Fake News - Kannada
 

ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರು ಮಕ್ಕಳನ್ನುಕಾಪಾಡಿದ ವ್ಯಕ್ತಿ ಮಕ್ಕಳ ತಂದೆಯಲ್ಲ

0

ಪ್ರವಾಹದಲ್ಲಿ ಮುಳುಗುತ್ತಿದ್ದ ಇಬ್ಬರು ಮಕ್ಕಳನ್ನು ರಕ್ಷಿಸಿದ ವ್ಯಕ್ತಿಯ ವೀಡಿಯೊ ಪೋಸ್ಟ್‌ಅನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗಿದ್ದು, ತಂದೆ ತನ್ನ ಇಬ್ಬರು ಮಕ್ಕಳನ್ನು ಉಳಿಸುವ ವೀಡಿಯೊ ಎಂದು ತೋರಿಸಲಾಗಿದೆ. ಈ ಲೇಖನದ ಮೂಲಕ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರು ಮಕ್ಕಳನ್ನು ಕಾಪಾಡಿ ಪ್ರಾಣ ಉಳಿಸಿದ ತಂದೆ.

ನಿಜಾಂಶ : ಪ್ರವಾಹದಿಂದ ಇಬ್ಬರು ಮಕ್ಕಳನ್ನು ಕಾಪಾಡುತ್ತಿರುವ ಘಟನೆಯನ್ನು ಇತ್ತೀಚೆಗೆ ಒಮಾನಿ ಸುದ್ದಿ ವರದಿ ಮಾಡಿದೆ. ಆದರೂ, ಈ ಲೇಖನದ ಪ್ರಕಾರ, ಮಕ್ಕಳನ್ನು ನೀರಿನಿಂದ ರಕ್ಷಿಸಿ ಹೊರಗೆ ತಂದದ್ದು ಅವರ ತಂದೆಯಲ್ಲ, ಸ್ಥಳದಲ್ಲಿದ್ದ  ಫೋಟೋಗಳನ್ನು ಸೆರೆಹಿಡಿಯಲು ನಿಂತಿದ್ದ ಫೋಟೋಗ್ರಾಫರ್ ಮಕ್ಕಳನ್ನು ಕಾಪಾಡಿದ್ದಾರೆ ಎಂದು ವರದಿಯಾಗಿದೆ. ಹಾಗಾಗಿ ಪೋಸ್ಟ್‍ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಒಮಾನ್‌ನ ಬಹ್ಲಾ ಪಟ್ಟಣದಿಂದ ವ್ಯಕ್ತಿಯೊಬ್ಬರು ಪ್ರವಾಹದಲ್ಲಿ ಮುಳುಗುತ್ತಿದ್ದ ಇಬ್ಬರು ಮಕ್ಕಳನ್ನು ರಕ್ಷಿಸುತ್ತಿರುವ ದೃಶ್ಯ ವೈರಲ್ ಆಗಿದೆ. ಆದರೆ, ಮಕ್ಕಳ ಜೀವ ಉಳಿಸುವ ವ್ಯಕ್ತಿ ಅವರ ತಂದೆಯಲ್ಲ.

ವೈರಲ್ ವೀಡಿಯೊದ ಸ್ಕ್ರೀನ್‌ಶಾಟ್‍್ ಅನ್ನು ಗೂಗಲ್ ರಿವರ್ಸ್ ಸರ್ಚ್ ಮಾಡಿದಾಗ ಒಂದೇ ದೃಶ್ಯಗಳನ್ನು ವರದಿ ಮಾಡಿದ ಹಲವು ಸುದ್ದಿ ವರದಿಗಳನ್ನು ಲಭ್ಯವಾಗಿವೆ. ಅಂತಹ ಒಂದು ಸುದ್ದಿಯ ಪ್ರಕಾರ, ಫೋಟೋಗಳನ್ನು ತೆಗೆಯಲು ಘಟನಾ ಸ್ಥಳದಲ್ಲಿದ್ದ ಅಲಿ ಬಿನ್ ನಾಸರ್ ಅಲ್-ವಾರ್ದಿ ಎಂಬ ಛಾಯಾಗ್ರಾಹಕ, ಪ್ರವಾಹದಲ್ಲಿ ಮುಳುಗುತ್ತಿದ್ದ ಇಬ್ಬರು ಮಕ್ಕಳ ಜೀವವನ್ನು ಉಳಿಸಿದ್ದಾರೆ. ಮಕ್ಕಳನ್ನು ಕಾಪಾಡಿದ್ದು ತಂದೆಯಲ್ಲ ಎಂದು ಈ ವರದಿಯಿಂದ ತಿಳಿಯುತ್ತದೆ.

ಮತ್ತೊಂದು ಸುದ್ದಿಯ ಪ್ರಕಾರ, ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಮಕ್ಕಳನ್ನು ಕಾಪಾಡಿದ್ದು ಮಕ್ಕಳ ತಂದೆ ಅಲ್ಲ, ಆದರೆ ಸ್ಥಳದಲ್ಲಿದ್ದ ಪೋಟೋಗ್ರಾಫರ್ ಒಬ್ಬರು ಮಕ್ಕಳನ್ನು ಕಾಪಾಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಇದಲ್ಲದೆ, ಅವರ ಧೈರ್ಯಕ್ಕಾಗಿ ಪೊಲೀಸರು ಮತ್ತು ಸರ್ಕಾರಿ ಅಧಿಕಾರಿಗಳಿಂದ ಮೆಚ್ಚುಗೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಈ ವಿಡಿಯೋದಲ್ಲಿರುವ ಇಬ್ಬರು ಮಕ್ಕಳನ್ನು ಪ್ರವಾಹದಲ್ಲಿ ಮುಳುಗಿ ರಕ್ಷಿಸಿದ ವ್ಯಕ್ತಿ ಅವರ ತಂದೆ ಅಲ್ಲ.

Share.

Comments are closed.

scroll