Fake News - Kannada
 

ಹವಾಮಾನ ಬದಲಾವಣೆ ಪ್ರತಿಭಟನೆಯ ಅಣುಕು ವೀಡಿಯೊವನ್ನು ಉಕ್ರೇನಿಯನ್ ನಾಗರಿಕರ ನಕಲಿ ಮೃತದೇಹಗಳೆಂದು ಪಾಶ್ಚಿಮಾತ್ಯ ಮಾಧ್ಯಮಗಳು ತೋರಿಸಿವೆ ಎಂದು ಹಂಚಿಕೊಳ್ಳಲಾಗಿದೆ

0

ರಷ್ಯಾ ಉಕ್ರೇನ್ ಮೇಲೆ ನಡೆಸುತ್ತಿದ್ದ ಯುದ್ಧಕ್ಕೆ ಬ್ರೇಕ್ ಬಿದ್ದಿದ್ದು ಉಭಯ ನಾಯಕರು ಪರಸ್ಪರ ಮಾತುಕತೆಗೆ ಮುಂದಾಗಿದ್ದಾರೆ. ಈ  ಮಧ್ಯೆ  ಪಾಶ್ಚಿಮಾತ್ಯ ಮಾಧ್ಯಮಗಳು ಉಕ್ರೇನಿಯನ್ ನಾಗರಿಕರ ನಕಲಿ ಮೃತದೇಹಗಳನ್ನು ತೋರಿಸುತ್ತಿವೆ ಎಂದು ಹೇಳುವ ಪೋಸ್ಟ್ ಮೂಲಕ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೊಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯ ಸತ್ಯಾಸತ್ಯತೆಗಳನ್ನು ಪರಿಶೀಲಿಸೋಣ.

ಪ್ರತಿಪಾದನೆ: ಉಕ್ರೇನಿಯನ್ ನಾಗರಿಕರ ನಕಲಿ ಮೃತ ದೇಹಗಳನ್ನು ತೋರಿಸುವ ಪಾಶ್ಚಿಮಾತ್ಯ ಮಾಧ್ಯಮವನ್ನು ಚಿತ್ರಿಸುವ ವೀಡಿಯೊ.

ನಿಜಾಂಶ: ವೀಡಿಯೊ ವಿಯೆನ್ನಾದಲ್ಲಿ ಹವಾಮಾನ ಬದಲಾವಣೆಗೆ ಸಂಬಂಧಿಸಿದ ಪ್ರತಿಭಟನೆಯಾಗಿದ್ದು ಇದು ಉಕ್ರೇನ್‌ ಯುದ್ದದ ವಿಡಿಯೋ ಅಲ್ಲ. ವರದಿಗಾರನ ಹಿಂದೆ ಶವಗಳಂತೆ ತೋರಿಸಿರುವ ಅದೆಲ್ಲವು ಜೀವಂತ ಮನುಷ್ಯರು ಎಂದು ತಿಳಿದು ಬಂದಿದೆ. ಜನರು ಪ್ರತಿಭಟನೆ ಮಾಡುವ ವೇಳೆ ಸಾಂಕೇತಿಕವಾಗಿ ಶವಗಳಂತೆ ಮಲಗಿದ್ದಾರೆ. ಹವಾಮಾನ ಬದಲಾವಣೆಯಿಂದಾಗಿ ಆಸ್ಟ್ರಿಯಾದಲ್ಲಿ ಪ್ರತಿದಿನ 49 ಸಾವುಗಳು ಸಂಭವಿಸಬಹುದು ಎಂದು ಹೇಳಲಾಗಿದೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವೀಡಿಯೊದ ಸ್ಕ್ರೀನ್‌ಶಾಟ್‌ಅನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಲಾಗಿದ್ದು, ಆಸ್ಟ್ರಿಯನ್ ಸುದ್ದಿ ವೆಬ್‌ಸೈಟ್‌ನಲ್ಲಿ ಇದೇ ರೀತಿಯ ದೃಶ್ಯಗಳೊಂದಿಗೆ ಪೂರ್ಣ ವೀಡಿಯೊ ಲಭ್ಯವಾಗಿದೆ. 04 ಫೆಬ್ರವರಿ 2022 ರಂದು ಅಪ್‌ಲೋಡ್ ಮಾಡಲಾದ ಪೂರ್ಣ ವೀಡಿಯೊವು ವಿಯೆನ್ನಾದಲ್ಲಿ ನಡೆದ ಪ್ರದರ್ಶನದ ದೃಶ್ಯಗಳು ಎಂದು ಹೇಳುತ್ತದೆ. OE24.TV ಯ ಅಧಿಕೃತ ಚಾನೆಲ್‌ನಿಂದ ಅದೇ ವೀಡಿಯೊವನ್ನು YouTube ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ‘WIEN: DEMO GEGEN KLIMAPOLITIK’  (‘ವಿಯೆನ್ನಾ: ಹವಾಮಾನ ನೀತಿ ವಿರುದ್ಧ ಡೆಮೊ’) ವೀಡಿಯೊದಲ್ಲಿ ಜನರು ಬ್ಯಾನರ್‌ಗಳನ್ನು ಹಿಡಿದಿರುವುದನ್ನು ನೋಡಬಹುದು. ಅದರಲ್ಲಿ ‘ಹವಾಮಾನ ಸಂರಕ್ಷಣಾ ಕಾಯ್ದೆ ಜೀವಗಳನ್ನು ಉಳಿಸುತ್ತದೆ’ ಮತ್ತು ‘ಪ್ರಸ್ತುತ ಜಾರಿ ಮಾಡಲು ಹೊರಟಿರುವ ಹವಾಮಾನ ನೀತಿಗೆ ದಿಕ್ಕಾರ’ ಎಂದು ಬರೆಯಲಾಗಿದೆ. ಈ ಹೋರಾಟದಲ್ಲಿ ಭಾಗವಹಿಸಿದ ಕಾರ್ಯಕರ್ತರ ಸಂದರ್ಶನವನ್ನು ಅದೇ ದಿನ ಅಪ್‌ಲೋಡ್ ಮಾಡಿದ್ದು ಅದೇ ವೆಬ್‌ಸೈಟ್‌ನಲ್ಲಿ ನೋಡಬಹುದು.

ವಿಯೆನ್ನಾದಲ್ಲಿ ನಡೆದ ಘಟನೆಯನ್ನು ವರದಿ ಮಾಡಿದ ವ್ಯಕ್ತಿ OE24.TV ಯ ವರದಿಗಾರ, ‘ಮಾರ್ವಿನ್ ಬರ್ಗೌರ್’ ಎಂದು ಗುರುತಿಸಲಾಗಿದ್ದು. ತನ್ನ ಫೇಸ್‌ಬುಕ್ ಪುಟದಲ್ಲಿ ಮಾರ್ವಿನ್ ಬರ್ಗೌರ್ ವಿಯೆನ್ನಾದಲ್ಲಿ ‘ಫ್ರೈಡೇಸ್ ಫಾರ್ ಫ್ಯೂಚರ್’ ಎಂಬ ಹವಾಮಾನ ವೈಪರಿತ್ಯಕ್ಕೆ ಸಂಬಂಧಿಸಿದ ಪ್ರತಿಭಟನೆಯ ವೀಡಿಯೊ ಎಂದು ಸ್ಪಷ್ಟಪಡಿಸಿದ್ದಾರೆ. ಆಸ್ಟ್ರಿಯಾದಲ್ಲಿ ಹವಾಮಾನ ಬದಲಾವಣೆಯಿಂದಾಗಿ ಪ್ರತಿದಿನ 49 ಸಾವುಗಳು ಸಂಭವಿಸಬಹುದು ಎಂದು ಹೇಳುವ ಹೊಸ ಅಧ್ಯಯನದ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಜೀವಂತ ಮನುಷ್ಯರನ್ನು ಶವಗಳಂತೆ ಮಲಗಿಸಿ ವರದಿ ಮಾಡಲಾಗಿದೆ. ಹಿಂದೆ ಇದೇ ರೀತಿಯ ವಿಡಿಯೋಗೆ ಕೋವಿಡ್ ಸಮಯದಲ್ಲಿ ಸಂಭವಿಸಿದ ಸಾವುಗಳಿಗೆ ಲಿಂಕ್ ಮಾಡುವ ಮೂಲಕ ವೈರಲ್ ಮಾಡಲಾಗಿತ್ತು. ಅದರ ಹೇಳಿಕೆಯನ್ನು ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ವಿಯೆನ್ನಾದಲ್ಲಿ ಹವಾಮಾನ ಬದಲಾವಣೆಯ ಪ್ರತಿಭಟನೆಯ ಕುರಿತಾದ ವೀಡಿಯೊ ವರದಿಯನ್ನು ಪಾಶ್ಚಿಮಾತ್ಯ ಮಾಧ್ಯಮಗಳು ಉಕ್ರೇನಿಯನ್ ನಾಗರಿಕರ ನಕಲಿ ಮೃತ ದೇಹಗಳು ಎಂದು ತಪ್ಪಾಗಿ ಹಂಚಿಕೊಳ್ಳುವ ಮೂಲಕ ಜನರಿಗೆ ತಪ್ಪು ಮಾಹಿತಿಯನ್ನು ನೀಡುತ್ತಿವೆ.

Share.

Comments are closed.

scroll