ಭಾರತೀಯ ರೈತರು ಭಾರತದ ರಾಷ್ಟ್ರ ಧ್ವಜವನ್ನು ತುಳಿದು ಅವಮಾನಿಸುತ್ತಿದ್ದಾರೆ ಎಂದು ಹೇಳುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಭಾರತದ ರಾಷ್ಟ್ರ ಧ್ವಜವನ್ನು ತುಳಿಯುತ್ತಿರುವುದನ್ನು ನೋಡಬಹುದಾಗಿದೆ. ಜೊತೆಗೆ ’ಖಾಲಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗುತ್ತಿದ್ದಾರೆ. ಇದು ನಿಜವೇ ಪರಿಶೀಲಿಸೋಣ.
ಪ್ರತಿಪಾದನೆ: ಭಾರತೀಯ ರೈತರು ಭಾರತೀಯ ಧ್ವಜದ ಮೇಲೆ ನಿಂತು ಅವಮಾನಿಸುತ್ತಿರುವ ವಿಡಿಯೋ.
ಸತ್ಯಾಂಶ: ವೀಡಿಯೊವನ್ನು ಕ್ಯಾಲಿಫೋರ್ನಿಯಾದ (ಯುಎಸ್) ಸ್ಯಾಕ್ರಮೆಂಟೊದಲ್ಲಿ ಚಿತ್ರೀಕರಿಸಲಾಗಿದೆ. ‘1984 ರಲ್ಲಿ ನಡೆದ ಸಿಖ್ ಹತ್ಯಾಖಾಂಡ’ದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಈ ವಿಡಿಯೋವನ್ನು ಮಾಡಲಾಗಿದೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಪೋಸ್ಟ್‌ನಲ್ಲಿ ಇರುವ ವಿಡಿಯೋದ ಮೇಲಿನ ಎಡ ಮೂಲೆಯಲ್ಲಿ ಪ್ರೊಫೈಲ್ ID – ‘amanvir_singh5’ ಅನ್ನು ಕಾಣಬಹುದು. ಆದ್ದರಿಂದ, ನಾವು ಅಂತರ್ಜಾಲದಲ್ಲಿ ಆ ಹೆಸರನ್ನು ಹುಡುಕಿದಾಗ ಅದೇ ID ಯ ಟಿಕ್‌ಟಾಕ್ ಪ್ರೊಫೈಲ್ ಅಸ್ತಿತ್ವದಲ್ಲಿದೆ ಎಂದು ಕಂಡುಬಂದಿದೆ. ಆ ಪ್ರೊಫೈಲ್ ಮೂಲಕ ನೋಡಿದಾಗ, ಅವರು ಇದೇ ರೀತಿಯ ವೀಡಿಯೊವನ್ನು (ಆರ್ಕೈವ್ ಮಾಡಲಾಗಿದೆ) ಅಪ್‌ಲೋಡ್ ಮಾಡಿರುವುದು ಕಂಡುಬಂದಿದೆ. ವೀಡಿಯೊದಲ್ಲಿರುವ ಸಿಖ್ ವ್ಯಕ್ತಿ (ಅದೇ ಶರ್ಟ್ ಮತ್ತು ಪೇಟ) ಪೋಸ್ಟ್ ಮಾಡಿದ ವೀಡಿಯೊದಲ್ಲಿ ಕಾಣಬಹುದು. ವೀಡಿಯೊವನ್ನು ಇಲ್ಲಿ ವೀಕ್ಷಿಸಬಹುದು.
‘ಅಮಾನ್ವೀರ್_ಸಿಂಗ್ 5’ ತನ್ನ ಹಿಂದಿನ ವೀಡಿಯೊವೊಂದರಲ್ಲಿ, ಜನವರಿ 25 2021 ಸೋಮವಾರ ಬೆಳಿಗ್ಗೆ 11 ಗಂಟೆಗೆ ’ಭಾರತದ ವಿರುದ್ದವಾಗಿ 1984 ಸಿಖ್ ನರಮೇಧ’ವನ್ನು ಪ್ರತಿಭಟಿಸಲು, ‘7609 ವಿಲ್ಬರ್ ವೇ, ಸ್ಯಾಕ್ರಮೆಂಟೊ, ಸಿಎ 95828’ಗೆ ಜನರನ್ನು ಆಹ್ವಾನಿಸಿದ್ದಾರೆ.
ಪೋಸ್ಟ್ ಮಾಡಿದ ವೀಡಿಯೊದಲ್ಲಿ ‘ಅಮಾನ್ವೀರ್_ಸಿಂಗ್ 5’ ಉಲ್ಲೇಖಿಸಿರುವ ವಿಳಾಸವನ್ನು ಗೂಗಲ್ ಸ್ಟ್ರೀಟ್ ವ್ಯೂನಲ್ಲಿ ನೋಡಿದಾಗ ಅದು ಸರಿಯಾಗಿದೆ ಎಂದು ದೃಡಪಟ್ಟಿದೆ. ಆದ್ದರಿಂದ, ವೀಡಿಯೊವನ್ನು ಭಾರತದಲ್ಲಿ ಚಿತ್ರೀಕರಿಸಿಲ್ಲ ಎಂದು ನಾವು ತೀರ್ಮಾನಿಸಬಹುದು. ಇದನ್ನು ಕ್ಯಾಲಿಫೋರ್ನಿಯಾ (ಯುಎಸ್) ನಲ್ಲಿ ಚಿತ್ರೀಕರಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತರುವ ಪೋಸ್ಟ್ ಮತ್ತು ಗೂಗಲ್ ಸ್ಟ್ರೀಟ್ ವೀಡಿಯೊದಲ್ಲಿ ಇರುವ ದೃಶ್ಯಗಳ ಹೋಲಿಕೆಗಳನ್ನು ಕೆಳಗೆ ನೋಡಬಹುದು.
ಅಲ್ಲದೆ, ಅಮೆಜಾನ್ ವೆಬ್‌ಸೈಟ್ ಮೂಲಕ ತರಿಸುತ್ತಿರುವ ಭಾರತೀಯ ಧ್ವಜವನ್ನು ಸುಡುವುದಾಗಿ ಹೇಳಿರುವ ವಿಡಿಯೊವನ್ನು ‘ಅಮಾನ್ವೀರ್_ಸಿಂಗ್ 5’ 2020ರ ಜನವರಿ 07 ರಂದು ತಮ್ಮ ಪ್ರೊಫೈಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಟ್ವಿಟ್ಟರ್ ಬಳಕೆದಾರರಾದ ಜೆಫ್ ಬೆಜೋಸ್, ಅಮೆಜಾನ್‌ಗೆ ಟ್ವಿಟ್ಟರ್‌ನಲ್ಲಿ ಭಾರತೀಯ ಧ್ವಜವನ್ನು ಅವರಿಗೆ ತಲುಪಿಸದಂತೆ ಕೇಳಿಕೊಂಡಿದ್ದಾರೆ. ಜೊತೆಗೆ ದ್ವೇಷವನ್ನು ಹರಡುವುದಕ್ಕಾಗಿ ಮತ್ತು ಭಾರತೀಯ ಧ್ವಜಕ್ಕೆ ಅವಮಾನ ತೋರಿಸಿದ್ದಕಾಗಿ ‘ಅಮಾನ್ವೀರ್_ಸಿಂಗ್ 5’ ಖಾತೆಯನ್ನು ನಿಷೇಧಿಸುವ ವಿನಂತಿಯನ್ನು ಟಿಕ್ ಟಾಕ್ ಗೆ ಕೇಳಿಕೊಂಡಿದ್ದಾರೆ. ಅಮೆಝಾನ್ ಆರ್ಡರ್‌ನಲ್ಲಿ ಆರ್ಡರ್ ವಿವರಗಳಲ್ಲಿ “ಶಿಪ್ ಟು: ಅಮನ್ವೀರ್ – ಬೇಕರ್ಸ್‌ಫೀಲ್ಡ್, ಸಿಎ”ಎಂದು ಬರೆಯಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಪೋಸ್ಟ್‌ನಲ್ಲಿ ಇರುವ ವೀಡಿಯೊವು ಭಾರತೀಯ ರೈತರು ಭಾರತದ ಧ್ವಜದ ಮೇಲೆ ನಿಂತು ಅದನ್ನು ಅವಮಾನ ಮಾಡಿಲ್ಲ. ವೀಡಿಯೊವನ್ನು ಕ್ಯಾಲಿಫೋರ್ನಿಯಾ (ಯುಎಸ್) ನಲ್ಲಿ ಚಿತ್ರೀಕರಿಸಲಾಗಿದೆ.