Fake News - Kannada
 

ಕಲಬುರ್ಗಿಯ (ಗುಲ್ಬರ್ಗಾ) ಜಾಮಿಯಾ ಮಸೀದಿಯನ್ನು ನೆಲಸಮ ಮಾಡಲಾದ ಬಾಬರಿ ಮಸೀದಿ ಎಂದು ತಪ್ಪಾಗಿ ಹೇಳಿ ಹಂಚಿಕೊಳ್ಳಲಾಗಿದೆ

0

ನೆಲಸಮ ಮಾಡಲಾದ ಬಾಬರಿ ಮಸೀದಿಯ ಚಿತ್ರ ಎಂದು ಹೇಳಿಕೊಳ್ಳುವ ಫೋಟೋಗಳನ್ನು ಕೊಲಾಜ್ ಮಾಡಿದ ವಿಡಿಯೋವೊಂದನ್ನು  ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅಯೋಧ್ಯೆಯ ಬಾಬರಿ ಮಸೀದಿಯನ್ನು 1992 ರಲ್ಲಿ ‘ಕರಸೇವಕರು’ ನೆಲಸಮ ಮಾಡಿದರು. 9 ನವೆಂಬರ್ 2019 ರಂದು ಸುಪ್ರೀಂ ಕೋರ್ಟ್ ರಾಮ ಮಂದಿರವನ್ನು ನಿರ್ಮಿಸಲು ಬಾಬರಿ ಮಸೀದಿಯನ್ನು ಉರುಳಿದ್ದ ಸ್ಥಳವನ್ನು ಹಿಂದೂಗಳಿಗೆ ಅನುಮತಿ ನೀಡಿ ತೀರ್ಪು ನೀಡಿತು. ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಅಯೋಧ್ಯೆಯ ಬಾಬರಿ ಮಸೀದಿಯ ಛಾಯಾಚಿತ್ರ.

ನಿಜಾಂಶ: ಪೋಸ್ಟ್ ನಲ್ಲಿ ಹಂಚಿಕೊಳ್ಳುತ್ತಿರುವ ಚಿತ್ರ ಕರ್ನಾಟಕದ ಕಲಬುರ್ಗಿಯಲ್ಲಿರುವ ಜಾಮಿಯಾ ಮಸೀದಿಯ ನೋಟ ಮತ್ತು ಅಯೋಧ್ಯೆಯ ಬಾಬರಿ ಮಸೀದಿಗೆ ಸಂಬಂಧಿಸಿಲ್ಲ. ಆದ್ದರಿಂದ ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್ ನಲ್ಲಿ ಹಂಚಲಾದ ಫೋಟೋದ ರಿವರ್ಸ್ ಇಮೇಜ್ ಹುಡುಕಾಟದಲ್ಲಿ, ಕಲಬುರ್ಗಿ ನಗರದ ಬಗ್ಗೆ ಬ್ರಿಟಾನಿಕಾ ಜಾಲತಾಣದಲ್ಲಿ ಪ್ರಕಟವಾದ ಲೇಖನದಲ್ಲಿ ಇದೇ ರೀತಿಯ ಛಾಯಾಚಿತ್ರ ಕಂಡುಬಂದಿದೆ. ಗುಲ್ಬರ್ಗಾ ಎಂದೂ ಕರೆಯಲ್ಪಡುವ ಕಲಬುರ್ಗಿ ಕರ್ನಾಟಕ ರಾಜ್ಯದ ಈಶಾನ್ಯ ಭಾಗದಲ್ಲಿರುವ ಒಂದು ನಗರ. ಲೇಖನದಲ್ಲಿರುವ ಚಿತ್ರ ಕರ್ನಾಟಕದ ಕಲಬುರ್ಗಿಯ ಜಾಮಿಯಾ ಮಸೀದಿಯ ನೋಟವನ್ನು ತೋರಿಸುತ್ತದೆ ಎಂದು ಹೇಳಲಾಗಿದೆ. ಈ ಕೀವರ್ಡ್ ಗಳನ್ನು ಬಳಸಿಕೊಂಡು ನಾವು ಹೆಚ್ಚಿನ ಮಾಹಿತಿಗಾಗಿ ಹುಡುಕಿದಾಗ, ಅಲಾಮಿ ಜಾಲತಾಣದಲ್ಲಿ ಕೂಡ ಇದೇ ರೀತಿಯ ಫೋಟೋ ಕಂಡುಬಂದಿದೆ. ಈ ಜಾಲತಾಣದಲ್ಲಿ, ಇದು ಕಲಬುರ್ಗಿಯ ಜಾಮಿಯಾ ಮಸೀದಿಯ ನೋಟವನ್ನು ತೋರಿಸುತ್ತದೆ ಎಂದು ನಮೂದಿಸಿದೆ.

ರಾಮ ಮಂದಿರ ನಿರ್ಮಾಣಕ್ಕಾಗಿ ನೆಲಸಮ ಮಾಡಲಾದ ಬಾಬರಿ ಮಸೀದಿ ಭೂಮಿಯನ್ನು ಮಂಜೂರು ಮಾಡಿದ ಸುಪ್ರೀಂ ಕೋರ್ಟ್ ತೀರ್ಪಿನ ನಂತರ, 05 ಆಗಸ್ಟ್ 2020 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಶಿಲಾನ್ಯಾಸ ಮಾಡಿದರು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ವಿರೋಧಿಸಿ, ಕೆಲವರು ಈ ಜಾಮಿಯಾ ಮಸೀದಿ ಫೋಟೋವನ್ನು ನೆಲಸಮ ಮಾಡಿದ ಬಾಬರಿ ಮಸೀದಿ ಇದೇ ಎಂದು ಹೇಳಿ ಹಂಚಿಕೊಳ್ಳುತ್ತಿದ್ದಾರೆ.

ಈ ಹಿಂದೆ, ಈ ಛಾಯಾಚಿತ್ರ ಸೇರಿದಂತೆ ಹಲವು ಚಿತ್ರಗಳ ಗುಂಪನ್ನು ಬಾಬರಿ ಮಸೀದಿಯ ಚಿತ್ರಗಳೆಂದು ಹಂಚಿಕೊಂಡಾಗ, ‘ಫ್ಯಾಕ್ಟ್ಲಿ’ ಈ ಚಿತ್ರಗಳ ಬಗ್ಗೆ ನಿಜಾಂಶವನ್ನು ಬಯಲಿಗೆಳೆದು ಲೇಖನವೊಂದನ್ನು ಪ್ರಕಟಿಸಿದೆ. ಅದನ್ನು ಇಲ್ಲಿ ಓದಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಕಲಬುರ್ಗಿಯ ಜಾಮಿಯಾ ಮಸೀದಿಯ ಚಿತ್ರವನ್ನು ನೆಲಸಮ ಮಾಡಲಾದ ಅಯೋಧ್ಯೆಯ ಬಾಬರಿ ಮಸೀದಿ ಎಂದು ತಪ್ಪಾಗಿ ಹೇಳುತ್ತ ಹಂಚಿಕೊಳ್ಳಲಾಗುತ್ತಿದೆ.

Share.

About Author

Comments are closed.

scroll