ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರ ರಚನೆಯಾದ ನಂತರ, ಬಾಂಗ್ಲಾದೇಶದ ವಿವಿಧ ಸಂಸ್ಥೆಗಳಲ್ಲಿ ಹಿಂದೂಗಳು, ಅಲ್ಪಸಂಖ್ಯಾತರನ್ನು ಸೇರಿದಂತೆ ಹಲವರನ್ನು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವಂತೆ ಒತ್ತಾಯಿಸಲಾಗಿದೆ ಎಂದು ವರದಿಯಾಗಿದೆ. ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಹಾಕಿ ವಿದ್ಯಾರ್ಥಿನಿಯರು ಸುತ್ತು ವರೆದಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈಕೆಯನ್ನು ಅಜೀಂಪುರ ಸರ್ಕಾರಿ ಪ್ರಾಂಶುಪಾಲರಾದ ಗೀತಾಂಜಲಿ ಬರುವ ಎಂಬ ಕ್ಲೇಮ್ ನಲ್ಲಿ ಫೋಟೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಶಾಲಾ ಮತ್ತು ಕಾಲೇಜು ಬಾಲಕಿಯರು ಮರಕ್ಕೆ ಕಟ್ಟಿ ಹಾಕಿ, ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಲಾಗಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೈಮ್ ಅನ್ನು ಪರಿಶೀಲಿಸೋಣ.
ಕ್ಲೇಮ್: ಗೀತಾಂಜಲಿ ಬರುವ, ಅಜೀಂಪುರ ಸರ್ಕಾರ ಪ್ರಾಂಶುಪಾಲರು. ಬಾಂಗ್ಲಾದೇಶದ ಢಾಕಾದಲ್ಲಿ ಬಾಲಕಿಯರ ಶಾಲೆ, ಕಾಲೇಜನ್ನು ಮರಕ್ಕೆ ಕಟ್ಟಿಹಾಕಿ ರಾಜೀನಾಮೆ ನೀಡುವಂತೆ ಒತ್ತಾಯಿಸಲಾಯಿತು.
ಫ್ಯಾಕ್ಟ್: ಗೀತಾಂಜಲಿ ಬರುವ ಅಜೀಂಪುರ ಸರಕಾರಿ ಪ್ರಾಂಶುಪಾಲಕಿ. ಭ್ರಷ್ಟಾಚಾರ, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ವಿದ್ಯಾರ್ಥಿನಿಯರ ಅಸಭ್ಯತನದ ಆರೋಪದ ಮೇಲೆ ಬಾಲಕಿಯರ ಶಾಲೆ ಮತ್ತು ಕಾಲೇಜಿನಿಂದ ರಾಜೀನಾಮೆ ಮಾಡಿಸಲಾಯಿತು. ಆದರೆ, ವೈರಲ್ ಫೋಟೋದಲ್ಲಿ ಮರಕ್ಕೆ ಕಟ್ಟಿದ ಮಹಿಳೆ ಪ್ರಾಂಶುಪಾಲರಾದ ಗೀತಾಂಜಲಿ ಬರುವ ಅಥವಾ ಇನ್‌ಸ್ಟಿಟ್ಯೂಟ್‌ನ ಯಾವುದೇ ಶಿಕ್ಷಕರಲ್ಲ. ಬದಲಾಗಿ ಆಕೆ ಕಾಲೇಜಿನ ಹಳೆ ವಿದ್ಯಾರ್ಥಿನಿ ಎಂದು ಹೇಳಿಕೊಂಡಿದ್ದಾಳೆ ಆದರೆ ಇದನ್ನು ಕಾಲೇಜು ಆಡಳಿತ ಮಂಡಳಿ ನಿರಾಕರಿಸಿದೆ. ಪ್ರತಿಭಟನಾನಿರತ ವಿದ್ಯಾರ್ಥಿಗಳು ಅಡ್ಡಿಪಡಿಸಿದ ಕಾರಣಕ್ಕೆ ಆಕೆಯನ್ನು ಮರಕ್ಕೆ ಕಟ್ಟಿಹಾಕಿದರು, ಆದರೆ ನಂತರ ಭದ್ರತಾ ಸೇನೆಯವರು ಆಕೆಯನ್ನು ರಕ್ಷಿಸಿದರು. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಇಂಟರ್ನೆಟ್ ಹುಡುಕಾಡಿದಾಗ, ಸ್ಥಳೀಯ ಮಾಧ್ಯಮ ವರದಿಗಳಿಗೆ (ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ) ನಮ್ಮನ್ನು ದೊರಕಿದೆ. ಈ ವರದಿಗಳ ಪ್ರಕಾರ, 18 ಆಗಸ್ಟ್ 2024 ರಂದು, ಈ ಬಾಲಕಿಯರು ಅಜೀಂಪುರ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು. ಬಾಂಗ್ಲಾದೇಶದ ಢಾಕಾದಲ್ಲಿರುವ ಬಾಲಕಿಯರ ಶಾಲೆ ಮತ್ತು ಕಾಲೇಜಿನ ಮೇಲೆ ಭ್ರಷ್ಟಾಚಾರ, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ವಿದ್ಯಾರ್ಥಿಗಳ ಅಸಭ್ಯತೆಯ ಆರೋಪದ ಮೇಲೆ ಪ್ರಿನ್ಸಿಪಾಲ್ ಗೀತಾಂಜಲಿ ಬರುವ ಮತ್ತು ಇತರ ಕೆಲವು ಸಿಬ್ಬಂದಿಗಳಿಗೆ ರಾಜೀನಾಮೆ ನೀಡುವಂತೆ ಆರೋಪಿಸಲಾಗಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ ವಿದ್ಯಾರ್ಥಿಗಳು ಪ್ರಾಂಶುಪಾಲರ ಕಚೇರಿಗೆ ಪ್ರವೇಶಿಸಿ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ, ಕೊನೆಗೂ ಅವರು ರಾಜಿನಾಮೆಯನ್ನು ನೀಡಿದರು.
ತದನಂತರ ಈ ಕ್ಲೇಮ್ ನಲ್ಲಿ ಹೇಳಿದ ಪ್ರಕಾರ ಪ್ರಾಂಶುಪಾಲರನ್ನು ಮರಕ್ಕೆ ಕಟ್ಟಲಾಗಿದೆ ಎಂಬ ಹೇಳಿಕೆಯನ್ನು ತನಿಖೆ ಮಾಡಿದಾಗ ಅದಕ್ಕೆ ಯಾವುದೇ ರೀತಿಯ ವರದಿಗಳು ದೊರಕಿಲ್ಲ. ಮತ್ತೊಂದು ಕಡೆಯಿಂದ ವೈರಲ್ ಫೋಟೋವನ್ನು ಸರಿಯಾಗಿ ಗಮನಿಸಿದಾಗ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಮರಕ್ಕೆ ಕಟ್ಟಿದ ಮಹಿಳೆ ಪ್ರಿನ್ಸಿಪಾಲ್ ಗೀತಾಂಜಲಿ ಬರುವ ಅಲ್ಲ ಎಂದು ತಿಳಿದು ಬಂದಿದೆ. ಮರಕ್ಕೆ ಕಟ್ಟಿದ ಮಹಿಳೆ ಮತ್ತು ಪ್ರಿನ್ಸಿಪಾಲ್ ಗೀತಾಂಜಲಿ ಬರುವ ನಡುವಿನ ಹೋಲಿಕೆಯನ್ನು ಕೆಳಗೆ ನೋಡಬಹುದು.
ಹೆಚ್ಚಿನ ಸಂಶೋಧನೆಯ ಮುಖಾಂತರ ಇದು ನಮ್ಮನ್ನು ಲೋಕಲ್ ಮೀಡಿಯಾ ವರದಿಗಳಿಗೆ (ಇಲ್ಲಿ) ಕರೆದೊಯ್ಯಿತು, ಈ ಮೂಲಕ ಅಲ್ಲಿರುವ ಮಹಿಳೆ ಕಾಲೇಜಿನ ಹಳೆ ವಿದ್ಯಾರ್ಥಿನಿ ಎಂದು ಹೇಳಿದ್ದು, ಆಕೆ ಇತರ ವಿದ್ಯಾರ್ಥಿಗಳ ಮಾನವೀಯ ಮೇರೆಗೆ ಬಂದಿರುವುದಾಗಿ ತಿಳಿಸಿರುತ್ತಾಳೆ. ಆದರೆ ಕಾಲೇಜು ವಿದ್ಯಾರ್ಥಿನಿಯರು ಆಕೆಯ ಮಾತನ್ನು ಅಲ್ಲಗಳೆದಿದ್ದು, ಆಕೆ ಕಾಲೇಜಿನ ಹಳೆ ವಿದ್ಯಾರ್ಥಿನಿಯಲ್ಲ, ಬದಲಾಗಿ ಹೊರಗಿನ ವ್ಯಕ್ತಿಯಾಗಿದ್ದು, ಬೇರೆಯವರೊಂದಿಗೆ ಸೇರಿಕೊಂಡು ಕಾಲೇಜು ವಿದ್ಯಾರ್ಥಿನಿಯರ ಮೇಲೆ ಹಲ್ಲೆ ಮಾಡಲು ಬಂದಿರುವುದಾಗಿ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ತದನಂತರ ವಿದ್ಯಾರ್ಥಿಗಳು ಆಕೆಯನ್ನು ಮರಕ್ಕೆ ಕಟ್ಟಿ ಹಾಕಿದ್ದು, ಭದ್ರತಾ ಸೇನೆ ಬಂದ ನಂತರ ಆಕೆಯನ್ನು ರಕ್ಷಿಸಲಾಗಿದೆ.
ಇದಲ್ಲದೆ, ವೈರಲ್ ವೀಡಿಯೊದಲ್ಲಿರುವ ಮಹಿಳೆ ಕಾಲೇಜು ಪ್ರಿನ್ಸಿಪಾಲ್ ಗೀತಾಂಜಲಿ ಬರುವ ಅಥವಾ ಕಾಲೇಜಿನ ಇತರ ಬೇರೆ ಶಿಕ್ಷಕಿಯೂ ಅಲ್ಲ ಎಂದು ಕಾಲೇಜು ಆಡಳಿತ ಮಂಡಳಿಯು (ಆರ್ಕೈವ್) ತಿಳಿಸಿದೆ. ತಮ್ಮ ವಿದ್ಯಾರ್ಥಿಗಳ ಈ ಕೃತ್ಯವನ್ನು ಖಂಡಿಸಿದ ಅವರು, ಕಾಲೇಜಿನ ಹಳೆಯ ವಿದ್ಯಾರ್ಥಿನಿ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಫಾಕ್ಟ್ಲಿ ಸಂಬಂಧಿತ ಅಧಿಕಾರಿಗಳನ್ನು ಈ ಮಹಿಳೆಯ ಕುರಿತು ಗುರುತಿಸಲಿಕ್ಕಾಗಿ ಕೇಳಿದ್ದೇವೆ. ಈ ಕುರಿತು ಮತ್ತೇನಾದರೆ ಮಾಹಿತಿ ದೊರಕಿದರೆ ಈ ಲೇಖವನ್ನು ಅಪ್ಡೇಟ್ ಮಾಡಲಾಗುವುದು.
ಒಟ್ಟಾರೆಯಾಗಿ ಹೇಳುವುದಾದರೆ, ಅಜೀಂಪುರ ಸರಕಾರಿ ಪ್ರಾಂಶುಪಾಲರಾದ ಗೀತಾಂಜಲಿ ಬರುವಗೆ ಅಂತಿಮವಾಗಿಯೂ ರಾಜೀನಾಮೆ ನೀಡುವಂತೆ ಒತ್ತಾಯಿಸಲಾಯಿತು. ಹಾಗೂ ಮರಕ್ಕೆ ಕಟ್ಟಿಹಾಕಿರುವ ಮಹಿಳೆ ಗೀತಾಂಜಲಿ ಬರುವ ಅಲ್ಲ ಬದಲಾಗಿ ಕಾಲೇಜಿನ ಮಾಜಿ ವಿದ್ಯಾರ್ಥಿನಿ ಎಂದು ಹೇಳಲಾಗಿದೆ.