Fake News - Kannada
 

ಈ 3ಡಿ ದೃಶ್ಯವು ಅಯೋಧ್ಯೆಯಲ್ಲಿ ಕಟ್ಟಲು ಉದ್ದೇಶಿಸಿರುವ ರಾಮಮಂದಿರದ ವಿನ್ಯಾಸವಲ್ಲ

0

ಕಟ್ಟಡವೊಂದರ 3ಡಿ ದೃಶ್ಯವು ಅಯೋಧ್ಯೆಯಲ್ಲಿ ಕಟ್ಟಲು ಉದ್ದೇಶಿಸಿರುವ ರಾಮಮಂದಿರದ ವಿನ್ಯಾಸ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದರ ಸತ್ಯಾಸತ್ಯತೆ ಪರಿಶೀಲಿಸೋಣ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಅಯೋಧ್ಯೆಯಲ್ಲಿ ಕಟ್ಟಲು ಉದ್ದೇಶಿಸಿರುವ ರಾಮಮಂದಿರದ ವಿನ್ಯಾಸ.

ನಿಜಾಂಶ: ಈ ಚಿತ್ರದಲ್ಲಿರುವ 3ಡಿ ದೃಶ್ಯವು ಶ್ರೀ ಧಾಮ್ ಮಾಯಾಪುರ್ (ಪಶ್ಚಿಮಬಂಗಾಳ) ನಲ್ಲಿರುವ ಇಸ್ಕಾನ್‌ ನ ಕೇಂದ್ರ ಕಚೇರಿಯ ‘ಟೆಂಪಲ್ ಆಫ್ ದ ವೇದಿಕ್ ಪ್ಲಾನೆಟೇರಿಯಂ’ ಕಟ್ಟಡಕ್ಕೆ ಸಂಬಂಧಿಸಿದೆ. ಅಲ್ಲದೆ ರಾಮಮಂದಿರ ಕಟ್ಟಡ ನಿರ್ಮಾಣದ ಹೊಣೆ ಹೊತ್ತಿರುವ ‘ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್’ ಸದಸ್ಯರಲ್ಲಿ ಒಬ್ಬರಾದ ಶ್ರೀ ಬಿಮ್ಲೇಂದ್ರ ಮೋಹನ್ ಪ್ರತಾಪ್ ಮಿಶ್ರಾ ಅವರನ್ನು ಸಂಪರ್ಕಿಸಿದಾಗ, ಆ ಪೋಸ್ಟ್ ನಕಲಿಎಂದು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಮೇಲಿನ ಪ್ರತಿಪಾದನೆ ತಪ್ಪಾಗಿದೆ.

ಈ ಕಟ್ಟಡದ  ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಿದಾಗ ಅದೇ ರೀತಿಯ ಚಿತ್ರವು ಇಸ್ಕಾನ್ ನ್ಯೂಸ್ ವೆಬ್‌ ಸೈಟ್‌ನಲ್ಲಿ ಕಂಡುಬಂದಿದೆ. ಪಶ್ಚಿಮ ಬಂಗಾಲದ ಶ್ರೀಧಾಮ್ ಮಾಯಾಪುರ್ ದಲ್ಲಿರುವ ಇಸ್ಕಾನ್‌ ನ ಕೇಂದ್ರ ಕಚೇರಿಯ ‘ಟೆಂಪಲ್ ಆಫ್ ದ  ವೇದಿಕ್ ಪ್ಲಾನೆಟೇರಿಯಂ’ ಕಟ್ಟಡಕ್ಕೆ ಸಂಬಂಧಿಸಿದ 3ಡಿ ಎಂದು ವೆಬ್‌ ಸೈಟ್‌ ನಲ್ಲಿ ಬರೆಯಲಾಗಿದೆ.

‘ಟೆಂಪಲ್ ಆಫ್ ದ ವೇದಿಕ್ ಪ್ಲಾನೆಟೇರಿಯಂ- ಟಿಓವಿಪಿ’ ಎಂಬ ಯೂಟ್ಯೂಬ್ ಚಾನೆಲ್‌ ನಲ್ಲಿಇದೇ ರೀತಿಯ 3ಡಿ ಮಾದರಿಯ ವಿಡಿಯೋವೊಂದು ಸಿಕ್ಕಿದೆ. ಇತ್ತೀಚಿನ ವಿಡಿಯೋದಲ್ಲಿ ಕಟ್ಟಡದ ಚಿನ್ನದ ಗೋಪುರದ ಭಾಗವನ್ನು ನೀಲಿ ಬಣ್ಣಕ್ಕೆ ಪರಿವರ್ತಿಸಲಾಗಿದೆ. ಅದೇ ಕಟ್ಟಡದ ಕಾಮಗಾರಿಯ ಫೋಟೊಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಅಲ್ಲದೇ ಈ ಫೋಟೊಕ್ಕೆ ಸಂಬಂಧಿಸಿದಂತೆ ಫ್ಯಾಕ್ಟ್ಲಿಯು ರಾಮಮಂದಿರ ಕಟ್ಟಡ ನಿರ್ಮಾಣದ ಹೊಣೆ ಹೊತ್ತಿರುವ ‘ಶ್ರೀರಾಮ್ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ ಸದಸ್ಯರಲ್ಲಿ ಒಬ್ಬರಾದ ಬಿಮ್ಲೇಂದ್ರ ಮೋಹನ್ ಪ್ರತಾಪ್ ಮಿಶ್ರಾ ಅವರನ್ನು ಸಂಪರ್ಕಿಸಿದಾಗ, ಆ ಪೋಸ್ಟ್ ನಕಲಿ ಎಂದು ಸ್ಪಷ್ಟಪಡಿಸಿದ್ದಾರೆ. ರಾಮಮಂದಿರ ನಿರ್ಮಾಣಕ್ಕೆ ಮೂರು ದಶಕಗಳ ಹಿಂದೆಯೇ ಚಂದ್ರಕಾಂತ್‌ ಸೋಂಪುರ ಎಂಬುವವರು ತಯಾರಿಸಿದ ವಿನ್ಯಾಸವನ್ನು ಸಣ್ಣ ಬದಲಾವಣೆಗಳೊಂದಿಗೆ ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಹಲವು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಆ ವರದಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಒಟ್ಟಿನಲ್ಲಿ ಪೋಸ್ಟ್‌ನಲ್ಲಿರುವ  3ಡಿ ದೃಶ್ಯಕ್ಕೂ ಅಯೋಧ್ಯೆಯಲ್ಲಿ ಕಟ್ಟಲು ಉದ್ದೇಶಿಸಿರುವ ರಾಮಮಂದಿರದ ವಿನ್ಯಾಸಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ.

Share.

About Author

Comments are closed.

scroll