2024 ರಂದು ಪ್ಯಾರಿಸ್ನಲ್ಲಿ ನಡೆಯಲಿರುವ ಪ್ಯಾರಿಸ್ ಒಲಂಪಿಕ್ಸ್ ಗಾಗಿ ಅಲ್ಲಿನ ಚರ್ಚ್ ಒಂದರಲ್ಲಿ ಬೆಳಗಿಸಿದ ಟಾರ್ಚ್ ದೃಶ್ಯಗಳು ಎಂದು ಕ್ಯಾಥೆಡ್ರಲ್‌ನೊಳಗೆ ಉರಿಸಿದ ಬೆಳಕನ್ನು ತೋರಿಸುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಾದರೆ ಈ ಪೋಸ್ಟ್ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.
ಕ್ಲೇಮ್: 2024 ರ ಪ್ಯಾರಿಸ್ ಒಲಿಂಪಿಕ್ಸ್‌ಗಾಗಿ ಪ್ಯಾರಿಸ್ ಚರ್ಚ್‌ನಿಂದ ಒಲಿಂಪಿಕ್ ಜ್ಯೋತಿಯನ್ನು ಬೆಳಗಿಸುವ ದೃಶ್ಯಗಳು.
ಫ್ಯಾಕ್ಟ್: ವೈರಲ್ ವೀಡಿಯೊ ಎರಡು ಬೇರೆ ಬೇರೆ ಘಟನೆಗಳ ದೃಶ್ಯಗಳನ್ನು ತೋರಿಸುತ್ತಿದೆ. ಮೊದಲಿನದಲ್ಲಿ ಫ್ಲಾರೆನ್ಸ್‌ನ ‘ಪಿಯಾಝಾ ಡೆಲ್ ಡ್ಯುಮೊ’ದಲ್ಲಿ ಪ್ರತಿ ಈಸ್ಟರ್ ಭಾನುವಾರ ನಡೆಯುವ ಕಾರ್ಟ್‌ನ್ನು ತೋರಿಸುತ್ತದೆ. ವೀಡಿಯೊದ ಎರಡನೇ ಪಾರ್ಟ್ ಯುರೋಪ್‌ನಲ್ಲಿ ಜರಗುವ ರಾಂಸ್ಟೆಯ್ನ್ ಎಂಬ ಬ್ಯಾಂಡ್‌ನ ಸಂಗೀತ ಕಚೇರಿಯ ದೃಶ್ಯಗಳನ್ನು ತೋರಿಸುತ್ತಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
ನಮ್ಮ ತೀಕ್ಷ್ಣ ಪರಿಶೀಲನೆಯ ಪ್ರಕಾರ ವೀಡಿಯೊವು ಹಗಲಿನಲ್ಲಿ ಪಾದ್ರಿಯೊಬ್ಬರು ಕ್ಯಾಥೆಡ್ರಲ್ ಒಳಗೆ ಬೆಳಕನ್ನು ಉರಿಸುವುದರಲ್ಲಿಕಂಡುಬರುತ್ತದೆ. ಇದು ಬಾಗಿಲಿನ ಕಡೆಗೆ ಹೋಗುತ್ತಿದಂತೆ ದೃಶ್ಯವು ರಾತ್ರಿಯಲ್ಲಿ ತೋರಿಸುವ ದೃಶ್ಯಗಳ ಕಡೆಗೆ ಬದಲಾಗುತ್ತದೆ. ವೈರಲ್ ವೀಡಿಯೊದ ಕೀಫ್ರೇಮ್‌ಗಳನ್ನು ಬಳಸಿಕೊಂಡು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, ವೈರಲ್ ವೀಡಿಯೊದಲ್ಲಿ ಎರಡು ವಿಡಿಯೋ ಕ್ಲಿಪ್ ಗಳಿರುವುದನ್ನುಕಂಡುಕೊಂಡೆವು. ಇದರ ಪ್ರಕಾರ ಮೊದಲಿನ ಕೀಫ್ರೇಮ್‌ಗಳು ಸಿರಾಕ್ಯೂಸ್ ಯೂನಿವರ್ಸಿಟಿ ಫ್ಲಾರೆನ್ಸ್ ಯೂಟ್ಯೂಬ್ ಚಾನೆಲ್ ಪ್ರಕಟಿಸಿದ ವೀಡಿಯೊಗೆ ನಮ್ಮನ್ನು ಕರೆದೊಯ್ಯಿತು. ಈ ವೀಡಿಯೊವನ್ನು ಏಪ್ರಿಲ್ 4, 2021 ರಂದು “ದಿ ಸ್ಕೋಪ್ಪಿಯೊ ಡೆಲ್ ಕ್ಯಾರೊ, ಅಥವಾ ಕಾರ್ಟ್ ಎಸ್ಪಿಲೋಷನ್ ಎನ್ನುತ್ತಾರೆ, ಇದರ ಮೂಲವು ಮೊದಲ ಕ್ರುಸೇಡ್‌ಗೆ ಸೇರಿದ್ದು, ಇದನ್ನು ಪ್ರತಿ ಈಸ್ಟರ್ ಭಾನುವಾರ ಫ್ಲಾರೆನ್ಸ್‌ನ ಪಿಯಾಝಾ ಡೆಲ್ ಡ್ಯುಮೊದಲ್ಲಿ ನಡೆಸಲಾಗುತ್ತದೆ.” ಎಂದು ತಿಳಿದುಬಂದಿದೆ.
ಆ ನಂತರದ ಪರಿಶೀಲನೆಯು ನಮ್ಮನ್ನು ಫ್ಲಾರೆನ್ಸ್ ಸಿಟಿಯ ಅಧಿಕೃತ ವೆಬ್‌ಸೈಟ್‌ಗೆ ಎಡೆಮಾಡಿಕೊಟ್ಟಿತು. ಫ್ಲಾರೆಂಟೈನ್ ರಿಪಬ್ಲಿಕ್‌ನ “ಬ್ರಿಂಡೆಲೋನ್” ರಥ ಐತಿಹಾಸಿಕ ಮೆರವಣಿಗೆಯಾಗಿದ್ದು, ಇಲ್ಲಿ150 ಸೈನಿಕರು, ಸಂಗೀತಗಾರರು ಮತ್ತು ಸ್ಟ್ಯಾಂಡರ್ಡ್-ಬೇರರ್‌ಗಳಿಂದ ಸುತ್ತುವರೆದ ಬೆಂಕಿಯ ರಥವನ್ನು ಪಿಯಾಝಾ ಪ್ರಾಟೊದಿಂದ ಪಿಯಾಝಾ ಡೆಲ್ ಡ್ಯುಮೊಗೆ ವೈಟ್- ಫ್ಲವರ್ಡ್ ಎತ್ತುಗಳ ಎರಡು ತಂಡಗಳು ಎಳೆಯುತ್ತವೆ. ನಂತರ ರಥವನ್ನು ಬ್ಯಾಪ್ಟಿಸ್ಟರಿ ಮತ್ತು ಕ್ಯಾಥೆಡ್ರಲ್ ನಡುವೆ ಇರಿಸಲಾಗುತ್ತದೆ. “ಗ್ಲೋರಿಯಾ ಇನ್ ಎಕ್ಸೆಲ್ಸಿಸ್ ಡಿಯೋ” ಹಾಡುತ್ತಿದ್ದಂತೆ, ಕೋಲಂಬಿನ್‌ನ ಫ್ಯೂಸ್ ಬೆಳಗುತ್ತದೆ, ಫ್ಲೋಟ್‌ನಲ್ಲಿ ಜೋಡಿಸಲಾದ ಪಟಾಕಿಗಳು ಸುಡುತ್ತದೆ. ಫ್ಲಾರೆನ್ಸ್ ಕ್ಯಾಥೆಡ್ರಲ್‌ನ ವೆಬ್‌ಸೈಟ್ ಕೂಡ ಈ ಘಟನೆಯನ್ನು ಇದೇ ರೀತಿ ಎಂದು ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ವೀಡಿಯೊದ ಎರಡನೇ ಭಾಗವನ್ನು ಪರಿಶೀಲಿಸಿದಾಗ, ಈ ದೃಶ್ಯಗಳನ್ನು2023 ಟಿಕ್‌ಟಾಕ್‌ನಲ್ಲಿ ಅದೇ ಆಡಿಯೊದೊಂದಿಗೆ “Rammstein.boss” ಎಂಬ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಲಾಗಿದೆ ಎಂಬುದು ತಿಳಿದುಬಂದಿದೆ. 2023 ರಲ್ಲಿ ರ‍್ಯಾಮ್‌ಸ್ಟೈನ್‌ನ ಅಫೀಷಿಯಲ್ ಸೋಶಿಯಲ್ ಮೀಡಿಯಾದಲ್ಲಿ (ಇಲ್ಲಿ ಮತ್ತು ಇಲ್ಲಿ) ತೋರಿಸಿರುವಂತೆ ಇವರು EU ಸಂಗೀತ ಕಚೇರಿಯಲ್ಲಿ ಇದೇ ರೀತಿಯ ಪಟಾಕಿಗಳನ್ನು ಉಪಯೋಗಿಸುತಿದ್ದು, ವೈರಲ್ ವಿಡಿಯೋದಲ್ಲಿರುವ ಪೇರಿಫಾರ್ಮ್ಸ್ ನಲ್ಲೂ ಇದೇ ಲೋಗೋದ ಬ್ಯಾಂಡ್‌ನ್ನು ಕಾಣಬಹುದಾಗಿದೆ.
ಫ್ಲಾರೆನ್ಸ್ ಚರ್ಚ್‌ನಲ್ಲಿ ಕಾರ್ಟ್ ಎಸ್ಪಿಲೋಷನ್ ಮತ್ತು ಸಂಗೀತ ಕಚೇರಿಯಲ್ಲಿ ಪಟಾಕಿಗಳ ನಡುವಿನ ತುಲನೆಯನ್ನು ಕೆಳಗೆ ನೀಡಲಾಗಿದೆ.
ಎಲ್ಲಕ್ಕೂ ಮೇಲಾಗಿ, ಪ್ರಾಚೀನ ಒಲಿಂಪಿಕ್ ಕ್ರೀಡಾಕೂಟದ ಸ್ಥಳದಲ್ಲಿ ಒಲಿಂಪಿಕ್ ಟಾರ್ಚ್ ಸಾಂಪ್ರದಾಯಿಕವಾಗಿ ಗ್ರೀಸ್‌ನ ಒಲಂಪಿಯಾದಲ್ಲಿ ಬೆಳಗಿಸಲಾಗುತ್ತದೆ. ನಂತರ ಜ್ವಾಲೆಯನ್ನು ಮೊದಲ ಟಾರ್ಚ್‌ಬೇರರ್‌ಗೆ ರವಾನಿಸಲಾಗುತ್ತದೆ, ಅಲ್ಲಿ ಇದನ್ನು ಒಲಿಂಪಿಕ್ ಕ್ರೀಡಾಕೂಟದ ನಗರಕ್ಕೆ ರಿಲೇಯಲ್ಲಿ ಒಯ್ಯುತ್ತಾರೆ. 2024ರ ಪ್ಯಾರಿಸ್ ಒಲಿಂಪಿಕ್ಸ್‌ನ ದೀಪಾಲಂಕಾರ ಸಮಾರಂಭದ ದೃಶ್ಯಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು. ವೈರಲ್ ದೃಶ್ಯಗಳು ಮತ್ತು ಒಲಿಂಪಿಕ್ ಟಾರ್ಚ್, 2024ರ ಪ್ಯಾರಿಸ್ ಒಲಿಂಪಿಕ್ ಟಾರ್ಚ್ ನಡುವಿನ ಹೋಲಿಕೆಯನ್ನು ಕೆಳಗೆ ನೀಡಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಫ್ಲಾರೆನ್ಸ್ ಚರ್ಚ್‌ನಲ್ಲಿನ ಆಚರಿಸಿದ ಸಂಗೀತ ಕಚೇರಿಯ ದೃಶ್ಯಗಳನ್ನು 2024 ರ ಪ್ಯಾರಿಸ್ ಒಲಿಂಪಿಕ್ಸ್‌ಗಾಗಿ ಬೆಳಗಿಸಿದ ಒಲಿಂಪಿಕ್ ಜ್ಯೋತಿ ಎಂದು ತಪ್ಪಾಗಿ ಶೇರ್ ಮಾಡಲಾಗಿದೆ.