Fake News - Kannada
 

ಬಾಲಾಕೋಟ್ ದಾಳಿಯಲ್ಲಿ 300 ಜನರ ಸಾವನ್ನು ಪಾಕಿಸ್ತಾನದ ರಾಜತಾಂತ್ರಿಕ ಅಧಿಕಾರಿ ಜಾಫರ್ ಹಿಲಾಲಿ ಒಪ್ಪಿಕೊಂಡಿಲ್ಲ

0

ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಫೆಬ್ರವರಿ 26, 2019 ರಂದು ಭಾರತ ನಡೆಸಿದ್ದ ವೈಮಾನಿಕ ದಾಳಿಯಲ್ಲಿ 300 ಜನ ಪಾಕಿಸ್ತಾನಿಗಳು ಸಾವನ್ನಪ್ಪಿದ್ದರು ಎಂಬುದನ್ನು ಪಾಕಿಸ್ತಾನ ಒಪ್ಪಿಕೊಂಡಿದೆ ಎಂದು ಹತ್ತಾರು ಭಾರತೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿದ್ದವು. ಪಾಕಿಸ್ತಾನದ ಮಾಜಿ ರಾಜತಾಂತ್ರಿಕ ಜಾಫರ್ ಹಿಲಾಲಿ ಇದನ್ನು ಖಚಿತಪಡಿಸಿದ್ದಾರೆ ಎಂದು ಹೇಳಲಾಗಿತ್ತು. ಸರ್ಕಾರಿ ಮೂಲಗಳ ಆಧಾರದಲ್ಲಿ ಈ ವರದಿಯನ್ನು ಮಾಡಲಾಗಿದೆ ಎಂದು ಹಲವು ಸುದ್ದಿ ಮಾಧ್ಯಮಗಳು ಹೇಳಿಕೊಂಡಿದ್ದವು. ಫೇಸ್‌ಬುಕ್‌ನಲ್ಲಿಯೂ ಈ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಈ ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿ ಇಲ್ಲಿದೆ.

ಪ್ರತಿಪಾದನೆ: ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಫೆಬ್ರವರಿ 26, 2019 ರಂದು ಭಾರತ ನಡೆಸಿದ್ದ ವೈಮಾನಿಕ ದಾಳಿಯಲ್ಲಿ 300 ಜನ ಪಾಕಿಸ್ತಾನಿಗಳು ಸಾವನ್ನಪ್ಪಿದ್ದರು ಎಂಬುದನ್ನು ಪಾಕಿಸ್ತಾನದ ರಾಜತಾಂತ್ರಿಕ ಅಧಿಕಾರಿ ಒಪ್ಪಿಕೊಂಡಿದ್ದಾರ

ೆ.ಸತ್ಯಾಂಶ: ಭಾರತದ ವೈಮಾನಿಕ ದಾಳಿಯು ಬಾಲಕೋಟ್‌ನಲ್ಲಿ 300 ಜನರನ್ನು ಕೊಂದಿದೆ ಎಂದು ಪಾಕಿಸ್ತಾನದ ಮಾಜಿ ರಾಜತಾಂತ್ರಿಕ ಜಾಫರ್ ಹಿಲಾಲಿ ಒಪ್ಪಿಕೊಂಡಿಲ್ಲ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೆಯಾದ ಈ ವೀಡಿಯೋವನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಮೇಲಿನ ಪ್ರತಿಪಾದನೆ ತಪ್ಪಾಗಿದೆ.

ಇದೇ ಮಾಹಿತಿಯನ್ನು ಪ್ರತಿಪಾದಿಸುವ ಹತ್ತಾರು ಲೇಖನಗಳನ್ನು ಭಾರತೀಯ ಮಾಧ್ಯಮಗಳು ಪ್ರಸಾರ ಮಾಡಿವೆ. ಈ ಸುದ್ದಿಯನ್ನು ಎಎನ್‌ಐ, ರಿಪಬ್ಲಿಕ್ ಟಿವಿ, ದಿ ಟೈಮ್ಸ್ ಆಫ್ ಇಂಡಿಯಾ, ಮನಿಕಂಟ್ರೋಲ್, ಡಬ್ಲ್ಯುಐಒಎನ್, ಹಿಂದೂಸ್ತಾನ್ ಟೈಮ್ಸ್, ಎನ್ಇ ನೌ, ಒಡಿಶಾ ಟಿವಿ, ಜಾಗ್ರಣ್, ಸ್ವರಾಜ್ಯ, ಲೋಕ್‌ಮತ್, ಒನ್‌ಇಂಡಿಯಾ, ಡೆಕ್ಕನ್ ಹೆರಾಲ್ಡ್, ಬ್ಯುಸಿನೆಸ್ ಟುಡೆ, ಲೈವ್‌ಮಿಂಟ್, ಡಿಎನ್‌ಎ, ದಿ ಕ್ವಿಂಟ್, ನ್ಯೂಸ್ 18 ಇಂಡಿಯಾ, ಎಚ್‌ಡಬ್ಲ್ಯೂ ನ್ಯೂಸ್, ಇಂಡಿಯಾ ಟುಡೆ, ಸಿಎನ್‌ಬಿಸಿ ಟಿವಿ 18, ಎಬಿಪಿ ನ್ಯೂಸ್, ಎನ್‌ಡಿಟಿವಿ, ಇಂಡಿಯಾ ಟಿವಿ ಸೇರಿದಂತೆ ಕನ್ನಡದ ವಿಜಯವಾಣಿ ಮತ್ತು ಪ್ರಜಾವಾಣಿ, ಸುವರ್ಣ ನ್ಯೂಸ್, ಟಿವಿ-9 ಸೇರಿದಂತೆ ಹಲವು ಮಾಧ್ಯಮಗಳು ವರದಿ ಮಾಡಿದೆ. ಈ ವರದಿಗಳಲ್ಲಿ ಹಲವು ಮಧ್ಯಮಗಳು ಎಎನ್‌ಐ ಸುದ್ದಿಯನ್ನು ಉಲ್ಲೇಖಿಸಿ ವರದಿ ಮಾಡಿವೆ.

ಅಲ್ಲದೆ ಇಂಡಿಯಾ ಟುಡೆ (ಆರ್ಕೈವ್), ರಿಪಬ್ಲಿಕ್ ಟಿವಿ (ಆರ್ಕೈವ್), ಇನ್ ಖಬರ್ (ಆರ್ಕೈವ್) ಚಾನೆಲ್‌ಗಳು ತಮ್ಮ ಯೂಟ್ಯೂಬ್‌ನಲ್ಲಿಯೂ ಅದೇ ವರದಿಯನ್ನು ಜನವರಿ 09, 2021 ರಂದು ವರದಿ ಮಾಡಿದ್ದಾರೆ.

ಜನವರಿ 10, 2021ರಂದು ಲೈವ್ ಮಿಂಟ್ ಬಾಲಾಕೋಟ್ ವೈಮಾನಿಕ ದಾಳಿಯಲ್ಲಿ 300 ಜನ ಪಾಕಿಸ್ತಾನಿಗಳು ಸಾವನ್ನಪ್ಪಿದ್ದರು ಎಂಬುದನ್ನು ಪಾಕಿಸ್ತಾನದ ರಾಜತಾಂತ್ರಿಕ ಅಧಿಕಾರಿ ಒಪ್ಪಿಕೊಂಡಿದ್ದಾರೆ ಎಂಬ ವರದಿಯನ್ನು ತಮ್ಮ ವೆಬ್‌ಸೈಟ್‌ನಿಂದ ತೆಗೆದುಹಾಕಿದೆ. ANI ಸಹ ವರದಿ ಮಾಡಿ ನಂತರ ಅದನ್ನು ತೆಗೆದುಹಾಕಿವೆ. ಅದರ ಆರ್ಕೈವ್ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಪಾಕಿಸ್ತಾನದ ಮಾಜಿ ರಾಜತಾಂತ್ರಿಕರು ಬಾಲಕೋಟ್ ವೈಮಾನಿಕ ದಾಳಿಯಲ್ಲಿ ಅಪಘಾತಕ್ಕೀಡಾದ ಬಗ್ಗೆ ಒಪ್ಪಿಕೊಂಡ ಬಗ್ಗೆ ಸತ್ಯವನ್ನು ಹುಡುಕಿದಾಗ, ರಿಪಬ್ಲಿಕ್ ಟಿವಿ ಪ್ರಕಟಿಸಿದ ಲೇಖನವನ್ನು ‘10 ಜನವರಿ 2021 ’ನಲ್ಲಿ ನಾವು ಕಂಡುಕೊಂಡಿದ್ದೇವೆ. ರಿಪಬ್ಲಿಕ್ ಟಿವಿ ಇದನ್ನು ಜಾಫರ್ ಹಿಲಾಲಿಯ ಸಂದರ್ಶನ ವಿಡಿಯೋ ಎಂದು ಹೇಳಿಕೊಳ್ಳುವ ವೀಡಿಯೊವನ್ನು ಹಂಚಿಕೊಂಡಿದೆ. ಇದೇ ವಿಡಿಯೋವನ್ನು ‘ಇಂಡಿಯಾ ಟುಡೆ’ ಚಾನೆಲ್ ಪ್ರಸಾರ ಮಾಡಿದೆ.

ಜಾಫರ್ ಹಿಲಾಲಿ ಸರಣಿ ಟ್ವೀಟ್ ಮಾಡುವ ಮೂಲಕ ಭಾರತೀಯ ಮಾಧ್ಯಮಗಳು ಪ್ರಸಾರ ಮಾಡಿದ ತಮ್ಮ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಹಿಲಾಲಿಯವರ ಟ್ವೀಟ್ ಅನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ತಮ್ಮ ಟ್ವೀಟ್‌ಗಳಲ್ಲಿ ಹಮ್ ತಕ್ ನೊಂದಿಗೆ ಸಂದರ್ಶನದ ತಮ್ಮ ಎಡಿಟ್ ಮಾಡಿದ ವಿಡಿಯೋವನ್ನು ಪಬ್ಲಿಷ್ ಮಾಡಿದ ಕಾರಣಕ್ಕೆ ಟೈಮ್ಸ್ ಆಫ್ ಇಂಡಿಯಾ ವೆಬ್‌ಸೈಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ ಸಂದರ್ಶನದ ನೈಜ ವಿಡಿಯೋವನ್ನು ಸಹ ಟ್ವೀಟ್ ಮಾಡಿದ್ದಾರೆ. ಆ ವಿಡಿಯೋವನ್ನು ನೋಡುವುದರಿಂದ ಅವರ ಹಮ್ ತಕ್‌ನೊಂದಿಗಿನ ಸಂದರ್ಶನ 2020ರ ಡಿಸೆಂಬರ್ 23 ರಂದು ನಡೆದಿದೆ ಎಂಬುದು ತಿಳಿದುಬರುತ್ತದೆ.

ಹೆಚ್ಚಿನ ಮೂಲಗಳಿಗಾಗಿ ಹುಡುಕಾಡಿದಾಗ ಅವರ ಸಂದರ್ಶನದ ಪೂರ್ಣ ವಿಡಿಯೋ ಹಮ್ ನ್ಯೂಸ್ ಯೂಟ್ಯೂಬ್ ಚಾನೆಲ್‌ನಲ್ಲಿ ದೊರಕಿದೆ. ಅದರ 5.17ನೇ ನಿಮಿಷದಲ್ಲಿ ಭಾರತೀಯ ಮಾಧ್ಯಮಗಳ ಚಿತ್ರಗಳನ್ನು ಗಮನಿಸಬಹುದು. ಒರಿಜಿನಲ್ ವಿಡಿಯೋದಲ್ಲಿ “ಅವರು  ಕಮ್ಮಿಯೆಂದರೂ ನಮ್ಮ 300 ಜನರನ್ನು ಕೊಲ್ಲಲು ಯೋಜಿಸಿದ್ದರು. ಆದರೆ ಸಾಧ್ಯವಾಗಲಿಲ್ಲ.” ಎಂದು ಹೇಳಿದ್ದಾರೆ. ಎಡಿಟ್ ಮಾಡಿದ ವಿಡಿಯೋದಲ್ಲಿ ಕೊಲ್ಲಲು ಯೋಜಿಸಿದರೂ ವಾಯ್ಸ್ ತೆಗೆದು ಕೊಂದರು ಎಂದು ಸೇರಿಸಲಾಗಿದೆ. ಒರಿಜಿನಲ್ ವಿಡಿಯೋ 4.40ನಿಮಿಷದಲ್ಲಿ 300 ಮಕ್ಕಳು ಅಧ್ಯಯನ ಮಾಡುತ್ತಿರುವ ಮದರಸಾದಲ್ಲಿ ದಾಳಿ ಮಾಡಿ ಕೊಲ್ಲುವುದು ಭಾರತೀಯ ಸೇನೆಯ ಉದ್ದೇಶವಾಗಿತ್ತು. ಆದರೆ ಆ ಮಕ್ಕಳು ಅಲ್ಲಿರಲಿಲ್ಲ’ ಎಂದು ಜಫರ್ ಹಿಲಾಲಿ ಹೇಳಿದ್ದಾರೆ. ಅಲ್ಲದೆ ಭಾರತೀಯ ಮಾಧ್ಯಮಗಳು ಜಫರ್ ಹಿಲಾಲಿಯವರ ಸಂದರ್ಶನದ ವಿಡಿಯೋವನ್ನು ವಿರುದ್ಧವಾಗಿ ಪ್ರಸಾರ ಮಾಡಿದ್ದಾರೆ.

ಒಟ್ಟಿನಲ್ಲಿ ಬಾಲಾಕೋಟ್ ದಾಳಿಯಲ್ಲಿ 300 ಜನರ ಸಾವನ್ನು  ಪಾಕಿಸ್ತಾನದ ರಾಜತಾಂತ್ರಿಕ ಅಧಿಕಾರಿ ಜಾಫರ್ ಹಿಲಾಲಿ ಒಪ್ಪಿಕೊಂಡಿಲ್ಲ.

Share.

About Author

Comments are closed.

scroll