Fake News - Kannada
 

‘ಗದೆ, ಬಿಲ್ಲು ಮತ್ತು ಬಾಣ’ ಶಿಲ್ಪಕಲೆ ಹೊಂದಿರುವ ಸರ್ಕಲ್‌ ಇರುವುದು ವಡೋದರಾದಲ್ಲಿ, ಅಯೋಧ್ಯೆಯಲ್ಲಿ ಅಲ್ಲ

0

ಅಯೋಧ್ಯೆಯ ಒಂದು ಸರ್ಕಲ್‌ನಲ್ಲಿ ‘ಗದೆ, ಬಿಲ್ಲು ಮತ್ತು ಬಾಣ’ಗಳಿರುವ ಶಿಲ್ಪವನ್ನು ನಿರ್ಮಿಸಲಾಗಿದೆ ಎಂಬ ಹೇಳಿಕೆಯೊಂದಿಗೆ ಒಂದು ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಅಯೋಧ್ಯೆಯ ಸರ್ಕಲ್‌ನಲ್ಲಿ ‘ಗದೆ, ಬಿಲ್ಲು ಮತ್ತು ಬಾಣ’ ಶಿಲ್ಪವನ್ನು ಹೊಸದಾಗಿ ನಿರ್ಮಿಸಲಾಗಿರುವ ಫೋಟೋ.

ನಿಜಾಂಶ: ಫೋಟೋ ಅಯೋಧ್ಯೆಗೆ (ಉತ್ತರಪ್ರದೇಶ) ಸಂಬಂಧಿಸಿಲ್ಲ. ಇದು ವಡೋದರಾ (ಗುಜರಾತ್)ದ ‘ಗಡಾ ಸರ್ಕಲ್’ನಲ್ಲಿ ನಿರ್ಮಿಸಲಾಗಿರುವ ಶಿಲ್ಪದ ಚಿತ್ರವಾಗಿದೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಲಾಗಿರುವ ಪ್ರತಿಪಾದನೆ ತಪ್ಪಾಗಿದೆ.

ವೈರಲ್‌ ಆದ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಲಾಗಿದ್ದು, ಅದೇ ಫೋಟೋ ಮತ್ತು ಪ್ರತಿಪಾದನೆಯನ್ನು ಹೊಂದಿರುವ ಟ್ವೀಟ್ ಕಂಡುಬಂದಿದೆ. ಫೋಟೋ ವಡೋದರಾ (ಗುಜರಾತ್)ನಲ್ಲಿನ ‘ಗಡಾ ಸರ್ಕಲ್’ನದ್ದು ಎಂದು ಟ್ವಿಟರ್‌ ಬಳಕೆದಾರರು ಟ್ವೀಟ್ ಕೆಳಗೆ ಪ್ರತಿಕ್ರಿಯಿಸಿದ್ದಾರೆ. ಆದ್ದರಿಂದ, ಅಂತರ್ಜಾಲದಲ್ಲಿ ಹುಡುಕಿದಾಗ, ಫೋಟೋದಲ್ಲಿರುವ ಸರ್ಕಲ್‌ ಅಯೋಧ್ಯೆಯಲ್ಲಿ ಇಲ್ಲ, ಬದಲಾಗಿ ಅದು ವಡೋದರಾದಲ್ಲಿನ ಗಾಡಾ ಸರ್ಕಲ್‌ನದ್ದು ಎಂದು ದೃಢಪಟ್ಟಿದೆ. ಆ ಸ್ಥಳವನ್ನು ಗೂಗಲ್‌ ಸ್ಟ್ರೀಟ್ ಮೂಲಕ ಇಲ್ಲಿ ನೋಡಬಹುದು. ರಸ್ತೆಯ ನೋಟವನ್ನು 2016ರ ನವೆಂಬರ್‌ನಲ್ಲಿ ಸೆರೆಹಿಡಿಯಲಾಗಿದೆ. ಆದ್ದರಿಂದ, ಈ ಶಿಲ್ಪವನ್ನು ಇತ್ತೀಚೆಗೆ ಅಳವಡಿಸಿರುವುದಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಫೋಟೋದಲ್ಲಿ ‘ಗದೆ, ಬಿಲ್ಲು ಮತ್ತು ಬಾಣ’ಗಳ ಶಿಲ್ಪಕಲೆ ಹೊಂದಿರುವ ಸರ್ಕಲ್‌ ವಡೋದರಾದಲ್ಲಿದೆ, ಅಯೋಧ್ಯೆಯಲ್ಲಿ ಇಲ್ಲ.

Share.

About Author

Comments are closed.

scroll