ಸಿಖ್ ಉಡುಪನ್ನು ಧರಿಸಿ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿದ ನಂತರ ಮಸೀದಿಯಲ್ಲಿ ನಮಾಜ್ ಮಾಡುವಾಗ ಸಿಖ್‌ಪೇಟವನ್ನು ತೆಗೆಯಲು ಮರೆತ ಮೋಸಗಾರನನ್ನು (ರೈತರ ಹೋರಾಟದಲ್ಲಿ ಭಾಗವಹಿಸಿದ ನಕಲಿ ರೈತ. ಆತುರದಲ್ಲಿ ತನ್ನ ತಲೆಯ ಮೇಲೆ ಇರುವ ಪೇಟಾ ಮರೆತು ನಮಾಜಿಗೆ ಹೋದ ನಕಲಿ ಸಿಖ್…) ಇದು ತೋರಿಸುತ್ತದೆ ಎಂಬ ಹೇಳಿಕೆಯೊಂದಿಗೆ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯ ಸತ್ಯಾ-ಸತ್ಯತೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿದ ನಂತರ ಸಿಖ್ ಉಡುಪನ್ನು ಧರಿಸಿ ನಮಾಜ್ ಮಾಡಿದ ವಂಚಕನ ಫೋಟೋ.
ನಿಜಾಂಶ: ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಫೋಟೋ ಹಳೆಯದು. ಆ ಫೋಟೋವನ್ನು ಕನಿಷ್ಠ ಜನವರಿ 2016 ರಿಂದ ಅಂತರ್ಜಾಲದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದು ಪ್ರಸ್ತುತ ರೈತರ ಪ್ರತಿಭಟನೆಗೆ ಸಂಬಂಧಿಸಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಿದಾಗ, ಅದೇ ಫೋಟೋವನ್ನು 2016 ರಲ್ಲಿ ‘ಸಿಖ್ ಜಾಗೃತಿ’ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಅಲ್ಲದೆ, ಈ ಫೋಟೋವನ್ನು ಫೇಸ್‌ಬುಕ್‌ನಲ್ಲಿಯೂ ಪೋಸ್ಟ್ ಮಾಡಲಾಗಿದೆ ಎಂದು ನೋಡಬಹುದು.

ಕೀವರ್ಡ್‌ಗಳು ಮತ್ತು ಟೈಮ್ ಫಿಲ್ಟರ್‌ನೊಂದಿಗೆ ನಾವು ಫೇಸ್‌ಬುಕ್‌ನಲ್ಲಿ ಹುಡುಕಿದಾಗ, 2016 ರ ಜನವರಿಯಲ್ಲಿ ಅನೇಕರು ಒಂದೇ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ ಎಂದು ಕಂಡುಬಂದಿದೆ. ಆದ್ದರಿಂದ, ಫೋಟೋ ಪ್ರಸ್ತುತ ರೈತರ ಪ್ರತಿಭಟನೆಗೆ ಸಂಬಂಧಿಸಿಲ್ಲ. ಫೋಟೋದಲ್ಲಿರುವ ವ್ಯಕ್ತಿಗೆ ಸಂಬಂಧಿಸಿದಂತೆ ಯಾವುದೇ ವಿಶ್ವಾಸಾರ್ಹ ಮಾಹಿತಿ ಕಂಡುಬಂದಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿದ ನಂತರ ಸಿಖ್ ಉಡುಪಿನಲ್ಲಿ ನಮಾಜ್ ಮಾಡುತ್ತಿರುವ ಮೋಸಗಾರ ಎಂದು ಕನಿಷ್ಠ 5 ವರ್ಷದ ಹಿಂದಿನ ಫೋಟೋವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ.