Fake News - Kannada
 

ಜೈನ ದೇವಾಲಯದ ಹಳೆಯ 3ಡಿ ಅನಿಮೇಷನ್ ವಿಡಿಯೋವನ್ನು ಅಯೋಧ್ಯೆಯ ರಾಮ ಮಂದಿರ ವಿನ್ಯಾಸ ಎಂದು ತಪ್ಪಾಗಿ ಪ್ರತಿಪಾದಿಸಲಾಗಿದೆ

0

ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮ ದೇವಾಲಯದ ವಿನ್ಯಾಸ ಎಂದು ಹೇಳಿಕೊಳ್ಳುವ ವಿಡಿಯೋವೊಂದು ಇರುವ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಲೇಖನದ ಮೂಲಕ, ಪ್ರತಿಪಾದನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಅಯೋಧ್ಯೆಯಲ್ಲಿ ನಿರ್ಮಿಸಲಿರುವ ರಾಮ ಮಂದಿರದ ವಿನ್ಯಾಸ.

ನಿಜಾಂಶ: ಕೆನ್ಸ್ ಸ್ಟುಡಿಯೋದ ಯೂಟ್ಯೂಬ್ ಚಾನೆಲ್‌ನಲ್ಲಿನ ಮೂಲ ವಿಡಿಯೋವನ್ನು 03 ಜೂನ್ 2014 ರಂದು ಅಪ್‌ಲೋಡ್ ಮಾಡಲಾಗಿದೆ, ಆದರೆ ರಾಮ ಮಂದಿರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು 09 ನವೆಂಬರ್ 2019 ರಂದು ನೀಡಿದೆ. ಅಲ್ಲದೆ, ಅನೇಕ ಸುದ್ದಿ ಸಂಸ್ಥೆಗಳು ದೇವಾಲಯದ ವಿನ್ಯಾಸವೆಂದು ವರದಿ ಮಾಡಿರುವುದು ಇದಕ್ಕಿಂತ ಭಿನ್ನವಾಗಿದ್ದು, ಅದನ್ನು ಪೋಸ್ಟ್ ನಲ್ಲಿ ಹಂಚಿಕೊಳ್ಳಲಾಗಿದೆ. ಆದ್ದರಿಂದ ಪೋಸ್ಟ್ ನಲ್ಲಿ ಪ್ರತಿಪಾದಿಸಿರುವುದು ತಪ್ಪಾಗಿದೆ.

‘3ಡಿ ಅನಿಮೇಷನ್ ಟೆಂಪಲ್’ ಕೀವರ್ಡ್ ಗಳನ್ನು ಬಳಸಿಕೊಂಡು ನಾವು ಯೂಟ್ಯೂಬ್‌ನಲ್ಲಿ ಹುಡುಕಾಟವನ್ನು ನಡೆಸಿದಾಗ, ಕೆಮ್ಸ್ ಸ್ಟುಡಿಯೋ ಹೆಸರಿನ ಚಾನಲ್‌ನಲ್ಲಿ ಇದೇ ರೀತಿಯ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ, ಅದನ್ನು 03 ಜೂನ್ 2014 ರಂದು ಅಪ್‌ಲೋಡ್ ಮಾಡಲಾಗಿದೆ.

ಅಯೋಧ್ಯೆಯ ರಾಮ ಮಂದಿರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು 2019 ರ ನವೆಂಬರ್ 09 ರಂದು ನೀಡಿತು. ಇದು ಯೂಟ್ಯೂಬ್‌ನಲ್ಲಿ ಕಂಡುಬರುವ ವಿಡಿಯೋದ ಮೊದಲ ಅಪ್‌ಲೋಡ್ ಗಿಂತ ಹಲವು ವರ್ಷಗಳ ನಂತರದ್ದಾಗಿದೆ. ಅಧಿಕೃತ ಸುಪ್ರೀಂ ಕೋರ್ಟ್ ತೀರ್ಪನ್ನು ಇಲ್ಲಿ ಓದಬಹುದು.

ನಾವು ಕೆಮ್ಸ್ ಸ್ಟುಡಿಯೊಗೆ ಕರೆ ಮಾಡಿದಾಗ ಅವರು, “ವೈರಲ್ ಆಗುತ್ತಿರುವ ವಿನ್ಯಾಸವನ್ನು ವಾಸ್ತವವಾಗಿ ಆಂಧ್ರಪ್ರದೇಶದ ಜೈನ ದೇವಾಲಯಕ್ಕಾಗಿ ಮಾಡಿದ್ದು ಎಂದು ತಿಳಿಸಿದ್ದಾರೆ. ಅಲ್ಲದೆ, ವಿನ್ಯಾಸವು ಅಯೋಧ್ಯೆಯ ರಾಮಮಂದಿರಕ್ಕೆ ಸಂಬಂಧಿಸಿಲ್ಲ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ವಿಡಿಯೋ ಪ್ರಾರಂಭದಲ್ಲಿ ಕಾಣುವ ದೇವಾಲಯದ ಸ್ಥಳ ತಿರುಪತಿ ಎಂದು ಸಹ ತೋರಿಸಲಾಗಿದೆ. ಅಲ್ಲದೆ, ವಿಡಿಯೋದಲ್ಲಿ ಅನೇಕ ಜೈನ ವಿಗ್ರಹಗಳನ್ನು ಕೂಡ ನಾವು ನೋಡಬಹುದು.

ಮೂರು ದಶಕಗಳ ಹಿಂದೆ ಶ್ರೀ ಚಂದ್ರಕಾಂತ್ ಸೋಮಪುರ ಅವರು ವಿನ್ಯಾಸಗೊಳಿಸಿದ ರಾಮ ಮಂದಿರದ ಮಾದರಿಯು (ಕೆಲವು ಮಾರ್ಪಾಡುಗಳೊಂದಿಗೆ) ಅಯೋಧ್ಯಯ ರಾಮ ಮಂದಿರದ ವಿನ್ಯಾಸವಾಗಲಿದೆ ಎಂದು ಅನೇಕ ಸುದ್ದಿ ಸಂಸ್ಥೆಗಳು ಇತ್ತೀಚೆಗೆ ವರದಿ ಮಾಡಿವೆ. ಈ ಸುದ್ದಿ ವರದಿಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಜೈನ ದೇವಾಲಯದ ವಿನ್ಯಾಸದ 3ಡಿ ಅನಿಮೇಷನ್ ಹಳೆಯ ವಿಡಿಯೋವನ್ನು ಅಯೋಧ್ಯೆಯಲ್ಲಿ ನಿರ್ಮಿಸಲಿರುವ ರಾಮ ಮಂದಿರದ ವಿನ್ಯಾಸದ ವಿಡಿಯೋ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

Share.

About Author

Comments are closed.

scroll