ವಿಸ್ತಾರವಾದ ಪ್ರದೇಶದಲ್ಲಿ ನೂರಾರು ಟೆಂಟ್‌ಗಳಿರುವ ಬರ್ಡ್‌ವೀವ್ ಆಂಗಲ್‌ನಿಂದ ತೆರೆಯಲಾಗಿರುವ ಚಿತ್ರವನ್ನು ಕೃಷಿ ನೀತಿಗಳ ವಿರುದ್ಧ ರೈತರು ಸಿಂಘುಗಡಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಯ ಫೋಟೋ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ನ ಸತ್ಯಾ-ಸತ್ಯತೆಯನ್ನು ಇಲ್ಲಿ ಪರಿಶೀಲಿಸೋಣ.
ಪ್ರತಿಪಾದನೆ: ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯ ನೂರಾರು ಡೇರೆಗಳನ್ನು ತೋರಿಸುವ ಚಿತ್ರ.
ಸತ್ಯ: ಇದು 2013 ರಲ್ಲಿ ಅಲಹಾಬಾದ್ (ಪ್ರಯಾಗರಾಜ್)ನಲ್ಲಿ ನಡೆದ ಕುಂಭಮೇಳದಲ್ಲಿ ನಿರ್ಮಿಸಲಾಗಿದ್ದ ನೂರಾರು ಡೇರೆಗಳ ಚಿತ್ರವಾಗಿದ್ದು, ಈ ಚಿತ್ರಕ್ಕೂ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಯಾವುದೇ ಸಂಬಂಧವಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಪೋಸ್ಟ್‌ನಲ್ಲಿನ ಫೋಟೋವನ್ನು ರಿವರ್ಸ್ ಇಮೇಜ್ ಮೂಲಕ ಹುಡುಕಿದಾಗ, ಅದೇ ಚಿತ್ರವನ್ನು ಹೊಂದಿರುವ ಬ್ಲಾಗ್ ದೊರೆತಿದೆ. ಈ ಬ್ಲಾಗ್ ಪ್ರಕಾರ, ಚಿತ್ರವು 2013 ರಲ್ಲಿ ಪ್ರಯಾಗರಾಜ್ (ಅಲಹಾಬಾದ್)ನಲ್ಲಿ ನಡೆದ ಮಹಾ ಕುಂಭಮೇಳದ ಚಿತ್ರವೆಂದು ಹೇಳಲಾಗಿದೆ.
ಬ್ಲಾಗ್‌ನಲ್ಲಿ ಪ್ರಕಟವಾದ ಚಿತ್ರದ ಎಕ್ಸಿಫ್ ಮಾಹಿತಿಯ ವಿವರದಲ್ಲಿ ಮೂಲತಃ ಚಿತ್ರವನ್ನು 08 ಫೆಬ್ರವರಿ 2013 ರಂದು ಕ್ಲಿಕ್ ಮಾಡಲಾಗಿದೆಯೆಂದು ಹೇಳಲಾಗಿದೆ. ಅಲ್ಲದೆ, ಮಾಹಿತಿಯ ಪ್ರಕಾರ ಚಿತ್ರಗಳನ್ನು ‘ಕುಂಭ ಮೇಳ 2013’ ಎಂದು ವಿವರಿಸಲಾಗಿದೆ.
ಬ್ಲಾಗ್‌ನಿಂದ ಕ್ಲ್ಯೂ ಪಡೆದುಕೊಂಡು, ಸಂಬಂಧಿತ ಕೀವರ್ಡ್‌ಗಳ ಮೂಲಕ ಗೂಗಲ್‌ನಲ್ಲಿ ಹುಡುಕಿದಾಗ, ಅಲಾಮಿಯ ಸ್ಟಾಕ್ ಇಮೇಜ್ ದೊರೆತಿದೆ. ಸ್ಟಾಕ್ ಚಿತ್ರವು ಪೋಸ್ಟ್‌ನಲ್ಲಿರುವ ಬಿಡಾರಗಳ ಚಿತ್ರವುಳ್ಳ ಸೈಟ್ ಅನ್ನು ತೋರಿಸುತ್ತದೆ. ಆದರೆ, ಅದು ಬೇರೆ ಆಂಗಲ್ ಮತ್ತು ವಿಭಿನ್ನ ಸಮಯದಲ್ಲಿ ತೋರಿಸುತ್ತದೆ. ಈ ಎರಡೂ ಚಿತ್ರಗಳನ್ನು ಹೋಲಿಸಿ ನೋಡಿದಾಗ ನಾವು ಅನೇಕ ಹೋಲಿಕೆಗಳನ್ನು ಗುರುತಿಸಬಹುದು. ಸ್ಟಾಕ್ ಚಿತ್ರದ ವಿವರಣೆಯ ಪ್ರಕಾರ, ಚಿತ್ರವನ್ನು ಫೆಬ್ರವರಿ 08, 2013 ರಂದು ಅಲಹಾಬಾದ್ (ಪ್ರಯಾಗ್ರಾಜ್)ನಲ್ಲಿ ಕ್ಲಿಕ್ ಮಾಡಲಾಗಿದೆ. ಚಿತ್ರದ ಶೀರ್ಷಿಕೆಯಲ್ಲಿ ‘2013 ರಲ್ಲಿ ಭಾರತದ ಅಲಹಾಬಾದ್‌ನಲ್ಲಿ ನಡೆದ ಮಹಾ ಕುಂಭಮೇಳ ಡೇರೆಗಳು / ಭೂದೃಶ್ಯ’ ಎಂದು ಬರೆಯಲಾಗಿದೆ. ಈ ಎಲ್ಲದರಿಂದ, ಪೋಸ್ಟ್‌ನಲ್ಲಿರುವ ಚಿತ್ರವು 2013ರಲ್ಲಿ ಅಲಹಾಬಾದ್‌ನಲ್ಲಿ ನಡೆದ ಕುಂಭ ಮೇಳದಲ್ಲಿನ ಕ್ಯಾಂಪ್‌ಸೈಟ್ ಅನ್ನು ತೋರಿಸುತ್ತದೆ ಎಂಬುದು ಸ್ಪಷ್ಟವಾಗಿದೆ. ಅಲ್ಲದೆ, ಈ ಚಿತ್ರವು ಸಿಂಘುವಿನಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಯಾವುದೇ ರೀತಿಯಲ್ಲಿ ಸಂಬಂಧಿಸಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದೆ.
ಹೊಸ ಕೃಷಿ ಕಾನೂನುಗಳ ಬಗ್ಗೆ ಪ್ರತಿಭಟಿಸುತ್ತಿರುವ ರೈತರು ಸಿಂಘು ಗಡಿಯಲ್ಲಿ ಡೇರೆಗಳನ್ನು ನಿರ್ಮಿಸಿದ್ದರೂ, ಪೋಸ್ಟ್‌ನಲ್ಲಿರುವ ಚಿತ್ರವು ಸಿಂಘು ಗಡಿಯಲ್ಲಿ ಕ್ಲಿಕ್ಕಿಸಲಾಗಿರುವ ಚಿತ್ರವಲ್ಲ. ಹೊಸದಾಗಿ ಜಾರಿಗೆ ತರಲಾದ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಯ ಸಮಯದಲ್ಲಿ, ಈ ರೀತಿಯ ಪೋಸ್ಟ್‌ಗಳನ್ನು ತಪ್ಪು ಮಾಹಿತಿ ನೀಡುವ ಪ್ರತಿಪಾದನೆಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಒಟ್ಟಾರೆಯಾಗಿ ಹೇಳುವುದಾದರೆ, 2013ರ ಅಲಹಾಬಾದ್ ಕುಂಭಮೇಳದ ಚಿತ್ರವು ರೈತರ ಪ್ರತಿಭಟನೆಯದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.