ಲೈಫ್ ಟ್ಯಾಂಕ್ ಸಹಾಯದೊಂದಿಗೆ ಈಜುವ 5000 ವರ್ಷ ಹಳೆಯ ಪುರಾತನ ಭಾರತೀಯ ಪ್ರಾತಿನಿಧ್ಯ ಎಂದು ಫೋಟೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅದು ನಿಜವೆ ಪರಿಶೀಲಿಸೋಣ.
ಪ್ರತಿಪಾದನೆ: ಲೈಫ್ ಟ್ಯಾಂಕ್ ಸಹಾಯದೊಂದಿಗೆ ಈಜುವ 5000 ವರ್ಷ ಹಳೆಯ ಪುರಾತನ ಭಾರತೀಯ ಪ್ರಾತಿನಿಧ್ಯ.
ನಿಜಾಂಶ: ಪೋಸ್ಟ್ ಒಂದರಲ್ಲಿ ಕ್ರಿ.ಪೂ 860-865 ರ ಸಮಯದಲ್ಲಿ ಚಿತ್ರಿಸಲಾದ ಅಸಿರಿಯಾದ ಕಲೆಯನ್ನು ಹಂಚಿಕೊಳ್ಳಲಾಗಿದೆ. ಈ ಶಿಲ್ಪವು ಕನಿಷ್ಠ 2,900 ವರ್ಷಗಳಷ್ಟು ಹಳೆಯದಾಗಿದೆ ಮತ್ತು ಭಾರತಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ಹಾಗಾಗಿ ಮೇಲಿನ ಪ್ರತಿಪಾದನೆ ತಪ್ಪಾಗಿದೆ.
ಪೋಸ್ಟ್‌ನಲ್ಲಿರುವ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಟ್ವಿಟರ್ ಬಳಕೆದಾರರೊಬ್ಬರು ಇದೇ ರೀತಿಯ ಫೋಟೊವನ್ನು ಟ್ವೀಟ್ ಮಾಡಿರುವುದು ಕಂಡಬಂದಿದೆ. ಟ್ವೀಟ್‌ನಲ್ಲಿ ಉಬ್ಬಿಕೊಂಡಿರುವ ಪ್ರಾಣಿಗಳ ಚರ್ಮದ ಸಹಾಯದಿಂದ ಅಸಿರಿಯಾದ ಸೈನಿಕನೊಬ್ಬ ನದಿಗೆ ಅಡ್ಡಲಾಗಿ ಈಜುತ್ತಿರುವ ಚಿತ್ರ ಎಂದು ಉಲ್ಲೇಖಿಸಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಹುಡುಕಾಡಿದಾಗ ಇದೇ ಫೋಟೊ ಬ್ರಿಟಿಷ್ ಮ್ಯೂಸಿಯಂನಲ್ಲಿರುವುದು ಕಂಡು ಬಂದಿದೆ. ಕ್ರಿ.ಪೂ 865 – ಕ್ರಿ.ಪೂ 860 ರ ಅವಧಿಯಲ್ಲಿ ಚಿತ್ರಿಸಿದ ಅಸಿರಿಯಾದ ಕಲೆ ಎಂದು ಬ್ರಿಟಿಷ್ ಮ್ಯೂಸಿಯಂ ವೆಬ್‌ಸೈಟ್ ಉಲ್ಲೇಖಿಸಿದೆ. ಆದ್ದರಿಂದ, ಈ ಶಿಲ್ಪವು ಕನಿಷ್ಠ 2,900 ವರ್ಷಗಳಷ್ಟು ಹಳೆಯದಾಗಿದೆ ಮತ್ತು ಭಾರತದೊಂದಿಗೆ ಅದಕ್ಕೂ ಯಾವುದೇ ಸಂಬಂಧವಿಲ್ಲ.
ಈ ಶಿಲ್ಪದ ಬಗ್ಗೆ ಮಾಹಿತಿಯನ್ನು ನಾವು ‘ಪ್ರಾಚೀನ ಅಸಿರಿಯನ್ನರು’ ಪುಸ್ತಕದಲ್ಲಿ ಕಾಣಬಹುದು.
ಪ್ರಾಚೀನ ಗ್ರಂಥಗಳ ಪ್ರಕಾರ, ಅಸಿರಿಯಾದ ಸಾಮ್ರಾಜ್ಯವು ಲೆವಂಟ್‌ನ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಅಸ್ತಿತ್ವದಲ್ಲಿತ್ತು.
ಒಟ್ಟಾರೆಯಾಗಿ ಹೇಳುವುದಾದರೆ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ಶಿಲ್ಪವು ಕನಿಷ್ಠ 2,900 ವರ್ಷಗಳಷ್ಟು ಹಳೆಯದಾಗಿದೆ ಮತ್ತು ಭಾರತಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ.