ಇತ್ತೀಚೆಗೆ, ಸೀಲ್ / ಡಾಲ್ಫಿನ್ ಮತ್ತು ಹಸುವಿನ ತಲೆಯೊಂದಿಗೆ ಹೊಸ ಜೀವಿಯಂತೆ ಕಾಣುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸಮುದ್ರ ಮತ್ತು ಭೂ ಪ್ರಾಣಿಗಳ ಮಿಶ್ರಣದಂತೆ ಕಾಣುವ ಉಭಯಚರ ಜೀವಿಗಳ ಅನೇಕ ರೀತಿಯ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ರೌಂಡ್ ಮಾಡುತ್ತಿವೆ. ಈ ಲೇಖನದ ಮೂಲಕ ನಾವು ಈ ಹಕ್ಕನ್ನು ವಾಸ್ತವವಾಗಿ ಪರಿಶೀಲಿಸುತ್ತೇವೆ.
ಕ್ಲೇಮ್: ಈ ವೀಡಿಯೊವು ಹಸುವಿನ ತಲೆಯನ್ನು ಹೊಂದಿರುವ ಸಮುದ್ರ ಜೀವಿಯನ್ನು ತೋರಿಸುತ್ತದೆ.
ಫ್ಯಾಕ್ಟ್: ಇದು AI- ರಚಿತವಾದ ವೀಡಿಯೊ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
ಮೊದಲನೆಯದಾಗಿ, ಅಂತಹ ವಿಚಿತ್ರ ಪ್ರಾಣಿಯನ್ನು ಗುರುತಿಸುವ ಬಗ್ಗೆ ಯಾವುದಾದರು ಸರಿಯಾದ ಮಾಹಿತಿ ಇದೆಯೇ ಎಂದು ನಾವು ಆನ್‌ಲೈನ್‌ನಲ್ಲಿ ಪರಿಶೀಲಿಸಿದ್ದೇವೆ. ಆದರೆ ಈ ಕುರಿತು ನಮಗೆ ಯಾವುದೇ ಸರಿಯಾದ ಮಾಹಿತಿ ದೊರಕಿಲ್ಲ. ಇದು ಅಸಾಮಾನ್ಯವಾದುದು ಏಕೆಂದರೆ ಈ ರೀತಿಯ ಜೀವಿಯನ್ನು ಜನ ಕಂಡಿದ್ದರೆ ಅಂದು ಖಂಡಿತವಾಗಿಯೂ ನ್ಯೂಸ್ ಮೀಡಿಯಾ ಗಳಲ್ಲಿ ವರದಿಯಾಗುತಿತ್ತು.
ಅಲ್ಲದೆ, ವಿವಿಧ ಆಯಾಮಗಳಿಂದ ಒಂದೇ ಜೀವಿಗಳ ಯಾವುದೇ ವೀಡಿಯೊ ನಮಗೆ ಕಂಡುಬಂದಿಲ್ಲ. ವೀಡಿಯೊದಲ್ಲಿ, ಈ ಪ್ರಾಣಿಯ ಹಿಂದೆ ಅನೇಕ ಜನರು ಸೇರಿರುವುದನ್ನು ನಾವು ನೋಡಬಹುದು ಆದರೆ ಅವರ್ಯಾರು ಅದನ್ನು ರೆಕಾರ್ಡ್ ಮಾಡಿ ಪೋಸ್ಟ್ ಮಾಡಿರುವುದು ನಮಗೆ ದೊರಕಿಲ್ಲ. ಹಾಗಾಗಿ ಇದು ನಿಜ ಎಂದು ಭಾವಿಸುವುದು ಕಷ್ಟಕರ ಸಂಗತಿ.
ಇಷ್ಟೇಅಲ್ಲದೆ, ವೈರಲ್ ವೀಡಿಯೊವನ್ನು VFX ಅಥವಾ AI ಬಳಸಿ ರಚಿಸಲಾಗಿದೆ ಎಂಬ ಅನುಮಾನದೊಂದಿಗೆ, ನಾವು ಕ್ಲಿಪ್ಸ್ ಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದೇವೆ. AI-ರಚಿಸಿದ ವಿಷಯದಲ್ಲಿ ಸಾಮಾನ್ಯವಾಗಿ ಕಂಡುಬರುವ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಕೆಲವು ವೈಪರೀತ್ಯಗಳನ್ನು ನಾವು ಕಂಡುಕೊಂಡಿದ್ದೇವೆ. ಸೂಕ್ಷ್ಮವಾಗಿ ಗಮನಿಸಿದರೆ, ಹಸಿರು ಬೂಟುಗಳನ್ನು ಧರಿಸಿದವರಲ್ಲಿ ಒಬ್ಬರು ಹಿಂದೆ ನಡೆಯುತ್ತಿರುವುದು ಕಂಡುಬಂದಿದೆ. ಅವರು ನಡೆಯುವಾಗ, ಅವರ ಕಾಲಿನ ಪಕ್ಕದಲ್ಲಿ ಅವರ ಮತ್ತೊಂದು ಕಾಲು ಎಲ್ಲಿಯೂ ಕಾಣಿಸುವುದಿಲ್ಲ, ಹಾಗಾಗಿ ಇದು ನಿಜವಲ್ಲ. ಕೆಳಗಿನ ಗ್ರಾಫಿಕ್‌ನಲ್ಲಿ ನೀವು ಅದೇ ರೀತಿಯ ಚಿತ್ರಗಳನ್ನು ನೋಡಬಹುದು.
ಅದೇ ರೀತಿ, ಹುಲಿಯ ಚರ್ಮ ಮತ್ತು ತಲೆಯನ್ನು ಹೊಂದಿರುವ ಮೀನಿನ ವೀಡಿಯೊದಲ್ಲಿ (ಇಲ್ಲಿ) ವ್ಯಕ್ತಿಯ ಕಾಲುಗಳು ಒಂದಾಗಿರುವದನ್ನು ಇಲ್ಲಿ ಕಾಣಬಹುದಾಗಿದೆ.
ಈ ವೀಡಿಯೊಗಳು ವೈರಲ್ ಆದ ನಂತರ, ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಅವುಗಳ ಸತ್ಯಾಸತ್ಯತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ವನ್ಯಜೀವಿ ಸಂಶೋಧಕರಾಗಿರುವ ‘ಅರೋಜಿನ್ಲೆ’ ಎಂಬ ‘X’ ಬಳಕೆದಾರರು ಈ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದು, ಇದು ನಕಲಿ ಅಥವಾ ಫೇಕ್ ಎಂದು ಹೇಳಿದ್ದಾರೆ.
ಮ್ಯಾಂಡರಿನ್ ಚೈನೀಸ್ ಭಾಷೆಯ ಪಠ್ಯವು ಕಾಣಿಸಿಕೊಂಡಿರುವ ಕೆಲವು ಪೋಸ್ಟ್‌ಗಳನ್ನು ಇಲ್ಲಿ ಕಾಣಬಹುದಾಗಿದ್ದು, ಇದು ‘AI- ರಚನಾತ್ಮಕ ಮನರಂಜನೆಗಾಗಿ ಮಾತ್ರ’ ಎಂದು ಹೇಳಲಾಗಿದೆ.
ನಾವು ನಂತರ ವೈರಲ್ ವೀಡಿಯೊದ ಕೆಲವು ಸ್ಕ್ರೀನ್‌ಶಾಟ್‌ಗಳನ್ನು ‘ಹಗ್ಗಿಂಗ್ ಫೇಸ್’ ಬಹುಶಃ AI-ಕಂಟೆಂಟ್ ಡಿಟೆಕ್ಟರ್ ಮೂಲಕ ರನ್ ಮಾಡಿದ್ದೇವೆ ಮತ್ತು ಅದು 98% ಮಾನವ ನಿರ್ಮಿತ/ ಆರ್ಟಿಫಿಷಿಯಲ್ ಎಂದು ಕಂಡುಕೊಂಡಿದ್ದೇವೆ.
ರೂಪಾಂತರಗೊಂಡ ಪ್ರಾಣಿಗಳ ಅನೇಕ ವೀಡಿಯೊಗಳನ್ನು ಪೋಸ್ಟ್ ಮಾಡಿದ ‘ಡಿಜಿಟಲ್ ಕ್ರಿಯೇಟರ್‌ಗಳ’ ಕೆಲವು ಫೇಸ್‌ಬುಕ್ ಪ್ರೊಫೈಲ್‌ಗಳನ್ನು ಸಹ ನಾವು ಕಂಡುಕೊಂಡಿದ್ದೇವೆ, ಅದನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಈ ಎಲ್ಲಾ ಪುರಾವೆಗಳೊಂದಿಗೆ, ವೀಡಿಯೊ AI ಟೂಲ್ಸ್ ಅನ್ನು ಬಳಸಿಕೊಂಡು ರಚಿಸಲಾದ ವಿಚಿತ್ರ ಪ್ರಾಣಿಗಳ ವಿಡಿಯೋವನ್ನು ನೈಜ ವೀಡಿಯೊಗಳಾಗಿ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, AI- ರಚಿತವಾದ ವೀಡಿಯೊವನ್ನು ನಿಜ ಜೀವಿಗಳು ಎಂದು ತಪ್ಪಾಗಿ ಶೇರ್ ಮಾಡಲಾಗಿದೆ.