Fake News - Kannada
 

ಸ್ವಾಮಿ ವಿವೇಕಾನಂದರು 1893 ರ ಲ್ಲಿ ಮಾಡಿರುವ ಭಾಷಣವನ್ನು ಚಿಕಾಗೊ ಆರ್ಟ್ ಇನ್ಸ್ಟಿಟ್ಯೂಟ್‌ನ ಮೆಟ್ಟಿಲುಗಳ ಮೇಲೆ ಪ್ರತಿದಿನ ಪ್ರದರ್ಶಿಸುವುದಿಲ್ಲ

0

1893 ರ ವಿಶ್ವ ಧಾರ್ಮಿಕ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ್ದ ಪ್ರಸಿದ್ದ ಭಾಷಣವನ್ನು ಚಿಕಾಗೊ ಆರ್ಟ್ ಇನ್ಸ್ಟಿಟ್ಯೂಟ್‌‌ ಸಭಾಂಗಣದ ಮೆಟ್ಟಿಲುಗಳಲ್ಲಿ ಪ್ರತಿದಿನ ಪ್ರದರ್ಶಿಸಲಾಗುತ್ತದೆ ಎಂಬ ಹೇಳಿಕೆಯಿರುವ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದೆಯ ಸತ್ಯಾಂಶವನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಪ್ರತಿಪಾದನೆ: 1893 ರ ವಿಶ್ವ ಧಾರ್ಮಿಕ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ್ದ ಪ್ರಸಿದ್ದ ಭಾಷಣವನ್ನು ಚಿಕಾಗೊ ಆರ್ಟ್ ಇನ್ಸ್ಟಿಟ್ಯೂಟ್‌‌ ಸಭಾಂಗಣದ ಮೆಟ್ಟಿಲುಗಳಲ್ಲಿ ಪ್ರತಿದಿನ ಪ್ರದರ್ಶಿಸಲಾಗುತ್ತದೆ.

ಸತ್ಯಾಂಶ: ಸ್ವಾಮಿ ವಿವೇಕಾನಂದರು 1893 ರಲ್ಲಿ ಮಾಡಿರುವ ಪ್ರಸಿದ್ಧ ಭಾಷಣವು, ಅವರು ಭಾಷಣ ಮಾಡಿದ ಕಟ್ಟಡದ (ಆರ್ಟ್ ಇನ್ಸ್ಟಿಟ್ಯೂಟ್ ಆಫ್ ಚಿಕಾಗೊ) ಮೆಟ್ಟಿಲುಗಳ ಮೇಲೆ ವಿದ್ಯುತ್ ದೀಪಗಳಿಂದ ಪ್ರದರ್ಶಿಸಲಾಯಿತು ಎಂಬುದು ನಿಜವಾಗಿದೆ. ಆದರೆ ಅವರು ಮಾಡಿದ ಭಾಷಣವನ್ನು ಪ್ರತಿದಿನ ಬೆಳಗಿಸುತ್ತಿಲ್ಲ. 2010-11ರ ಒಂದು ನಿರ್ದಿಷ್ಟ ಅವಧಿಯಲ್ಲಿ ಮಾತ್ರ ವಿವೇಕಾನಂದರು ಮಾಡಿದ 1893 ರ ಭಾಷಣವನ್ನು ಸಭಾಂಗಣದ ಮೆಟ್ಟಿಲುಗಳ ಮೇಲೆ ಬೆಳಗಿಸಲಾಯಿತು. ಆದ್ದರಿಂದ ಪೋಸ್ಟ್‌‌ಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಭಾರತೀಯ ಅರಣ್ಯ ಸೇವಾ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಈ ಕೆಳಗಿನ ವಿವರಣೆಯೊಂದಿಗೆ ಇದೇ ರೀತಿಯ ಫೋಟೋವನ್ನು (ಆರ್ಕೈವ್ ಮಾಡಲಾಗಿದೆ) ಹಂಚಿಕೊಂಡಿದ್ದಾರೆ. ‘1893 ಸೆಪ್ಟೆಂಬರ್ 11 ರಂದು # ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ಭಾಷಣ ಮಾಡಿದರು. ಈ ಸ್ಥಳವು ಈಗ ಹೇಗೆ ಕಾಣುತ್ತದೆ ಎಂದು ನಿಮಗೆ ತಿಳಿದಿದೆ. ಇವು ಚಿಕಾಗೊ ಆರ್ಟ್ ಇನ್ಸ್ಟಿಟ್ಯೂಟ್‌‌ನ ಮೆಟ್ಟಿಲುಗಳಾಗಿವೆ, ಅಲ್ಲಿ ಸ್ವಾಮೀಜಿಯ 473 ಪದಗಳು ಇನ್ನೂ ಪ್ರಕಾಶಿಸುತ್ತಿವೆ’‘. ಇವರ ಟ್ವೀಟ್‌ಅನ್ನು ಆಧರಿಸಿ ಇಂಡಿಯಾ ಟುಡೆ ಲೇಖನವೊಂದನ್ನು (ಆರ್ಕೈವ್ ಮಾಡಲಾಗಿದೆ) ಪ್ರಕಟಿಸಿದೆ.

ನಾವು ‘ದಿ ಆರ್ಟ್ ಇನ್‌ಸ್ಟಿಟ್ಯೂಟ್ ಆಫ್ ಚಿಕಾಗೊ’ ದ ವೆಬ್‌ಸೈಟ್‌ನಲ್ಲಿ ಹುಡುಕಾಡಿದ್ದು, ಸ್ವಾಮಿ ವಿವೇಕಾನಂದರ ಪ್ರಸಿದ್ಧ 1893 ರ  ಭಾಷಣವು ಅವರು ಭಾಷಣ ಮಾಡಿದ ಕಟ್ಟಡದ ಮೆಟ್ಟಿಲುಗಳ ಮೇಲೆ ನಿಜಕ್ಕೂ ಅವರ ಭಾಷಣ ಬೆಳಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುವ ಫೋಟೋಗಳು ಇದಕ್ಕೆ ಸಂಬಂಧಿಸಿವೆ. ಆದರೆ, ‘ಸೆಪ್ಟೆಂಬರ್ 11, 2010 ರಿಂದ ಸೆಪ್ಟೆಂಬರ್ 12, 2011’ರ ವರೆಗೆ ನಡೆದ ’ಆರ್ಟ್ ಪ್ರದರ್ಶನ’ದ ವೇಳೆ ಉದ್ದೇಶ ಪೂರ್ವಕವಾಗಿ ಹಾಕಲಾಗಿದೆ. ಅದರ ಇಂದಿನ ಚಿತ್ರವನ್ನು ಇಲ್ಲಿ ನೋಡಬಹುದಾಗಿದೆ.

‘ದಿ ಆರ್ಟ್ ಇನ್‌ಸ್ಟಿಟ್ಯೂಟ್ ಆಫ್ ಚಿಕಾಗೊ’ ವೆಬ್‌ಸೈಟ್‌ನಲ್ಲಿ, ಈ ಬಗೆಗಿನ ವಿವರಗಳನ್ನು ಓದಬಹುದು – ‘ಕಲ್ಲತ್ ಅವರ ಈ ರಚನೆಯಲ್ಲಿ ಕಾಣುತ್ತಿರುವ ವಾಕ್ಯವು ಸರ್ವ ಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ ಪ್ರಸಿದ್ದ ಭಾಷಣವಾಗಿದೆ. ಇದನ್ನು ಚಿಕಾಗೋದಲ್ಲಿ ನಡೆದ ವಿಶ್ವ ಕೊಲಂಬಿಯನ್ ಪ್ರದರ್ಶನದಲ್ಲಿ ಪ್ರದರ್ಶಿಸಲಾಯಿತು. ಈಗ ಮ್ಯೂಸಿಯಂನ ಫುಲ್ಲರ್ಟನ್ ಹಾಲ್‌ನಲ್ಲಿ ಹಾಕಲಾಗಿದೆ…. ಸಾರ್ವಜನಿಕ ಪ್ರಕಟಣೆ 3, ಕಲ್ಲತ್ ಅವರು ವಿವೇಕಾನಂದರ ಮೂಲ ಭಾಷಣದ ವಾಕ್ಯಗಳನ್ನು ಚಿಕಾಗೋದ ಆರ್ಟ್ ಇನ್ಸ್ಟಿಟ್ಯೂಟ್‌ನ ಐತಿಹಾಸಿಕ ವುಮನ್ಸ್ ಬೋರ್ಡ್ ಗ್ರ್ಯಾಂಡ್ ಮೆಟ್ಟಿಲಿನಲ್ಲಿ ಎಲ್ಇಡಿ ಪ್ರದರ್ಶನ ಮಾಡಲಾಗಿದೆ. ಇದರ ಹೆಚ್ಚಿನ ಮಾಹಿತಿಯನ್ನು ಜಿತೀಶ್ ಕಲ್ಲತ್‌‌ ಅವರ ವೆಬ್‌ಸೈಟ್‌‌ನಲ್ಲಿ ನೋಡಬಹುದಾಗಿದೆ.

ಆದ್ದರಿಂದ, ವಿವೇಕಾನಂದರ ಭಾಷಣವು ಹಾಲ್‌ನ ಮೆಟ್ಟಿಲುಗಳಲ್ಲಿ ಬೆಳಗಿಸಲಾಗುತ್ತಿಲ್ಲ. ಅದನ್ನು 2010-11 ರಲ್ಲಿ ಒಂದು ನಿರ್ದಿಷ್ಟ ಅವಧಿಗೆ ಮಾತ್ರ ಬೆಳಗಿಸಲಾಗಿತ್ತು. 2011 ರ ನವೆಂಬರ್‌ನಲ್ಲಿ ಗೂಗಲ್ ನಕ್ಷೆಗಳಲ್ಲಿ ಸೆರೆಹಿಡಿಯಲಾದ ಚಿತ್ರಗಳಲ್ಲೂ ಈ ಮಟ್ಟಿಲುಗಳಲ್ಲಿ ವಿವೇಕಾನಂದರ ಭಾಷಣಗಳ ವಾಕ್ಯಗಳು ಇಲ್ಲದಿರುವುದನ್ನು ಕಾಣಬಹುದಾಗಿದೆ.

ಅಲ್ಲದೆ, ಸೆಪ್ಟೆಂಬರ್ 2011 ರ ನಂತರ ದಾಖಲಿಸಲಾಗಿರುವ ಮೆಟ್ಟಿಲಿನ ಇತರ ಫೋಟೋಗಳು ಮತ್ತು ವೀಡಿಯೊಗಳಲ್ಲಿ, ಮೆಟ್ಟಿಲುಗಳ ಮೇಲೆ ಭಾಷಣ ಸೇರಿದಂತೆ ಯಾವುದೆ ವಾಕ್ಯಗಳು ಕಾಣುವುದಿಲ್ಲ ಎಂದು ಗಮನಿಸಬಹುದು.

ವುಮನ್ ಬೋರ್ಡ್ ಗ್ರ್ಯಾಂಡ್ ಮೆಟ್ಟಿಲುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಸ್ವಾಮಿ ವಿವೇಕಾನಂದರ 1893 ಭಾಷಣವನ್ನು ಇಲ್ಲಿ ಓದಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಚಿಕಾಗೊ ಆರ್ಟ್ ಇನ್ಸ್ಟಿಟ್ಯೂಟ್‌‌ನ ಮೆಟ್ಟಿಲಲ್ಲಿ ಸ್ವಾಮಿ ವಿವೇಕಾನಂದರು  1893ರಲ್ಲಿ ಮಾಡಿದ ಪ್ರಸಿದ್ದ ಭಾಷಣಗಳನ್ನು ಪ್ರತಿದಿನ ಪ್ರದರ್ಶಿಸುತ್ತಿಲ್ಲ. ಅದನ್ನು 2010-11ರಲ್ಲಿ ಒಂದು ನಿರ್ದಿಷ್ಟ ಅವಧಿಯವರಗೆ ಮಾತ್ರ ಪ್ರದರ್ಶಿಸಲಾಗಿತ್ತು.

Share.

About Author

Comments are closed.

scroll