Fake News - Kannada
 

ಹಳೆಯ ಮತ್ತು ಸಂಬಂಧವಿಲ್ಲದ ವಿಡಿಯೋಗಳನ್ನು ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮದ ಸಂದರ್ಭದಲ್ಲಿ ತಪ್ಪಾಗಿ ಹಂಚಿಕೊಳ್ಳಲಾಗಿದೆ

0

ಆಗಸ್ಟ್ 5 ರಂದು ನಡೆದ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಮಾಡಿದ ಅಲಂಕಾರಗಳು ಎಂಬುದಾಗಿ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅವು ನಿಜವೇ ಪರಿಶೀಲಿಸೋಣ ಬನ್ನಿ.

ಪ್ರತಿಪಾದನೆ: ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕಾಗಿ ಮಾಡಲಾದ ಅಲಂಕಾರಗಳ ವಿಡಿಯೋ ಇದಾಗಿದೆ.

ನಿಜಾಂಶ: ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಹಲವು ಅಲಂಕಾರಗಳನ್ನು ಮಾಡಲಾಗಿದೆಯಾದರೂ, ಪೋಸ್ಟ್ ಮಾಡಲಾದ ವಿಡಿಯೋಗಳು ಹಳೆಯದಾಗಿವೆ ಮಾತ್ರವಲ್ಲ ಅದಕ್ಕೂ ಅಯೋಧ್ಯೆಗೂ ಸಂಬಂಧವಿಲ್ಲ. ಹಾಗಾಗಿ ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವಿಡಿಯೋ 1: (ಆರ್ಕೈವ್ ಆವೃತ್ತಿ)

ವಿಡಿಯೋದ ಸ್ಕ್ರೀನ್‌ ಶಾಟ್‌ ಗಳನ್ನು ಗೂಗಲ್‌ನಲ್ಲಿ ರಿವರ್ಸ್ ಇಮೇಜ್ ಮೂಲಕ ಹುಡುಕಿದಾಗ 2020ರ ಫೆಬ್ರವರಿಯ ವಿಡಿಯೋ ದೊರಕಿದೆ. ಅಲ್ಲದೇ ಅದೇ ರೀತಿಯ 2020ರ ಜನವರಿಯ ಯೂಟ್ಯೂಬ್‌ ವಿಡಿಯೋ ಸಹ ದೊರಕಿದ್ದು ಅದರಲ್ಲಿ, ‘ಶ್ರೀರಂಗನಾಥಸ್ವಾಮಿ ದೇವಾಲಯ, ಜಿಯಾಗುಡ, ಹೈದರಾಬಾದ್’  ಎಂದು ಬರೆದಿದೆ.

ಆ ಕೀವರ್ಡ್‌ ಗಳನ್ನು ಬಳಸಿ ಹುಡುಕಿದಾಗ ಹೈದರಾಬಾದ್‌ ನ ಆ ದೇವಾಲಯದ ‘2020ರ ವೈಕುಂಠ ಏಕಾದಶಿ’ ಹಬ್ಬಕ್ಕಾಗಿ ಮಾಡಿದ ಅಲಂಕಾರಗಳು ಎಂದು ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದ ಲೇಖನಗಳು ಇಲ್ಲಿ ನೋಡಬಹುದು. ಇತರ ವಿಡಿಯೋಗಳು ಸಹ ಇದೇ ಹಬ್ಬಕ್ಕೆ ಸಂಬಂಧಿಸಿದ್ದು. ಆ ವಿಡಿಯೋಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹದು. ಹಾಗಾಗಿ ಈ ವಿಡಿಯೋ ಅಯೋಧ್ಯೆಗೆ ಸಂಬಂಧಿಸಿಲ್ಲ.

ವಿಡಿಯೋ 2: (ಆರ್ಕೈವ್ ಆವೃತ್ತಿ)

ಇದೇ ವಿಡಿಯೋಲೇಸರ್‌ ಲೈಟ್‌ ಶೋ|ರಾಮನವಮಿ|2019’’ ಎಂಬ ಶೀರ್ಷಿಕೆಯೊಂದಿಗೆ 2019ರ ಏಪ್ರಿಲ್‌ ನಲ್ಲಿ ಯೂಟ್ಯೂಬ್‌ ಗೆ ಅಪ್‌ ಲೋಡ್ ಆಗಿದೆ. ಮತ್ತೊಬ್ಬ ಜಾಲತಾಣ ಬಳಕೆದಾರರು ಸಹ ಇದೇ ರೀತಿಯ ಹಿನ್ನೆಲೆಗಳನ್ನು ಒಳಗೊಂಡ ವಿಡಿಯೋವೊಂದನ್ನು 2019ರ ಏಪ್ರಿಲ್‌ ನಲ್ಲಿ ಯೂಟ್ಯೂಬ್‌ ಗೆ ಅಪ್‌ ಲೋಡ್‌ ಮಾಡಿದ್ದಾರೆ. ಈ ವಿಡಿಯೋ ಬಗ್ಗೆ ಪ್ರಶ್ನಿಸಿದಾಗ ಅದು, ಮಹಾರಾಷ್ಟ್ರದ ಶಹದಾದಲ್ಲಿ ನಡೆದ ರಾಮನವಮಿಯ ಮೆರವಣಿಗೆಯ ವಿಡಿಯೋ ಎಂದು ಅದನ್ನು ಅಪ್ ಲೋಡ್ ಮಾಡಿದವರು ತಿಳಿಸಿದ್ದಾರೆ.

ಆ ಕೀವರ್ಡ್‌ ಗಳನ್ನು ಬಳಸಿ ಹುಡುಕಿದಾಗ, ಅದೇ ಹಿನ್ನೆಲೆಗಳನ್ನು ಒಳಗೊಂಡ ವಿಡಿಯೋವೊಂದನ್ನು ಮರಾಠಿ ಭಾಷೆಯ ಸ್ಥಳೀಯ ಚಾನೆಲ್‌ ಒಂದು ಪ್ರಸಾರ ಮಾಡಿದೆ. ಆ ವಿಡಿಯೋ ಮಹಾರಾಷ್ಟ್ರದ ಶಹದಾದಲ್ಲಿ ನಡೆದ ರಾಮನವಮಿಯದು ಎಂದು ಬರೆಯಲಾಗಿದೆ. ಹಾಗಾಗಿ ಈ ವಿಡಿಯೋ ಸಹ ಅಯೋಧ್ಯೆಗೆ ಸಂಬಂಧಿಸಿದ್ದಲ್ಲ.

ಮೇಲೆ ಪೋಸ್ಟ್ ಮಾಡಲಾದ ಎರಡೂ ವಿಡಿಯೋಗಳು ಅಯೋಧ್ಯೆಗೆ ಸಂಬಂಧಿಸಿಲ್ಲ. ನಿಜವಾಗಿಯೂ ಅಯೋಧ್ಯೆ ಭೂಮಿಪೂಜೆಗೆ ಅಲಂಕರಿಸಲಾದ ವಿಡಿಯೋ ಇಲ್ಲಿದೆ. ರಾಮಮಂದಿರ ಭೂಮಿಪೂಜೆ ಕಾರ್ಯಕ್ರಮಕ್ಕೆ ಅಯೋಧ್ಯೆ ಶೃಂಗಾರಗೊಂಡಿದ್ದರ ಬಗ್ಗೆ ಸುದ್ದಿಸಂಸ್ಥೆ ANI ವರದಿ ಮಾಡಿದೆ.

ಒಟ್ಟಿನಲ್ಲಿ ಹಳೆಯ ಮತ್ತು ಸಂಬಂಧವಿಲ್ಲದ ವಿಡಿಯೋಗಳನ್ನು ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಜೋಡಿಸಿ ತಪ್ಪಾಗಿ ಹಂಚಿಕೊಳ್ಳಲಾಗಿದೆ.

Share.

About Author

Comments are closed.

scroll