Fake News - Kannada
 

ಪುಟಿನ್ ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಪಾಕಿಸ್ತಾನದ ಹಣದ ಮನವಿ ವಿಷಯಗಳ ಬಗ್ಗೆ ಮಾತನಾಡಿಲ್ಲ

0

“ನಾನು ಯುಎನ್‌ಎಸ್‌ಸಿಯಲ್ಲಿ ನನ್ನ ಭಾಷಣದ ಸಮಯದಲ್ಲಿ ಗಿಲ್ಗಿಟ್-ಬಾಲ್ಟಿಸ್ತಾನ್ ಭಾರತದ ಭಾಗವಾಗಬೇಕೆಂದು ಸ್ಪಷ್ಟಪಡಿಸಿದೆ. ಗಿಲ್ಗಿಟ್ ಅನ್ನು ತಾತ್ಕಾಲಿಕ ಪ್ರಾಂತ್ಯವನ್ನಾಗಿ ರಚಿಸುವ ಪಾಕಿಸ್ತಾನದ ಉಪಕ್ರಮವನ್ನು ರಷ್ಯಾ ಬೆಂಬಲಿಸುವುದಿಲ್ಲ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹಣವನ್ನು ಕೇಳಿದರು, ಅವರು ಕೆಲವು ಇಸ್ಲಾಮಿಕ್ ಜಿಹಾದಿಗಳನ್ನು ಇಲ್ಲಿಗೆ ಕಳುಹಿಸಲು ಬಯಸಿದ್ದರು” ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರಷ್ಯನ್ ಭಾಷೆಯಲ್ಲಿ ಮಾತನಾಡಿದ್ದಾರೆ ಎನ್ನಲಾದ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೀಡಿಯೊದಲ್ಲಿ ಕಾಣುವ ಸಬ್‌ ಟೈಟಲ್‌ ಬರಹಗಳು (ಉಪಶೀರ್ಷಿಕೆಗಳು) ಸಹ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯಂತೆಯೇಇದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಪ್ರತಿಪಾದನೆ: ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಪಾಕಿಸ್ತಾನದ ಹಣದ ಮನವಿಯ ವಿಷಯಗಳ ಕುರಿತು ಪುಟಿನ್ ಮಾತನಾಡುತ್ತಿರುವ ವೀಡಿಯೊ.

ನಿಜಾಂಶ: ಪಾಶ್ಚಿಮಾತ್ಯ ದೇಶಗಳು ರಷ್ಯಾದ ಮೇಲೆ ಇತ್ತೀಚೆಗೆ ವಿಧಿಸಿರುವ ನಿರ್ಬಂಧಗಳ ಬಗ್ಗೆ ವೀಡಿಯೊದಲ್ಲಿ ಪುಟಿನ್ ಮಾತನಾಡಿದರು. ಪಾಕಿಸ್ತಾನ ಅಥವಾ ಗಿಲ್ಗಿಟ್-ಬಾಲ್ಟಿಸ್ತಾನ್ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಪುಟಿನ್ ರಷ್ಯನ್ ಭಾಷೆಯಲ್ಲಿ ಮಾತನಾಡುವ ಪದಗಳ ನಿಜವಾದ ಅರ್ಥವನ್ನು ಉಪಶೀರ್ಷಿಕೆಗಳು ತಿಳಿಸುವುದಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್ ಮಾಡಿದ ವೀಡಿಯೊದಲ್ಲಿ ಸುದ್ದಿವಾಹಿನಿಯ ಲೋಗೋವನ್ನು ನೋಡಬಹುದು. ಕೆಲವು ಕೀವರ್ಡ್‌ಗಳೊಂದಿಗೆ ಲೊಗೊ ಕುರಿತು ಸರ್ಚ್ ಮಾಡಿದಾಗ ಈ ವಿಡಿಯೋ YouTube ಚಾನಲ್‌ನಲ್ಲಿ ವೀಡಿಯೊವನ್ನು ಲಭ್ಯವಾಗಿದೆ. ಅದೇ ವೀಡಿಯೊವನ್ನು 28 ಫೆಬ್ರವರಿ 2022 ರಂದು “ಪುಟಿನ್ ಆರ್ಥಿಕ ಸಮಸ್ಯೆಗಳ ಕುರಿತು ಸಭೆ ಕರೆದಿದ್ದರು” ಎಂಬ ಹೇಳಿಕೆಯೊಂದಿಗೆ ಅಪ್‌ಲೋಡ್ ಮಾಡಿರುವುದು ಕಂಡುಬಂದಿದೆ -”ಹಾಗಾಗಿ ಪುಟಿನ್ ಮಾಡಿರುವ ಹೇಳಿಕೆಗಳಿಗೂ ವೈರಲ್ ವಿಡಿಯೋದಲ್ಲಿ ಇರುವ ಸಬ್‍ ಟೈಟಲ್‍ಗಳು ಭಿನ್ನವಾಗಿವೆ ಎಂದು ಗಮನಿಸಬಹುದು.

ಪುಟಿನ್ ಹೇಳಿಕೆಗಳ ಸರಿಯಾದ ಅನುವಾದದೊಂದಿಗೆ ವಿವಿಧ ಪ್ರತಿಷ್ಠಿತ ಏಜೆನ್ಸಿಗಳು ಅದೇ ವೀಡಿಯೊಗಳನ್ನು ಪೋಸ್ಟ್ ಮಾಡಿವೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು. ರಷ್ಯಾದ ಮೇಲೆ ಪಾಶ್ಚಿಮಾತ್ಯ ದೇಶಗಳು ಇತ್ತೀಚೆಗೆ ವಿಧಿಸಿರುವ ನಿರ್ಬಂಧಗಳ ಬಗ್ಗೆ ಅವರು ಮಾತನಾಡಿದರು. ಆದರೆ ಅದರಲ್ಲಿ ಪಾಕಿಸ್ತಾನ ಅಥವಾ ಗಿಲ್ಗಿಟ್-ಬಾಲ್ಟಿಸ್ತಾನ್ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

ಅಲ್ಲದೆ, ವೈರಲ್ ವಿಡಿಯೊದಲ್ಲಿ ಹೇಳಿದಂತೆ ಪುಟಿನ್ ಯಾವುದೆ ಹೇಳಿಕೆಗಳನ್ನು ನೀಡಿದ ಸುದ್ದಿ ವರದಿಗಳಿಲ್ಲ. ಆದರೆ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಇತ್ತೀಚೆಗೆ ಪುಟಿನ್ ಅವರನ್ನು ಭೇಟಿಯಾದಾಗ, ಅವರ ಮುಂದೆ ಕಾಶ್ಮೀರದ ವಿಷಯವನ್ನು ಪ್ರಸ್ತಾಪಿಸಿದರು ಎಂದು ವರದಿಯಾಗಿದೆ. ಫೆಬ್ರವರಿ 2022 ರಲ್ಲಿ, ‘ಭಾರತದಲ್ಲಿನ ರಷ್ಯಾದ ರಾಯಭಾರ ಕಚೇರಿ’ ಹೀಗೆ ಹೇಳಿದೆ – “ಕಾಶ್ಮೀರದ ವಿಷಯದ ಬಗ್ಗೆ ರಷ್ಯಾದ ಅಧಿಕೃತ ನಿಲುವು ಮತ್ತು ದ್ವಿಪಕ್ಷೀಯ ವಿವಾದಗಳಲ್ಲಿ ಹಸ್ತಕ್ಷೇಪ ಮಾಡದಿರುವ ರಷ್ಯಾದ ತತ್ವಬದ್ಧ ನಿಲುವು ಬದಲಾಗಿಲ್ಲ. ಭಾರತ ಮತ್ತು ಪಾಕಿಸ್ತಾನ ಮಾತ್ರ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕು ಮತ್ತು ಇದು 1972 ರ ಸಿಮ್ಲಾ ಒಪ್ಪಂದ ಮತ್ತು 1999 ರ ಲಾಹೋರ್ ಒಪ್ಪಂದದ ಘೋಷಣೆಗೆ ಧಕ್ಕೆ ಬಾರದಂತೆ ಇರಬೇಕು ಎಂದು ಪುಟಿನ್ ಹೇಳಿದ್ದಾರೆ ಎನ್ನುವ ವರದಿಗಳಾಗಿವೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ, ಪುಟಿನ್ ರಷ್ಯಾದ ಮೇಲೆ ಪಾಶ್ಚಿಮಾತ್ಯ ದೇಶಗಳು ಇತ್ತೀಚೆಗೆ ವಿಧಿಸಿರುವ ನಿರ್ಬಂಧಗಳ ಬಗ್ಗೆ ಮಾತನಾಡಿದ್ದಾರೆ, ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಪಾಕಿಸ್ತಾನದ ಹಣದ ಮನವಿಯ ವಿಷಯಗಳ ಬಗ್ಗೆ ಅಲ್ಲ. ಹಾಗಾಗಿ ಸಮಾಜಿಕ ಮಾಧ್ಯಮಗಳಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

Share.

Comments are closed.

scroll