ಕ್ವಾರಂಟೈನ್ ಕೇಂದ್ರವೊಂದರಲ್ಲಿ ದಲಿತ ಮಹಿಳೆ ಅಡುಗೆ ಮಾಡಿದ್ದಾರೆ ಎಂದು ಸಿರಾಜ್ ಅಹ್ಮದ್ ಮತ್ತು ಬುಜೌಲಿ ಕುರ್ದ್ ಆಹಾರ ಸೇವಿಸಲು ನಿರಾಕರಿಸಿದ್ದಾರೆ ಎಂದು ಪ್ರತಿಪಾದಿಸಿ, ವ್ಯಕ್ತಿಯೊಬ್ಬ ಊಟವನ್ನು ಕಾಲಿನಿಂದ ಒದ್ದು ಬೀಳಿಸುವ ವಿಡಿಯೋ ವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್ ನಲ್ಲಿ ಪ್ರತಿಪಾದಿಸಿರುವುದು ನಿಜವೇ ಪರಿಶೀಲಿಸೋಣ ಬನ್ನಿ.
ಪ್ರತಿಪಾದನೆ: ಕ್ವಾರಂಟೈನ್ ಕೇಂದ್ರ ಒಂದರಲ್ಲಿ ದಲಿತ ಮಹಿಳೆ ಅಡುಗೆ ಮಾಡಿದ್ದಾರೆ ಎಂದು ಸಿರಾಜ್ ಅಹ್ಮದ್ ಮತ್ತು ಬುಜೌಲಿ ಕುರ್ದ್ ಆಹಾರ ಸೇವಿಸಲು ನಿರಾಕರಿಸಿದ್ದಾರೆ.
ನಿಜಾಂಶ: ಈ ವಿಡಿಯೋವನ್ನು ಬಿಹಾರದ ಕ್ವಾರಂಟೈನ್ ಕೇಂದ್ರದಲ್ಲಿ ಸೆರೆಹಿಡಿಯಲಾಗಿದೆ. ವಿಡಿಯೋದಲ್ಲಿ ಕಾಣುವ ಯುವಕರು ಅಡುಗೆ ಮಾಡುವ ಮಹಿಳೆಯರಿಗೆ ಸಾಮಾಜಿಕ ಅಂತರ ಅನುಸರಿಸುವುದನ್ನು ಬಿಟ್ಟು ಹತ್ತಿರದಿಂದ ಊಟ ಬಡಿಸುವಂತೆ ತಾಕೀತು ಮಾಡಿದ್ದಾರೆ. ಇದಕ್ಕೆ ಮಹಿಳೆಯರು ಒಪ್ಪದಿದ್ದಾಗ ಬೆಂಚಿನ ಮೇಲಿರುವ ಊಟವನ್ನು ಒದ್ದಿದ್ದಾರೆ. ಈ ಘಟನೆಯಲ್ಲಿ ದಲಿತ ಕೋನ ಇಲ್ಲವೇ ಇಲ್ಲ. ಇದಕ್ಕಾಗಿ ಪಂಕಜ್, ಮನೋಜ್ ಮತ್ತು ಅಶೋಕ್ ಎಂಬ ಮೂವರ ಮೇಲೆ ಎಫ್.ಐ.ಆರ್ ದಾಖಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಉತ್ತರ ಪ್ರದೇಶದ ಬುಜೌಲಿ ಗ್ರಾಮದ ನಿವಾಸಿ ಸಿರಾಜ್ ಅಹ್ಮದ್, ಅಲ್ಲಿನ ಕ್ವಾರಂಟೈನ್ ಕೇಂದ್ರನಲ್ಲಿ ದಲಿತ ಮಹಿಳೆ ಅಡುಗೆ ತಯಾರಿಸಿದ ಕಾರಣಕ್ಕೆ ಆಹಾರ ಸೇವಿಸಲು ನಿರಾಕರಿಸಿದ್ದನು. ಹಾಗಾಗಿ ಬಿಹಾರದಲ್ಲಿ ನಡೆದ ಘಟನೆಯ ವಿಡಿಯೋವನ್ನು ಉತ್ತರ ಪ್ರದೇಶದಲ್ಲಿ ನಡೆದ ಘಟನೆಗೆ ತಳುಕುಹಾಕಿ ಹಂಚಿಕೊಳ್ಳಲಾಗುತ್ತಿದೆ. ಆದ್ದರಿಂದ ಈ ಪ್ರತಿಪಾದನೆ ಜನರ ದಿಕ್ಕುತಪ್ಪಿಸುತ್ತದೆ.
ಘಟನೆ -1
ವಿಡಿಯೋದ ಸ್ಕ್ರೀನ್ ಶಾಟ್ ಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಿದಾಗ ಹಲವು ಪತ್ರಿಕಾ ವರದಿಗಳು ತೆರೆದುಕೊಳ್ಳುತ್ತವೆ. ದೈನಿಕ್ ಭಾಸ್ಕರ್ ಪತ್ರಿಕೆಯ ಈ ವರದಿ ಯಂತೆ ಈ ವಿಡಿಯೋವು ಬಿಹಾರದ ಕ್ವಾರಂಟೈನ್ ಕೇಂದ್ರದಲ್ಲಿ ನಡೆದಿದ್ದು. ಅಡುಗೆ ಮಾಡಿದ್ದ ಮಹಿಳೆಯರು ವಲಸೆ ಕಾರ್ಮಿಕರಿಗೆ (ಪಂಕಜ್ ಕುಮಾರ್ ರೈ, ಮನೋಜ್ ಕುಮಾರ್ ರೈ ಮತ್ತು ಅಶೋಕ್ ಸಹ್ನೆ) ಬಡಿಸಲು ಹೋದಾಗ, ಸಾಮಾಜಿಕ ಅಂತರ ತೊರೆದು ಹತ್ತಿರದಿಂದ ಊಟ ಬಡಿಸಲು ಕೇಳಿದ್ದಾರೆ. ಮಹಿಳೆಯರು ನಿರಾಕರಿಸಿದಾಗ ಅವರು ಬೆಂಚಿನ ಮೇಲಿದ್ದ ಊಟವನ್ನು ಕಾಲಿನಿಂದ ಒದ್ದು ಬೀಳಿಸಿದ್ದಾರೆ. ‘ಜಾಗರಣ್’ ಪತ್ರಿಕೆಯ ಲೇಖನದಲ್ಲಿ ಇದನ್ನು ಓದಬಹುದು.
ಎಬಿಪಿ ಬಿಹಾರ್ ಪತ್ರಿಕೆಯ ಮತ್ತೊಂದು ಲೇಖನ ದಲ್ಲಿ, ಈ ಘಟನೆಯ ನಂತರ ಎಫ್ ಐ ಆರ್ ದಾಖಲಿಸಿದೆ ಎಂದು ಬರೆದಿರುವುದನ್ನು ಓದಬಹುದು ಮತ್ತು ದೂರಿನ ಚಿತ್ರಗಳನ್ನು ಕಾಣಬಹುದು. ಕಳಪೆ ಗುಣಮಟ್ಟದ ಆಹಾರದ ಬಗ್ಗೆಯೂ ‘ಎಬಿಪಿ ಬಿಹಾರ್’ ಪತ್ರಿಕೆಯ ಲೇಖನ ದಾಖಲಿಸಿದೆ. ಒಟ್ಟಿನಲ್ಲಿ ಯಾವ ಪತ್ರಿಕೆಯ ವರದಿಗಳಲ್ಲು ಸಹ ದಲಿತ ದೃಷ್ಟಿಕೋನವನ್ನು ಉಲ್ಲೇಖಿಸಿಲ್ಲ.
ಘಟನೆ-2
ಪೋಸ್ಟ್ ನಲ್ಲಿ ಪ್ರತಿಪಾದಿಸಿರುವಂತೆ, ‘ದಲಿತ ಮಹಿಳೆ ಹಲ್ಲೆ’ ಎಂಬ ಕೀವರ್ಡ್ ಗಳನ್ನು ಬಳಸಿ ಹುಡುಕಿದಾಗ ಸಂಬಂಧಿಸಿದ ಹಲವು ಪತ್ರಿಕಾ ವರದಿಗಳು ಕಂಡುಬಂದಿವೆ. ಔಟ್ ಲುಕ್ ಲೇಖನದಂತೆ, ‘ಕ್ವಾರಂಟೈನ್ ಕೇಂದ್ರದಲ್ಲಿ ದಲಿತ ಮಹಿಳೆ ಆಹಾರ ತಯಾರಿಸಿದ್ದಾರೆ ಎಂಬ ಕಾರಣಕ್ಕೆ ಊಟ ನಿರಾಕರಿಸಿದ 35 ವರ್ಷ ವಯಸ್ಸಿನ ಸಿರಾಜ್ ಅಹ್ಮದ್ ಎಂಬುವವರ ಮೇಲೆ ಖಡ್ಡ ಪೋಲಿಸ್ ಠಾಣೆಯ ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದಾರೆ. ಈತ ಉತ್ತರ ಪ್ರದೇಶದ ಖುಷಿ ನಗರ್ ಜಿಲ್ಲೆಯ ಭುಜೌಲಿ ಖುರ್ದ್ ನಿವಾಸಿಯಾಗಿದ್ದು, ದೆಹಲಿಯಿಂದ ಮಾರ್ಚ್ 29 ರಂದು ನಗರಕ್ಕೆ ಹಿಂತಿರುಗಿ, ಅಲ್ಲಿನ ಸರ್ಕಾರಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ನಾಲ್ಕು ಜನರೊಂದಿಗೆ ತಂಗಿದ್ದ’. ಈ ಘಟನೆಗೆ ಸಂಬಂಧಿಸಿದ ಎಫ್.ಐ.ಆರ್ ಪ್ರತಿ ಇಲ್ಲಿದೆ.
ಒಟ್ಟಿನಲ್ಲಿ ಆಹಾರಕ್ಕೆ ಸಂಬಂಧಿಸಿದ ಎರಡು ಪ್ರತ್ಯೇಕ ಕ್ವಾರಂಟೈನ್ ಕೇಂದ್ರಗಳ ಘಟನೆಗಳನ್ನು ಜೋಡಿಸಿ ಜನರನ್ನು ದಿಕ್ಕುತಪ್ಪಿಸಲಾಗುತ್ತಿದೆ.
1 Comment
Pingback: ಫ್ಯಾಕ್ಟ್ಚೆಕ್: ದಲಿತ ಮಹಿಳೆ ತಯಾರಿಸಿದ ಆಹಾರ ನಿರಾಕರಿಸಿದ ಯುವಕರು - ವಾಸ್ತವವೇನು?