೀಸ್ನಲ್ಲಿ ನಡೆದ ತಮ್ಮ ಅನುಭವವನ್ನು ವಿವರಿಸಿದ್ದಾರೆ. ಇದರಲ್ಲಿಯೂ ಅಪಹರಣಕಾರರು ಒಬ್ಬರಿಗೊಬ್ಬರು ಮಾತನಾಡುವಾಗ ಚೀಫ್, ಡಾಕ್ಟರ್, ಬರ್ಗರ್, ಭೋಲಾ ಮತ್ತು ಶಂಕರ್ ಹೆಸರುಗಳನ್ನು ಬಳಸಿದ್ದಾರೆ ಎಂದು ನಮಗೆ ತಿಳಿಸಿದ್ದಾರೆ. 

IC 814 ರಲ್ಲಿ ಪ್ರಯಾಣಿಸಿದ ಹಲವಾರು ಪ್ರಯಾಣಿಕರು, ಅಪಹರಣಕಾರರು ಒಬ್ಬರಿಗೊಬ್ಬರು (ಇಲ್ಲಿ, ಇಲ್ಲಿ) ಚೀಫ್, ಡಾಕ್ಟರ್, ಬರ್ಗರ್, ಭೋಲಾ ಮತ್ತು ಶಂಕರ್ ಎಂಬ ಹೆಸರನ್ನು ಬಳಸಿದ್ದಾರೆ ಎಂದು ಹೇಳಿದ್ದಾರೆ.

ಫ್ಲೈಟ್ ಐಸಿ 814 ರ ಅಪಹರಣದ ಕುರಿತು “173 ಅವರ್ಸ್ ಇನ್ ಕ್ಯಾಪ್ಟಿವಿಟಿ: ದಿ ಹೈಜಾಕಿಂಗ್ ಆಫ್ ಐಸಿ 814” ಪುಸ್ತಕವನ್ನು ಬರೆದ ಲೇಖಕ, ಗೀತರಚನೆಕಾರ ಮತ್ತು ಪತ್ರಕರ್ತ ನೀಲೇಶ್ ಮಿಶ್ರಾ, ಹೈಜಾಕರ್‌ಗಳು ಚೀಫ್, ಡಾಕ್ಟರ್, ಬರ್ಗರ್, ಭೋಲಾ ಮತ್ತು ಶಂಕರ್ ಹೆಸರನ್ನು ಅಪಹರಣದ ಸಮಯದಲ್ಲಿ ಪರಸ್ಪರ ಮಾತನಾಡಲು ಬಳಸಿದ್ದಾರೆ ಎಂದು ಹೇಳಿದ್ದಾರೆ. ಇದರಿಂದ ನಾವು ಈ ವೆಬ್ ಸಿರೀಸ್ನಲ್ಲಿ ಅಪಹರಣಕಾರರು ಬಳಸುವ ಕೋಡ್ ಹೆಸರುಗಳನ್ನು ಬಳಸಿ ಚಿತ್ರೀಕರಿಸಲಾಗಿದೆ ಎಂದು ಹೇಳಬಹುದು. 

ಹಲವು ವರದಿಗಳ ಪ್ರಕಾರ, ಅನುಭವ್ ಸಿನ್ಹಾ ನಿರ್ದೇಶನದ ನೆಟ್‌ಫ್ಲಿಕ್ಸ್ ವೆಬ್ ಸರಣಿ ‘IC 814: ದಿ ಕಂದಹಾರ್ ಹೈಜಾಕ್’ ವಿವಾದಾತ್ಮಕ ವಿಷಯಗಳ ಬಗ್ಗೆ ಸ್ಪಷ್ಟೀಕರಣವನ್ನು ಕೋರಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ (I&B ಸಚಿವಾಲಯ) ನೆಟ್‌ಫ್ಲಿಕ್ಸ್ ಇಂಡಿಯಾ ವಿಷಯದ ಮುಖ್ಯಸ್ಥರಿಗೆ 03 ಸೆಪ್ಟೆಂಬರ್ 2024 ರಂದು (ಇಲ್ಲಿ ಮತ್ತು ಇಲ್ಲಿ) ವಿವಾದಕ್ಕೆ ಕಾರಣವಾಗುವ ಸಮಸ್ಯೆಗಳನ್ನು ವಿವರಿಸಲು ಸೂಚನೆಯನ್ನು ನೀಡಿದೆ ಎಂದು ಹೇಳಲಾಗುತ್ತದೆ.

ಅಂತಿಮವಾಗಿ, ಇತ್ತೀಚೆಗೆ ಬಿಡುಗಡೆಯಾದ ನೆಟ್‌ಫ್ಲಿಕ್ಸ್ ವೆಬ್ ಸಿರೀಸ್ ‘IC 814: ದಿ ಕಂದಹಾರ್ ಹೈಜಾಕ್’ ನಲ್ಲಿ ಅಪಹರಣಕಾರರಿಗೆ ಭೋಲಾ ಮತ್ತು ಶಂಕರ್ ಬಳಸಿದ ಹೆಸರುಗಳು ಅಪಹರಣಕಾರರು ಅಪಹರಣದ ಸಮಯದಲ್ಲಿ ಬಳಸಿದ ಅಲಿಯಾಸ್‌ಗಳಾಗಿವೆ.

 

Share.

Comments are closed.

scroll