ಉಕ್ರೇನ್ ಯುದ್ದ ಪ್ರದೇಶದಲ್ಲಿ ಅಪಾಯಕ್ಕೆ ಸಿಲುಕಿಕೊಂಡಿರುವ ವಿದ್ಯಾರ್ಥಿನಿಯಂತೆ ಸಹಾಯ ಕೋರಿ ವೀಡಿಯೊವನ್ನು ಪೋಸ್ಟ್ ಮಾಡಿದ ವೈಶಾಲಿ ಯಾದವ್ ರನ್ನು ನಕಲಿ ಪೋಸ್ಟ್ ಮಾಡಿದ್ದಕ್ಕೆ ಉತ್ತರ ಪ್ರದೇಶ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಪ್ರತಿಪಾದನೆ: ವೈಶಾಲಿ ಯಾದವ್ ಉಕ್ರೇನ್‌ನಲ್ಲಿ ಓದುತ್ತಿರುವಂತೆ ನಕಲಿ ವಿಡಿಯೋ ಪೋಸ್ಟ್ ಮಾಡಿ ಸುಳ್ಳು ಸುದ್ದಿಯನ್ನು ಹರಡಿದ ಕಾರಣಕ್ಕೆ ಉತ್ತರ ಪ್ರದೇಶ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
ನಿಜಾಂಶ: ವೈಶಾಲಿ ಯಾದವ್ ಕಳೆದ ವರ್ಷ ಉತ್ತರ ಪ್ರದೇಶದ ಪಂಚಾಯತ್ ಚುನಾವಣೆಯ ಸಮಯದಲ್ಲಿ ಭಾರತಕ್ಕೆ ಬಂದಿದ್ದರು. ಅಲ್ಲದೆ ಅವರು ಗ್ರಾಮ ಪ್ರಧಾನರಾಗಿ ಸ್ಪರ್ಧಿಸಿ ಗೆದ್ದಿದ್ದರು. ಚುನಾವಣೆಯ ನಂತರ ಅವರು ಅಧ್ಯಯನಕ್ಕಾಗಿ ಉಕ್ರೇನ್‌ಗೆ ಮರಳಿದರು. ಆದರೆ ಆಕೆಯ ವೀಡಿಯೊ ಸುಳ್ಳು ಹೇಳಿಕೆಗಳೊಂದಿಗೆ ವೈರಲ್ ಆಗುತ್ತಿದ್ದಂತೆ, ಹರ್ದೋಯ್ ಎಸ್ಪಿ ಆಕೆಯ ಸ್ಥಳ (ಭಾರತದಂತೆ) ಮತ್ತು ಬಂಧನದ ಸುದ್ದಿಗಳು ನಕಲಿ ಎಂದು ಹೇಳಿದ್ದಾರೆ. ಅವರು ಪ್ರಸ್ತುತ ರೊಮೇನಿಯಾದಲ್ಲಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇನ್ನೊಂದು ವಿಡಿಯೋದಲ್ಲಿ ವೈಶಾಲಿ ಯಾದವ್ ಕೂಡ ಇದನ್ನೇ ಹೇಳಿದ್ದಾರೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯು ತಪ್ಪಾಗಿದೆ..
ವೈಶಾಲಿ ಯಾದವ್ ಅವರ ಬಗ್ಗೆ ಅಂತರ್ಜಾಲದಲ್ಲಿ ಮಾಹಿತಿ ಪಡೆದಿದ್ದು, ಅವರು ಇತ್ತೀಚೆಗೆ ಉಕ್ರೇನ್‌ನ ಪರಿಸ್ಥಿತಿಯ ಕುರಿತು ಪೋಸ್ಟ್ ಮಾಡಿರುವ ವೀಡಿಯೊ ಲಭ್ಯವಾಗಿದೆ. ‘ಹಿಂದುಸ್ತಾನ್’ ಟ್ವೀಟ್‌ನಲ್ಲಿ ವೀಡಿಯೊವನ್ನು ನೋಡಬಹುದು.
ಡಿಸೆಂಬರ್ 2021 ರಲ್ಲಿ ‘ಅಮರ್ ಉಜಾಲಾ’ ಪ್ರಕಟಿಸಿದ ಲೇಖನದಲ್ಲಿ, ಕಳೆದ ವರ್ಷ ಉತ್ತರ ಪ್ರದೇಶದ ಪಂಚಾಯತ್ ಚುನಾವಣೆಯ ಸಮಯದಲ್ಲಿ ವೈಶಾಲಿ ಭಾರತಕ್ಕೆ ಬಂದಿದ್ದರು. ಆಗ ಅವರು ಗ್ರಾಮ ಪ್ರಧಾನರಾಗಿ ಸ್ಪರ್ಧಿಸಿ ಗೆದ್ದಿದ್ದರು ಎಂದು ಮತ್ತು ಚುನಾವಣೆಯ ನಂತರ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್‌ಗೆ ಮರಳಿದ ಆಕೆ ಅಲ್ಲಿಂದ ಪಂಚಾಯತ್ ಚಟುವಟಿಕೆಗಳನ್ನು ಸಮನ್ವಯಗೊಳಿಸುತ್ತಿದ್ದರು ಎಂದು ವರದಿಯಾಗಿದೆ. ವೈಶಾಲಿ ಯಾದವ್ ಅವರ ವಿಡಿಯೋ ವೈರಲ್ ಆದ ನಂತರ ಸ್ಥಳಿಯ ಅಧಿಕಾರಿಗಳು ವೈಶಾಲಿ ಯಾದವ್ ಅವರ ಕೆಲಸಗಳ ಮೇಲೆ ತೀವ್ರ ನಿಗಾವಹಿಸಿದ್ದು, ಗ್ರಾಮ ಪ್ರಧಾನ್ ಆಗಿ ಆಯ್ಕೆಯಾದ ನಂತರ ಆಕೆ ಉಕ್ರೇನ್‌ಗೆ ಹೇಗೆ ಮರಳಿದ್ದಾರೆ ಮತ್ತು ಯಾವುದೇ ಅಕ್ರಮಗಳು ನಡೆದಿವೆಯೇ ಎಂಬ ವಿಷಯಗಳ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. ಸಂಬಂಧಿತ ಸುದ್ದಿ ಲೇಖನಗಳನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು.
ನಕಲಿ ವಿಡಿಯೋ ಮಾಡಿದ್ದಕ್ಕಾಗಿ ಆಕೆಯನ್ನು ಬಂಧಿಸಲಾಗಿದೆ ಎಂಬ ಪೋಸ್ಟ್‌ಗಳು ವೈರಲ್ ಆಗುತ್ತಿದ್ದಂತೆ, ಹರ್ದೋಯ್ ಎಸ್ಪಿ ಆಕೆಯ ಬಂಧನದ ಸುದ್ದಿಗಳು ನಕಲಿ ಎಂದು ಹೇಳಿದ್ದಾರೆ. ಅವರು ಪ್ರಸ್ತುತ ರೊಮೇನಿಯಾದಲ್ಲಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ ಎಂದು ‘ದೈನಿಕ್ ಭಾಸ್ಕರ್’ ವರದಿ ಮಾಡಿದೆ. ಹಲವು ವರದಿಗಾರರು ಹರ್ದೋಯ್ ಎಸ್ಪಿ ಅವರ ಸ್ಪಷ್ಟೀಕರಣವನ್ನು ಪೋಸ್ಟ್ ಮಾಡಿದ್ದಾರೆ, ಅದನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಅಲ್ಲದೆ, ವೈಶಾಲಿ ಯಾದವ್ ಅವರ ಮತ್ತೊಂದು ವೀಡಿಯೊವನ್ನು ‘ದೈನಿಕ್ ಭಾಸ್ಕರ್’ವೆಬ್‌ಸೈಟ್‌ನಲ್ಲಿ ನೋಡಬಹುದು, ಇದರಲ್ಲಿ ಅವರು ಭಾರತದಲ್ಲಿದ್ದಾರೆ ಎಂಬ ಸುಳ್ಳು ಹೇಳಿಕೆಗಳನ್ನು ನಿರಾಕರಿಸಿದ್ದಾರೆ. ಅವಳು ಉಕ್ರೇನ್‌ನಲ್ಲಿದ್ದರು, ಆದರೆ ಯುದ್ಧ ಆರಂಭವಾದ ನಂತ ಪ್ರಸ್ತುತ ರೊಮೇನಿಯಾದಲ್ಲಿದ್ದಾರೆ ಎಂದು ಅವರು ಹೇಳುತ್ತಾರೆ. ಮಹೇಂದ್ರ ಯಾದವ್ ಎಂಬುವವರು ವೈಶಾಲಿಯ ತಂದೆ ಮತ್ತು ಸಮಾಜವಾದಿ ಪಕ್ಷದ ನಾಯಕ ಎಂದು ವರದಿಯಾಗಿದೆ.
ಆದರೆ, ಆ ಫೋಟೋಗಳಲ್ಲಿ ಇರುವ ಹುಡುಗಿಯ ಬಗ್ಗೆ ಮಾಹಿತಿ ಹುಡುಕಿದಾಗ ಆ ಫೋಟೋದಲ್ಲಿರುವ ಹುಡುಗಿ ವೈಶಾಲಿ ಯಾದವ್ ಅಲ್ಲ ಎಂಬುದು ಗೊತ್ತಾಯಿತು. ಆಕೆಯೇ ಕಮಲಾ ಚೌಧರಿ, ಆಯುಧಗಳಿಂದ ವೀಡಿಯೋ ಮಾಡಿ ಪೊಲೀಸರಿಗೆ ಸವಾಲು ಹಾಕಿದ್ದಕ್ಕಾಗಿ ಬಂಧನಕ್ಕೊಳಗಾಗಿದ್ದಳು. ಆಕೆಯನ್ನು ಬಂಧಿಸಿದ್ದು ಉತ್ತರ ಪ್ರದೇಶದ ಪೊಲೀಸರಲ್ಲ, ಬದಲಿಗೆ ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆಂದು ತಿಳಿದು ಬಂದಿದೆ. ಆಕೆಯ ಬಂಧನಕ್ಕೆ ಸಂಬಂಧಿಸಿದಂತೆ ‘ನಾಗೌರ್ ಪೊಲೀಸರು’ ಮಾಡಿರುವ ಟ್ವೀಟ್ ಅನ್ನು ಇಲ್ಲಿ ನೋಡಬಹುದು. ಅವಳ ಬಗ್ಗೆ ಹೆಚ್ಚಿನ ವಿವರಗಳನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು.
ಇದೇ ರೀತಿಯ ಹೇಳಿಕೆಯೊಂದಿಗೆ ಹುಡುಗಿಯ ಮತ್ತೊಂದು ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ವೈರಲ್ ಪೋಸ್ಟ್‌ನ ಫೋಟೋದಲ್ಲಿರುವ ಹುಡುಗಿ ವೈಶಾಲಿ ಯಾದವ್ ಅಲ್ಲ. ವೈಶಾಲಿ ಯಾದವ್ ಮತ್ತು ಫೋಟೋದಲ್ಲಿರುವ ಹುಡುಗಿಯ ಮುಖದ ವೈಶಿಷ್ಟ್ಯಗಳನ್ನು ನೀವು ಹೋಲಿಕೆ ಮಾಡಿದಾಗ, ಇಬ್ಬರೂ ವ್ಯಕ್ತಿಗಳು ವಿಭಿನ್ನವಾಗಿರುವುದನ್ನು ಕಾಣಬಹುದು. ಕೆಲವು ವೆಬ್‌ಸೈಟ್‌ಗಳು ಫೋಟೋದಲ್ಲಿರುವ ಹುಡುಗಿ ನೇಹಾ ಸಾಂಗ್ವಾನ್ (ತನ್ನ ಜಮೀನುದಾರನ ಮಕ್ಕಳನ್ನು ನೋಡಿಕೊಳ್ಳಲು ಉಕ್ರೇನ್‌ನಲ್ಲಿ ಉಳಿದುಕೊಂಡ ಹುಡುಗಿ) ಎಂದು ಉಲ್ಲೇಖಿಸಿದ್ದರೂ, ಆ ಹುಡುಗಿಯ ಬಗ್ಗೆ ಸ್ವತಂತ್ರವಾಗಿ ಯಾವುದೇ ವಿವರಗಳನ್ನು ಪಡೆಯಲು ಸಾಧ್ಯವಾಗಲಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ವೈಶಾಲಿ ಯಾದವ್ ಸುಳ್ಳು ಹೇಳಿಕೆ ನೀಡಿ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ ಎಂದು ಅವರನ್ನು ಬಂಧಿಸಲಾಗಿದೆ ಎಂಬ ವರದಿಗಳು ಸುಳ್ಳಾಗಿದೆ. ಆಕೆ ಪ್ರಸ್ತುತ ಭಾರತದಲ್ಲಿ ಇಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಪ್ರತಿಪಾದಿಸಲಾಗಿರುವ ಹೇಳಿಕೆ ತಪ್ಪಾಗಿದೆ.