ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಸ್ಟುಡಿಯೊದಲ್ಲಿ ಬಾಲಿವುಡ್ ‘ತೌಬಾ ತೌಬಾ’ ಹಾಡಿಗೆ ನೃತ್ಯ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ಲೇಖನದ ಮೂಲಕ ಕ್ಲೇಮ್ ಅನ್ನು ಪರಿಶೀಲಿಸೋಣ.
ಕ್ಲೇಮ್: ಮುತ್ತಯ್ಯ ಮುರಳೀಧರನ್ ಅವರು ‘ತೌಬಾ ತೌಬಾ’ ಹಾಡಿಗೆ ನೃತ್ಯ ಮಾಡುತ್ತಿರುವ ವೀಡಿಯೊ ವೈರಲ್.
ಫ್ಯಾಕ್ಟ್: ಈ ವೀಡಿಯೊದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ಮುತ್ತಯ್ಯ ಮುರಳೀಧರನ್ ಅಲ್ಲ ಬದಲಾಗಿ ಅವರು ಕಿರಣ್ ಜೋಪಾಲೆ ಎಂಬ ಇನ್ಸ್ಟಾಗ್ರಾಮ್ ಇನ್ಫ್ಲ್ಯೂಎನ್ಸರ್. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
ವೈರಲ್ ಕ್ಲೈಮ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ನಾವು ಮುತ್ತಯ್ಯ ಮುರಳೀಧರನ್ ಅವರ ಸೋಶಿಯಲ್ ಮೀಡಿಯಾ ಅಕೌಂಟ್ ಅನ್ನು ಪರಿಶೀಲಿಸಿದ್ದೇವೆ ಆದರೆ ಅವರ ಯಾವುದೇ ಸೋಶಿಯಲ್ ಮೀಡಿಯಾ ಅಕೌಂಟ್ ನಲ್ಲಿ (ಇಲ್ಲಿ ಮತ್ತು ಇಲ್ಲಿ) ಅಂತಹ ಯಾವುದೇ ವೀಡಿಯೊ ಕಂಡುಬಂದಿಲ್ಲ.
ನಾವು ನಂತರ ಆನ್‌ಲೈನ್‌ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ, ಇದು ‘ಕಿರಣ್ ಜೋಪಾಲೆ’ ಎಂಬ ಇನ್ಸ್ಟಾಗ್ರಾಮ್ ಇನ್ಫ್ಲ್ಯೂಎನ್ಸರ್ ಅಪ್‌ಲೋಡ್ ಮಾಡಿದ ಒರಿಜಿನಲ್ ವೀಡಿಯೊಗೆ ನಮ್ಮನ್ನು ಕರೆದೊಯ್ಯಿತು.
ಆತ ತನ್ನ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ವಿವಿಧ ಜನಪ್ರಿಯ ಹಾಡುಗಳ ಕವರ್‌ಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಕಿರಣ್ ಈ ವೀಡಿಯೊವನ್ನು 22 ಜುಲೈ 2024 ರಂದು ಅಪ್‌ಲೋಡ್ ಮಾಡಿದ್ದು, ಕೆಳಗಿನ ಕೊಲಾಜ್‌ನಲ್ಲಿ ನೀವು ಕಿರಣ್ ಮತ್ತು ಮುತ್ತಯ್ಯ ಮುರಳೀಧರನ್ ನಡುವಿನ ಹೋಲಿಕೆಯನ್ನು ಕಾಣಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ಮುತ್ತಯ್ಯ ಮುರಳೀಧರನ್ ಅವರು ‘ತೌಬಾ ತೌಬಾ’ ಹಾಡಿಗೆ ಡಾನ್ಸ್ ಮಾಡಿದ್ದಾರೆ ಎಂದು ಇನ್ಯಾರೋ ಇನ್ಫ್ಲ್ಯೂಎನ್ಸರ್ ನನ್ನು ತಪ್ಪಾಗಿ ಲಿಂಕ್ ಮಾಡಲಾಗಿದೆ.