Fake News - Kannada
 

ದುಬೈ ಸರ್ಕಾರ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರ ಕಾರ್ಯಕ್ರಮಕ್ಕೆ ರಜೆಯನ್ನು ಘೋಷಿಸಿಲ್ಲ

0

ಮಧ್ಯಪ್ರದೇಶದ ಛತ್ತರ್‌ಪುರದ ಬಾಗೇಶ್ವರ ಧಾಮದ ಪೀಠಾಧೀಶ್ವರರಾದ ಆಚಾರ್ಯ ಧೀರೇಂದ್ರ ಕೃಷ್ಣ ಶಾಸ್ತ್ರಿ (ಬಾಗೇಶ್ವರ ಧಾಮ ಸರ್ಕಾರ್) ಅವರನ್ನು ರಾಮ್ ಕಥಾ ಕಲಿಸಲು ದುಬೈಗೆ ಆಹ್ವಾನಿಸಲಾಗಿದೆ ಎನ್ನುವ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇದಕ್ಕೆ ಪ್ರತಿಯಾಗಿ ಇದೇ ಸಮಯದಲ್ಲಿ ಅಂದರೆ  ಮೇ 22 , 2024 ರಿಂದ 26  ರವರೆಗೆ ನಾಲ್ಕು ದಿನಗಳ ಕಾಲ ದುಬೈ ನಲ್ಲಿ ರಜೆ ಘೋಷಿಸಲಾಗಿದೆ ಎಂದು ಹೇಳಿಕೊಳ್ಳಲಾಗುತ್ತಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್ : ಆಚಾರ್ಯ ಧೀರೇಂದ್ರ ಕೃಷ್ಣ ಶಾಸ್ತ್ರಿ (ಬಾಗೇಶ್ವರ್ ಧಾಮ್ ಸರ್ಕಾರ್) ಅವರು ರಾಮ್ ಕಥಾ ಕಾರ್ಯಕ್ರಮಕ್ಕೆ ದುಬೈನಲ್ಲಿ ನಾಲ್ಕು ದಿನಗಳ ರಜೆಯನ್ನು ಘೋಷಿಸಲಾಗಿದೆ.

ಫ್ಯಾಕ್ಟ್ : ದುಬೈನ ವರ್ಲ್ಡ್ ಟ್ರೇಡ್ ಸೆಂಟರ್‌ನಲ್ಲಿ ಮೇ 2024 ರಂದು  ಉದ್ಯಮಿ ಡಾ. ಬು ಅಬ್ದುಲ್ಲಾ ಅವರ ಆಹ್ವಾನದ ಮೇರೆಗೆ ಧೀರೇಂದ್ರ ಕೃಷ್ಣ ಶಾಸ್ತ್ರಿ, ಅವರು  ‘ಇನ್ ಪೀಸ್ ವಿ ಬಿಲೀವ್’ ಎಂಬ ಎರಡು ದಿನಗಳ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು  ದುಬೈಗೆ ಭೇಟಿ ನೀಡಿದ್ದರು. ಇದು ಖಾಸಗಿ ಕಾರ್ಯಕ್ರಮವಾಗಿದ್ದು, ಇದಕ್ಕೆ ದುಬೈ ಸರ್ಕಾರ ಯಾವುದೇ ರಜೆಯನ್ನು ಘೋಷಿಸಿಲ್ಲ. ಆದ್ದರಿಂದ,ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ಸುಳ್ಳಾಗಿದೆ.

ಸಂಬಂಧಿತ ಕೀವರ್ಡ್‌ಗಳೊಂದಿಗೆ ಇಂಟರ್ನೆಟ್ ನಲ್ಲಿ  ಹುಡುಕಾಡಿದಾಗ ಧೀರೇಂದ್ರ ಕೃಷ್ಣ ಶಾಸ್ತ್ರಿಯವರ ದುಬೈ ಭೇಟಿಯ ಬಗ್ಗೆವರದಿಯಾಗಿರುವ ಹಲವಾರು  ಸುದ್ದಿ ಲೇಖನಗಳನ್ನು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಕಂಡುಕೊಂಡೆವು. ಈ ಲೇಖನಗಳ ಪ್ರಕಾರ, ಬಾಗೇಶ್ವರ ಧಾಮ ಪೀಠದ ಮುಖ್ಯಸ್ಥ, ಧೀರೇಂದ್ರ ಶಾಸ್ತ್ರಿ ದುಬೈನಲ್ಲಿ ನಡೆಯುತ್ತಿದ್ದ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಲ್ಲಿನ  ಉದ್ಯಮಿ ಡಾ. ಬು ಅಬ್ದುಲ್ಲಾ ಆಹ್ವಾನಿಸಿದ್ದಾರೆ.  ಮೇ 24 ರಿಂದ 25 ರವರೆಗೆ ದುಬೈನಲ್ಲಿ ನಡೆದ ಎರಡು ದಿನಗಳ ಕಾರ್ಯಕ್ರಮದಲ್ಲಿ  ಅವರು ಹನುಮಾನ್ ಕಥಾ ನಿರೂಪಣೆಯಾ ಬಗ್ಗೆ ತಿಳಿಸಿದ್ದಾರೆ. ಡಾ. ಬು ಅಬ್ದುಲ್ಲಾ ಅವರು ಈ ಕಾರ್ಯಕ್ರಮವನ್ನು ‘ಇನ್ ಪೀಸ್ ವಿ ಬಿಲೀವ್’ ಎಂದು ತಿಳಿಸಿದ್ದು,  ಯುಎಇಯಲ್ಲಿ ಶಾಂತಿ ಮತ್ತು ಸಹಬಾಳ್ವೆಯ ಮಹತ್ವದ ಕುರಿತು ಆಧ್ಯಾತ್ಮಿಕ ಕಾರ್ಯಕ್ರಮವಾಗಲಿದೆ ಎಂದು ಹೇಳಿದ್ದಾರೆ. ಇದೇ ಮಾಹಿತಿಯನ್ನು ಬಾಗೇಶ್ವರ್ ಧಾಮ್ ಸರ್ಕಾರ್ ಮತ್ತು ಡಾ. ಬು ಅಬ್ದುಲ್ಲಾ ಹಂಚಿಕೊಂಡ ಟ್ವೀಟ್‌ನಲ್ಲೂ ಹಂಚಿಕೊಂಡಿದ್ದಾರೆ.

ಕೃಷ್ಣ ಶಾಸ್ತ್ರಿಯೂ ಈ ಕಾರ್ಯಕ್ರಮದಳ್ಳಿ ಭಾಗವಹಿಸಿದ್ದು.  ವಿವಿಧ ದೃಶ್ಯಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದಾಗಿದೆ. ಆದಾಗ್ಯೂ, ಇದರ ಸಲುವಾಗಿ ದುಬೈ ಸರ್ಕಾರ ರಜೆ ಘೋಷಿಸಿದೆ ಎಂದು ಯಾವುದೇ ಸುದ್ದಿ ವಾಹಿನಿಯು ವರದಿ ಮಾಡಿಲ್ಲ.

ಇದಲ್ಲದೆ, ಯುನೈಟೆಡ್ ಅರಬ್ ಎಮಿರೇಟ್ಸ್ ಅಧಿಕೃತ ಕ್ಯಾಲೆಂಡರ್ ಮೇ 22 ರಿಂದ 26 ರವರೆಗೆ ದುಬೈನಲ್ಲಿ ಯಾವುದೇ ರಜಾದಿನಗಳನ್ನು ಘೋಷಿಸಲಾಗಿಲ್ಲ ಎಂದು ತೋರಿಸುತ್ತದೆ. ದುಬೈ ಸರ್ಕಾರವು ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರ ಕಾರ್ಯಕ್ರಮಕ್ಕೆ ಯಾವುದೇ ರಜೆಯನ್ನು ನೀಡಿಲ್ಲ ಎಂದು ಇದು ಖಚಿತಪಡಿಸುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರ ಕಾರ್ಯಕ್ರಮಕ್ಕೆ ದುಬೈ ಸರ್ಕಾರ ಯಾವುದೇ ರಜೆಯನ್ನು ಘೋಷಿಸಿಲ್ಲ.

Share.

Comments are closed.

scroll