‘ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಪತ್ನಿ ಮಾಡಿಸಿಕೊಂಡಿರುವಬೆಳ್ಳಿ ಬೀರು’ ಎಂದು ದುರ್ಗಾ ಸ್ಟಾಲಿನ್ ಬೆಳ್ಳಿ ಬೀರು ಪಕ್ಕದಲ್ಲಿ ನಿಂತು ಪೋಸ್ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ.
ಕ್ಲೇಮ್: ಈ ವೀಡಿಯೋದಲ್ಲಿರುವ ಬೀರು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಪತ್ನಿ ಮಾಡಿಕೊಂಡಿರುವ ಬೆಳ್ಳಿ ಬೀರು.
ಫ್ಯಾಕ್ಟ್: ಇಲ್ಲಿರುವ ಬೀರು ತಮಿಳುನಾಡಿನ ಸುಕ್ರ ಜ್ಯುವೆಲ್ಲರಿಯವರು ತಯಾರಿಸಿದ ಬೆಳ್ಳಿಯ ಬೀರಾಗಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಈ 3.67 ಮೀಟರ್ ಬೀರನ್ನು ವಿಶ್ವದ ಅತಿದೊಡ್ಡ ಸಿಲ್ವರ್ ಬಿಯರ್ ಎಂದು ಗುರುತಿಸಿದೆ. ಇದನ್ನು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಪತ್ನಿ ದುರ್ಗಾ ಸ್ಟಾಲಿನ್ ಅವರು 22 ಅಕ್ಟೋಬರ್ 2024 ರಂದು ಅನಾವರಣಗೊಳಿಸಿದರು. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
ಈ ವೀಡಿಯೊದ ಹಿಂದಿನ ಸತ್ಯಗಳನ್ನು ಪರಿಶೀಲಿಸಲು, ನಾವು ಸೂಕ್ತವಾದ ಕೀವರ್ಡ್‌ಗಳನ್ನು ಬಳಸಿಕೊಂಡು ಇಂಟರ್ನೆಟ್ನಲ್ಲಿ ಹುಡುಕಿದ್ದೇವೆ. ಈ ವೀಡಿಯೊ ಕುರಿತು ಕೆಲವು ಮಾಧ್ಯಮಗಳು ಪ್ರಕಟಿಸಿದ ಸುದ್ದಿ ಲೇಖನಗಳನ್ನು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ನಾವು ಕಂಡುಕೊಂಡಿದ್ದೇವೆ.
ಈ ವರದಿಗಳ ಪ್ರಕಾರ, ವಿಡಿಯೋದಲ್ಲಿರುವ ಸಿಲ್ವರ್ ಬೀರು ಮಾಲೀಕರು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಪತ್ನಿ ದುರ್ಗಾ ಸ್ಟಾಲಿನ್ ಅಲ್ಲ. ಇದನ್ನು ಚೆನ್ನೈನ ಸುಕ್ರ ಜ್ಯುವೆಲ್ಲರಿ ತಯಾರಿಸಿದೆ.
ಈ ವೈರಲ್ ವೀಡಿಯೊವನ್ನು 24 ಅಕ್ಟೋಬರ್ 2024 ರಂದು Vikatan E-magazine ತನ್ನ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಅಪ್‌ಲೋಡ್ ಮಾಡಿದೆ. ಈ ವಿಡಿಯೋ ವಿವರಣೆಯ ಪ್ರಕಾರ, ಸುಕ್ರ ಜ್ಯುವೆಲ್ಲರಿ ತಯಾರಿಸಿದ ಈ ಬೀರನ್ನು ದುರ್ಗಾ ಸ್ಟಾಲಿನ್ ಅನಾವರಣಗೊಳಿಸಿದ್ದಾರೆ. ಇದು ಗಿನ್ನೆಸ್ ವಿಶ್ವ ದಾಖಲೆಯಿಂದಲೂ ಗುರುತಿಸಲ್ಪಟ್ಟಿದೆ.
ಈ ಕುರಿತು ಇನ್ನಷ್ಟು ಹುಡುಕಾಡಿದಾಗ, ಸುಕ್ರ ಜ್ಯುವೆಲ್ಲರಿ ಅವರ ಅಧಿಕೃತ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಅಪ್ಲೋಡ್ ಮಾಡಿದ ಪೋಸ್ಟನ್ನು ನಾವು ಕಂಡುಕೊಂಡಿದ್ದೇವೆ. ಇದರಲ್ಲಿ ದುರ್ಗಾ ಸ್ಟಾಲಿನ್ ಅವರು ಸುಕ್ರ ಜ್ಯುವೆಲ್ಲರಿ ಸಿಇಒ ನಿತಿನ್ ಕಲ್ಕಿರಾಜ್ ಅವರಿಗೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಿಂದ ಪ್ರಮಾಣಪತ್ರವನ್ನು ಪ್ರಸ್ತುತಪಡಿಸುವುದನ್ನು ನಾವು ನೋಡಬಹುದು. ಈ ಈವೆಂಟ್ 22 ಅಕ್ಟೋಬರ್ 2024 ರಂದು ಚೆನ್ನೈನ ಮೈಲಾಪುರದಲ್ಲಿರುವ ಸುಕ್ರಾ ಜ್ಯುವೆಲರ್ಸ್ ಶೋ ರೂಂನಲ್ಲಿ ನಡೆಯಿತು.
ಈ ಸುದ್ದಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ವೆಬ್‌ಸೈಟ್‌ನಲ್ಲಿರುವುದನ್ನು ಸಹ ನಾವು ಕಂಡುಕೊಂಡಿದ್ದೇವೆ. ಭಾರತದ ಸುಕ್ರ ಜ್ಯುವೆಲ್ಲರಿ ವಿಶ್ವದ ಅತಿ ದೊಡ್ಡ ಬೆಳ್ಳಿ ಬೀರು ಮಾಡಿದೆ ಎಂಬ ದಾಖಲೆಯನ್ನು ಹೊಂದಿದೆ. ಅದರ ಉದ್ದ 3.67 ಮೀಟರ್ ಎಂದು ತಿಳಿದು ಬಂದಿದೆ.
ಕೊನೆಯದಾಗಿ ಹೇಳುವುದಾದರೆ, ಸುಕ್ರ ಜ್ಯುವೆಲ್ಲರಿಯವರು ತಮಿಳುನಾಡು ಮುಖ್ಯಮಂತ್ರಿ ಪತ್ನಿ ದುರ್ಗಾ ಸ್ಟಾಲಿನ್ ಅವರು ಬೆಳ್ಳಿಯ ಬೀರನ್ನು ಅನಾವರಣ ಮಾಡುತ್ತಿರುವ ವಿಡಿಯೋವನ್ನು ದುರ್ಗಾ ಸ್ಟಾಲಿನ್ ತನಗೆ ಬೆಳ್ಳಿಯ ಬೀರನ್ನು ಮಾಡಿಸಿಕೊಂಡಿದ್ದಾರೆ ಎಂದು ತಪ್ಪಾಗಿ ಶೇರ್ ಮಾಡಲಾಗಿದೆ.