Fake News - Kannada
 

ಇದು ವಿರಾಟ್-ಅನುಷ್ಕಾ ಅವರ ನವಜಾತ ಶಿಶುವಿನ ಚಿತ್ರವಲ್ಲ

0

ಕ್ರಿಕೆಟಿಗ ವಿರಾಟ್ ಕೊಹ್ಲಿ ಜನವರಿ 11, 2020 ರಂದು ತಮಗೆ ಹೆಣ್ಣು ಮಗು ಜನಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ಈ ಹಿನ್ನಲೆಯಲ್ಲಿ ವಿರಾಟ್-ಅನುಷ್ಕಾ ಅವರ ನವಜಾತ ಶಿಶುವಿನ ಚಿತ್ರ ಎಂಬ ಪ್ರತಿಪಾದನೆಯೊಂದಿಗೆ ಕೆಲವು ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಪೋಸ್ಟ್‌‌‌ ಸತ್ಯಾಂಶವನ್ನು ಪರಿಶೀಲಿಸೋಣ.

ಈ ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಪ್ರತಿಪಾದನೆ: ವಿರಾಟ್-ಅನುಷ್ಕಾ ಅವರ ನವಜಾತ ಮಗುವಿನ ಚಿತ್ರಗಳು.

ಸತ್ಯ: ಈ ಚಿತ್ರಗಳು ವಿರಾಟ್-ಅನುಷ್ಕಾ, ನವಜಾತ ಶಿಶುವಿನದ್ದಲ್ಲ. ಇಂದಿನವರೆಗೆ, ವಿರಾಟ್ ಕೊಹ್ಲಿ ಅಥವಾ ಅನುಷ್ಕಾ ಶರ್ಮಾ ತಮ್ಮ ಮಗಳ ಯಾವುದೇ ಚಿತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಹಂಚಿಕೊಂಡಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಚಿತ್ರ 1:

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಡಿದಾಗ ಆ ಚಿತ್ರವು, ಆಗಸ್ಟ್ 2017 ರಲ್ಲಿ ವಿಶ್ವ ಸ್ತನ್ಯಪಾನ ವಾರದಂದು ಎನ್‌ಡಿಟಿವಿ ಪ್ರಕಟಿಸಿದ ಲೇಖನದಲ್ಲಿ ಕಂಡುಬಂದಿದೆ. ಈ ಫೋಟೋವನ್ನು ‘ಗೆಟ್ಟಿ ಇಮೇಜಸ್ ವೆಬ್‌ಸೈಟ್‌ನಲ್ಲಿಯೂ ಕಾಣಬಹುದಾಗಿದೆ. ‘ಗೆಟ್ಟಿ ಇಮೇಜಸ್’ವೆಬ್‌ಸೈಟ್‌ನಲ್ಲಿರುವ ಮತ್ತೊಂದು ಫೋಟೋದಲ್ಲಿ ತಾಯಿಯ ಮುಖವನ್ನು ಕೂಡ ಕಾಣಬಹುದು.

ಚಿತ್ರ 2:

ಈ ಮಗುವಿನ ಫೋಟೋ 2018 ರಲ್ಲಿ ಪ್ರಕಟವಾದ ಬ್ಲಾಗ್‌ನಲ್ಲಿ ಕಂಡುಬಂದಿದೆ. ಅದೇ ಮಗುವಿನ ಇತರ ಚಿತ್ರಗಳನ್ನು ಇಲ್ಲಿ ನೋಡಬಹುದು. ಆದ್ದರಿಂದ, ಈ ಮಗು ಕೂಡಾ ವಿರಾಟ್-ಅನುಷ್ಕಾ ಅವರದ್ದಲ್ಲ.

ಕೆಲವು ಸುದ್ದಿ ಸಂಸ್ಥೆಗಳು ವಿರಾಟ್-ಅನುಷ್ಕಾ ಅವರ ಮಗಳ ಪಾದಗಳ ಚಿತ್ರವಾಗಿದೆ ಎಂದು ಚಿತ್ರವೊಂದನ್ನು ಹಂಚಿಕೊಂಡಿದೆ. ಈ ಚಿತ್ರವನ್ನು ವಿಕಾಸ್ ಕೊಹ್ಲಿ (ವಿರಾಟ್ ಕೊಹ್ಲಿಯ ಸಹೋದರ) ಪೋಸ್ಟ್ ಮಾಡಿದ್ದಾರೆ ಎಂದು ಅವರು ವರದಿ ಮಾಡಿದ್ದಾರೆ. ಆದರೆ ನಂತರ, ವಿಕಾಸ್ ಕೊಹ್ಲಿಯೇ ಇದು ಯಾದೃಚ್ಚಿಕ ಚಿತ್ರವಾಗಿದ್ದು, ಮಗುವಿನ ನಿಜವಾದ ಚಿತ್ರವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅದೇ ಫೋಟೋವನ್ನು ‘ಯಾಹೂ’ ವೆಬ್‌ಸೈಟ್‌ನ ಲೇಖನದಲ್ಲಿ ಕೂಡಾ ಕಾಣಬಹುದು. ಈ ಚಿತ್ರವನ್ನು ಕ್ಲಿಕ್ಕಿಸಿದ್ದು ‘ಆಂಟೋನಿಯೊ ವಿ. ಒಕ್ವಿಯಾಸ್ / ಶಟರ್ ಸ್ಟಾಕ್’ಎಂದು ಅಲ್ಲಿ ಹೇಳಲಾಗಿದೆ. ಇದೇ ಫೋಟೋವನ್ನು ‘ಶಟರ್ ಸ್ಟಾಕ್’ ವೆಬ್‌ಸೈಟ್‌ನಲ್ಲಿ ಕೂಡಾ ಕಾಣಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಸಂಬಂಧವಿಲ್ಲದ ಫೋಟೋಗಳನ್ನು ವಿರಾಟ್-ಅನುಷ್ಕಾ ಅವರ ನವಜಾತ ಶಿಶುವಿನ ಚಿತ್ರಗಳೆಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

Share.

About Author

Comments are closed.

scroll